Subscribe Us

ಜಾಹೀರಾತು
header ads

ನದಿಗೆ ಬ್ಲಾಗಿನ ಅರ್ಪಣೆ !

( http://www.pkblogs.com/bogaleragale ದಿಂದ ನೋಡಬಹುದು)
(ಬೊಗಳೂರು ರಗಳೆ ಬ್ಯುರೋದಿಂದ)
ಬೊಗಳೂರು, ಜು.21- ಬೊಗಳಿಗರಿಗೆ ಯಾವುದೆಲ್ಲಾ ಕಡೆಯಿಂದ ಒತ್ತಡಗಳು ಬರುತ್ತಿವೆಯಪ್ಪಾ ಎಂದು ತಲೆ ಮೇಲೆ ಕೈಹೊತ್ತು ಕುಳಿತಾಗ, ಕರ್ನಾಟಕದ ನೆಟ್ಟಿಗರಿಗೆ ಬ್ಲಾಗಿಸಲು ಯಾಕೆ ಸಾಧ್ಯವಾಗುತ್ತಿಲ್ಲ ಎಂಬುದರ ಹಿಂದಿನ ರಹಸ್ಯ ಬಯಲಾಗಿದೆ.

ಸರಕಾರಗಳು ಬೊಗಳಿಗರನ್ನು ಮಟ್ಟ ಹಾಕಲು ಸಾಕಷ್ಟು ಶ್ರಮ ಪಡುತ್ತಿರುವಂತೆಯೇ ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳು ಒಂದು ಹೆಜ್ಜೆ ಮುಂದೆ ಹೋಗಿ ಬ್ಲಾಗಿನ ವಿಷಯಗಳನ್ನು ಬೆಣ್ಣೆತೊರಾದಲ್ಲಿ ತುಂಬಿರುವ ನೀರಿಗೆ ಧುಢುಂ ಅಂತ ಜೋರಾಗಿಯೇ ಸದ್ದು ಬರುವಂತೆ ಬ್ಲಾಗಿನಗಳನ್ನು ತಳ್ಳಿಬಿಟ್ಟಿದ್ದಾರೆ. (ಪಕ್ಕದ ಚಿತ್ರ ನೋಡಿ).ಇದರಿಂದ ರಾಜ್ಯಾದ್ಯಂತ ಬ್ಲಾಗಿಗರು ಚಂಡಿಯಾಗಿ ಕೂತಿದ್ದಾರೆ.

ಆದರೆ ಅದಕ್ಕೆ ಪತ್ರಿಕೆಯವರು ಮಾತ್ರ ಬಾಗಿನ ಎಂದು ತಪ್ಪು ತಪ್ಪಾಗಿ ಬರೆದಿದ್ದಲ್ಲದೆ, ಬ್ಲಾಗಿನಗಳನ್ನು ಮುಖ್ಯಮಂತ್ರಿ ಅವರು ಸುರುವಿದ್ದರೂ ಬಾಗಿನ "ಅರ್ಪಿಸಿದರು" ಎಂದು ಬೊಗಳೆ ಬಿಟ್ಟಿವೆ.

ನೀರಾವರಿ ಯೋಜನೆಯೊಂದನ್ನು ನಾಡಿಗೆ ಸಮರ್ಪಿಸುವ ಸಂದರ್ಭ ಮುಖ್ಯಮಂತ್ರಿಯವರು ಯಾರಿಗೂ ಗೊತ್ತಾಗದಂತೆ ಬ್ಲಾಗಿನಗಳನ್ನು ಗುಳುಂ ಎಂದು ಮುಳುಗಿಸಿರುವ ವಿಷಯ ಸದನದಲ್ಲೂ ಲಂಚಾವತಾರವೆತ್ತಿ ಕೋಲಾಹಲ ಮೂಡಿಸುತ್ತಿದೆ ಎಂದು ಗೊತ್ತಾಗಿದೆ. ಮುಖ್ಯಮಂತ್ರಿಯವರ ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯಿಸುತ್ತಿದೆ ಅಂತಲೂ ಬ್ಲಾಗಿಗರಿಗೆ ತಿಳಿದುಬಿಟ್ಟಿದೆ.
---------------------------------------------
ಇಷ್ಟೊಂದು ಹತಾಶೆಗೊಳ್ಳುವುದೇಕೆ?

