[ಬೊಗಳೂರು ಸಂಪುಟ ವಿಸರ್ಜನಾ... ಅಲ್ಲಲ್ಲ ವಿಸ್ತರಣಾ ಬ್ಯುರೋದಿಂದ]
ಬೊಗಳೂರು, ನ.3- ಈಗಾಗಲೇ ಸಂಪುಟ ವಿಸ್ತರಣೆ ಎಂಬ ಎರಡು ಶಬ್ಧಗಳು ಕೇಳಿದ ತಕ್ಷಣವೇ ಬಿಜೆಪಿ ಶಾಸಕರೆಲ್ಲರೂ ಪಟಾಕಿಗಳಂತೆ ಸಿಡಿಯುವ ಮೂಲಕ ದೀಪಾವಳಿಗೆ ಮುನ್ನವೇ ದೀಪಾವಳಿ ಆಚರಿಸಿ, ತಮಿಳುನಾಡು, ಗೋವಾ, ಕೊಚ್ಚಿ ಮುಂತಾದೆಡೆ ರೆಸಾರ್ಟ್‌ಗಳಲ್ಲಿ ಅವಿತುಕೊಳ್ಳುವ ಪ್ರಕ್ರಿಯೆಯು ನಿತ್ಯದ ಕಾಯಕವಾಗಿಬಿಟ್ಟಿರುವುದರಿಂದ, ಇದೀಗ ಸಂಪುಟ ವಿಸ್ತರಣೆ ಮುಂದೂಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಮೇಲೆ ದೇಶದ ವಿವಿಧೆಡೆಗಳ ರೆಸಾರ್ಟ್‌ಗಳು ಕೆಂಗಣ್ಣು ಬೀರುತ್ತಿವೆ.

ಇದು ವಿವಿಧ ರಾಜ್ಯಗಳ ಪ್ರವಾಸೋದ್ಯಮ ಕ್ಷೇತ್ರಕ್ಕೆ ಬೀಳುವ ದೊಡ್ಡ ಹೊಡೆತವೆಂದು ಪ್ರತಿಪಾದಿಸಿರುವ ಈ ರೆಸಾರ್ಟ್ ಮಾಲೀಕರು, ತಕ್ಷಣವೇ ಸಂಪುಟ ವಿಸ್ತರಣೆ ಮಾಡುವಂತೆಯೂ, ಆಗಾಗ್ಗೆ ಸಂಪುಟ ವಿಸ್ತರಣೆ ಘೋಷಣೆ ಮಾಡುವಂತೆಯೂ ಆಗ್ರಹಿಸಿದ್ದಾರೆ.

ಈ ಕುರಿತು ಏಕಸದಸ್ಯ ಬೊಗಳೆ ಬ್ಯುರೋದ ಸಮಸ್ತ ಸಿಬ್ಬಂದಿಗಳಿಗೆ ಪತ್ರ ಬರೆದಿರುವ ರೆಸಾರ್ಟ್ ಮಾಲೀಕರು, ತಾವಾದರೂ ತಮ್ಮ ಇಲ್ಲದ ಪ್ರಭಾವ ಬೀರಿ, ಮುಖ್ಯಮಂತ್ರಿ ತಲೆಯೊಳಗೆ ಸಂಪುಟ ವಿಸ್ತರಣೆಯ ಹುಳವನ್ನು ಬಿಡುವಂತೆ ತಾಕೀತು ಮಾಡಿದ್ದಾರೆ.

[ಬೊಗಳೂರ ಸಕಲ ಓದುಗರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ನೀವು ಪಟಾಕಿ ಹಚ್ಚಿದಾಗ ಠುಸ್ ಆದವುಗಳೆಷ್ಟು ಎಂಬುದನ್ನು ನಮ್ಮೊಂದಿಗೆ ಹಂಚಿಕೊಳ್ಳಿ...]

