(ಬೊಗಳೂರು ಸಂಚೋದನಾ ಬ್ಯುರೋದಿಂದ)
ಬೊಗಳೂರು, ಮಾ.24- ಕಿಂಗ್ ಫಿಷರ್ ವಿಮಾನದಲ್ಲಿ ಸ್ಫೋಟಕ ಪತ್ತೆಯಾಗಿರುವ ಪ್ರಕರಣದ ಹಿಂದೆ ಬಿದ್ದಿರುವ ಬೊಗಳೆ ರಗಳೆ ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿ ಗಡಣವು ಕೊನೆಗೂ ಅದರೊಳಗಿದ್ದುದು ಗುಂಡು ಎಂಬುದನ್ನು ಪತ್ತೆ ಹಚ್ಚಿದ್ದಾರೆ.

ಬೃಹತ್ ಬೊಗಳೂರು ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬೊಗಳೂರಿನಲ್ಲಿ ಕಂಡಲ್ಲಿ ಗುಂಡು ಹಾಕುವ ನಿಟ್ಟಿನಲ್ಲಿ ಕಿಂಗ್ ಫಿಷರ್ ಸಂಸ್ಥೆಯೇ ಈ ಗುಂಡುಗಳನ್ನು ತಿರುವನಂತಪುರದ ಗೇರು ತೋಟಗಳಿಂದ ತರಿಸುತ್ತಿತ್ತು ಎಂಬುದನ್ನು ಸಂಚೋದಿಸಲಾಗಿದೆ.

ಒಳಗೆ ಸೇರಿದರೆ ಗುಂಡು, ಹುಡುಗಿ ಆಗುವಳು ಗಂಡು ಎಂಬ ಹಾಡಿನಿಂದ ಪ್ರೇರಿತರಾಗಿರುವ ಮದಿರೆಯ ದೊರೆ ಮಲ್ಯರ ಕಿಂಗ್ ಫಿಷರ್ ಸಂಸ್ಥೆಯು, ಗುಂಡುಗಳನ್ನೇ ತರಿಸಿದರೆ ಚುನಾವಣೆ ಸಂದರ್ಭ ವಿಭಿನ್ನ ರಾಜಕೀಯ ಪಕ್ಷಗಳಿಗೆ ಹಂಚಲು ನೆರವಾಗಬಹುದು ಎಂದು ಲೆಕ್ಕಾಚಾರ ಹಾಕಿಯೇ ಇದನ್ನು ತರಿಸಿತ್ತು.

ಈ ಗುಂಡನ್ನು ಸ್ಫೋಟಕ ಎಂದು ಕರೆದಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದೂ ಸಮರ್ಥಿಸಿಕೊಂಡಿರುವ ಸಂಸ್ಥೆಯು, ಒಳಗೆ ಸೇರಿದರೆ ಖಂಡಿತವಾಗಿಯೂ ಇದು ಸ್ಫೋಟಕ ಫಲಿತಾಂಶವನ್ನು ನೀಡುತ್ತದೆ. ಗೆಲ್ಲಬೇಕಾದ ಅಭ್ಯರ್ಥಿ ಸೋಲುವ, ಸೋಲಬೇಕಾದ ಅಭ್ಯರ್ಥಿ ಗೆಲ್ಲುವ ಸ್ಫೋಟಕ ಫಲಿತಾಂಶಗಳನ್ನು ಅದು ತಂದೊಡ್ಡುತ್ತದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

9 Comments

ಏನಾದ್ರೂ ಹೇಳ್ರಪಾ :-D

 1. ಓಹ್..
  ನೀವ್ಯಾಕೆ ಕೈಕಾಲು ಬಡಿದುಕೊ೦ಡು ವಿಷಾದಿಸಿದ್ದು ಅ೦ತ ಈಗ ಗೊತ್ತಾಯ್ತು...!!!!!!!!!!!!!!!

  ReplyDelete
 2. Welcome back! I was missing you.. ..

