ಬೊಗಳೆ ರಗಳೆ

header ads

ಬೊಗಳೆ-ರಗಳೆ ಬ್ಲಾಕ್ ಸ್ಪಾಟ್!

(ಬೊಗಳೂರು ಬೊಗಳೆ ಬ್ಯುರೋದಿಂದ)

ಬೊಗಳೂರು, ಜು.22- ಸರಕಾರವು ಬ್ಲಾಗಿಗಳನ್ನು ಮಟ್ಟ ಹಾಕಲು, ಬ್ಲಾಗ್‌ಗಳು ಆಗಾಗ್ಗೆ ಸ್ಫೋಟಗೊಳ್ಳುತ್ತಿರುವ ಬ್ಲಾಗ್‌ಸ್ಪಾಟ್ ತಾಣವನ್ನೇ ಬ್ಲಾಕ್ (block or black) ಸ್ಪಾಟ್ ಆಗಿಸಿರುವುದರ ಹಿಂದಿನ ರಹಸ್ಯ ಬಯಲಾಗಿದೆ.

ಯಾರೇ ಅರಚಾಡಲಿ, ಊರೇ ಬೊಗಳೆಬಿಡಲಿ.... ನಮ್ಮ ನೆಮ್ಮದಿಗೆ ಭಂಗವಿಲ್ಲ ಎಂಬಂತಿರುವ ಬೊಗಳೆ ರಗಳೆ ಬ್ಯುರೋದ ವರದಿಗಳಿಂದಾಗಿ "ಆನೆಗೆ ಸೊಳ್ಳೆ ಕಚ್ಚಿದಂತೆ" ಬೆಚ್ಚಿದ ಸರಕಾರದ ಕೆಲವರು, ಸೊಳ್ಳೆಯೊಂದನ್ನು ಇನ್ನಿಲ್ಲದಂತೆ ಮಾಡಲು ಇಡೀ ಮನೆಗೇ ಬೆಂಕಿ ಹಚ್ಚಿದಂತೆ, ಬೊಗಳೆ-ರಗಳೆ ಪತ್ರಿಕೆಯನ್ನು ಮಟ್ಟ ಹಾಕಲು ಇಡೀ ಬ್ಲಾಗ್‌ಸ್ಪಾಟಿಗೇ ತಡೆಯೊಡ್ಡಿತ್ತು ಎಂಬುದನ್ನು ವಿಶ್ವಾದ್ಯಂತ ಹರಡಿಕೊಂಡಿರುವ ನಮ್ಮ ಜಾಲದ ನೆಟ್ಟುಗ್ರರು ಅಂಚೆ ಮೂಲಕ ಸಂಶೋಧನಾ ಸಂದೇಶ ಕಳುಹಿಸಿದ್ದಾರೆ.

ಬೊಗಳೆ-ರಗಳೆ ಬ್ಯುರೋವನ್ನೇ ಮಟ್ಟ ಹಾಕಲು ಸರಕಾರ ಉದ್ದೇಶಿಸಿದ್ದಕ್ಕೆ ಆಗಸದಲ್ಲಿ ಆಲ್-ಕೋಲಾಹಲ , "ಧೈರ್ಯವಂತ" ಮುಂಬೈಗರೇ ಉಗ್ರರ ಹಿಡೀತಾರೆ: ಮಂತ್ರಿ , ಭ್ರಷ್ಟಾಚಾರವನ್ನು ಶಿಷ್ಟಾಚಾರವಾಗಿಸಲು ಯತ್ನ , ಬಡವರ ನಿರ್ಮೂಲನೆಯೇ UPA ಗುರಿ: ನಿಧಾನಿ , ಪ್ರತಿಭಾ ಪಲಾಯನಕ್ಕೆ ಸರಕಾರ ಬದ್ಧ: ಸಚಿವ , ಬಾರ್-ಕಿಂಗ್ ನ್ಯೂಸ್....!!! ಮುಂತಾದ ವರದಿಗಳೇ ಕಾರಣವೆಂದು ಶಂಕಿಸಲಾಗಿದೆ.

ಅದಕ್ಕೂ ಹೆಚ್ಚಾಗಿ ನಮ್ಮ ಪ್ರೇತ ಪ್ರತಿನಿಧಿ ವರದಿ ಮಾಡಿದ "ಚಿಗುರು-ಬಾಲ" ಪ್ರತಿಭಾ ಸ್ಪರ್ಧೆ ವರದಿಯೇ ಅವರ ಮುಖದಲ್ಲಿ ಕೆಂಗಣ್ಣು ಮೂಡಲು ಕಾರಣವಾಗಿತ್ತು ಎಂಬುದನ್ನು ನಮ್ಮ ಸಂ-ಶೋಧನಾ ಬ್ಯುರೋ ಕಂಡುಕೊಂಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

7 ಕಾಮೆಂಟ್‌ಗಳು

 1. Namaskara Anveshi avrige _/\_

  anthu isht dinagala nanthara nim blogalli ondhu post odhidini..nimge thilidh hage kannada font odhodhu nange kashta hehe

  blogspot down aagi nan kannugali swalpa manoranjane kammi agitthu :P

  eega matthe khushi ;)

  ಪ್ರತ್ಯುತ್ತರಅಳಿಸಿ
 2. Oh soni,
  ನಿಮ್ಮ ನಮಸ್ಕಾರದ ಕೈ ಉದ್ದ ಆಗಿ ಕಾಣ್ತಾ ಇದೆ.