ಈಗ ದೀಪಾವಳಿ ಹಬ್ಬಕ್ಕೆ ನಮ್ಮ ವಿಶೇಷ ಕೊಡುಗೆಗಳೂ ಇವೆ. ನಮ್ಮಲ್ಲಿ ಬರುವ ಶಾಸಕರಿಗೆ ವಿಶೇಷ ರಿಯಾಯಿತಿಯನ್ನೂ ನೀಡುತ್ತೇವೆ. ಅವರು ನಮ್ಮ ರೆಸಾರ್ಟ್‌ನಲ್ಲಿ ಉಳಿದುಕೊಂಡರೆ ಅವರಿಗೆ ಉಚಿತವಾಗಿ ಆಹಾರ ಒದಗಿಸಲಾಗುವುದು ಎಂದು ಮಾಲೀಕರು ಬೊಗಳೂರಿಗೆ ಬಂದು ನಡೆಸಿದ ರದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಆದರೆ ಇಲ್ಲಿಯೂ ಸ್ಟಾರ್ ಮಾರ್ಕ್ ಉಳ್ಳ ಷರತ್ತುಗಳು ಅನ್ವಯವಾಗುತ್ತವೆ. ನಮ್ಮಿಂದ ಬಾಟಲಿಗಳನ್ನು ಪೂರೈಸುವುದು ಅಸಾಧ್ಯವಾದ ಕೆಲಸ ಎಂದು ಎಲ್ಲ ರಾಜ್ಯಗಳ ರೆಸಾರ್ಟ್ ಮಾಲೀಕರು ಒಗ್ಗಟ್ಟಾಗಿ ಘೋಷಿಸಿದ್ದಾರೆ.

8 Comments

ಏನಾದ್ರೂ ಹೇಳ್ರಪಾ :-D

 1. ಅನ್ವೇಷಿಗಳೇ,

  ನಿಮಗೂ ರೆಸಾರ್ಟ್‌‍ನವರಿಗೂ ಏನು ಲಿಂಕು ?

  ರೆಸಾರ್ಟ್ ಮಾಫಿಯಾ ಜೊತೆ ಕೈ ಜೋಡಿಸಿ ನೀವು ಸೊಂಪಾಗಿದ್ದೀರಿ ಎಂಬ ಸುದ್ಧಿ.

  ಇದರ ಬಗ್ಗೆ ತನಿಖೆಯಾಗಲಿ..

  ReplyDelete
 2. ರೆಸಾರ್ಟ್ ರಾಜಕಾರಣಿಗಳಿಗೆ ಚಪ್ಪಲಿ ಏಟು ಕೊಟ್ಟರೂ ಬುದ್ದಿ ಬರದು. ಒಟ್ಟಿನಲ್ಲಿ ಕರ್ನಾಟಕದ ಜನರ ದುಡ್ಡಿನಲ್ಲಿ ಮಜಾ ಉಡಾಯಿಸುತ್ತಿರುವ ಈ ಶ್ವಾನಪುತ್ರ ರಾಜಕಾರಣಿಗಳಿಗೆ ಎಲೆ ಆಡಿಕೆ ತಿಂದು ಉಗಿದರೂ ಮೂರು ಕಾಸಿನ ಮರ್ಯಾದೆಯೂ ಹೋಗುವುದಿಲ್ಲ (ಅದು ಇದ್ದರೆ ತಾನೇ?). ಈಗ ಮತ್ತೆ ಕೆಲ ರಾಜಕರಣಿಗಳು ಮಂತ್ರಿ ಸ್ಥಾನಕ್ಕಾಗಿ ಮಸಲತ್ತು, ಭಿನ್ನಮತ ನಡೆಸುತ್ತಿರುವುದು ನೋಡಿ ಇವರಿಗೆ ಸಾರ್ವಜನಿಕ ಸ್ಥಳದಲ್ಲಿ, ಎಲ್ಲರ ಎದುರಿಗೆ ಮೆಟ್ಟಲ್ಲಿ ಹೊಡೆದು, ತಲೆ ಬೋಳಿಸಿ, ಬಾಯಿಗೆ salt water ಹುಯ್ಯುವ ಕಾರ್ಯಕ್ರಮ ಆಯೋಜಿಸಲು ಕೆಲ ಮಂದಿ ಚಿಂತಿಸುತ್ತಿದ್ದಾರಂತೆ. ಈ ಬಗ್ಗೆ ನಿಮ್ಮ ಏಕ ಸದಸ್ಯ ಪೀಠ ಯಾವ ರೀತಿಯ ಬೆಂಬಲ ನೀಡುತ್ತದೆ?.

