ಬೊಗಳೆ ರಗಳೆ

header ads

ನೋBell ಶಾಂತಿ ಪ್ರಶಸ್ತಿ ಒಬಾಮ ಅಲ್ಲ, ಒಸಾಮ!

(ಬೊಗಳೂರು Barking News! ಬ್ಯುರೋದಿಂದ)
ಬೊಗಳೂರು, ಅ.9- ಅಮೆರಿಕ ಅಧ್ಯಕ್ಷ ಒಬಾಮ ಅವರಿಗೇ ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿ ಘೋಷಿಸಲಾಗಿದೆ ಎಂಬ ಮಾಧ್ಯಮಗಳ ವರದಿಯನ್ನು ನೇರಾನೇರವಾಗಿ, ಖಡಾಖಂಡಿತವಾಗಿ ತಳ್ಳಿ ಹಾಕಿರುವ ಬೊಗಳೆ-ರಗಳೆ, ಇದು ನಿಜ ಸುದ್ದಿಯನ್ನು ಒಡೆದು ಹಾಕಿದ (Breaking) ಸೊಂಪಾದಕರು ಮತ್ತು ವರದ್ದಿಗಾರರ ಕೈವಾಡ ಎಂದು ಘೋಷಿಸಿದೆ.

ಶೂ ಎಸೆದ ಪತ್ರಕರ್ತನನ್ನು ಕ್ಷಮಿಸಿದ್ದು, ಇರಾಕಿನಲ್ಲಿ ಯುದ್ಧಕ್ಕೆ ಮಂಗಳ ಹಾಡಿ ಶಾಂತಿಗೆ ಸಹಕರಿಸಿದ್ದು, ಮಾತ್ರವಲ್ಲದೆ ಭಾರತದ ಮೇಲೆ ದಾಳಿ ಮಾಡಿ, ದಿನಕ್ಕೊಂದು ಬಾಯಿಗೆ ಬಂದ ಹೇಳಿಕೆ ನೀಡುತ್ತಾ, ಸಣ್ಣ ಮಕ್ಕಳಂತೆ ಆಟವಾಡುತ್ತಿರುವ ಪಾಕಿಸ್ತಾನಕ್ಕೆ ಯಾವುದೇ ಬುದ್ಧಿ ಕಲಿಸುವ ಗೋಜಿಗೆ ಒಬಾಮ ಹೋಗಿಲ್ಲ ಎಂಬುದು ಅಪ(ಸ)ಥ್ಯವಾದರೂ, ಇದರ ನಡುವೆಯೇ ಇತ್ತೀಚೆಗೆ ಟಿವಿ ಸಂದರ್ಶನವೊಂದರಲ್ಲಿ ಅವರು ನೊಣವೊಂದನ್ನು ಹೊಡೆದು ಕೊಂದು ತಮ್ಮ ಹಿಂಸಾ ಮನೋಭಾವ ಮೆರೆದಿದ್ದಾರೆ. ಇದು ಅಶಾಂತಿಯಲ್ಲವೇ? ಹೀಗಾಗಿ ಒಬಾಮಗೆ ಹೇಗೆ ಈ ಪ್ರಶಸ್ತಿ ಲಭಿಸಿತು ಎಂಬುದು ಬೊಗಳೂರು ತಲೆಯಿಲ್ಲದ ಸೊಂಪಾದ-ಕರುಗಳ ಪ್ರಶ್ನೆ.

ಇದರ ಹಿಂದೆ ಸ್ವತಃ ಒಬಾಮ ಕೈವಾಡವನ್ನೂ ತಳ್ಳಿ ಹಾಕುವಂತಿಲ್ಲ. ಯಾಕೆಂದರೆ, ಒಬಾಮ ತಮ್ಮ ಅಧ್ಯಕ್ಷೀಯ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಅಮೆರಿಕವನ್ನು ಬದಲಾಯಿಸುತ್ತೇವೆ ಎಂಬ ಸಂದೇಶದೊಂದಿಗೆ "Yes, We Can" ಎಂದೇ ಜನರಲ್ಲಿ ಸಮೂಹ ಸನ್ನಿ ಮೂಡಿಸಿದ್ದರು. ಈ ಕಾರಣಕ್ಕೆ, ನೊಬೆಲ್ ಸಮಿತಿಯವರಲ್ಲಿಯೂ "ನೀವು ನೊಬೆಲ್ ಪ್ರಶಸ್ತಿ ನನಗೆ ಕೊಡಬಹುದೇ?" ಎಂದು ಕೇಳಿದಾಗ, ಅದೇ ಸಮೂಹಸನ್ನಿಗೊಳಗಾಗಿದ್ದ ನೊಬೆಲ್ ಕಮಿಟಿಯವರು ಕೂಡ Yes, We can ಎಂದು ಹೇಳಿರುವುದೂ ಕೂಡ ಕಾರಣವಿರಬಹುದು ಎಂದು ಸಂದೇಹಿಸಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

