(ಬೊಗಳೂರು ಅಪರಾವತಾರ ಬ್ಯುರೋದಿಂದ)
ಬೊಗಳೂರು, ಜ.19- ಸದ್ದಾಂ ಹುಸೇನ್‌ನನ್ನು ಮುದ್ದಾಂ ಆಗಿ ಗಲ್ಲಿಗೇರಿಸಿದ ಬಳಿಕ ವಿಶ್ವದ ದೊಡ್ಡಣ್ಣನಾಗಲು ಹೊರಟ ದೇಶದ ಮುಂದಿನ ಗುರಿ ಭಾರತ ಎಂದು ಗೊತ್ತಾಗಿದೆ.ಈಗಾಗಲೇ ಗಲ್ಲಿಗೇರಿಸಲ್ಪಟ್ಟು ಸತ್ತು ಬದುಕಿದಂತಿರುವ ಸದ್ದಾಂನ ಹಲವಾರು ಅವತಾರಗಳು ಭಾರತದಲ್ಲಿ ಪತ್ತೆಯಾಗಿರುವುದೇ ಇದಕ್ಕೆ ಕಾರಣವಾಗಿದ್ದು, ತಾವು ಗಲ್ಲಿಗೇರಿಸಿರುವುದು ನಿಜವಾದ ಸದ್ದಾಂನನ್ನೇ ಎಂಬುದು ಸ್ವತಃ ಅಮೆರಿಕದ ಶಂಕೆಗೆ ಈಗ ಕಾರಣವಾಗಿದೆ!
ಉತ್ತರ ಭಾರತಕ್ಕೆ ಪ್ರವಾಸ ಮಾಡಿದ ಸಂದರ್ಭ ಅಲ್ಲಿ ನೂರಾರು ಸದ್ದಾಂ ಹುಸೇನ್‌ಗಳಿರುವುದನ್ನು ಇಲ್ಲಿ ಪತ್ತೆ ಹಚ್ಚಲಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವದ ದೊಡ್ಡಣ್ಣನ ಸಂತಾನಿಗರ ಕಣ್ಣು ಉತ್ತರ ಭಾರತದ ಮೇಲೆ ಬಿದ್ದಿದೆ.
1991ರಲ್ಲಿ ಇರಾಕ್ ಮೇಲೆ ಅಮೆರಿಕ ನಡೆಸಿದ ದಾಳಿ ಸಂದರ್ಭದಲ್ಲೂ ಸದ್ದಾಂ ಹುಸೇನ್‌ನ ಅದೆಷ್ಟೋ ತದ್ರೂಪಿಗಳು ಮುದ್ದಾಂ ಆಗಿ ಅಂದಿನ ಬುಷ್ ಎದುರು ಭುಸುಗುಟ್ಟಿದ್ದನ್ನು ಇಲ್ಲಿ ನೆನಪಿಸಬಹುದಾಗಿದೆ.
ಅಂತೆಯೇ ಕಳೆದ ವರ್ಷ ಮುದ್ದಾಂ ಬಂಧನವಾದ ಸಂದರ್ಭದಲ್ಲಿ ಕೂಡ ಈತ ನಿಜವಾದ ಸದ್ದಾಂ ಹೌದೇ ಅಲ್ಲವೇ ಎಂಬುದರ ಬಗ್ಗೆ ತೀವ್ರವಾಗಿ ತಲೆ ಕೆಡಿಸಿಕೊಂಡಿದ್ದ ಅಮೆರಿಕ, ಡಿಎನ್ಎ ಪರೀಕ್ಷೆಗೂ ಮುಂದಾಗಿದ್ದುದನ್ನು ನಮ್ಮ ಬ್ಯುರೋ ಬಹಿರಂಗಪಡಿಸಲು ಇಚ್ಛಿಸುತ್ತಿಲ್ಲ.
ಇದೀಗ, ಈಗಾಗಲೇ ಕನಿಷ್ಠ 2 ಕ್ರಿಕೆಟ್ ತಂಡ ಕಟ್ಟಬಲ್ಲಷ್ಟು ಸದ್ದಾಂಗಳನ್ನು ಹೊಂದಿರುವ ಬಿಹಾರದ ಗಯಾ ಜಿಲ್ಲೆಯ ಲಖನೌ ಹಳ್ಳಿಯಲ್ಲಿ ಶೀಘ್ರವೇ ಮತ್ತಷ್ಟು ಸದ್ದಾಂಗಳನ್ನು ಸೃಷ್ಟಿಸಿ ಪೂರ್ತಿ ಹಳ್ಳಿಯನ್ನು ಸದ್ದಾಂಮಯವಾಗಿಸುವ ಯತ್ನಗಳು ಭರದಿಂದ ಸಾಗಿದೆ.