  ReplyDelete
 3. ಅನ್ವೇಷಿಗಳೇ...ನಮ್ಮಲ್ಲೊಂದು ರೆಸಾರ್ಟ್ ಇದೆ, ತಾವು ದಯಮಾಡಿ ನಮ್ಮ ರೆಸಾರ್ಟಿನ ಬಗ್ಗೆ ಈ ಭಿನ್ನಮತೀಯ ಶಾಸಕರಿಗೆ ಸ್ವಲ್ಪ ಮನದಟ್ಟು ಮಾಡಿ ಅವರನ್ನು ಇಲ್ಲಿ ಬರುವ ಹಾಗೆ ಮಾಡಿದರೆ ನಾವು ನಿಮ್ಮ ಕೈ ಬಿಸಿ ಮಾಡುವ ಕಾರ್ಯಕ್ರಮ ಇಟ್ಟುಕೊಳ್ಳುತ್ತೇವೆ. ದಿನಕ್ಕೆ ಕೇವಲ ೧ ಕೋಟಿ ಬಿಲ್ಲು. ತಮಗೆ ಪ್ರತಿಶತ ಹತ್ತರಷ್ಟು ಕಮಿಷನ್. ಬಿ.ಬಿ.ಎಂ.ಪಿ. ಬೆಂಗಳೂರಿನ ಎಲ್ಲ ಕಸ ಬಿಸಾಕುವ ಜಾಗದ ಮುಕ್ತ ಬಯಲು ರೆಸಾರ್ಟ್. ಅಲ್ಲಿ ಅವರು ಬಿದ್ದು ಹೊರಳಾಡಿದರೂ ಕೇಳುವವರಿಲ್ಲ. ನಾಯಿ, ಹಂದಿಗಳನ್ನು ಬಿಟ್ಟು ಯಾವ ಮನುಷ್ಯನೂ ಕಾಲಿಡಲಾರದ ಜಾಗ, ತುಂಬ ಸೇಫ್ಟಿ ಜಾಗ....ನೋಡಿ...ಏನಾದರೂ ಆಗುತ್ತಾ?.

  ReplyDelete
 4. Resort is the last politics of the scoundrels!

  ReplyDelete
 5. asathya shodhakare...

  nimage nijavaagaloo happy deepaavali :)

  ReplyDelete
 6. ಬಂದುಗಳೇ,,,,

  ದಿನ ಬೆಳಿಗ್ಗೆಯಿಂದ ಸಂಜೆಯವರೆಗೂ ನೂರಾರುಕಡೆಗಳಲ್ಲಿ ಓಡಾಡುವಾಗ ಸಾಮಾನ್ಯವಾಗಿ ನೂರಾರು ಅಕ್ಷರಸ್ಥ ನಿರುದ್ಯೋಗಿಗಳನ್ನು ಕಂಡಿದ್ದೇನೆ.ಹಾಗೂ "ಯಾವ ಕೆಲಸನಾದ್ರೂ ಇದ್ರೆ ಕೊಡಿ ಸಾರ್ ಮಾಡ್ತಿನಿ" ಅನ್ನೋ ಅವರ ಮಾತು ನನಗೆ ಕೇಳಿಸದೇ ಇರಲಿಲ್ಲ. ಅದೇರೀತಿ ಹಲವಾರು ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ನನ್ನ ಫ್ರಂಡ್ಸ್ ಗಳು Call ಮಾಡಿ "ನಾಲ್ಕೈದು ಕೆಲಸ ಖಾಲಿ ಇದೆ ಯಾರಾದ್ರೂ ಒಳ್ಳೆ ಹುಡುಗರು ಇದ್ರೆ ಹೇಳು" ಅನ್ನುವುದು ನನಗೆ ಮಾಮೂಲಾಗಿದೆ.

