(ಬೊಗಳೂರು ವಿಕೃತಿ ರಕ್ಷಣಾ ಬ್ಯುರೋದಿಂದ)
ಬೊಗಳೂರು, ಫೆ.18- ಬ್ರಿಟಿಷರ ನಾಡಿನಲ್ಲಿ ಸಣ್ಣ ಪ್ರಾಯದಲ್ಲೇ ಅಪ್ಪಂದಿರಾಗುವ ಪ್ರಕರಣಗಳು ಹೆಚ್ಚಾಗುತ್ತಿರುವುದಕ್ಕೆ ಅಲ್ಲಿ ಸಂಸ್ಕೃತಿ ರಕ್ಷಕರಿಲ್ಲದಿರುವುದೇ ಪ್ರಧಾನ ಕಾರಣ ಎಂದು ಕಂಡುಕೊಂಡಿರುವ ಮಕ್ಕಳ ಕಲ್ಯಾಣ ಮಾಡಿಸುವ ಸಚಿವೆ ರೇಣೂ ಕಾ ಚೌದ್ರಿ ಅವರು, ಅಲ್ಲಿಗೆ ಇತ್ತೀಚೆಗಷ್ಟೇ ಪಿಂಕ್ ಚಡ್ಡಿಗಳ ಮಹಾಪೂರ ಪಡೆದುಕೊಂಡ ಶ್ರೀರಾಮಸೇನೆಯನ್ನು ಕಳುಹಿಸಿಕೊಡಲು ನಿರ್ಧರಿಸಿದ್ದಾರೆ.

ಮುಮೋದ್ ಪ್ರತಾಲಿಕ್ ಅವರಿಗೆ ಲಂಡನ್‌ನಿಂದ ಕರೆಯೊಂದು ಬಂದಿದೆ ಎಂದು ಮೂಲಗಳು ವರದ್ದಿಸಿದ್ದರಿಂದ ಚಕಿತಗೊಂಡು ಕುಪಿತಗೊಂಡ ಬೊ.ರ.ಬ್ಯುರೋ ಈ ಬಗ್ಗೆ ಅನ್ವೇಷಣೆಗೆ ಹೊರಟಿತ್ತು. ನಮ್ಮಲ್ಲಿಂದ ನೈತಿಕತೆಗಳನ್ನೆಲ್ಲಾ ಅವರು ಭಾರತ ಬಿಟ್ಟು ಹೋದಾಗಲೇ ಕೊಂಡೊಯ್ದಿದ್ದರು. ಈಗ ಅಲ್ಲಿಯೂ ನೈತಿಕತೆ ಮುಗಿದುಹೋಗಿದೆ ಅಂತ ಅನ್ನಿಸುತ್ತದೆ. ಅದು ಅರ್ಧಪತನಕ್ಕಿಳಿದಿದೆಯೇ ಅಥವಾ ಪೂರ್ತಿಪತನವಾಗಿದೆಯೇ ಎಂಬುದನ್ನು ತಿಳಿಯಲೆಂದು ಅಲ್ಲಿಗೆ ಹೋದಾಗ ಇಲ್ಲಿ ಪ್ರಕಟವಾಗಿರುವ ವರದಿಯೇ ಪ್ರತಾಲಿಕ್ ಅವಶ್ಯಕತೆ ಹೆಚ್ಚಾಗಿ ಕಾಣಿಸಲು ಕಾರಣವೆಂದು ಪತ್ತೆಯಾಗಿದೆ.

ಇತ್ತೀಚೆಗೆ ಪಬ್ ಭರೋ ಮಾಡಿ, ಹೋಗಿ, ಕುಣಿಯಿರಿ, ಕುಡಿಯಿರಿ, ಕುಪ್ಪಳಿಸಿರಿ ಎಂದೆಲ್ಲಾ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಕಲ್ಯಾಣ ಮಾಡಿಸುವ ಕೇಂದ್ರದ ಸಚಿವೆ ರೇಣೂ ಕಾ ಚೌಧ್ರಿ ಅವರು ಹೇಳಿಕೆ ನೀಡಿದ್ದರಿಂದಾಗಿಯೇ, ಬ್ರಿಟಿಷರ ನಾಡಿನಲ್ಲಿ ಈ ರಾದ್ಧಾಂತಗಳಾಗುತ್ತಿವೆಯೇ ಎಂಬ ಪ್ರಶ್ನೆ ಬೊಗಳೂರನ್ನು ಕಾಡಿದ್ದು ಸಹಜ. ಹೀಗಾಗಿ, ಅವರು ಹೇಳಿದ್ದು ನಿಮಗಲ್ಲ ಎಂದು ಬ್ರಿಟಿಷರಿಗೆ ಫ್ಯಾಕ್ಸ್ ಮೂಲಕ ಸಂದೇಶ ರವಾನಿಸಲಾಗಿದೆ.