ಆದರೆ, ಇಲ್ಲಿ ಬೊಗಳೂರಿನ ಸಂದೇಹ ಬೇರೆಯದೇ ಆಗಿದೆ. ಇತ್ತೀಚೆಗಿನ ದಿನಗಳಲ್ಲಿ ಸತ್ತಿದ್ದಾನೆಯೇ ಬದುಕಿದ್ದಾನೆಯೇ ಎಂಬುದಿನ್ನೂ ಸಾಬೀ-ತಾಗದಿರುವ ಮತ್ತು ಅಮೆರಿಕದ ಯಾವುದೇ ಡ್ರೋನ್ ದಾಳಿಯೂ ತಾಗದಿರುವ ಒಸಾಮ ಬಿನ್ ಲಾಡೆನ್ ಯಾವುದೇ ಸದ್ದು ಮಾಡುತ್ತಿಲ್ಲ. ಬಾಂಬು ಪಟಾಕಿ ಸಿಡಿಸಿದ್ದೂ ಕಡಿಮೆ. ಸದ್ದು ಮಾಡಲು Bell ಬೇಕಲ್ಲವೇ? ಹೀಗಾಗಿ No Bell ಆಗಿಬಿಟ್ಟಿರುವ ಒಸಾಮನಿಗೆ ಅಶಾಂತಿ ಪ್ರಶಸ್ತಿ ಸಿಕ್ಕಿದ್ದು, ಅದನ್ನು ಸೊಂಪಾದಕರು ಅಥವಾ ರದ್ದಿಗಾರರು ಪ್ರೂಫ್ ಮಿಸ್ಟೇಕ್‌ನಿಂದ ಒbaಮ ಮಾಡಿ ಜಗಜ್ಜಾಹೀರುಗೊಳಿಸಿದ್ದಾರೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ.

ಅಹಿಂಸೆ ಪ್ರತಿಪಾದಿಸಿದ ಗಾಂಧೀಜಿಗೇ ದೊರೆಯದ ನೋ-ಬೆಲ್, ಗಾಂಧೀಜಿಯೇ ನನಗೆ ಪ್ರೇರಣೆ ಎನ್ನುತ್ತಲೇ ನೊಣವೊಂದನ್ನು ಕೊಂದು ಹಾಕಿದ್ದ ಒಬಾಮನಿಗೆ ದೊರೆತಿರುವುದು ಸರ್ವಥಾ ಸರಿಯಲ್ಲ ಎಂಬ ಕಾರಣಕ್ಕಾಗಿಯೇ ಬೊಗಳೂರು ಬ್ಯುರೋ ಈ ರೀತಿಯ ತಗಾದೆ ಎಬ್ಬಿಸಿರುವುದಾಗಿ ಎಲ್ಲಿಯೂ ವರದಿಯಾಗಿಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

23 ಕಾಮೆಂಟ್‌ಗಳು

 1. obama getting nobel is because of a decision made too early and immature ... they should have waited a bit ..

  namma devegoudaru nobel prashastige takkavaru :D yakandre avaru yavagalu shantiyinda nidde madta irtare...

  ಪ್ರತ್ಯುತ್ತರಅಳಿಸಿ
 2. ಸಾರ್,

  ಈ ವಿಷ್ಯಾವಾಗಿ ಹುಡುಕ್ತಾ ಇದ್ದೆ. ಕೊನೆಗೆ ಒಂದು ಬ್ಲಾಗ್ ಬಂದೇ ಬಿಟ್ತು. ನಿಮ್ಮ ಬೊಗಳೆ ರಗಳೆ ಇನ್ನೂ ನಂಗೆ ಹೊಸದು. ಅರ್ಥ ಮಾಡ್ಕೊಳ್ಳೋಕೆ ಸ್ವಲ್ಪ ಕಷ್ಟ ಹಾಕ್ತಿದೆ.

  ಪ್ರತ್ಯುತ್ತರಅಳಿಸಿ
 3. ಹಹ್ಹಹ್ಹ! ಯಾಕೆ ಕೊಟ್ರು ಅಂತ ಒಬಾಮಾಗೂ ಗೊತ್ತಿದ್ಯೋ ಇಲ್ವೋ ಪಾಪ!

