[ಬೊಗಳೂರು ಸಂಚೋದನಾ ಬ್ಯುರೋದಿಂದ]
ಬೊಗಳೂರು, ಜೂ.14- ಬೊಗಳೂರಿನ ಗಾಂಧಿ ಆಶ್ರಮದಿಂದ ಗಾಂಧೀಜಿ ಕನ್ನಡಕಗಳನ್ನು ಕದ್ದಿರುವುದನ್ನು ಬೊಗಳೆ ರಗಳೆಯ ಸಂಚೋದನಾ ಬ್ಯುರೋ ಪತ್ತೆ ಹಚ್ಚಿದೆ. ಮತ್ತು ಅದಕ್ಕೆ ಕಾರಣಗಳನ್ನೂ ವಿವರಿಸಿದೆ.ದೇಶಾದ್ಯಂತ ಕಣ್ಣು ಮುಚ್ಚಿ ತೆರೆಯುವುದರೊಳಗೆ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ಪ್ರಕರಣಗಳು ನಡೆಯುತ್ತಿವೆ. ಇಂಥದ್ದನ್ನೆಲ್ಲಾ ಗಾಂಧೀಜಿ ಸಾವಿನ ಬಳಿಕವೂ ನೋಡಬಾರದೆಂಬ ಉದ್ದೇಶದಿಂದಾಗಿ ಸರಕಾರದ ಪ್ರತಿನಿಧಿಗಳು ಗಾಂಧೀಜಿ ಕನ್ನಡಕವನ್ನು ಅಡಗಿಸಿಟ್ಟಿದ್ದಾರೆ ಎಂದು ಮೂಲಗಳು ವರದ್ದಿ ತಂದುಹಾಕಿವೆ.
ಭ್ರಷ್ಟಾಚಾರದ ವಿರುದ್ಧ ಅಲ್ಲಲ್ಲಿ, ದೇಶದೆಲ್ಲೆಡೆ, ಬೊಗಳೂರಿನಲ್ಲಿ ಕೂಡ ಅಹಿಂಸಾತ್ಮಕ ಪ್ರತಿಭಟನೆ ನಡೆಸಲಾಗಿದೆ. "ಆ"ಮರಣ ಉಪವಾಸದ ಬದಲಾಗಿ "ಅ"ಮರಣ ನಿರಶನ ನಡೆಸಲು ನಿರ್ಧರಿಸಲಾಗಿತ್ತು. ಆದರೂ, ಅಂಥ ಉಪವಾಸ ಮಾಡುತ್ತಿದ್ದವರ ಮೇಲೆ ಬೊಗಳೂರು ಸರಕಾರವು "ಇದು ಕೇಸರಿ ಕೋಮುವಾದಿಗಳ ಪಡೆ" ಎಂದುಕೊಳ್ಳುತ್ತಾ, ರೈಫಲ್, ಎಕೆ-47, ಲಾಠಿ ಇತ್ಯಾದಿಗಳನ್ನು ಕೊಟ್ಟು ಪೊಲೀಸರ ಪಡೆಯನ್ನೇ ಕಳುಹಿಸಲಾಗಿತ್ತು. ಮಲಗಿ ನಿದ್ರಿಸುತ್ತಿದ್ದ ಮಕ್ಕಳು, ಮುದುಕರು, ಮಹಿಳೆಯರೆನ್ನದೆ, ಎಲ್ಲರೆದುರು ಕೇಂದ್ರದ ಬೊಗಳೂರು ಸರಕಾರವು ತನ್ನ ಪೌರುಷ ಮೆರೆದಿದ್ದದ್ದನ್ನು ಕೂಡ ಗಾಂಧೀಜಿ ಮತ್ತೆ ಮತ್ತೆ ಟೀವಿಗಳಲ್ಲಿ ನೋಡಬಾರದು ಎಂಬ ಕಾರಣಕ್ಕಾಗಿ ಈ ಕನ್ನಡಕವನ್ನು ಅಡಗಿಸಿಡಲಾಗಿದೆ ಎಂದು ಮೂಲಗಳು ವರದ್ದಿ ಮಾಡಿದ್ದನ್ನು ಬೊಗಳೂರು ಬ್ಯುರೋ ಪತ್ತೆ ಹಚ್ಚಿ, ಸಂಚೋದನೆ ಮಾಡಿ ಇಲ್ಲಿ ವರದ್ದಿ ಮಾಡಿದೆ.
ಹೀಗಾಗಿ, ಗಾಂಧೀಜಿ ಕನ್ನಡಕ ಕಳವಿನಲ್ಲಿ ಆರೆಸ್ಸೆಸ್ ಕೈವಾಡವಿದೆ ಎಂದು ಆರೋಪಿಸುವ ಅವಕಾಶವು Digವಿಜಯ್ ಸಿಂಗ್ ಅವರಿಗೆ ತಪ್ಪಿ ಹೋಗಿದೆ ಎಂದು ಮೂಲಗಳು ಹೇಳಿಲ್ಲ. ಆದರೆ, ಇದನ್ನು Digವಿಜಯ್ ಸಿಂಗ್ ಅವರೇ ಅಡಗಿಸಿಟ್ಟಿದ್ದಾರೆ ಮತ್ತು ತಾವೇ ಹಾಕಿಕೊಂಡಿದ್ದಾರೆ ಎಂದು ಕೂಡ ಮೂಲಗಳು ಅಲ್ಲಲ್ಲಿ ವರದ್ದಿ ತಂದು ಸುರಿದಿವೆ!
