ಬೊಗಳೆ ರಗಳೆ

header ads

BARKING ನ್ಯೂಸ್: ಮೂಗು ತೂರಿಸುವವರೆಂದು ತೋರಿಸಿಕೊಳ್ಳಲು ಮೂಗು ದೊಡ್ಡದು!

[ಬೊಗಳೂರು ಮೂಗು ತೂರಿಸೋ ಬ್ಯುರೋದಿಂದ]
ಬೊಗಳೂರು, ನ.20: ಬೊಗಳೂರು ಮತ್ತೆ ಎಚ್ಚೆತ್ತಾಗ ಯಾರ್ಯಾರಿಗೋ ರತ್ನಳನ್ನು ನೀಡಲಾಗಿತ್ತು. ಹಾಗೇ ಒಂದು ಸುತ್ತು ತಿರುಗಿದಾಗ ಸಿಕ್ಕಿದ ಸುದ್ದಿ ಇದು.

ಯಾರು ಮೂಗು ತೂರಿಸುತ್ತಾರೋ, ಅವರ ಮೂಗು ದೊಡ್ಡದಿರುವುದಿಲ್ಲ; ಆದರೆ ಮೂಗು ತೂರಿಸದೇ ಇರುವವರ ಮೂಗು ದೊಡ್ಡದು. ಹೀಗಾಗಿ ಅವರು ಪ್ರತಿಯೊಂದಕ್ಕೂ ಮೂಗು ತೂರಿಸಿದಂತೆ ಕಾಣಿಸೋದು ಮಾತ್ರ ಎಂಬ ಅಸತ್ಯಾಂಶವನ್ನು ಬೊಗಳೂರು ಬ್ಯುರೋ ಸಂಚೋದನೆಯ ಮೂಲಕ ಬಯಲಿಗೆಳೆದಿದೆ.

ಬೇರೆಯವರ ಕೆಲಸದಲ್ಲಿ ಅನವಶ್ಯ ಮೂಗು ತೂರಿಸಲು ಇದು ಕೂಡ ನೆರವಾಗುತ್ತದೆ ಎಂಬ ವಾದ ಮಾಡುವವರಿಗೆ ಪೂರಕವಾಗಿರುವ ಸುದ್ದಿಗಳನ್ನು ಪ್ರಕಟಿಸುತ್ತಿರುವ ಬೊಗಳೂರು ಬ್ಯುರೋಗೆ ಪ್ರತಿಸ್ಪರ್ಧೆ ಒಡ್ಡುತ್ತಿರುವ ಏಕೈಕ ಲೈನ್‌ನಲ್ಲಿರುವ (ಆನ್ ಲೈನ್) ಪತ್ರಿಕೆಯ ವಿರುದ್ಧ ಅವಮಾನ ಹಾನಿ ಮೊಕದ್ದಮೆ ಹೂಡುವ ಕುರಿತು ಚಿಂತನೆ ನಡೆಸಲಾಗುತ್ತದೆ ಎನ್ನಲಾಗುತ್ತಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ನಮ್ಮ ಬಾತ್ಮೀದಾರರು ವರದ್ದಿ ಮಾಡಿರುವುದಾಗಿ ಎಸ್ಸೆಮ್ಮೆಸ್ ಸಂದೇಶವೊಂದು ಅನಾಮಿಕರ ಹೆಸರಿನಲ್ಲಿ ನಮ್ಮ ಇನ್‌ಬಾಕ್ಸ್‌ಗೆ ಬಿದ್ದಿದ್ದನ್ನು ನಮ್ಮ ವರದ್ದಿಗಾರರು ಬ್ಯುರೋ ಮುಖ್ಯಸ್ಥರಿಗೆ ಫಾರ್ವರ್ಡ್ ಮಾಡಿದ್ದಾರೆ ಎನ್ನಲಾಗುತ್ತಿದೆಯೆಂದು ತಿಳಿದುಬಂದಿರುವುದಾಗಿ ಅನ್ಯ ಪತ್ರಿಕೆಗಳಲ್ಲಿ ಪ್ರಕಟವಾಗಿದೆಯೆಂದು ಪ್ರತ್ಯಕ್ಷದರ್ಶಿಗಳನ್ನು ಉದ್ದೇಶಿಸಿ ಸಂಶೋಧನಾ ಲೇಖನವೊಂದು ಪ್ರಕಟವಾಗಿರುವುದಾಗಿ ಬೊಗಳೆ ರಗಳೆಯಲ್ಲೇ ಪ್ರಕಟಿಸಬೇಕೆಂದು ಓದುಗರು ಒತ್ತಾಯಿಸಿದ್ದಾರೆಂದು ತಿಳಿದುಬಂದಿರುವುದಾಗಿ ಹೇಳಲಾಗುತ್ತಿದೆ ಎಂದು..... Zzzzzzz!

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

 1. ‘ಮೂಗಿನಲ್ಲೇನಿದೆ?’ ಎಂದು ಕೇಳುವವರಿಗೆ ನಿಮ್ಮ ವರದ್ದಿಯು ಸಮರ್ಪಕವಾದ ಉತ್ತರವಾಗಿದೆ!

  ಪ್ರತ್ಯುತ್ತರಅಳಿಸಿ
 2. ಓ .. ಇದಾ ವಿಷಯ ... ನೋಡಿ ಡಾರ್ವಿನ್ ಗೆ ಇದು ಹೊಳೆದಿರಲಿಲ್ವಾ ಅಂತ ... !!! ಅವರಿ ಅನ್ವೇಷಣೆ ಮಾಡಿರಲಿಲ್ಲ ಅನಿಸುತ್ತೆ... ")

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಚುಕ್ಕಿಯವರೇ,
   ಮೂಗು ತೂರಿಸುವವರು ಮೂಗರಲ್ಲ ಅಂತಾನೂ ಡಾರ್ವಿನ್ನನಿಗೆ ತಿಳಿದಿರಲಿಲ್ಲ!

   ಅಳಿಸಿ

ಏನಾದ್ರೂ ಹೇಳ್ರಪಾ :-D