ಇದು ಹೇಳಲೇಬೇಕಾದ ವಿಷಯ, ಹೇಳಿಯೇ ಬಿಡುತ್ತೇನೆ.

ದೇಶಾದ್ಯಂತ ಉಗ್ರವಾದ, ಹಿಂಸಾಚಾರ ಮೇಳೈಸುತ್ತಿದ್ದರೆ, ಅದನ್ನು ಮಟ್ಟ ಹಾಕುವ ಬದಲು ನಮ್ಮ ಆಡಳಿತವು ಬ್ಲಾಗಿಗರ ಮೇಲೆ ಕೆಂಗಣ್ಣು ಬೀರಿರುವುದು ನೋಡಿ ಅಯ್ಯೋ ಪಾಪ... ಎಂಬ ಅನುಕಂಪ ವ್ಯಕ್ತಪಡಿಸದೆ ಬೇರೆ ವಿಧಿಯೇ ಇಲ್ಲ.

"ಕೋಟೆ ಸೂರೆ ಹೋದ ಮೇಲೆ, ದಿಡ್ಡಿ ಬಾಗಿಲು ಹಾಕಿದಂತೆ" ಮತ್ತು "ಒಂದು ಸಣ್ಣ ಸೊಳ್ಳೆ ಹಿಡಿಯಲಾಗದಿದ್ದರೆ ಇಡೀ ಮನೆಗೇ ಬೆಂಕಿ ಹಾಕಿದಂತೆ" ಎಂಬೆರಡು ವಾಕ್ಯಗಳಿಗೆ ಸರಿಯಾದ ಅರ್ಥವನ್ನು ನಮಗೆಲ್ಲಾ ಜ್ಞಾನೋದಯ ಮಾಡಿಸಿದ್ದಾರೆ ನಮ್ಮ ಅಧಿಕಾರಿಗಳು. ಯಾರೋ ಒಬ್ಬ ದೊಡ್ಡ ಮಂಡೆಯ ಅಧಿಕಾರಿಗೆ ಹೊಳೆದ ಈ ಅರ್ಥಹೀನ ಉಪಾಯವನ್ನು ಆತ ಘನ ಸರಕಾರಕ್ಕೆ ತಿಳಿಸಿಬಿಟ್ಟ ಪರಿಣಾಮವೇ ಬ್ಲಾಗ್ ಬ್ಲಾಕ್.

ಆದರೆ ಈ Block ಆದ Blogಗಳ lock ತೆಗೆಯುವುದು ಹೇಗೆ ಎಂಬುದನ್ನು ಭಾರತೀಯರಿಗೆ ತಿಳಿಸಿಕೊಟ್ಟವರು ಪಾಕಿಸ್ತಾನೀಯರೇ ಎಂಬುದು ಇಲ್ಲಿ ಉಲ್ಲೇಖಾರ್ಹ. ಅದಕ್ಕೇ ಪಿಕೆಬ್ಲಾಗ್ಸ್ ಡಾಟ್ ಕಾಮ್ ( pkblogs.com) ಎಂಬ ಹೆಸರಿದೆ. ಇದೂ ಅಲ್ಲದೆ ಭಾರತೀಯ ಮಿತ್ರರಿಗೆ ಮತ್ತು ಭಾರತೀಯರೊಂದಿಗೆ ಬಾಂಧವ್ಯ ಬೆಸೆಯುವ ಉದ್ದೇಶದಿಂದ ಅವರು ಭಾರತೀಯರಿಗಾಗಿಯೇ ರೂಪಿಸಿದ ಮತ್ತೊಂದು Blog unblocking ಟೂಲ್ ಹೆಸರೇ inblogs.net.