  ಒಂದು ಪೋಸ್ಟ್ ಆದ್ರೂ ಓದುವಷ್ಟು ಕೆಟ್ಟದಾಗಿತ್ತು ಅಂತ ತಿಳಿದು ಸಂತೋಷವಾಯಿತು.

  ಬ್ಲಾಗು ಅನ್-ಬ್ಲಾಕ್ ಆದ ಖುಷಿಗೆ ನನ್ನದೂ ಒಂದು ಖುಷಿ ಸೇರಿಸಿಕೊಳ್ಳಿ.
  :)

  ಪ್ರತ್ಯುತ್ತರಅಳಿಸಿ
 3. ಅಸತ್ಯಿಗಳೇ,

  ನೋಡಿ ಮಾಡುವ ಕೆಲಸಕ್ಕೆ ಈಡೀ blogspot ಬ್ಲಾಕ್ ಮಾಡೋದೆ ? ಅದೇನೋ ಅಂತಾರಲ್ವ 'ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರಂತೆ'...ಹಂಗಾತು ಈ ಬ್ಲಾಕ್ ಪುರಾಣ.

  ಈಗ ಅನ್-ಬ್ಲಾಕ್ ಮಾಡೋರಿದ ಹಿಂದೇನು ನಿಮ್ಮ ಕೈ-ಚಳಕವಿದೆಯೇ ??

  ಪ್ರತ್ಯುತ್ತರಅಳಿಸಿ
 4. ಬ್ಲಾಗಿನ್ನೂ ಬ್ಲಾಕ್‍ನಲ್ಲೇ ಓಡ್ತಿದೆ. ಅಂತೂ ಅಡುಗೆಮನೆಯಿಂದ ಬಿಡುಗಡೆಯಾಗಿ ಸೋನಿಯವರು ಇಲ್ಲಿಗೂ ಬಂದದ್ದು ಸಂತೋಷದ ವಿಷಯ. ಯಾಕೆ ಮೇಡಂ, ಕನ್ನಡದ ಮೇಲೆ ನಿಮಗಷ್ಟು ಕೋಪ. ಬೊ-ರ ನಲ್ಲಿ ಕನ್ನಡ ತರಗತಿ ಪ್ರಾರಂಭಿಸೋಣವೇ?

  ಹೌದು ಶಿವಶಂಕರರೇ, ಬ್ಲಾಗ್ ಅನ್ನು ಬ್ಲಾಕ್ ಮಾಡುವುದರ ಜೊತೆಗೆ ಅದನ್ನು ಅನ್‍ಬ್ಲಾಕ್ ಮಾಡುವುದರಲ್ಲೂ ಬೊ-ರ ಕೈವಾಡವಿದೆ. ಆದರೆ ಈ ಕೈ ಯಾರಿಗೂ ಇದುವರೆವಿಗೂ ಕಂಡಿಲ್ಲ.

  ಕಾಣದ ಕೈಯೊಂದು - ಕಣ್ಣೊರೆಸುವ ಕೈಯೊಂದು

  ಪ್ರತ್ಯುತ್ತರಅಳಿಸಿ
 5. ಶಿವ್ ಅವರೆ,
  ಬೊಗಳೆ ರಗಳೆ ಬ್ಲಾಗ್ ಸ್ಫೋಟಿಸಲು ತೀವ್ರ ಯತ್ನಗಳು ನಡೀತಾ ಇದೆ ಅಂತ ಗೊತ್ತಾತು....
  ಅನ್ ಬ್ಲಾಕ್ ಮಾಡಲು ನಮ್ಮ ಕೈಲಾಗೋಲ್ಲ, ಅದಕ್ಕೆ ಸ್ವಲ್ಪ ಕಾಲ್ ಚಳಕ ತೋರಿಸೋಣ ಅಂತ ಯತ್ನಿಸಿದ್ದು.

  ಪ್ರತ್ಯುತ್ತರಅಳಿಸಿ
 6. ಮಾವಿನ ರಸಾಯನ ಸೇವಿಸುವವರೆ,

  ಸೋನಿಯವರಿಗೆ ಕನ್ನಡದ ಮೇಲೆ ಕೋಪ ಇಲ್ಲ, ಆದ್ರೂ ಕನ್ನಡ ಕಲೀತಾ ಇದ್ದಾರೆ ಅಂತ ಅನ್ವೇಷಣೆಗಳು ಹೇಳುತ್ತವೆ.
  ಅವರಿಗಾಗಿ ರಾಕ್ಷಸತಾ ಆಂದೋಲನ ಆರಂಭಿಸಿದ್ದೇವೆ....!!!!

  ಕಣ್ಣೊರೆಸುವ ಕೈ ಎಲ್ಲಿದೆ? ಕರ-ಚೀಪ್‌ನಲ್ಲೇ?

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D