  ReplyDelete
 3. ಬೊಗಳೂರು ಬ್ಯೂರೋದವರ ಸಮರ್ಥನೆಯಲ್ಲಿ ಯಾವುದೇ ಗುಂಡು (ಸ್ಫೋಟಕ) ಅಂಶಗಳಿಲ್ಲ ಎಂದುಕೊಂಡಿದ್ದೇನೆ...

  ReplyDelete
 4. ಯಶಸ್ವಿಯಾಗಿ ಗು೦ಡು ಪತ್ತೆ ಮಾಡಿರುವುದರ ಸಲುವಾಗಿ ಬೊಗಳೆ ರಗಳೆ ಏಕ ಸದಸ್ಯ ಬ್ಯೂರೋದ ಸಮಸ್ತ ಸಿಬ್ಬ೦ದಿ ಗಡಣಕ್ಕೂ, ವರದಿಯನ್ನು ಯಥಾವತ್ತಾದ ತಲುಪಿಸಿದ್ದಕ್ಕಾಗಿ ಅನ್ವೇಶಿಯವರಿಗೂ, ಧನ್ಯವಾದಗಳು!!

  ReplyDelete
 5. ಚುಕ್ಕಿ ಚಿತ್ತಾರರೇ,
  ಕೈಕಾಲು ಬಡಿದುಕೊಂಡು ವಿಷಾದಿಸಿದ್ದಕ್ಕೂ, ಇದೀಗ ಚುನಾವಣೆ ನಡೆದ ನಂತರ ಒಂದು ದಿನಪೂರ್ತಿ ಏಳಲಾಗದೆ ಮಲಗೆದ್ದ ಬಳಿಕ ಬಂದಿದ್ದಕ್ಕೂ ಏನೂ ಸಂಬಂಧವಿಲ್ಲ ಕಣ್ರೀ... ನಂಬಿದ್ರೆ ನಂಬಿ...

  ReplyDelete
 6. ಸುಶ್ರುತರೇ,
  ನಮ್ಮನ್ನು ಬ್ಯಾಕ್ ಎಳೆಯಲು ನಿಮ್ಮಂತಹಾ ಬ್ಲಾಗಿಗರು ಕಾರಣವಾದ್ರೂ, ನಾವು ಕೂಡ ಮಿಸ್ ಕೊಂಡಿದ್ದೂ ಮತ್ತೊಂದು ಕಾರಣ... ಥ್ಯಾಂಕ್ಸೂೂೂೂ

  ReplyDelete
 7. ಸುಬ್ರಹ್ಮಣ್ಯರೇ,
  ಕಂಡ ಕಂಡಲ್ಲಿ ಗುಂಡು ಹಾಕಿದ್ದರಿಂದಾಗಿಯೇ ಈ ರೀತಿಯಾಗಿದೆ. ಅಂದ್ರೆ ಎಲ್ಲೂ ಗುಂಡೇ ಇದ್ದಾಗ, ಅದು ಕಣ್ಣಿಗೆ ಬೀಳೋದೇ ಇಲ್ಲ. ಉದಾಹರಣೆಗೆ ಎಲ್ಲೆಡೆ ಬೆಳಕು ಇದ್ದಾಗ, ಕತ್ತಲೆ ಇದೆ ಎಂಬುದು ಕಾಣಿಸುತ್ತದೆಯೇ? ಹಾಗೆ... ಗುಂಡಿದ್ದದ್ದು ಸತ್ಯ.

  ReplyDelete
 8. ಮುಕ್ತವಾದ ಮನದವರಿಗೆ ನಮ್ಮ ಬೊಗಳೂರಿಗೆ ಸ್ವಾಗತ.
  ನಾವು ವರದ್ದಿ ಯಥಾವತ್ತಾಗಿ ತಲುಪಿಸುವ ಸಂದರ್ಭದಲ್ಲಿ ಕೆಲವು ಪದಗಳು ತೊದಲುತ್ತಾ, ಒತ್ತೊತ್ತಾಗಿ ಕೇಳಿಬರುವುದಕ್ಕೆ ಕಾರಣ ಕೇಳಬೇಕಿಲ್ಲವೆಂದುಕೊಳ್ಳುತ್ತೇವೆ. ಚುನಾವಣೆ ಬ್ಯುಸಿ!

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post