ಪಾಕಿಸ್ತಾನೀಯರು ಭಾರತೀಯರಿಗೆ ಮಿತ್ರತ್ವದ ಸಂದೇಶ ಕಳುಹಿಸಿದ ವೆಬ್ ಸೈಟ್ ಇಲ್ಲಿದೆ: http://www.help-pakistan.com . ಇದು ರೂಪುಗೊಂಡಿದ್ದು ಕೂಡ ಅಲ್ಲಿನ ಸರಕಾರದ ಇಂಥದ್ದೇ ದೊಡ್ಡ ಮಂಡೆಯ ಧೋರಣೆಯಿಂದ ಎಂದು ಹೇಳಬೇಕಾಗಿಲ್ಲ. ಒಂದು ಸಣ್ಣ ಭೂಮಿಗಾಗಿ ಭಯೋತ್ಪಾದನೆಯನ್ನೇ ಜೀವಾಳವಾಗಿರಿಸಿಕೊಂಡಿರುವ ಕೆಲವು ದುಷ್ಟಷಕ್ತಿಗಳ ನಡುವೆ ಪಾಕ್ ಮಿತ್ರರು ಕಳುಹಿಸಿದ ಸ್ನೇಹದ ಉಡುಗೊರೆಯನ್ನು ಅವರೇ ಈ ರೀತಿಯಾಗಿ ಉಲ್ಲೇಖಿಸಿದ್ದಾರೆ.
"Please consider this as a gift from Pakistan to all
Indians in hope of building friends across the border".

ಎಷ್ಟು ಆಪ್ಯಾಯಮಾನ ವಾಕ್ಯ!

ಬ್ಲಾಗುಗಳ ಮೇಲೆ ನಿಯಂತ್ರಣ ಹೇರುವ ಬದಲು, ಯಾವ ಬ್ಲಾಗು ಅಥವಾ ವೆಬ್ ಸೈಟ್ ದೇಶವಿರೋಧಿ ಭಾವನೆಗಳನ್ನು ಪ್ರಚೋದಿಸುತ್ತದೆ ಎಂಬುದನ್ನು ಪತ್ತೆ ಹಚ್ಚಿ ಅದರ ಮೇಲೆ ನಿಯಂತ್ರಣ ಸಾಧಿಸುವ ಬುದ್ಧಿ ಸರಕಾರಕ್ಕೆ ಬರಲಿ. ಉಗ್ರವಾದ ಮಟ್ಟ ಹಾಕುವಲ್ಲಿ ಯಶಸ್ಸು ಗಳಿಸಲಿ.

Post a Comment

12 Comments

 1. ನದಿಗೆ ಬ್ಲಾಗಿನ ಅರ್ಪಣೆ ಮಾಡುವಾಗ ಅದರೊಳಗೆ ಏನೇನು ಇಟ್ಟಿದ್ದರು. ನೀರಿಗರ್ಪಿಸಿದ ಮೇಲೆ ಆ ಮೊರಗಳನ್ನು ಯಾರು ಎತ್ತೊಯ್ದರು ಎಂಬ ಬಗ್ಗೆಯೂ ಸಂಶೋಧಿಸಿ. ನನಗೆ ತಿಳಿದ ಮಾಹಿತಿ ಪ್ರಕಾರ ಸ್ಫೋಟಕ್ಕೆಂದು ತಂದು, ಈಗ ಅದನ್ನು ಉಪಯೋಗಿಸಲು ಅವಕಾಶ ಸಿಕ್ಕಿಲ್ಲದ ಕಾರಣ ಅವುಗಳನ್ನು ಮೊರದಲ್ಲಿ ಇಟ್ಟು ನೀರಿನಲ್ಲಿ ಹಾಕಿದ್ದಾರಂತೆ. ಅವರ ಕಡೆಯವರೇ ಮತ್ತೊಂದು ಬದಿಯಲ್ಲಿ ಕಾದು ಕುಳಿತಿದ್ದು, ಅದನ್ನು ಎತ್ತೊಯ್ದಿದ್ದಾರಂತೆ.