ಅಂತೆಯೇ ಅಲ್ಲಿನ ವ್ಯಾಲೆಂಟೈನ್ಸ್ ಡೇಯನ್ನು ಭಾರತದಲ್ಲೂ ಭರ್ಜರಿಯಾಗಿ ಆಚರಿಸಲಾಗುತ್ತಿದೆ. ಅಲ್ಲಿನ ಸಂಸ್ಕೃತಿಯು ಭಾರತಕ್ಕೂ ವ್ಯಾಪಿಸಬಹುದೇ  ಎಂದು ಶ್ರೀರಾಮನ ಸೇನೆಯು ಬೊಗಳೂರು ಬ್ಯುರೋದೆದುರು ಮಾತ್ರ ತನ್ನ ಆತಂಕವನ್ನು ಹೊರಗೆಡಹಿದೆ.

ಒಂದು ಕಾಲದಲ್ಲಿ ಬ್ರಿಟಿಷರು ನಮ್ಮನ್ನಾಳಿದ್ದರೂ, ಇದೀಗ ಉಭಯ ದೇಶಗಳ ಮಧ್ಯೆ ಸೌಹಾರ್ದಯುತ ಸಂಬಂಧವಿದೆ. "ಸಾಂಸ್ಕೃತಿಕ" ಬಂಧದ ಬೆಸುಗೆ ಮತ್ತಷ್ಟು ಬಲವಾಗಿದೆ. ಹೀಗಾಗಿ ಸಾಂಸ್ಕೃತಿಕತೆ ವಿನಿಮಯ ಕಾರ್ಯಕ್ರಮಗಳಡಿಯಲ್ಲಿ ಎರಡೂ ದೇಶಗಳ ಈ ವಿಪರೀತ ಸಂಸ್ಕೃತಿಗಳು ವಿನಿಮಯವಾದರೆ ಎಂಬ ಭೀತಿ ಮೂಡಿರುವುದರಿಂದ ಈ ಬಗ್ಗೆ ಕ್ರಮ ಕೈಗೊಳ್ಳಲು ಮುಮೋದ್ ಪ್ರತಾಲಿಕ್ ಮತ್ತು ರೇಣುಕಾಚೌ ಧುರಿಯವರನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಗುಪ್ತದಳದ ಮೂಲಗಳು ಉಸುರಿವೆ.

ಆದರೆ, ಇಲ್ಲಿನ ಮಾಧ್ಯಮಗಳನ್ನು ಅಲ್ಲಿಗೂ ಕಳಿಸುತ್ತಾರೆ, ಪದೇ ಪದೇ ತೋರಿಸಿದ್ದನ್ನೇ ತೋರಿಸುತ್ತಾ ಕಾಲ ಕಳೆಯಲು ನಿರ್ಧರಿಸಲಾಗಿದೆ ಎಂಬೆಲ್ಲಾ ಸಂಗತಿಗಳೂ ಗುಸುಗುಸು ಸರಿದಾಡುತ್ತಿರುವುದರಿಂದ ಬೊಗಳೆ ರಗಳೆ ಈ ಬಗ್ಗೆ ಬಾಯಿ ಮುಚ್ಚಿ ಕೂರಲು ನಿರ್ಧರಿಸಿದೆ.

