ಬೊಗಳೆ ರಗಳೆ

header ads

ಕನಿಷ್ಠ ಉಡುಗೆ: ಟಿವಿ ಬಳಿಕ ರೇಡಿಯೋ ಸರದಿ!


[ಬೊಗಳೂರು ಸೆಕ್ಸೀ ಬ್ಯುರೋದಿಂದ]
ಬೊಗಳೂರು, ಜೂ.1- Too sexyಯಾಗಿ ಉಡುಗೆ ತೊಟ್ಟಿದ್ದಕ್ಕಾಗಿ ಕೆಲಸದಿಂದ ವಜಾಗೊಂಡ ರೇಡಿಯೋ ಉದ್ಘೋಷಕಿ(ಜಾಕಿ)ಯೊಬ್ಬಳು ಮಾಲೀಕರ ವಿರುದ್ಧ ಕೋರ್ಟ್‌ ಮೆಟ್ಟಿಲೇರಿರುವುದು ಹಲವು ಹುಬ್ಬುಗಳನ್ನು ಮೇಲಕ್ಕೆ ಏರಿಸಿ, ಕೆಲವರ ಕಣ್ಣ ಮೇಲೆ ಕಪ್ಪು ಗೆರೆಯೇ ಇಲ್ಲದಂತಾಗಿದೆ.

ವರದಿ ಪ್ರಕಟವಾದ ತಕ್ಷಣ ಲಂಡನ್‌ಗೆ ಧಾವಿಸಿದ ಬೊಗಳೆ ಬ್ಯುರೋ ವರದಿಗಾರರು, ಈ ಸುದ್ದಿಯನ್ನು ಬಟಾಬಯಲಾಗಿಸಿದ್ದು ಖಂಡಿತವಾಗಿಯೂ ತಾವಲ್ಲ ಎಂದು ಉದ್ಘೋಷಕಿಗೆ ತಿಳಿ ಹೇಳುವಲ್ಲಿ ಹೆಣಗಾಡಿ, ಕೊನೆಗೂ ಆಕೆಯ ಬಿಚ್ರೋಶದಿಂದ ಪಾರಾಗುವಲ್ಲಿ ಯಶಸ್ವಿಯಾಗಿದ್ದಾರೆ.

ನಾನು ಬಟ್ಟೆ ತೊಟ್ಟರೂ ತೊಡದಿದ್ದರೂ ರೇಡಿಯೋದಲ್ಲಿ ಅದು ಶ್ರೋತೃಗಳಿಗೇನೂ ಕಾಣಿಸುವುದಿಲ್ಲವಲ್ಲ ಎಂದು ಸ್ಪಷ್ಟನೆ ನೀಡಿದ ಆಕೆ, ಕೆಲವು ಟೀವಿ ಚಾನೆಲ್‌ಗಳಲ್ಲಿ ಬಟ್ಟೆಯೇ ಇರೋದಿಲ್ಲ, ಕೇವಲ ದೇಹ ಮಾತ್ರ ಕಾಣಿಸುತ್ತದೆ, ಇದರ ಮೇಲೆ ಕ್ರಮ ಕೈಗೊಳ್ಳುವುದಿಲ್ಲವೇಕೆ ಎಂದು ಪ್ರಶ್ನಿಸಿದ್ದಾಳೆ.

ಕನಿಷ್ಠ ಉಡುಗೆ ತೊಟ್ಟರೆ ಧ್ವನಿ ಮತ್ತಷ್ಟು ಮಾದಕವಾಗುತ್ತದೆ, ರೇಡಿಯೋ ವೀಕ್ಷಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬಹುದಿತ್ತಲ್ಲ ಎಂದು ಆಕೆ ಮಾಲೀಕರಿಗೆ ಸಲಹೆಯನ್ನೂ ನೀಡಿದ್ದಾಳೆ.

ಈ ಮಧ್ಯೆ ಆಕೆಗೆ ಮತ್ತೂ ಸಂದೇಹ. ತನ್ನನ್ನು ಕೆಲಸದಿಂದ ತೆಗೆದು ಹಾಕಿದ್ದು ತೊಟ್ಟ ಬಟ್ಟೆ ಕಡಿಮೆಯಾಗಿದ್ದಕ್ಕೋ ಅಥವಾ ಕಡಿಮೆ ತೊಟ್ಟದ್ದು ಸಾಲದ್ದಕ್ಕೋ ಎಂಬುದರ ಬಗ್ಗೆ ಆಕೆಯಿನ್ನೂ ಸಂಶೋಧನೆ ನಡೆಸುತ್ತಿದ್ದಾಳೆ.

