ಬೊಗಳೆ ರಗಳೆ

header ads

ಇದು ದಾಂಧಲೆ ಅಲ್ಲ, ಪ್ರಯೋಗಗಳ ಸರಮಾಲೆ!

(ಬೊಗಳೂರು ಕೋಮುವಾದಿ ಬ್ಯುರೋದಿಂದ)
ಬೊಗಳೂರು, ಜ.22- ರಾಜಧಾನಿ ಬೆಂಗಳೂರಿನ (ಬೊಗಳೂರಿನ ಅಲ್ಲ) ಏಳಿಗೆಗೆ ಶ್ರಮಿಸುತ್ತಿರುವ ದುಷ್ಕರ್ಮಿಗಳು ಶಿವಾಜಿನಗರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸುದ್ದಿಯೊಂದನ್ನು ಸ್ಫೋಟಿಸಲು ಯತ್ನ ನಡೆಸಿರುವುದು ಇಲ್ಲಿ ವರದಿಯಾಗಿದೆ.

ಬೆಂಗಳೂರು ಇತ್ತೀಚಿನ ದಿನಗಳಲ್ಲಿ ಯಾವುದೇ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡುತ್ತಿಲ್ಲ ಎಂಬುದನ್ನು ಮನಗಂಡ ಈ ದುಷ್ಕರ್ಮಿಗಳು, ಮನೆಗಳಿಗೆ, ಬಸ್ಸುಗಳಿಗೆ ಎಲ್ಲೆಂದರಲ್ಲಿ ಬೆಂಕಿ ಹಚ್ಚಿ ಬೆಂಗಳೂರು ಪ್ರ-ಜ್ವಲಿಸುವಂತೆ ಮಾಡಿರುವುದನ್ನು ಬೊಗಳೆ ರಗಳೆ ಬ್ಯುರೋ ಪತ್ತೆ ಹಚ್ಚಿದೆ.

ಇದಲ್ಲದೆ ಇಲ್ಲಿ ತಯಾರಿಕೆ ಮಾಡಲಾದ ಕತ್ತಿ, ಮಚ್ಚು, ರಾಡ್‌ಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಳ್ಳೆಯ ವಹಿವಾಟು ಕುದುರಿಸುವ ನಿಟ್ಟಿನಲ್ಲಿ, ಹಲವರಿಗೆ ಇರಿದು, ಈ "ಉತ್ಪನ್ನ"ಗಳ ಕಾರ್ಯ ಸಾಮರ್ಥ್ಯ ಪರೀಕ್ಷಿಸಲಾಗಿತ್ತು ಎಂದು ವ್ಯಾವಹಾರಿಕ ದುಷ್ಕರ್ಮಿಯೊಬ್ಬ ಬೊಗಳೆ ರಗಳೆ ಬ್ಯುರೋಗೆ ತಿಳಿಸಿದ್ದಾನೆ.

ಈ ಮಾರಕಾಯುಧಗಳ ಪ್ರಯೋಗ ಯಶಸ್ವಿಯಾಗಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮೇಡ್ ಇನ್ ಬೆಂಗಳೂರು ಮಚ್ಚು-ಲಾಂಗು-ಕಠಾರಿಗಳಿಗೆ ಉತ್ತಮ ಮಾರುಕಟ್ಟೆ ದೊರೆಯುವ ಭರವಸೆಯನ್ನು ಆತ ವ್ಯಕ್ತಪಡಿಸಿದ್ದಾನೆ.

ಮತ್ತೊಬ್ಬ ದುಷ್ಕರ್ಮಿಯನ್ನು ಸಂದರ್ಶಿಸಿದಾಗ, ತಾನು ದುಷ್ಕರ್ಮಿ ಅಲ್ಲ, ದುಷ್ಟ-ಕ್ರಿಮಿ ಎಂದು ಸ್ಪಷ್ಟಪಡಿಸಿದ ಆತ, ಇತ್ತೀಚಿನ ದಿನಗಳಲ್ಲಿ ಪೊಲೀಸರು ಎಷ್ಟು ಜಾಗೃತರಾಗಿದ್ದಾರೆ ಎಂಬುದನ್ನು ಪರೀಕ್ಷೆ ಮಾಡುವುದು ನಮ್ಮ ಉದ್ದೇಶ ಎಂದು ಸ್ಪಷ್ಟಪಡಿಸಿದ್ದಾನೆ.

ವಿರಾಟ್ ಹಿಂದೂ ಸಮಾವೇಶ ನಡೆಯುತ್ತಿರುವಾಗಲೇ ಇಂಥವನ್ನೆಲ್ಲಾ ಮಾಡಿದರೆ ಈ ಸಮಾವೇಶ ಆಯೋಜಕರ ಮೇಲೆ ಸುಲಭವಾಗಿ ಎಲ್ಲ ದೂಷಣೆಗಳನ್ನು ಜಾರಿಸಿಬಿಡಬಹುದು. ಮೆರವಣಿಗೆ ಸಂದರ್ಭದಲ್ಲಿ ಮನೆಯೊಳಗಿದ್ದವರು ಎಚ್ಚರವಾಗಿದ್ದಾರೆಯೇ ಎಂಬುದನ್ನು ಪರಿಶೀಲನೆ ಮಾಡಬೇಕಿತ್ತು ಮತ್ತು ಬೆಂಗಳೂರಿನ ರಸ್ತೆಗಳಲ್ಲಿ ಹೊಂಡವೆದ್ದು ಹೋಗಿ ದೊರೆತ ಕಲ್ಲುಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆಯೇ ಎಂಬುದನ್ನು ಪರೀಕ್ಷೆಗೊಳಪಡಿಸುವುದು ತಮ್ಮ ಉದ್ದೇಶ ಎಂದಾತ ಹೇಳಿದ್ದಾನೆ.