6 ಕಾಮೆಂಟ್‌ಗಳು
ಪಾಪ ಬುಷ್...
ಪ್ರತ್ಯುತ್ತರಅಳಿಸಿಅಪ್ಪ ಬೇರೆ ಯಾರು ತನ್ನ ಹೆಸರು ಇಡಲಿಲ್ಲ ಅಂತಾ atleast ಮಗನಿಗೆ ತನ್ನ ಹೆಸರನ್ನೇ ಇಡೋಣ ಅಂತಾ 'ಜಾರ್ಜ್ ಬುಷ್' ಅಂತಾ ಇಟ್ಟಿದ್ದ.
ಆದರೆ ಇಲ್ಲಿ ನೋಡಿದರೆ ಗೊತ್ತು-ಪರಿಚಯ ಇಲ್ಲದ ಜನ, ತಮ್ಮ ಮಕ್ಕಳನ್ನು ಸದ್ದಾಂ ಅನ್ನೋದೇ !
ನಮ್ಮೂರಲ್ಲೂ ಒಬ್ಬರು ಮುದ್ದಾಂ ಬುಸ್ಸೇನ್ ಅಂತಿದ್ದಾರೆ. ಅವರ ಮೇಲೂ ಕಣ್ಣು ಬಿದ್ದಿರಬಹುದಾ? ಅವರು ತುಂಬಾ ಒಳ್ಳೆಯ ಮಂದಿ. ಇಂದೇ ಅವರಿಗೆ ತಿಳಿಹೇಳುವೆ - ಮನೆಯೊಳಗೇ ಇರಿ, ಹೊರಗೆ ಬರಬೇಡಿ, ಹಾಗೇನಾದರೂ ಬರುವಂತಿದ್ದರೆ, ಪತ್ನಿ ಬುಕ್ರಾ ಹಾಕಿಕೊಂಡು ಬನ್ನಿ.
ಪ್ರತ್ಯುತ್ತರಅಳಿಸಿಈ ಬುಶ್ಶಣ್ಣ ಯಾರ ಯಾರ ಮೇಲೆ ಬುಸ್ಸಂತಾನೋ ಗೊತ್ತಾಗೋದೇ ಇಲ್ಲ :o
ಶಿವ್ ಅವರೆ,
ಪ್ರತ್ಯುತ್ತರಅಳಿಸಿಲಾರ್ಜ್ ಬುಷ್ ತಮ್ಮ ಮಗನಿಗೆ ಜಾರ್ಜ್ ಬುಷ್ ಅಂತ ಹೆಸರಿಟ್ಟದ್ದೇಕೆಂದರೆ ಬುಷ್ ಸಂತತಿ ಮುಂದುವರಿಯಲು.
ಇಲ್ಲಿ ಎಲ್ಲ ಮುದ್ದಾದ ಮಕ್ಕಳನ್ನು ಸದ್ದಾಂ ಅಂತ ಕರೆಯುವುದು ಸ್ಮಾಲ್ ಬುಷ್ ಗಮನಕ್ಕೆ ಬಂದಿದೆಯಂತೆ!
ಶ್ರೀನಿವಾಸ್ ಅವರೆ,
ಪ್ರತ್ಯುತ್ತರಅಳಿಸಿನೀವು ಹೇಳಿದ್ದನ್ನು ನಿಮ್ಮೂರಿನ ಬುಸ್ಸೇನ್ ತಪ್ಪಾಗಿ ತಿಳಿದುಕೊಂಡರೆ...???? ಬುಕ್ರಾ ಇದ್ದದ್ದನ್ನು ಬಕ್ರಾ ಅಂತ ತಿಳಿದುಕೊಂಡರೆ????
hAgE bhAratada pakka irO cheenaadalli nODidre innU hechchu saddAm, buShSharu sikkirOru!
ಪ್ರತ್ಯುತ್ತರಅಳಿಸಿಸತೀಶ್ ಅವರೆ,
ಪ್ರತ್ಯುತ್ತರಅಳಿಸಿಅಂದ್ರೆ ಚೀನಾದಲ್ಲಿ ಇರೋರು ಎಲ್ರೂ ಅವರವರ ತದ್ರೂಪಿಗಳೇ. ಎಲ್ರು ಕೂಡ ಒಂದೇ ರೀತಿ ಕಾಣಿಸುತ್ತಾರೆ. !!!!
ಏನಾದ್ರೂ ಹೇಳ್ರಪಾ :-D