[ಬೊಗಳೂರು ವಿಚಿತ್ರ ಸಂಚೋದನಾ ಬ್ಯುರೋದಿಂದ]
ಬೊಗಳೂರು, ಜೂ.16- "ಕಾಂಗ್ರೆಸ್‌ನಡಿಗೆ" ಜನರ ಬಳಿಗೆ ಎಂಬ ಜನಾಂದೋಲನವನ್ನು ಆರಂಭಿಸಿರುವುದಾಗಿ ಬೊಗಳೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆಯೂ, ಸದ್ಯಕ್ಕೆ ಆತುರಾತುರವಾಗಿ ಸ್ವಿಜರ್ಲೆಂಡ್ ಪ್ರವಾಸಕ್ಕೆ ಹೋಗಿ, ಬಳಿಕ ಇಟಲಿಗೆ ತೆರಳಿರುವ ರಾಷ್ಟ್ರೀಯ ಸಲಹಾ ಮಂಡಳಿಯ ಅಧ್ಯಕ್ಷೆಯೂ ಆಗಿರುವ ಸುಷ್ಮಾ ಗಾಂಧಿ ಅವರು ಅಪ್ಪಣೆ ಹೊರಡಿಸಿದ್ದಾರೆ."ಕಾಂಗ್ರೆಸಿನಡಿಗೆ ಜನರು" ಎಂಬ ಆ ಅರುವತ್ತು ದಿನಗಳ ಜನಾಂದೋಲನವನ್ನು ದೇಶದ ಮೂಲೆ ಮೂಲೆಯಲ್ಲಿ ನಡೆಸುವಂತೆಯೂ, ಅದರ ಮುಂದಿನ ಹಂತವಾಗಿ ವಿದೇಶಗಳ ಮೂಲೆ ಮೂಲೆಯಲ್ಲಿಯೂ ನಡೆಸುವಂತೆ ಕ್ರಮ ಕೈಗೊಳ್ಳಲಾಗಿದೆ.
ಜೂನ್ 4ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಉಪವಾಸ ಸತ್ಯಾಗ್ರಹ ನಡೆಸಿ ಮಲಗಿ ನಿದ್ರಿಸುತ್ತಿದ್ದವರೆಲ್ಲರೂ ಕಾಂಗ್ರೆಸ್‌ನಡಿಗೆ ಬಿದ್ದು ಅಪ್ಪಚ್ಚಿಯಾದಾಗಲೇ ಈ ಆಂದೋಲನ ಆರಂಭವಾಗಿದ್ದರೂ, ಅಧಿಕೃತವಾಗಿ ಗುರುವಾರ ಆರಂಭವಾಗಿದೆ ಎಂದು ಮೂಲಗಳು ವರದ್ದಿ ತಂದು ಹಾಕಿವೆ.
ಅಂದು ಶನಿವಾರ ರಾತ್ರಿ ಕಾಂಗ್ರೆಸಿನಡಿಗೆ ಬಿದ್ದವರು ಅಲ್ಲಲ್ಲಿ ಎದ್ದು ಬಿದ್ದು ಆಸ್ಪತ್ರೆಯಲ್ಲಿ ಸೇರಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಸ್ವಲ್ಪ ಸಮಯದ ನಂತರ ಪ್ರಯತ್ನಿಸುವ ಧೋರಣೆ ಅನುಸರಿಸಿರುವ ಪಕ್ಷವು, ಗಾಂಧೀಜಿ ಹೇಳಿಕೊಟ್ಟ ಸತ್ಯಾಗ್ರಹದ ಹಾದಿಯನ್ನೆಲ್ಲಾ ಗಟ್ಟಿಯಾಗಿ ಕಟ್ಟಿಟ್ಟು, ಬೇರಾರೂ ಅದನ್ನು ಮುಟ್ಟದಂತೆ ಸುರಕ್ಷಿತವಾಗಿ ಕಪಾಟಿನಲ್ಲಿ ಭದ್ರವಾಗಿರಿಸಿ, ಕಾಯುತ್ತಾ ಕೂರಲು ನಿರ್ಧರಿಸಿದೆ ಎಂದು ಮೂಲಗಳು ಹೇಳಿಕೆ ನೀಡಿಲ್ಲ.
ಆದರೆ, ಕರ್ನಾಟಕದಲ್ಲಿ ಇತ್ತೀಚೆಗೆ ನಡೆದಿರುವ ಎಲ್ಲ ಉಪಚುನಾವಣೆಗಳಲ್ಲಿ, ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಕಾಂಗ್ರೆಸ್‌ನೆಡೆಗೆ ಜನರು ಬಡಿಗೆ ತಂದಿದ್ದು ಯಾಕೆ ಎಂಬುದರ ಕುರಿತು ಸಂಚೋದನೆ ನಡೆಸಲು ಬೊಗಳೆ ಬ್ಯುರೋಗೆ ಮೇಲಿನಿಂದ ಅಂದರೆ ಹೈ-ಕ-ಮಂಡೆಯಿಂದ ಆದೇಶ ಬಂದಿದೆ.
3 ಕಾಮೆಂಟ್‌ಗಳು
ಜನತೆಗೆ ಬಡಿಗೆ ಸಪ್ಲೈ ಮಾಡಿದವರು SSRನೋರು ಅನ್ನೋ ಬಲವಾದ ಗುಮಾನಿ ಬಂದಿದೆ cheatಅಂಬರಮ್-ಗೆ! ಇದನ್ನೇ ಅವರು ‘ಮುಂದೂ ಟೆರರಿಜಮ್’ ಅನ್ನೋದು!
ಪ್ರತ್ಯುತ್ತರಅಳಿಸಿಸುನಾಥರೇ,
ಪ್ರತ್ಯುತ್ತರಅಳಿಸಿಇವರು ಕನಸಿನಲ್ಲಿಯೂ ಕೇಸರಿ ಬಣ್ಣ ಕಂಡ್ರೆ ಬೆಚ್ಚಿ ಬೀಳ್ತಾರೆ... ಎಲ್ಲಿ ತಮ್ಮೆಲ್ಲಾ ಗುಟ್ಟುಗಳನ್ನು ರಟ್ಟಿಸ್ತಾರೋ ಅಂತ!
ಹೌದೌದು ಹಾಗಾಗಿಯೇ ಕೇಸರಿಬಾತ್ ಕೂಡಾ ಹಸಿರು ಬಣ್ಣದಲ್ಲಿದ್ದರೆ ಮಾತ್ರ ತಿಂತಾರಂತೆ
ಪ್ರತ್ಯುತ್ತರಅಳಿಸಿಏನಾದ್ರೂ ಹೇಳ್ರಪಾ :-D