ಬೊಗಳೆ ರಗಳೆ

header ads

ಬೊಗಳೆ: ಜಾನುವಾರುಗಳ ದರ್ಜೆಗೆ ತಶಿ ಶರೂರ್ ಸಮರ್ಥನೆ

(ಬೊಗಳೂರು ಟ್ವೀಟ್ ಬ್ಯುರೋದಿಂದ)
ಬೊಗಳೂರು, ಅ.1- ಕೇಂದ್ರ ಸಚಿವ ತಶಿ ಶರೂರ್ ಅವರು ವಿಮಾನದಲ್ಲಿ ಜಾನುವಾರು ಕ್ಲಾಸ್ ಇದೆ ಎಂಬ ಬಗ್ಗೆ ಹೇಳಿಕೆ ನೀಡಿ ಇದು ಸುಮ್ ಸುಮ್ನೇ ವಿವಾದವಾಗಿದ್ದನ್ನು ಕಂಡು ಕಿಡಿ ಕಾರಿದ್ದಾರೆ. ಅವರು ನೇರವಾಗಿ ಕಿಡಿ ಕಾರಿದವರೇ, ಅವರು ಕಾರಿದ ಕಿಡಿ ಬೊಗಳೂರಿನ ಕ.ಬು.ಗೇ ಬಂದು ಬಿದ್ದಿದೆ.

ಹೀಗಾಗಿ ಅವರು ಬೊಗಳೂರಿಗೇ ಬಂದು ಸಂದರ್ಶನ ನೀಡಿ ಒಂದು ಪ್ರಶ್ನೆಗೆ ಉತ್ತರಿಸಿ ಬೊಗಳೂರು ಬ್ಯುರೋವನ್ನು ತತ್ತರಿಸಿ ಹೋಗಿದ್ದಾರೆ.

ನೀವು ಜಾನುವಾರು ದರ್ಜೆಯ ವಿಮಾನ ಯಾನ ಅಂತ ಹೇಳಿದ್ದು ಸರಿಯೋ ತಪ್ಪೋ? ನೀವದನ್ನು ಒಪ್ಪುತ್ತೀರೋ ಇಲ್ವೋ? ಸಮರ್ಥಿಸಿಕೊಳ್ತೀರಾ ಇಲ್ಲಾ ನಿರಾಕರಿಸ್ತೀರಾ? ಪಕ್ಷವು ನಿಮ್ಮನ್ನು ಉಚ್ಚಾಟಿಸಿದರೆ ಒಪ್ತೀರಾ ಇಲ್ವಾ? ಜಾನುವಾರು ಅಂದಿದ್ದು ಸರಿಯೋ ತಪ್ಪೋ ಎಂಬಿತ್ಯಾದಿಯಾಗಿ ಒಂದೇ ಒಂದು ಪ್ರಶ್ನೆಯನ್ನು ಕೇಳಲಾಯಿತು.

ಅದಕ್ಕೆ ಅವರು ಉತ್ತರಿಸಿದ್ದು ಹೀಗೆ: ಜಾನುವಾರುಗಳು ಎಂದರೆ ನಾಯಿ, ಕುರಿ, ಬೆಕ್ಕು, ದನ, ಜನ, ಒಂಟೆ, ಆನೆ ಮುಂತಾದ ಪ್ರಾಣಿಗಳು ಬರುತ್ತವೆ. ನಾನು ನಿಜವಾಗಿಯೂ ಹೇಳಿದ್ದು ಆನೆಗಳನ್ನು ಉದ್ದೇಶಿಸಿ ಮಾತ್ರ. ಆದರೆ ಅವು ಬಿಳಿಯಾನೆಗಳಿಗೆ ಮಾತ್ರ!

ಅಂತ ಹೇಳಿ ಅವರು ಟ್ವಿಟ್ಟರಿನಲ್ಲಿಮತ್ತೊಂದು ಟ್ವೀಟ್ ಮಾಡಲು ಹೊರಟೇಹೋದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

8 ಕಾಮೆಂಟ್‌ಗಳು

  1. ಅನ್ವೇಷಿಯವರೆ,
    ಬಿಳಿಯಾನೆಗಳನ್ನು ಕೂರಿಸಿದ್ದರಿಂದಲೇ ಏರ್-ಇಂಡಿಯಾ ನೆಲ ಕಚ್ಚಿದ್ದು. ಈಗ ‘ಆಪರೇಶನ್ ಜಾನವರ್’ ಮಾಡೋದರಿಂದ ಈ ವಿಮಾನ ಮೇಲೆ ಏರೀತು!