ಈ ಮಧ್ಯೆ, ಕ್ರಮವನ್ನು ಸಮರ್ಥಿಸಿಕೊಂಡಿರುವ ರೇಡಿಯೋ ಚಾನೆಲ್ ಮಾಲೀಕರು, ಆಕೆಯ ಮಾತಿನ ಮಾದಕತೆ ಹೆಚ್ಚಾಗಿ ವೀಕ್ಷಕರ ಅಲ್ಲಲ್ಲ ಶ್ರೋತೃಗಳ ಸಂಖ್ಯೆ ವಿಪರೀತ ಆಗಿಬಿಟ್ಟರೆ ಜನಜಂಗುಳಿ ಹೆಚ್ಚಾಗಿ ಏರ್‌ಟೈಮ್ ಟ್ರಾಫಿಕ್ ಜಾಮ್ ಆಗಬಹುದಿತ್ತು ಎಂದವರು ಭೀತಿ ವ್ಯಕ್ತಪಡಿಸಿದ್ದಾರೆ. ಆದ್ರೂ ತಾವು ಹೇಳುವ ಮೊದಲೇ ಆಕೆ ಬಟ್ಟೆಯ ಗಾತ್ರ ಕುಗ್ಗಿಸಿಕೊಂಡಳಲ್ಲ ಎಂಬುದು ಅವರಿಗೆ ಇನ್ನೂ ಇರುವ ಅಸಮಾಧಾನ.

ಅವರು ಹೇಳಿದ್ದು:"ಅಲ್ ಸ್ವಾಮೀ, ಮೈಕ್ರೋಸ್ಕೋಪ್ ಹಿಡಿದು ನೋಡಿದ್ರೂ ಆಕೆಯ ಮೈಮೇಲೆ ಚೂರೂ ಬಟ್ಟೆ ಇರಲಿಲ್ಲಾಂತೀನಿ.... ನಮ್ಮ ರೇಡಿಯೋ ಪ್ರಸಾರ ಯಂತ್ರಗಳೆಲ್ಲಾ ಸ್ಥಗಿತವಾಗಿರುವ ಹಿನ್ನೆಲೆ ಏನು ಅಂತ ಹುಡುಕಾಟ ಮಾಡಿದಾಗಲೇ ನಮಗೆ ಆಕೆ ಕನಿಷ್ಠಯುಡುಗೆ ತೊಟ್ಟಿರುವ ವಿಷಯ ಗೊತ್ತಾಗಿದ್ದು!"

ಕಾಮೆಂಟ್‌‌ ಪೋಸ್ಟ್‌ ಮಾಡಿ

14 ಕಾಮೆಂಟ್‌ಗಳು

 1. ಪಾಪದವರು ಸಿಕ್ಕಿದ್ದಾರೇಂತ ನೀವೆಲ್ಲಾ ಹೀಗೆ ಗೇಲಿ ಮಾಡೋದಾ? ನಗ್ರಯ್ಯಾ ನಗ್ರಿ, ನನ್ ಹಿಂದೆ ಸುಮ್ನೆ ಬರ್ಲಿಲ್ಲ ಡಿಗ್ರಿ ಎಂದು ತನ್ನ ಅಳಲನ್ನು ತೋಡಿಕೊಂಡಳು. ಒಮ್ಮೆ ತಾನು ತನ್ನ ಮಾಲೀಕರಿಗೆ ಸಮಜಾಯಿಷಿ ಕೊಟ್ಟಿದ್ದನ್ನು ಯಾಕೆ ಪಬ್ಲಿಕ್ ಮಾಡ್ತಿದ್ದಾರೆ ಎಂದು ಅವಳ ಪ್ರಶ್ನೆ. ಇದರ ಬಗ್ಗೆ ತನಿಖೆ ನಡೆಯಬೇಕಿದೆ. ನಿಮ್ಮ ವರದಿಗಾರರಿಗೆ ಇದೊಂದು ಗ್ರಾಸ ಸಿಕ್ಕಿದೆ. ನಿಮ್ಮ ವರದಿಗಾರರು ಅಲ್ಲಿಯೇ ಉಳಿದಾರು, ಬೇಗ ಕರೆಸಿಕೊಳ್ಳಿ. ನಿಮ್ಮ ಪತ್ರಿಕೆಯ ಅಳಿವು ಉಳಿವಿನ ಪ್ರಶ್ನೆ ಇದು.