6 ಕಾಮೆಂಟ್‌ಗಳು
”ಇದನ್ನು Digವಿಜಯ್ ಸಿಂಗ್ ಅವರೇ ಅಡಗಿಸಿಟ್ಟಿದ್ದಾರೆ ಮತ್ತು ತಾವೇ ಹಾಕಿಕೊಂಡಿದ್ದಾರೆ ಎಂದು ಕೂಡ ಮೂಲಗಳು ಅಲ್ಲಲ್ಲಿ ವರದ್ದಿ ತಂದು ಸುರಿದಿವೆ!”
ಪ್ರತ್ಯುತ್ತರಅಳಿಸಿಗಾ೦ಧಿ ಕನ್ನಡಕ ಹಾಕಿಕೊ೦ಡು ನೋಡಿದರೆ ಭ್ರಷ್ಟಾಚಾರ ಕಾಣಿಸೊಲ್ಲ ಅ೦ತ ಯಾರೋಹೇಳಿದ್ದಾರ೦ತೆ.. ಅದಕ್ಕೆ!
ಗಾಂಧೀಜಿಯ ಅಚ್ಚುಮೆಚ್ಚಿನ ಶಿಷ್ಯ ಯಾರು ಗೊತ್ತೆ? ಅವರೇ ಮಮೋ ಸಿಂಗ! ಯಾಕೆಂದರೆ ಗಾಂಧೀಜಿಯ ಮೆಚ್ಚಿನ ಮೂರು ಮಂಗಗಳಂತೆ, ಇವರೂ ಸಹ ಕಣ್ಣು,ಕಿವಿ ಹಾಗು ಬಾಯಿಯನ್ನು ಮುಚ್ಚಿಕೊಂಡು ಕೂತಿದ್ದಾರೆ!
ಪ್ರತ್ಯುತ್ತರಅಳಿಸಿನೀವು ಸಿಕ್ಕಾಪಟ್ಟೆ Dig ಮಾಡಿ ಸಂಚೋದನೆ ನಡೆಸಿದ್ದೀರಿ.
ಪ್ರತ್ಯುತ್ತರಅಳಿಸಿಚುಕ್ಕಿಗಳೇ, ಚಿತ್ತಾರಿಸುವವರೇ,
ಪ್ರತ್ಯುತ್ತರಅಳಿಸಿಹಾಗಲ್ಲ ಕಣ್ರೀ, ಗಾಂಧೀಜಿ ಏನಾದ್ರೂ ಕನ್ನಡಕ ಹಾಕಿಕೊಂಡ್ರೆ ಮಾತ್ರವೇ ಅಲ್ವೇ ಅವ್ರಿಗೆ ಕಾಣ್ಸೋದು? ಅದ್ಕೇ! ಆವತ್ತೇ ಕಾಂಗ್ರೆಸ್ ವಿಸರ್ಜಿಸ್ಬೇಕು ಅಂದಿದ್ರು, ಈಗ್ಲೂ ಇದೆಯಾ ಅಂತ ಬಾಯಿ ಬಾಯಿ ಬಡಿದುಕೊಳ್ಬೋದು!
ಸುನಾಥರೇ
ಪ್ರತ್ಯುತ್ತರಅಳಿಸಿಗೊತ್ತಾಯ್ತು. ಈಗ ಗೊತ್ತಾಯ್ತು. ಮಮೋಸಿಂಗರ ಕಣ್ಣು, ಕಿವಿಗಳು ಮತ್ತು ಬಾಯಿಯ ಸುತ್ತ ಅದೇನೋ ಬೆಳ್ಳನೆ ಬೆಳಗುವ ಬಿಳಿಯ ಹತ್ತಿಯಂತಹಾ ವಸ್ತು ಕಾಣಿಸುತ್ತಿದೆಯಲ್ಲಾ... ಅದು ಇರೋದು ಎಲ್ಲವನ್ನೂ ಮುಚ್ಕೊಳೋಕೋ?
ಸುಬ್ರಹ್ಮಣ್ಯರೇ,
ಪ್ರತ್ಯುತ್ತರಅಳಿಸಿನಮ್ಮ ಡಿಗ್ಗಿಂಗ್ ಸಾಮರ್ಥ್ಯವನ್ನೇ ಪ್ರಶ್ನಿಸುವ ನಿಮ್ಮ ಹಿಂದೆ ಆರೆಸ್ಸೆಸ್ ಕೈವಾಡವಿದೆ ಅಂತ ನಮಗೆ Digವಿಜಯ್ ಸಿಂಗರೇ ಹೇಳಿಕೆ ನೀಡಲು ಹೇಳಿದ್ದಾರೆ.
ಏನಾದ್ರೂ ಹೇಳ್ರಪಾ :-D