    ಪ್ರತ್ಯುತ್ತರಅಳಿಸಿ
  2. ಬಿಳಿಯಾನೆಗಳ ಬಗ್ಗೆ ಮಾತ್ರ ಏಕೆ ಹಾಗೆ ಹೇಳಿದ್ದು? ಕರಿಯಾನೆಗಳೇನು ತಪ್ಪು ಮಾಡಿದ್ವು? ಅವುಗಳನ್ನು ದೂಷಿಸೋದು ಬೇಡ್ವಾ? ಹಾಗೆ ದೂಷಿಸದೇ ಇದ್ದರೆ (ಚಿತಾವಣೆಯ ಸಂದರ್ಭ ಹತ್ತಿರವಾಗ್ತಾ ಇದೆ), ಜನ ದನಗಳಿಗೆ ಅವುಗಳ ಬಗ್ಗೆ ತಿಳಿಯೋದಾದ್ರೂ ಹೇಗೆ? ತಶಿಯವರು ಏನೋ ಮುಚ್ಚಿಡ್ತಾ ಇದ್ದಾರೆ ಅನ್ಸತ್ತೆ. ತಕ್ಷಣ ಇದರ ಬಗ್ಗೆ ತನಿಖೆ ಮಾಡಿ ವದರದಿದ್ದರೆ ನಿಮ್ಮ ತಲೆ ...

    ಪ್ರತ್ಯುತ್ತರಅಳಿಸಿ
  3. ಸುನಾಥರೆ,
    ಈಗ ಜಾನುವಾರುಗಳೆಲ್ಲವೂ ವಿಮಾನದೊಳಗಿರುವ ಸಿಬ್ಬಂದಿಯೊಂದಿಗೆ ವಾರ್ ಮಾಡಿ, ಬಿಸ್ನೆಸ್ ದರ್ಜೆಯಲ್ಲೇ ಹೋಗ್ತಿವೆ...

    ಪ್ರತ್ಯುತ್ತರಅಳಿಸಿ
  4. ಇಂಚರರೇ,
    ಹೌದು, ಈ ಜಾರಕಾರಣಿಗಳ Supper ಮಾತ್ರ ಯಾವತ್ತಿಗೂ super.

    ಪ್ರತ್ಯುತ್ತರಅಳಿಸಿ
  5. ಶ್ರೀನಿವಾಸರೆ,
    ಏನೂ ಮಾಡಲಾಗುವುದಿಲ್ಲ. ತಲೆ ಇದ್ದರೆ ಏನಾದ್ರೂ ನೀವು ಮುಂದುವರಿಸಬಹುದಿತ್ತು. ತಲೆಯೇ ಇಲ್ಲ ಅಂದ್ಮೇಲೆ ಬಹುಶಃ ನೀವು ಬಾಯಿ ಮುಚ್ಚಿದ್ರೀಂತ ಕಾಣುತ್ತೆ, ಅದ್ಕೆ, ತಲೆ ಅಂತ ಹೇಳಿದ ನಂತರ ಏನೂ ಅಕ್ಷರಗಳೇ ಇಲ್ಲ!

    ಪ್ರತ್ಯುತ್ತರಅಳಿಸಿ
  6. ಶರತ್ ಹೆಗಡೆಯವರೆ,
    ತಶಿ ಶರೂರ್ ಅವರು ಜರೂರಾಗಿ ಹಲವರನ್ನು ಟ್ವೀಟ್ ಟ್ವೀಟ್ ಮಾಡಲು ಪ್ರೇರೇಪಿಸಿದ್ದು ಹೌದು. ಆದ್ರೆ ಪುತ್ರಕರ್ತರೆಲ್ಲರಿಗೂ ಅವರೇನು ಬರೆಯುತ್ತಾರೆ, ಅದನ್ನು ಹೇಗೆ ಅರ್ಥೈಸಿಕೊಳ್ಳಬಹುದು ಎಂಬುದೇ ಕುತೂಹಲ!

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D