ಬೊಗಳೆ ರಗಳೆ

header ads

ವಿಚ್ಛೇದನ ಯಂತ್ರ Spoon-taneous Divertin !

(ಬೊಗಳೂರು ಸಂಶೋಧನಾ ಬ್ಯುರೋದಿಂದ)

ಬೊಗಳೂರು, ಜು.20- ಸಂಸಾರದಲ್ಲಿ ಸರಿಗಮ ಇಲ್ಲದಿದ್ದರೆ ಮತ್ತು ಗಂಡ ಹೆಂಡತಿಗೆ, ಹೆಂಡತಿ ಗಂಡನಿಗೆ ಸಸಾರ ಆಗಿಬಿಟ್ಟ ಕಾರಣಕ್ಕೆ spontaneous ಆಗಿ ವಿಚ್ಛೇದನ ಬಯಸುವವರಿಗಾಗಿ ಹೊಸದೊಂದು ಯಂತ್ರವನ್ನು ಆವಿಷ್ಕರಿಸಲಾಗಿದೆ. ಅದಕ್ಕೆ ನಮ್ಮ ಬ್ಯುರೋ Spoon-taneous Divertin ಅಂತ ಹೆಸರಿಟ್ಟಿದೆ. (ಟ್ರೇಡ್ ಮಾರ್ಕ್! ಎಚ್ಚರಿಕೆ)

ಇದು ತಿಳಿದದ್ದು ಇಲ್ಲಿ ಪ್ರಕಟವಾಗಿರುವ ಈ ಸುದ್ದಿಯಿಂದ. ಇದರ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಜಬಲ್ಪುರಕ್ಕೆ ಜಬರ್ದಸ್ತಾಗಿ ತೆರಳಿದಾಗ ಮತ್ತಷ್ಟು ಅಹಾ-ಸತ್ಯ ವಿಷಯಗಳು ಬಯಲಿಗೆ ಬಂದಿವೆ.

ವಾಸ್ತವವಾಗಿ ಇಷ್ಟೊಂದು ವರದಕ್ಷಿಣೆ ಪಡೆದುಕೊಂಡಿದ್ದ ಪತಿ ಜತೆ ಜೀವಿಸುವುದು ಆ ಪತ್ನಿಗೆ ಬೇಕಿರಲಿಲ್ಲ. ಹೇಗಾದರೂ ಮಾಡಿ ಅಲ್ಲಿಂದ ಹೊರಬೀಳಬೇಕು ಎಂದು ಯೋಚಿಸಿದಾಗ ತೋಚಿದ್ದು, ಬೇರೆ ಮನೆ ಮಾಡುವ ವಿಚಾರ. ಆದರೆ ಆ ಮಹರಾಯ ಅದಕ್ಕೂ ಹೂಂಗುಟ್ಟಬೇಕೆ? ಅಷ್ಟು ಮಾತ್ರವೇ ಆಗಿದ್ದರೆ ಪರವಾಗಿರಲಿಲ್ಲ.

ಆದರೆ ಆ ಅತ್ತೆ ಕೂಡ ವರದಕ್ಷಿಣೆ ಎಂದು ಪಡೆದ ಎಲ್ಲ ವಸ್ತುಗಳನ್ನು ಹಿಂತಿರುಗಿ ಕೊಟ್ಟೇ ಬಿಡಬೇಕೇ?

ಏನು ಮಾಡೋದು ಅಂತ ಯೋಚಿಸಿದಾಗ ಆಕೆಗೆ ಅಲ್ಲಿನ ಶಾಸಕರು, ಮಂತ್ರಿ ಮಾಗಧರ ಹಿಂದೆ-ಮುಂದೆ ಸುತ್ತಾಡುತ್ತಾ ಚಮಚಾಗಿರಿ ಮಾಡುವ ಚಮಚಾಗಳು ಜ್ಞಾಪಕಕ್ಕೆ ಬಂದ್ರು.