  "ಯಾವ ಕೆಲಸನಾದ್ರೂ ಇದ್ರೆ ಕೊಡಿ ಸಾರ್ ಮಾಡ್ತಿನಿ" ಅನ್ನುವವರು ನಾನು ಎಷ್ಟೇ ಹುಡುಕಿದರೂ ಆ timeಗೆ ಸಿಗೋದೇ ಇಲ್ಲ. ಅದಕ್ಕೆ ಫ್ರೆಂಡ್ಸ್ ನನಗೊಂದು idea ಬಂದಿದೆ. ಅದೇನೆಂದರೆ ನಿಮಗೆ or ನಿಮ್ಮ ಫ್ರೆಂಡ್ಸ್ ಗೆ ಕೆಲಸದ ಅವಶ್ಯಕತೆ ಇದ್ದಲ್ಲಿ ನಿಮ್ಮ Resume ಅನ್ನು ದಯವಿಟ್ಟು ನನಗೆ mail ಮಾಡಿ. ನಿಮ್ಮ ವಿದ್ಯಾರ್ಹತೆಗೆ ತಕ್ಕುದಾದ ಕೆಲಸವನ್ನು ನಾವೇ ನಿಮಗೆ ಹುಡುಕಿಕೊಡುತ್ತೆವೆ.(Phone number ಬರೆಯೊದನ್ನು ಮರೀಬೇಡಿ)
  www.netkannada.blogspot.com ಬ್ಲಾಗ್ ನಲ್ಲಿ ಎಲ್ಲೆಲ್ಲಿ Job ಖಾಲಿ ಇದೆ ಅದಕ್ಕೆ ಬೇಕಾದ ಅರ್ಹತೆಗಳೇನು ಎಂಬುದನ್ನು ಪ್ರಕಟಿಸುತ್ತೆನೆ.ಒಂದು ವೇಳೆ ನೀವು ನಿಮ್ಮ Resume ಕಳುಹಿಸಿದ್ದರೆ.sms Or Call ಮಾಡಿ ನಾವೇ ಹೇಳುತ್ತೆವೆ

  ನೆನಪಿರಲಿ:ಈ ಮಾಹಿತಿಗೆ ಯಾವುದೇ ಶುಲ್ಕವಿರುವುದಿಲ್ಲ ಇದು ಉಚಿತ ಸೇವೆ

  ಹೆಚ್ಚಿನ ಮಾಹಿತಿಗೆ:- 9740769286 ಅಥವಾ ontipremi@gmail.com

  ReplyDelete
 7. ಶಿವು ಅವರೇ,
  ರೆಸಾರ್ಟ್‌ನವರು ಸಿಕ್ಕಾಪಟ್ಟೆ ಲಿಂಕಿಸಿಕೊಂಡಿದ್ದಾರೆ. ನಾವು ಕೂಡ ಸೊಂಪಾದ ಬಳಿಕ ಇದೀಗಷ್ಟೇ ಹೊರಗೆ ಬಂದಿದ್ದೀವಿ. ಆದರೆ ಇದನ್ನು ಯಾರಿಗೂ ಹೇಳದಿರುವುದು ಎಲ್ಲರಿಗೂ, ವಿಶೇಷವಾಗಿ ನಮಗೆ ಒಳ್ಳೆಯದು.

  ಗುರುಗಳೇ,
  ಇಲ್ಲದ ಮರ್ಯಾದೆಯನ್ನು ಇದೆ ಅಂತೆಲ್ಲಾ ಹೇಳಿ ಮರ್ಯಾದೆ ಹೆಸರಿಗೆ ಅವಮಾನ ಮಾಡುತ್ತಿರುವ ಶ್ವಾನಪುತ್ರರನ್ನು ಗಂಗಾ ನದಿಯ ಪಕ್ಕದಲ್ಲಿರೋ ಒಳಚರಂಡಿಯಲ್ಲಿ ಮುಳುಗಿಸಿ ಅದ್ದಿ ತೆಗೆಯಬೇಕಿದೆ. ಹೀಗಾಗಿ ನಮ್ಮ ಏಕ ಸದಸ್ಯ ಬ್ಯುರೋವನ್ನು ಅತ್ತ ಕಡೆ ಸುಳಿಯದಂತೆ ಜಾಗ್ರತೆ ವಹಿಸಿದ್ದೇವೆ ಮತ್ತು ನಮ್ಮ ಬೊಗಳೂರಿಗೆ ಸುವಾಸನೆ ಅಂಟಿಕೊಳ್ಳದಂತೆ ನೋಡಿಕೊಳ್ಳುತ್ತಿದ್ದೇವೆ.