  ಆಕೆ ಕನಿಷ್ಟ ಉಡುಗೆ ತೊಟ್ಟಿದ್ದರಿಂದ, ರೇಡಿಯೋ ತಂತ್ರಜ್ಞರು ತಮ್ಮ ಕೆಲಸವನ್ನು ಸರಿಯಾಗಿ ಮಾಡ್ತಿರಲಿಲ್ಲವಂತೆ. ಅದಕ್ಕೋಸ್ಕರ ಮಾಲೀಕರು ಈ ತೊಂದರೆಯ ಮೂಲವಾದ ಆ ಹೆಣ್ಣಿನ ಮೇಲೆ ಕ್ರಮ ಕೈಗೊಳ್ಳುತ್ತಿದ್ದಾರೆ.

  ಪ್ರತ್ಯುತ್ತರಅಳಿಸಿ
 2. ರದ್ದಿಗೆ grass ಸಿಕ್ಕಿದ ಕಾರಣ ನಮ್ಮ ವರದಿಗಾರರು ಅಲ್ಲೇ ಮೇಯತೊಡಗಿದ್ದಾರೆ.

  ಆಕೆ ಸಮಜಾಡಿಸಿದ್ದನ್ನು ಯಾರು ಕೂಡ ಪಬ್ಲಿಕ್ ಮಾಡಿರಲಿಲ್ಲ, ತಾನಾಗಿಯೇ ಪಬ್ಲಿಕ್ ಆಗಿದೆ.

  ಪ್ರತ್ಯುತ್ತರಅಳಿಸಿ
 3. ಎರಡು 'ಸ್ವೀಕೃತ ಸಿದ್ಧಾಂತ'ಗಳನ್ನು ಮಂಡಿಸುತ್ತೇನೆ. ಪ್ರಮೇಯದ ಸಾಧನೆಯನ್ನು ನೀವೇ ಮಾಡಿ.

  ೧) ತಮಿಳುನಾಡಿನವರು 'ಶ' ವನ್ನು 'ಚ' ಎಂದು ಬರೆಯುತ್ತಾರೆ/ಪ್ರೊನೌನ್ಸಿಸುತ್ತಾರೆ.

  ೨) ಆಕಾಶವಾಣಿ ಎಂಬ ಪದದಲ್ಲೂ 'ಶ' ಅಕ್ಷರವಿದೆ.

  ಇದರಿಂಡ ಪ್ರಮೇಯವನ್ನು ಎಷ್ಟು ರಂಜನೀಯವಾಗಿ ಬೇಕಾದರೂ ಸಾಧಿಸಬಹುದು!

  ಪ್ರತ್ಯುತ್ತರಅಳಿಸಿ
 4. ನೆನಪಿಸಿದ್ದಕ್ಕೆ ಧನ್ಯವಾದಗಳು ಜೋಚಿಯವರೆ.
  ಇನ್ನು ನಾವು ಆಕಾಕ್ಕೆ ಏಣಿ ಇಡುತ್ತೇವೆ. ಹೇಗಿದ್ದರೂ ಸಿಕ್ಕ ಅವಕಾವನ್ನು ಚೆನ್ನಾಗಿ ಬಳಸಿಕೊಳ್ಳಬೇಕಲ್ಲ.

  ಪ್ರತ್ಯುತ್ತರಅಳಿಸಿ
 5. ಜೋ ಹರ್ ಹಫ್ತಾ ಚಿತ್ರಾನ್ನ ಪಕಾತಾ ಹೈ, ವೊ ಜೋಚಿ ಹೈ!?

  Rhymes with ಬಾಲಂಗೋಚಿ!

  ಪ್ರತ್ಯುತ್ತರಅಳಿಸಿ
 6. ಅವಕಾ ಬಳಸಿಕೊಂಡರೇ ನಿಮ್ಮ ಹೆಸರು ಸಾರ್ಥಕ, ಎಷ್ಟೆಂದರೂ ಅದರೊಂದಿಗೆ rhymiಸುತ್ತದಲ್ಲ!?

