ಬೊಗಳೆ ರಗಳೆ

header ads

ಕಂಡಲ್ಲಿ ಗುಂಡು: ರಾಜ್ಯದಲ್ಲಿ ಮದ್ಯ ವ್ಯಾಪಾರ ಜೋರು

[ಬೊಗಳೆ ಗುಂಡು ಬ್ಯುರೋದಿಂದ]
ಬೊಗಳೂರು, ಡಿ.2: ರಾಜ್ಯ ಸರಕಾರವು ಬೆಂಗಳೂರಿನಿಂದ ಬೆಳಗಾವಿಗೆ ಶಿಫ್ಟ್ ಆಗಿ, ಅಲ್ಲಿಂದಲೇ ಕಂಡ ಕಂಡಲ್ಲಿ ಗುಂಡಿಕ್ಕಲು ಆದೇಶ ನೀಡಿರುವ ಹಿನ್ನೆಲೆಯಲ್ಲಿ, ರಾಜ್ಯದ ಎಲ್ಲ ಮದ್ಯ ಕೇಂದ್ರಗಳಲ್ಲಿ, ದ್ರಾಕ್ಷಾರಸಕ್ಕೆ, ತಾಳೆ ರಸಕ್ಕೆ, ಗೇರು ಕೊಳೆಸಿದ ರಸಕ್ಕೆ ಬೇಡಿಕೆ ಹೆಚ್ಚಾಗಿದೆ ಎಂಬ ಅಂಶವನ್ನು ಬೊಗಳೆ ರಗಳೆ ಬ್ಯುರೋ ಪತ್ತೆ ಮಾಡಿದೆ.

ನರ ಭಕ್ಷಕ ಹುಲಿ ಜಾತಿಗೆ ಸೇರಿದ ಪ್ರಾಣಿಗಳಿಗೆ ಗುಂಡಿಕ್ಕಲು ಆದೇಶ ನೀಡಿದ್ದರೂ, ಹೊಸ ಸರಕಾರ ಅಸ್ತಿತ್ವಕ್ಕೆ ಬಂದಂದಿನಿಂದಲೂ ಹಾಲು ಭಾಗ್ಯದ ಸವಿಯುಣ್ಣುತ್ತಿರುವ ಜನರು, ಆಲ್ಕೋಹಾಲು ಭಾಗ್ಯಕ್ಕಾಗಿಯೇ ಕಾತರದಿಂದ ಕಾಯುತ್ತಿದ್ದರು. ಅಗ್ಗದ ಆಲ್ಕೋಹಾಲು ಕೂಡ ಸಿಗುತ್ತದೆ ಎಂದು ತುದಿಗಾಲಲ್ಲಿ ನಿಂತಿದ್ದರು.

ಆದರೆ ಈಗ ಕಂಡ ಕಂಡಲ್ಲಿ ಗುಂಡು ಹಾಕಬಹುದು ಎಂಬ ಸರಕಾರದ ಘೋಷಣೆಯನ್ನೇ ಕಟ್ಟಾಜ್ಞೆ ಎಂದು ಪರಿಗಣಿಸಿದವರೆಲ್ಲರೂ, ನಿಂತಲ್ಲೇ ಕುಂತಲ್ಲೇ, ಎದ್ದಲ್ಲಿ, ಬಿದ್ದಲ್ಲಿ ಗುಂಡು ಹಾಕಲಾರಂಭಿಸಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

  1. ನರಭಕ್ಷಕ ಹುಲಿಗಳು ಹಾಗು ನರಿಗಳು ಶಾಸನಸಭೆಯಲ್ಲೆ ಗಟ್ಟಿಯಾಗಿ ಕುಂತಿವೆ ಎಂದು ತಿಳಿದು ಬಂದಿದೆ. ಇನ್ನು ಹಳೆಯ ಕಾಲದಲ್ಲಿ ರಾಜಮಹಾರಾಜರು ಕಂಡಕಂಡಲ್ಲಿ ಅರವಟ್ಟಿಗೆಗಳನ್ನು ಕಟ್ಟಿಸುತ್ತಿದ್ದರಂತೆ. ಅದೇ ರೀತಿಯಲ್ಲಿ ಈಗಿನ ರಾಜಮಹಾರಾಜರು ಶೆರೆವಟ್ಟಿಗೆಗಳನ್ನು ಕಟ್ಟಿಸಲೇಬೇಕೆಂದು ಒತ್ತಾಯಿಸುತ್ತ, ಚಡ್ಯೂರಪ್ಪನವರು ಸದನದ ಬಾವಿಗೆ ಹಾರಿದ್ದಾರಂತೆ!

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಸುನಾಥರೇ...
      ಏನು, ಏನು... ಕೇಳಿಸ್ತಾ ಇಲ್ಲ...

      ಶವಪೆಟ್ಟಿಗೆಗಳನ್ನೋ? ಪ್ರಜಾಪ್ರಭುತ್ವದ್ದು!

      ಅಳಿಸಿ
  2. ಕಂಡಲ್ಲಿ ಗುಂಡು ಕಂಡು ಬೊಗಳೆಯವರು ಅಲ್ಲಿಗೆ ತೆರಳಿದರು ಅನ್ನುವ ಸಂಶಯ ..

    ಹೊಸ ವರ್ಷದ ಶುಭಾಶಯಗಳು !

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D