ಈ ಹಿನ್ನೆಲೆಯಲ್ಲಿ ತಕ್ಷಣವೇ ಚಾ-ತರಿಸಿಕೊಂಡ ಆಕೆಗೆ ಹೊಳೆದದ್ದು ಚಮ-ಚಾ (Tea-spoon). ಚಾ ಕುಡಿದ ತಕ್ಷಣ ಚಮ-ಚಾವನ್ನು ಬಿಸಾಡಿದ ಆಕೆ, ವರದಕ್ಷಿಣೆಯಾಗಿ ಕೊಟ್ಟಿದ್ದ ಒಂದು ಚಮಚಾ ಬರಲೇ ಇಲ್ಲ ಎಂದು ಕೂಗಾಟ ಮಾಡಿದಳು. ತವರುಮನೆಗೆ ಹೋದಳು, ಅತ್ತೆ ಮೇಲೆ ಕಂಪ್ಲೇಂಟ್ ಕೊಟ್ಟಳು.

ಅವರಿಬ್ಬರ ವಿರಹ-ವಿರಸಕ್ಕೆ ಚಮಚವೇ ಕಾರಣ ಎಂದು ಪತ್ತೆ ಹಚ್ಚಿರುವ ಕೌನ್ಸೆಲಿಂಗ್ ಕೇಂದ್ರದ ಅಧಿಕಾರಿಗಳಿಗೆ ಶ್ರೇಷ್ಠ ಅಸತ್ಯಾನ್ವೇಷಣಾ ಪ್ರಶಸ್ತಿ ನೀಡಲು ಬೊಗಳೆ ರಗಳೆ ಬ್ಯುರೋ ನಿರ್ಧರಿಸಿದೆ.

ಅಲ್ಲದೆ Spoon-taneous ಎಂಬ ಹೊಸದೊಂದು ಆಯುಧವನ್ನು ಈ ದೇಶಕ್ಕೇ ಮಾತ್ರವಲ್ಲದೆ ಇಡೀ ವಿಶ್ವಕ್ಕೇ ಕೊಡುಗೆಯಾಗಿ ನೀಡಿದ ಸಂಶೋಧಕಿಗೆ (ಮಹಿಳಾಮಣಿಗಳೇ ಚಪ್ಪಾಳೆ ತಟ್ಟಿ) ನೋ-ಬೆಲ್ ಪ್ರಶಸ್ತಿ ನೀಡಲು ಶಿಫಾರಸು ಮಾಡಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

10 ಕಾಮೆಂಟ್‌ಗಳು

 1. ಬ್ಲಾ‌ಗ್‌ನ್ನು ಬ್ಲಾಕ್ ಮಾಡಿದ್ದಾರೇಂತ ನೀವು ಮುಖ ಮುಚ್ಚಿಕೊಂಡು ಕಾಮೆಂಟ್ ಮಾಡೋದು ಯಾಕೆ ಶ್ರೀನಿವಾಸರೇ,

  ನೀವು ಆಗಾಗ್ಗೆ ಕಾಮೆಂಟ್ ಮಾಡುವಾಗ ನಾಪತ್ತೆಯಾಗುವುದು ಏಕೆ ಎಂಬುದು ಅರ್ಥವಾಗಿಲ್ಲ. ಸರಿಯಾಗುವವರೆಗೂ ಅನರ್ಥವಾಗುತ್ತದೆ !!!

  ನಿಮ್ಮ ಯಸ್ ಬೆಲ್ ಪ್ರಶಸ್ತಿಗೆ ನಮ್ಮದು ನೋ. ಯಾಕೆಂದರೆ ಶೇ.50 ಕೊಡುವಷ್ಟು ನಗದು ನನ್ನಲ್ಲಿಲ್ಲ, ಶೇ.100 ಮಾತ್ರವೇ ಇರುವುದು. ಏನು ಮಾಡಲಿ?

  ಆ ಮೇಲೆ, ನೀವು ಆ ಸೊಸೆಗೂ ನಮಗೂ ಗಂಟು ಹಾಕುವುದು ಎಷ್ಟು ಸರಿ?

  ಪ್ರತ್ಯುತ್ತರಅಳಿಸಿ
 2. ಅಸತ್ಯಿಗಳೇ,
  ಈ ಸಂಶೋದನೆ ಹಿಂದೆ ತಮ್ಮ ಖಾಸಗಿ ಅನುಭವೆ ? ಸೊಸೆ ಬೇಡಾಂದ್ರೇ ಅತ್ತೆ ಜೊತೆ ನಂಟಾ?