  ಪ್ರತ್ಯುತ್ತರಅಳಿಸಿ
 7. ಬ್ಲಾಗ್‌ನ ನಿರ್ವಾಹಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

  ಪ್ರತ್ಯುತ್ತರಅಳಿಸಿ
 8. madam what he has written? do you think that he has used some foul language. i am very sad to note your comments here.

  he has just asked whether u can read kannada. that is all.

  there are people who pass worst type of comments. he is not of that type.

  at least i have learnt a lesson not to comment on unknown people's blog though it contains useful info. may god bless u.

  ಪ್ರತ್ಯುತ್ತರಅಳಿಸಿ
 9. ಜೋಚಿ ಅವರೆ
  ನೀವು ಕೊಟ್ಟ ಅವಕಾವನ್ನು ಬಳಸಿಕೊಳ್ಳಲಾಗುತ್ತದೆ.

  ಪ್ರತ್ಯುತ್ತರಅಳಿಸಿ
 10. Thanks ಮಾವಿನಯನಸ ಅವರೆ,
  ಬೆಂಗಳೂರು ಎಂಬ ಕಾರಣಕ್ಕೆ ಕನ್ನಡದಲ್ಲಿ ಕಾಮೆಂಟಿಸಿದ್ದೆ. ನಿಮ್ಮಂತೆಯೇ ಬಹುಶಃ ಎಲ್ಲರಿಗೂ ಇದೊಂದು ಪಾಠ ಎನ್ನಬಹುದು. ಅಪರಿಚಿತ ಬೊಗಳೆಗಳಿಗೆ no comments!

  ಪ್ರತ್ಯುತ್ತರಅಳಿಸಿ
 11. ಸ್ವಾಮಿ ಅನ್ವೇಷಿಗಳೇ, ಜೇನುಗೂಡಿನ ಹತ್ತಿರ ಹೋಗಿ ಡೋಲು ಬಡಿದರೆ ಲಾವಣಿ ಹೇಳಿದರೆ ಸುಮ್ಮನಿರುತ್ತವೇನ್ರೀ. ನಿಮ್ಮನ್ನು ನೋಡಿ ನಾನೂ ಅಲ್ಲಿಗೆ ಹೋಗಿದ್ದೇರಿ. ನಂಗಿನ್ನೂ ಅವು ಕಚ್ಚಲಿಕ್ಕೆ ಬಂದಿಲ್ಲ. ಆದ್ರೆ ನಿಮತ್ರ ಮಾತ್ರ ನುಗ್ಗಿದ್ವು ಅಂದ್ರೆ ಏನ್ರೀ ಅರ್ಥ?

  ಪ್ರತ್ಯುತ್ತರಅಳಿಸಿ
 12. ಬಹುಶಃ ಇಲ್ಲಿ ಸಿಹೀನೋ, ಕಹೀನೋ ಜಾಸ್ತಿ ಇರ್ಬೇಕು ನೋಡಿ, ಅದ್ಕೆ...!

  ಪ್ರತ್ಯುತ್ತರಅಳಿಸಿ
 13. ಅಸತ್ಯ ಎಂದಿಗೂ ಸಿಹಿ - ಕಹುಯಂತೂ ಅಲ್ಲವೇ ಅಲ್ಲ.

  ಓಹ್! ಅದಕ್ಕೇನಾ ಅಮ್ಮಾವ್ರು ಹಾರಾಡಿದ್ದು. ಇಂತಹ ವಿಷಯಗಳೆಲ್ಲವೂ ಸಾರಥಿಗಳಿಗೇ ತಿಳಿಯೋದು (ಗೊತ್ತಲ್ಲಾ - ಎಫ್ ಎಂ ಖಾನ್ ಹೇಗೆ ಮೇಲೆ ಬಂದ್ರು ಅಂತ)

  ಪ್ರತ್ಯುತ್ತರಅಳಿಸಿ
 14. ಅಸತ್ಯದ ತಲೆ ಮೇಲೆ ಹೊಡೆದ್ರಲ್ಲ....!

  ಸಾರಥಿಗಳಿಗಂತೂ ಕನ್ನಡದ ತೇರು ಎಳೆದೂ ಎಳೆದೂ ಸಾಕಷ್ಟು ಅನುಭವವಿದ್ದಂತಿದೆ.

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D