  ಪ್ರತ್ಯುತ್ತರಅಳಿಸಿ
 4. ಅನ್ವೇಷಿಗಳೆ,
  (ಅ)ಶಾಂತಿಗಾಗಿ N0-Bell prize ಘೋಷಿಸುವಾಗ, ಒ‘ಸಾ’ಮಾ ಎಂದು ಮುದ್ರಣವಾಗುವ ಬದಲು ಒ‘ಬಾ’ಮಾ ಎಂದು ಮುದ್ರಿತವಾಗಿದೆ ಎನ್ನುವ ವಿಷಯ ಕೊನೆಗೂ ನಿಮ್ಮ ಸಂಶೋಧನೆಯಿಂದ ಸಾಬೀತಾಗಿದೆ. ನಿಮಗೆ ಧನ್ಯವಾದಗಳು. ಕಣ್ಣಲ್ಲಿ ಕಣ್ಣಿಟ್ಟು ಉತ್ತಮ ವ-ರದ್ದಿ ನೀಡುತ್ತಿರುವ ನಿಮಗೂ ಸಹ N0-Bell prize ಕೊಡಲೇ ಬೇಕೆನ್ನುವದು ‘ಬೊಗಳೆ-ರಗಳೆ’ ಓದುಗರ ನಿಲ್ಲದ ಕಂಠಶೋಷಣೆಯಾಗಿದೆ. ಆ ಮಹಾ ಸುದಿನದ ಮೊದಲೇ ನಿಮಗೆ ಮುಂಗಡವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

  ಪ್ರತ್ಯುತ್ತರಅಳಿಸಿ
 5. ಈ ಬ್ಲಾಗನ್ನು ಟ್ವಿಟ್ಟರ್ ನಲ್ಲಿ ಫಾಲೋ ಮಾಡಲು ಅನುಕೂಲ ಮಾಡಿಕೊಡಿ.
  ನನ್ನಿ,
  ಕಿಶೋರ್

  ಪ್ರತ್ಯುತ್ತರಅಳಿಸಿ
 6. ಸಾಗರದಾಚೆಯೋರೆ,
  "ಥೂ" ಗುಡ್ ಎಂದಿರಲ್ಲ, ಒಪ್ಪಿಕೊಂಡಿದ್ದೇವೆ.

  ಪ್ರತ್ಯುತ್ತರಅಳಿಸಿ
 7. ಪ್ರಮೋದರೆ,
  Sh!!!! ಸಾರಾyi can ಅನ್ನೋರೂ ಇದ್ದಾರೆ.

  ಪ್ರತ್ಯುತ್ತರಅಳಿಸಿ
 8. ಶರತ್ ಹೆಗಡೆ ಅವರೆ,
  ನೀವಂದ ಮೊದಲ್ನೇ ವಿಷಯಾನ ಎಲ್ರೂ ಚರ್ಚೆ ಮಾಡ್ತಿದ್ದಾರೆ. ಆದ್ರೆ ಆಗಿದ್ದು ಆಗಿ ಹೋಯಿತು.

  ಇನ್ನು ಗೌಡರಿಗೆ ನೊಬೆಲ್ ಶಾಂತಿಯನ್ನು ಕೊಟ್ಟು ಮದುವೆ ಮಾಡಿಸಬೇಕು ಎಂಬ ಸಲಹೆಯನ್ನು ಪರಿಗಣಿಸುವುದಾಗಿ ಸ್ವತಃ ಒಬಾಮ ಅವರೇ ದೂರವಾಣಿ ಕರೆ ಮಾಡಿ ಹೇಳಿದ್ದಾರೆ.

  ಪ್ರತ್ಯುತ್ತರಅಳಿಸಿ
 9. ಶಿವು ಅವರೆ,
  ನೀವು ಹೇಳೋದು ನೋಡಿದ್ರೆ ನಂಗ್ಯಾಕೋ ಭಯ ಶುರುವಾಗ್ಬಿಟ್ಟಿದೆ. ನೊಬೆಲ್ ಕೊಡಿಸ್ತೀರಾ ಹೆಂಗೆ?

  ಪ್ರತ್ಯುತ್ತರಅಳಿಸಿ
 10. ಲೋದ್ಯಾಶಿ ಅವರೆ, ಬೊಗಳೂರಿಗೆ ಸ್ವಾಗತ.
  ನಮ್ಮ ಬೊಗಳೆ ನಮಗೆ ಹಳೆಯದಾದ್ರೂ, ಇನ್ನೂ ಅರ್ಥ ಮಾಡಿಕೊಳ್ಳಿಲ್ಲ. ಪರವಾಗಿಲ್ಲ, ನೀವು ಅರ್ಥ ಮಾಡಿಕೊಳ್ಳದಿದ್ರೂ ತೊಂದ್ರೆಯೇನಿಲ್ಲ. ಅನರ್ಥ ಮಾಡಿಕೊಳ್ಳಿ..., ಬರ್ತಾ ಇರಿ.

