(ಬೊಗಳೂರು ಜಾಹೀರಾತು ಬ್ಯುರೋದಿಂದ)
ಬೊಗಳೂರು, ನ.27- ಸುದೀರ್ಘ ಕಾಲದಿಂದ ಬೊಗಳೆ ರಗಳೆ ಬ್ಯುರೋ ಮತ್ತೊಂದು ಬಾರಿ ನಿದ್ದೆಯಿಂದ ಎದ್ದೇಳಲು ಬಲವಾದ ಕಾರಣವೊಂದು ಸಿಕ್ಕಿದೆ.ಈ ಕಾರಣವೇನು ಮತ್ತು ಏನಲ್ಲ ಎಂಬುದನ್ನು ತಿಳಿಯಲು ಬೊಗಳೆ ರಗಳೆಯ ಸೋಮವಾರದ ಸಂಚಿಕೆಯಲ್ಲಿ ವೀಕ್ಷಿಸಿ.
ಸುದ್ದಿ ಮಾಡುವವರೇ ಸುದ್ದಿಯಾಗುತ್ತಿರುವ ಈ ದಿನಗಳಲ್ಲಿ, ಯಾವುದೇ ಮಾಧ್ಯ-ಮಗಳೂ ವರದ್ದಿ ಮಾಡದ, ಪುತ್ರಿಕೋದ್ಯಮವೇ ಕಂಡು ಕೇಳರಿಯದ ವಿ-ಶೇಷ ವರದ್ದಿಯೊಂದನ್ನು ನಿಮ್ಮ ಮುಂದೆ ತಂದು ಸುರಿಯಲಾಗುತ್ತದೆ.
ನಿಮ್ಮ ಬೊಗಳೆ ಪ್ರತಿಗಳನ್ನು ಇಂದೇ ಕಾದಿರಿಸಿ.
5 ಕಾಮೆಂಟ್‌ಗಳು
ಶ್ರಾವಣ ಸೋಮವಾರವೆ?
ಪ್ರತ್ಯುತ್ತರಅಳಿಸಿಸಾಮ್ರಾಟರ ಅನುಪಸ್ಥಿತಿಯಲ್ಲಿ ನಿದ್ದೆಗೆ ಜಾರಿದ ನಗಾರಿಯ ಪ್ರತಿಸ್ಪರ್ಧಿ ಪತ್ರಿಕೆಯು ಸಾಮ್ರಾಟರ ಆಗಮನದ ಸುದ್ದಿಯು ತಲುಪಿದ ಕೂಡಲೆ ಎಚ್ಚೆತ್ತಿದೆ. ಸೋಮವಾರ ಧರೆ ಸ್ಪೋಟಗೊಳ್ಳುವಂತಹ ಸುದ್ದಿಯೊಂದನ್ನು ಪ್ರಕಟಿಸುವುದಾಗಿ ಹೇಳಿಕೊಂಡಿದೆ. ಬಹುಶಃ ಅದು ಸಾಮ್ರಾಟರು ನಗಾರಿಯ ಕೇಂದ್ರ ಕಛೇರಿಗೆ ಹಿಂದಿರುಗಿದ ಸುದ್ದಿಯನ್ನೇ ಮೊದಲು ಬ್ರೇಕ್ ಮಾಡುವ ಹೊಂಚು ಹಾಕಿಕೊಂಡಿದ್ದರೆ, ಈ ಮೂಲಕ ನಾವು ಅವರಿಗೆ ಮರುಕ ಸೂಚಿಸಲು ಇಚ್ಛಿಸುತ್ತೇವೆ.
ಪ್ರತ್ಯುತ್ತರಅಳಿಸಿhttp://nagenagaaridotcom.wordpress.com/2010/11/28/ನಗಾರಿ-ಕಿಕ್ಕಿಂಗ್/
ಸುನಾಥರೇ,
ಪ್ರತ್ಯುತ್ತರಅಳಿಸಿಇಲ್ಲ, ಇಲ್ಲ, ಕಪ್ಪು ಚುಕ್ಕೆವಾರ...