ಇನ್ನೊಂದೆಡೆ ಮನೆಯೊಳಗೆ ಅಡಗಿಕೊಂಡ ದುಷ್ಕರ್ಮಿಗಳನ್ನು ಹಿಡಿಯಲು ಪೊಲೀಸರು ಬಂದಾಗ ಮಹಿಳಾಮಣಿಗಳು ಅವರ ಮೇಲೆ ಮೆಣಸಿನಪುಡಿ ಸ್ಪ್ರೇ ಮಾಡಿ ಅದನ್ನೂ ಪರೀಕ್ಷೆಗೊಳಪಡಿಸಿದ್ದಾರೆ ಎಂದು ವರದಿಯಾಗಿದೆ.

ಒಟ್ಟಿನಲ್ಲಿ ಬೆಂಗಳೂರಲ್ಲಿ ನಡೆದದ್ದು ದಾಂಧಲೆಯಲ್ಲ, ಅದು ಹಲವು ಉತ್ಪನ್ನಗಳ ಪರೀಕ್ಷೆಗಳ ಸರಮಾಲೆ ಎಂಬುದನ್ನು ಬ್ಯುರೋ ಪತ್ತೆ ಹಚ್ಚಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

  1. ಈಗಿನ ಜನ ಪೋಲಿಸರಿಗೂ ಹೆದರದಷ್ಟು ಧೈರ್ಯವಂತರಾಗಿದ್ದಾರೆ ಅಲ್ಲವೇ?

    ಪ್ರತ್ಯುತ್ತರಅಳಿಸಿ
  2. ಅಲ್ಲಿ ಯಾರೋ ಸದ್ದಾಂ ಹೆಸರನ್ನು ಇಟ್ಟು ಭಕ್ತಿ ಪ್ರದಶಿಸಿದರೆ ಇಲ್ಲಿ ನಮ್ಮ ಬೆಂಗಳೂರಿನಲ್ಲಿ ಅವನ ಹೆಸರಲ್ಲಿ ಸಮಾವೇಶ ನಡೆಸಿ ಸದ್ದಾಂ ಆತ್ಮಕ್ಕೆ ಒಂದು ಜೀವವನ್ನು ಬಲಿಕೊಟ್ಟಿದಾಗಿದೆ.

    ಸಬ್ ಕೋ ಸನ್ಮತಿ ದೇ ಸದ್ದಾಂ

    ಪ್ರತ್ಯುತ್ತರಅಳಿಸಿ
  3. ಹೊಸ ಹೊಸ ಪ್ರಯೋಗಗಳು. ಹೊಸ ಹೊಸ ಫಲಗಳು. ಹೊಸ ಹೊಸ ಫಲಾನುಭವಿಗಳು.

    ಎಲ್ಲವೂ ಹೊಚ್ಚ ಹೊಸತು. ಹಳೆಯವುಗಳಿಗೆ ಕಾಲವಿಲ್ಲ. ನಮಗಿನ್ನು ಕಾಲವಿಲ್ಲ

    ಬದಲಾವಣೆಯೇ ಜಗದ ನಿಯಮ (ಇದು ನನ್ನ ಪ್ರಾಣ ಸ್ನೇಹಿತರು ಹೇಳುವ ಮಾತು) :)

    ಪ್ರತ್ಯುತ್ತರಅಳಿಸಿ
  4. ಶ್ರೀತ್ರಿ ಅವರೆ,
    ಅದೂ ಒಂದು ಪ್ರಯೋಗವೇ. ಪೊಲೀಸರನ್ನು ಎಷ್ಟರ ಮಟ್ಟಿಗೆ ಹೆದರಿಸಬಹುದು ಎಂದು ಅವರು ಪರೀಕ್ಷೆ ಮಾಡುತ್ತಿದ್ದಾರೆ.

    ಪ್ರತ್ಯುತ್ತರಅಳಿಸಿ
  5. ಶಿವ್ ಅವರೆ,
    ಬದುಕಿದ್ದಾಗಲೂ ಸಾಕಷ್ಟು ಜೀವಗಳನ್ನು ಸದ್ದಾಂ ಮುದ್ದಾಂ ಆಗಿ ಬಲಿತೆಗೆದುಕೊಂಡಿರುವಾಗ ಇದೇನು ಮಹಾ????

    ಪ್ರತ್ಯುತ್ತರಅಳಿಸಿ
  6. ಮಾವಿನಯನಸರೆ,
    ಹಳೆಯವುಗಳಿಗೆ ಕಾಲವಿಲ್ಲ ಅಂದರೆ ಎಲ್ಲವನ್ನೂ ಬದಲಾಯಿಸಬೇಕು. ಆದರೆ ನೀವು ಹೇಳಿದ ಹೊಸ ಫಲಾನುಭವಿಗಳು ಯಾರಿರಬಹುದು? ;)

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D