  ಆಮೇಲೆ ನಾಯಿ ಹಂದಿಗಳಿಗೆ ಎಲ್ಲಾದರೇನಂತೆ, ನಿಮ್ಮ ರೆಸಾರ್ಟಿನಲ್ಲಿ ಆಗುವುದಿಲ್ಲವೇ? ನಿಮ್ಮ ರೆಸಾರ್ಟಿಗೆ ಭಿನ್ನಮತೀಯ ಶಾಸಕರನ್ನು ಬರುವಂತೆ ಮಾಡಿಕೊಡಬೇಕಾದರೆ, ನಮ್ಮ ಯಾವಾಗಲೂ ಬಿಸಿಯಾಗಿರುವ ನಮ್ಮ ಕೈಯನ್ನು ಮತ್ತಷ್ಟು ಬಿಸಿ ಮಾಡುವ ನಿಮ್ಮ ತಂತ್ರ ಸ್ವಾಗತಾರ್ಹ. ಅದಕ್ಕೊಂದು ಸಲಹೆಯೇನೆಂದರೆ, ಪಕ್ಷದಲ್ಲಿರುವ ಎಲ್ಲರನ್ನೂ ಭಿನ್ನಮತೀಯರಾಗಿಸುವುದು. ಒಬ್ಬನೇ ಒಬ್ಬ ನಿಷ್ಠಾವಂತ ಇದ್ದರಲ್ಲವೇ ನಿಮಗೆ ಚಿಂತೆ?

  ಸುನಾಥರೇ,
  Politics is the last RESORT of scoundrels! ನೀವು ತಿರುಗಿಸಿ ಬರೆದ್ರೆ ಗೊತ್ತಾಗಲ್ಲ ಅಂದ್ಕೊಂಡಿದ್ದೀರಾ? ನೀವು ಪೆದ್ದ*, ನಾವೂ ಅದಕ್ಕಿಂತ ಪೆದ್ದ.
  * ಅಂದ್ರೆ ತೆಲುಗಿನ ಪೆದ್ದ!

  ಚುಕ್ಕಿ ಚಿತ್ತಾರಿಗಳೇ,
  ದೀಪಾವಳಿ ಮುಗಿಸಿ, ಹೊಸ ವರ್ಷ ಬರೋದ್ರೊಳಗೆ ಮತ್ತು ಅದು ಮುಂದಿನ ವರ್ಷದ ಶುಭಾಶಯ ಆಗೋದ್ರೊಳಗೆ ಬಂದು ನಿಮ್ಮ ಶುಭಾಶಯ ಸ್ವೀಕರಿಸಿದ್ದೀನಿ. ನಿಮಗೂ ತಡವಾಗಿ ಶುಭಾಶಯಗಳು.

  ಶೋಕ ಚಕ್ರವರ್ತಿಗಳೇ,
  ನೀವಿಲ್ಲಿ ಬಂದು ಶೂಪರ್ ಅಂತ ಹೇಳಿದ್ಮೇಲೆ ನಮ್ಮೂರಿನೋರು ತಲೆತಪ್ಪಿಸಿಕೊಂಡಿದ್ದಾರೆ ಮತ್ತು ಸಂಬಳ ಏರಿಸಲು ಒತ್ತಾಯ ಮುಂದಿಟ್ಟಿದ್ದಾರೆ. ದಯವಿಟ್ಟು ಒಂದ್ಸಲ ಬಂದು ಸತ್ಯಾಂಶ ಹೇಳಿ ಹೋಗಿ.

  ಒಂಟಿ ಪ್ರೇಮಿಗಳೇ,
  ನಿಮ್ಮ ಸೂಪರ್ ಸೇವೆಗೆ ನಮ್ಮದೂ ನಿಜವಾದ ಬೆಂಬಲವಿದೆ. ನಿಮ್ಮ ಈ ಪ್ರಯತ್ನ ಸಫಲವಾಗಲಿ ಅಂತ ಹಾರೈಕೆ. ಕನ್ನಡಿಗರಿಗೆ ಒಳ್ಳೆಯ ಉದ್ಯೋಗ ದೊರಕಲಿ ಅಂತಲೂ ಆಶಯ.

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post