  ಒಮ್ಮೊಮ್ಮೆ ನಿಮ್ಮ ಬೊಗಳೆಯಲ್ಲೂ ಮುತ್ತುಗಳು ಸುರಿಯುತ್ತವೆ ಎನ್ನುವುದ ಸತ್ಯ. ಇದು ಅಸತ್ಯವಲ್ಲ. ನಿಮಗೆ ಗೊತ್ತೇ? ಪಿಕೆಯನ್ನು ಜಗತ್ತಿಗೆ ಪರಿಚಯಿಸಿದ ಮೊದಲಿಗರಲ್ಲಿ ನೀವೂ ಒಬ್ಬರು. ಬಹಳ ಬ್ಲಾಗಿಗರು ನಿಮ್ಮ ಕೊಂಡಾಡುತ್ತಿದ್ದಾರೆ. ನಾನು ಹೇಳುವುದು ಸುಳ್ಳು ಎಂದು ನೀವು ತಿಳಿದರೆ ಚೆಂಡಾಡಬೇಕಾಗಬಹುದು. ಇದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ ಅಡುಗೆಮನೆಗೆ ಹೋಗಬಹುದು.

  ReplyDelete
 2. ಅಸತ್ಯಿಗಳೇ,
  ಪತ್ರಿಕೆಯವರು ಬೊಗಳೆಯನ್ನ ,ಮುಖ್ಯಮಂತ್ರಿ ಅವರ ಚಮಚಾಗಳ ಬಾ(ಬ್ಲಾ)ಗಿನ ಕುತಂತ್ರಗಳನ್ನು ಅನಾವರಣ ಮಾಡಿದ್ದಕ್ಕೆ ತಮಗೆ "ಬ್ಲಾಗನ್ವೇಷಿ" ಏಂಬ ಬಿರುದನ್ನ, ನಿಮ್ಮ ಅಸಂಖ್ಯಾತ ಬಿರುದಗಳಿಗೆ ತಿಯಾಗಿಸುತ್ತಿದ್ದೆವೆ...
  "ಸೇರ್ರಿಗೆ ಸವ್ವಾ ಸೇರು ಅನ್ನುವಂತೆ" ನೀವು ಸರ್ಕಾರದ ಎಲ್ಲಾ ಮಂತ್ರಗಳಿಗೆ ನೀವು ತಿರುಮಂತ್ರ ಹೇಳಿಕೊಟ್ಟದ್ದಕ್ಕೆ ಎಲ್ಲಾ ನೆಟ್ಟಿಗರು ಪರವಾಗಿ ದನ್ಯವಾದಗಳು.

  ReplyDelete
 3. ಮಾವಿನರಸರೆ,
  ಬ್ಲಾಗಿನೊಳಗೆ ಏನಿರುತ್ತದೆ, ಬರೀ ಬೊಗಳೆ!

  ಆದ್ರೆ ದಪ್ಪ ಮಂಡೆಯವರು ಆ ಮೊರದೊಳಗೆ ಇದ್ದಿದ್ದನ್ನು ಕದ್ದು ಕದ್ದು ಓದುತ್ತಾ ಆನಂದ ಅನುಭವಿಸುತ್ತಿದ್ದಾರಂತೆ.

  ಒಟ್ಟಿನಲ್ಲಿ ಈಗ Blog Spot ಇದ್ದದ್ದು ಬ್ಲಾಗ್ ಸ್ಫೋಟ ಆಗಿಬಿಟ್ಟಿದೆ.