  ಪ್ರತ್ಯುತ್ತರಅಳಿಸಿ
 11. ಸುನಾಥರೆ,
  ನೊಬೆಲ್ ಸಿಕ್ಕ ಒಬಾಮ ಅವರೇ ಮುಜುಗರದಿಂದ ಹೇಳಿದ್ದಾರೆ, ಈ ಹಣವನ್ನು ದತ್ತಿ ಸಂಸ್ಥೆಗೆ ದಾನ ಮಾಡ್ತೀವಿ ಅಂತ. ನಾವು ಆ ದತ್ತಿ ನಿಧಿ ಪಡೆಯುವ ಶತಪ್ರಯತ್ನದಲ್ಲಿದ್ದೇವೆ. ಇನ್ನು ನಮಗೆ ನೊಬೆಲ್ ಸಿಕ್ರೆ, ಅದೂ ಕೂಡ ಸಿಗದಾದೀತು. ಅದು ಸಿಗೋವರೆಗೆ ಸುಮ್ಮನಿರಿ. ಆಮೇಲೆ ಪ್ರಯತ್ನ ಮಾಡುವಿರಂತೆ.

  ಪ್ರತ್ಯುತ್ತರಅಳಿಸಿ
 12. ಕಿಶೋರರೆ,
  ಬೊಗಳೂರಿಗೆ ನಿಮಗೆ ಸ್ವಾಗತ. ಟ್ವಿಟ್ಟರಿನಲ್ಲಿ ಖಾತೆಗಾಗಿ ಯೋಚ್ನೆ ಮಾಡ್ತೀವಿ. ಈಗಾಗ್ಲೇ ಇದೆ, twitte.com/anveshi ಅಂತ. ಆದ್ರೆ update ಆಗ್ತಿಲ್ಲ... ಮುಂದುವರಿಸ್ತೀವಿ...

  ಪ್ರತ್ಯುತ್ತರಅಳಿಸಿ
 13. ನನಗೆ ಯಾಕೆ ನೊಬೆಲ್ ಬಂದಿಲ್ಲ ಅಂತ ಯಾರೂ ಪ್ರತಿಭಟನೆ ನೆ ಮಾಡ್ತಿಲ್ಲ ! :(

  ಪ್ರತ್ಯುತ್ತರಅಳಿಸಿ
 14. ಅರ್ಚು ಅವರೆ,
  ಬಹುಶಃ ಸ್ಪೆಲ್ಲಿಂಗ್ ಮಿಸ್ಟೇಕ್ ಇರಬಹುದೇ? ಥೂ ಗುಡ್!?? ಅಂದ್ರೆ ಒಬಾಮಾಗೂ ನೋಬೆಲ್ಲು ಸಿಕ್ಕಿರುವುದು ಥೂ ಗುಡ್?

  ಪ್ರತ್ಯುತ್ತರಅಳಿಸಿ
 15. ಅನಾನಿಸ್ಮರಸರೇ,
  ಹೌದು ಇದು ಕೂಡ ಇಶ್ಯೂ ಆಗಿಯೇ ಉಳಿದಿದೆ.

  ಪ್ರತ್ಯುತ್ತರಅಳಿಸಿ
 16. ಎಂಜೆಕೆ ಕ್ರಿಯೇಟಿವ್ ಟ್ಯಾಲೆಂಟ್ಸ್ ಅವರಿಗೆ ಬೊಗಳೂರಿಗೆ ಸ್ವಾಗತ.
  ಇನ್ನು ಮುಂದೆ ಹಾಗೆಲ್ಲಾ ಬರೆಯಲ್ಲ.... ;0

  ಪ್ರತ್ಯುತ್ತರಅಳಿಸಿ
 17. ಲಕ್ಷ್ಮೀಸ್ ಅವರೆ,
  ನಾವೆಲ್ಲಾ ಮೊನ್ನೆ ಪ್ರತಿಭಟನೆಗೆ ಜಮಾಯಿಸಿದ್ವಿ... ಆದ್ರೆ ಕೊನೆ ಗಳಿಗೆಯಲ್ಲಿ ಯಾತಕ್ಕಾಗಿ ಪ್ರತಿಭಟನೆ ಅನ್ನೋದು ಮರೆತುಹೋಗಿ ಎಲ್ಲರೂ ವಾಪಸಾದ್ವಿ....

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D