ನಗೆ ನಗಾರೇಂದ್ರರೇ,
ಪ್ರತ್ಯುತ್ತರಅಳಿಸಿನಮ್ಮ ಏಕಸದಸ್ಯ ಬ್ಯುರೋದ ಸರ್ವರನ್ನೂ, ಸಕಲರನ್ನೂ ಎತ್ತಾಕಿಕೊಂಡು ಹೋಗುವ ನಿಮ್ಮ ಆತ್ಮೀಯತೆಯ ಪರಮಾವಧಿಯ ನಿರ್ಧಾರ ನಮ್ಮನ್ನು ಕಂಗೆಡಿಸಿಲ್ಲ. ನಿಮ್ಮಿಂದಲೇ ವರದ್ದಿ ಹೆಕ್ಕಿ ಕುಕ್ಕಿಂಗ್ ಮಾಡುವ ಸಾಧ್ಯತೆಗಳೂ ಇಲ್ಲದಿಲ್ಲ. ಹೀಗಾಗಿ ಅಲ್ಲಾಡುವುದೆಲ್ಲಾ ಉರುಳುವುದಿಲ್ಲ ಎಂದಿರುವ ಸಿ.ಟಿ.ರವೀಯವರ ಹೇಳಿಕೆಗಳೇ ನಮಗೆ ವೇದವಾಕ್ಯ. ನಮ್ಮ ಸರಕಾರ ಭದ್ರ, ಬೊಗಳೆ ರಗಳೆ ಬ್ಯುರೋದಲ್ಲಿ ಯಾರು ಕೂಡ ಇಲ್ಲದಿದ್ರೂ ಕೆಲಸ ಮಾಡುತ್ತದೆ ಎಂದು ಎಚ್ಚರಿಕೆಯನ್ನೂ ಇದೇವೇಳೆ ಸೂಟ್ ಕೇಸಿನಲ್ಲಿ ಹಾಕಿ ರವಾನಿಸುತ್ತಿದ್ದೇವೆ.
ಸಿಟಿ ರವಿಯವರು ಅಲ್ಲಾಡುವುದೆಲ್ಲಾ ಉರುಳುವುದಿಲ್ಲ ಎಂದು ಹೇಳಿಕೆ ನೀಡಿದ ತರುವಾಯ ಉದುರಿದ ತಮ್ಮ ತಲೆ ಕೂದಲನ್ನು ಕಂಡು ಅವು ಅಲ್ಲಾಡಿದ್ದಕ್ಕೆ ರಾಹುಲ್ ಗಾಂಧಿ ಹೆಲಿಕಾಪ್ಟರ್ ರೆಕ್ಕೆ ತಿರುಗಿದ್ದು ಕಾರಣ ಎಂದು ನಗಾರಿಗೆ ಹೇಳಿಕೆ ನೀಡಿದ್ದಾರೆ.
ಪ್ರತ್ಯುತ್ತರಅಳಿಸಿನಗಾರಿಗಾಗಿ ನಿಮ್ಮ ಬ್ಯೂರೋದ ‘ಸರ್ವರ್’ನ್ನು ಎತ್ತಾಕಿಬಂದು ಬಳಸಲು ಹೊರಟರೆ ಅದು ಹ್ಯಾಂಗ್ ಮಾಡಿಕೊಂಡು ನಿಷ್ಠೆಯನ್ನು ಮೆರೆಯಿತು. ಎಚ್ಚರಿಕೆಯನ್ನು ರವಾನಿಸಿದ ಸೂಟ್ ಕೇಸಿನಲ್ಲೇ ನಾವು ಆ ಶವವನ್ನು ಇಟ್ಟು ಮರಳಿಸಿದ್ದೇವೆ.
ಏನಾದ್ರೂ ಹೇಳ್ರಪಾ :-D