  ಮತ್ತೆ ಮಾವಿನರಸರೆ, ಇಲ್ಲಿ ಸುರಿಯುತ್ತಿರುವುದು ಮುತ್ತು ಅಲ್ಲ, ಬ್ಲಾಗ್ ಮತ್ತಿನ ಗಮ್ಮತ್ತು.!

  ReplyDelete
 4. ಮಹಾನ್ ಅಂತೇಶ್ ಅವರೆ,

  ನಮ್ಮ ಬಿರುದುಗಳಿಗೊಂದು ಗತಿ ಕಾಣಿಸಲು ನಿರ್ಧರಿಸಿದ ನಿಮಗೆ ಏನೆನ್ನಲಿ?

  ನೆಟ್ಟಿಗರ ಧನ್ಯವಾದಗಳನ್ನು ಒಟ್ಟಾಗಿಸಿ ಇಲ್ಲಿಗೆ ಗಟ್ಟಿಯಾಗಿ ಎಸೆದುಬಿಡಿ...

  ಗಟ್ಟಿಯಾಗಿ ಎಸೆದರೆ ಬೊಗಳೆ ಒಡೆಯುತ್ತದೆ, ಆದರ ಹೂರಣಗಳೆಲ್ಲಾ ನೆಟ್ಟಿಗರಿಗೆ!

  ReplyDelete
 5. ಓ ಮರೆತಿದ್ದೆ ಮಾವಿನರಸರೆ,
  ಅಡುಗೆ ಮನೆಯಲ್ಲಿ ಏನಿದೆ ಅಂತ ತಿಳಿಸುವುದು.
  ಇಲ್ಲವಾದರೆ ಗೊತ್ತಲ್ಲ.... ಗೊಬ್ಬರ...

  ReplyDelete
 6. ಅಡುಗೆ ಮನೆಯ ಮುಂದಿನ ಸಂಚಿಕೆಯಲ್ಲಿ ಗೊಬ್ಬರವನ್ನು ಪರಿಚಯಿಸುವರೇ? ನಮ್ಮ ಮನೆಗಳಲ್ಲಿ ಬಿಸಿಬೇಳೆಬಾತ್‍ಗೆ ಗೊಬ್ಬರ ಎನ್ನುವೆವು. ಹಾಗೆಯೇ ಉಪ್ಪಿಟ್ಟಿಗೂ ಗೊಬ್ಬರ ಎನ್ನುವರು. ಅಂದ ಹಾಗೆ ಇಲ್ಲಿಯ ವಿಷಯ ಅಡುಗೆ ಮನೆಯವರೆವಿಗೆ ತಲುಪುವುದಾ? ಅವರು ನನ್ನನ್ನು ಬ್ಲಾಕ್ ಮಾಡಬಹುದಾ?

  ReplyDelete
 7. This comment has been removed by a blog administrator.

  ReplyDelete
 8. ಹೌದು ಮಾವಿನ ಅರಸರೆ,
  ನೀವು ಜೋರಾಗಿ ಗೊಬ್ಬರ... ಗೊಬ್ಬರ ಅಂತ ಬೊಬ್ಬೆ ಹೊಡೆದರೆ ಖಂಡಿತವಾಗಿಯೂ ಅಡುಗೆ ಮನೆಯಿಂದ ನಿಮ್ಮನ್ನು ಬ್ಲಾಕ್ ಮಾಡುವ ಸಾಧ್ಯತೆಗಳಿರುವುದರಿಂದ ನಾನು ಖಂಡಿತವಾಗಿಯೂ ಈ ಸುದ್ದಿಯನ್ನು ಅಡುಗೆಮನೆಯೊಳಗೆ ಬೊಗಳುವೆ.