  ಪ್ರತ್ಯುತ್ತರಅಳಿಸಿ
 3. ಸಿಂಧು ಅವರೆ,
  ಏನನ್ನೋ ಬಿಟ್ಟು ಹೋಗಿದ್ದೀರಿ..!!!
  :)
  ವಂದನೆಗಳು

  ಪ್ರತ್ಯುತ್ತರಅಳಿಸಿ
 4. ಮಹಾನ್ ಅಂತೇಶ್ ಅವರೆ,
  ನೀವು ಕೂಡ ಕನ್ನಡ ಕಲಿತ್ರಾ...!
  ಒಳ್ಳೇದು. ಚೆನ್ನಾಗಿ ಮುಂದುವರಿಯಲಿ...

  ಅಲ್ಲ, ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ ಅಂತ ಕೇಳಿದ್ದೀರಲ್ಲಾ? ಅದೇ ರೀತಿ ಕತ್ತೆಗೊಂದು ಕಾಲು, ಕಸಕ್ಕೊಂದೂವರೆ ಕಾಲು.

  ಪ್ರತ್ಯುತ್ತರಅಳಿಸಿ
 5. ಓ ಎನಿಗ್ಮಾ ಅವರೆ,

  ನಿಮ್ಮಲ್ಲಿ ಸಂಶಯ ಹುಟ್ಟಿಸುವಲ್ಲಿ ಯಶಸ್ವಿಯಾಗಿದ್ದಕ್ಕೆ ನಮ್ಮ ಬ್ಯುರೋ ಹರ್ಷಿಸುತ್ತದೆ.

  ನೀವು ಕೇಳಿದ್ದು ನಮ್ಮ ವರದಿಯನ್ನೋ ಅಥವಾ ಅದಕ್ಕೆ ನೀಡಲಾಗಿರುವ ಲಿಂಕ್ ವರದಿಯನ್ನೋ ಎಂದು ಸ್ಪಷ್ಟಪಡಿಸಿ.

  ಲಿಂಕಿನಲ್ಲಿರೋದು ಸತ್ಯ, ನಮ್ಮದು ಅಸತ್ಯದ ಅನ್ವೇಷಣೆ ಮಾತ್ರ. ಅಂದ್ರೆ ಬೊಗಳೆ ಅಂತಿಟ್ಕೊಳ್ಳಿ !!!
  :)

  ಪ್ರತ್ಯುತ್ತರಅಳಿಸಿ
 6. ""ಸಿಂಧು ಅವರೆ,
  ಏನನ್ನೋ ಬಿಟ್ಟು ಹೋಗಿದ್ದೀರಿ..!!!""

  Reaction to a smile!
  ಆಪ್ ಕಾ ತೊ ಜವಾಬ್ ನಹೀ, ಅನ್ವೇಷಿ!!!!

  ಪ್ರತ್ಯುತ್ತರಅಳಿಸಿ
 7. ಅಬ್ಬ...

  ಜವಾಬ್ ದೇನೇ ಕಾ ಮೌಕಾ ಹೀ ನಹೀಂ ಮಿಲೀ!!!!

  ಸಿಂಧು ಅವರು ಅನ್ವೇಷಿ ಬಾಯಿ ಮುಚ್ಚಿಸ್ಬಿಟ್ರೂ....!

  ಪ್ರತ್ಯುತ್ತರಅಳಿಸಿ
 8. ಶೀಘ್ರದಲ್ಲಿಯೇ ಈ ರೀತಿ ಜಾಹಿರಾತುಗಳು ಬರಬಹುದು...

  ನಿಮಗೆ ವಿಚ್ಛೇದನ ಬೇಕೇ?
  ಇಂದೇ ಕೊಳ್ಳಿ stainless steel divorce-enabled ಚಮಚಾ.ಈ ಚಮಚಾ ಕೊಂಡು ೧ ವಾರದಲ್ಲಿ ವಿಚ್ಛೇದನ ಸಿಗದಿದ್ದರೆ ಹಣ ವಾಪಸ್..ಜೊತಗೆ ಸೌಟು ಫ್ರೀ !

  ಪ್ರತ್ಯುತ್ತರಅಳಿಸಿ
 9. ಶಿವ್ ಅವರೆ,

  slow-gun ನೀಡಿದ್ದಕ್ಕಾಗಿ ನಿಮ್ಮನ್ನು spoon-taneous ಯಂತ್ರದ ಮಾರೋಕಟ್ಟೆ ಅಧಿಕ ಕಾರಿಯನ್ನಾಗಿ ನೇಮಿಸಲಾಗಿದೆ ಎಂದು ತಿಳಿಸಲು ವಿಷಾದಿಸುತ್ತೇವೆ!!!

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D