  ReplyDelete
 9. ಸುಮಾರು 16ಡಿಗ್ರಿಯಷ್ಟೇ ಬಾಗಿ (ಅಂದರೆ 23.5ಡಿಗ್ರಿ ಬಾಗಿರುವ ಭೂಮಿಗಿಂತ ಸಾಡೇಸಾತ್ ಡಿಗ್ರಿ ಕಡಿಮೆ) ನದಿಗೆ ಬ್ಲಾಗಿನ ಅರ್ಪಿಸಿದ ಮು.ಮಂ ಮೇಲೆ ಈಗ ಮಂಪರುಪರೀಕ್ಷೆ ಆಗಬೇಕೆಂಬೆಂಬ ಆಗ್ರಹವು ಈಗ್ರಹದಲ್ಲೇ ಇರುವ ಕೆಲವರಿಂದ ಬಂದಿದೆ!

  ಒಂದುವೇಳೆ ಮಂಪರುಪರೀಕ್ಷೆ ಕ್ಯಾನ್ಸಲ್ ಆದರೆ ಮಾರನೆದಿನ ಪತ್ರಿಕೆಗಳು (ಏಟ್ ಲೀಸ್ಟ್ ಬೊಗಳೆರಗಳೆಯಾದರೂ)ಅದನ್ನು "ಮುಮಂ ಮಂಮು" ಎಂಬ ಹೆಡ್ಡ ಲೈನ್‌ ಕೊಟ್ಟು ಬಿತ್ತರಿಸಬಹುದು. (ಮುಖ್ಯ ಮಂತ್ರಿಯ ಮಂಪರುಪರೀಕ್ಷೆ ಮುರಿದುಬಿತ್ತು!)

  ReplyDelete
 10. ಜೋಶಿಯವರೆ,
  ಬ್ಲಾಗುಗಳ ಗ್ರಹದಲ್ಲಿ ಮಂಪರು ಪರೀಕ್ಷೆ ಮಾಡಿಸುವ ಯೋಚನೆ ಇದೆಯೇ?

  ಹಾಗಿದ್ದಲ್ಲಿ ಹೆಡ್‌ಲೈನನ್ನು ಕತ್ತರಿಸಿ ಬಿತ್ತರಿಸುವವರಾರು ಎಂಬುದೀಗ ಸಮಸ್ಯೆಗೆ ಕಾರಣವಾದ ವಿಷ್ಯ.

  ReplyDelete
 11. ನನಗೆ ಯಾಕೋ ಅನುಮಾನ..
  ಈಗ ನದಿಗೆ ಬ್ಲಾಗ್ ಅರ್ಪಣೆ ಮಾಡಿ..ಸ್ಪಲ್ಪ ದಿನದ ನಂತರ ಸರ್ಕಾರದವರು 'ನದಿಗೆ ಹಾರಿ ಬ್ಲಾಗ್ ಅತ್ಮಹತ್ಯೆ' ಅಂತಾ ಸುದ್ದಿ ಹರಡುತ್ತಾರೆ !

  ಇನ್ನೂ ಬ್ಲಾಗ್ ಬ್ಲಾಕ್ ಮಾಡಿದ್ದು ಕೇಳಿ ಹಳೆಯ ನರ್ಸರಿ ಪದ್ಯ ನೆನಪಾಯಿತು..

  Blog blog blogpsot
  Have you any blocks
  Yes sir yes sir..
  Three full days..

  ReplyDelete
 12. ನಿಮ್ಮ ಆಧುನಿಕ ನರ್ಸ್‌ರೀ ರೈಮ್ ಒಳ್ಳೆ ಟೈಮ್‌ಗೆ ಬಂದಿದೆ.


  ಅಂತೂ ನೀವು ಕೂಡ ನರ್ಸರಿವರೆಗೆ ಓದಿದ್ದೀರಿ ಅಂತ ಶ್ರುತಪಡಿಸಿದ್ರಿ.
  :)

  ReplyDelete

ಏನಾದ್ರೂ ಹೇಳ್ರಪಾ :-D