4 Comments

ಏನಾದ್ರೂ ಹೇಳ್ರಪಾ :-D

 1. ಪುಟ್ಟ ಮಕ್ಕಳು ಪುಟ್ಟ ಮಕ್ಕಳನ್ನು ಹೆರುವದರಲ್ಲಿ ಅಂಥಾ ವಿಶೇಷ ಏನಿಲ್ಲ ಬಿಡಿರಿ.
  ಭಾರತೀಯ ಸಂಸ್ಕೃತಿಯಲ್ಲಿ ‘ಗಾಂಧರ್ವ ವಿವಾಹ’, ‘ಬಾಲವಿವಾಹ’ ಇವು ಮೊದಲಿನಿಂದಲೂ ಇವೆ. Empty ರಾಮರಾವ ಎನ್ನುವ ನಟರು ತಮ್ಮ ಅನೇಕ ಚಾಲೂ ಚಿತ್ರಗಳಲ್ಲಿ ರಾಕ್ಷಸ ವಿವಾಹ ಹಾಗೂ ಗಾಂಧರ್ವ ವಿವಾಹ ಮಾಡಿಕೊಂಡಿದ್ದಾರೆ.ನಿಜ ಜೀವನದಲ್ಲಿಯೂ ಅದೇ ಆದರ್ಶ ಪಾಲಿಸಿದ್ದಾರೆ. ರೇಣೂ ಕಾ ಚೌಧರಿ ಅವರಿಗೆ ತುಂಬಾ ಬೇಕಾದವಳಾಗಿದ್ದಳು. ಅದಕ್ಕೇ ಅವಳೂ ಸಹ"..ಒಳಗೆ ಸೇರಿದರೆ ಗುಂಡು...."

  ReplyDelete
 2. ರೇಣು ಕಾಚ ಉದರಿ...ಎಂಬ ಮಹಿಳೆ ದಿನಾ ಪಬ್‍ಗೆ ಹೋಗಿ ಕುಡಿಯುತ್ತಾಳೋ ಎಂಬುದನ್ನು ಪತ್ತೆ ಹಚ್ಚಿ ಪ್ರಕಟಿಸಬೇಕಾಗಿದೆ. ಮತ್ತೆ ಅವಳು ಸೀರೆ ಯಾಕೆ ಉಡುತ್ತಾಳೆ ಎಂಬುದೇ ಅರ್ಥವಾಗುತ್ತಿಲ್ಲ. ಸದಾ ಹಿಂದೂವಿರೋಧಿ, ದೇಶವಿರೋಧಿ, ಸಂಸ್ಕೃತಿ ವಿರೋಧಿ, ಕರ್ನಾಟಕ ವಿರೋಧಿ ಹೇಳಿಕೆಗಳನ್ನು ಕೊಡುತ್ತಿದ್ದರೂ ಅವಳನ್ನು ಸುಮ್ಮನೆ ಬಿಟ್ಟಿದ್ದಾರಲ್ಲಾ?. ಅವಳು ಕತ್ತೆ ಕಾಯಲೂ ಲಾಯಕ್ಕಿಲ್ಲದ ಮಹಿಳೆ (ಅದೂ ಸ್ವಲ್ಪ ಅನುಮಾನ- ಬಹುಶಃ ಮಂಗಳಮುಖಿಯಾಗಿರಬಹುದೆ?). ಮಂಗಳಮುಖಿ ಎಂಬುದು ಹಿಜಡಾಗಳ ಸದ್ಯದ ವ್ಯಾವಹಾರಿಕ ನಾಮ. ಈ ರೇಣು ಕಾಚ ಉದರಿಗೆ ಈಗ ಸದ್ಯಕ್ಕೆ ಯಾವ ಗಿರಾಕಿಯೂ ಇಲ್ಲವೆಂದು ಕಾಣುತ್ತದೆ. ಅದಕ್ಕೆ ಮೈ ಕೆರೆದುಕೊಳ್ಳಲು ಮಂಗಳೂರಿನ ಮಂದಿ ಮೇಲೆ ತನ್ನ ವಕ್ರ ದೃಷ್ಟಿ ಹರಿಸಿದ್ದಾಳೆ. ಇಂಥವರಿಗೆ ಮೆಟ್ಟಲ್ಲಿ ಹೊಡೆದರೂ ಕಡಿಮೆಯೇ.

  ReplyDelete
 3. ಸುನಾಥರೆ,
  ನಿಮ್ಮ ಸಂಚೋದನಾತ್ಮಕ ವರದಿ ನಮ್ಮ ಬ್ಯುರೋದ ಕಣ್ಣು ತೆರೆಸಿದೆ. ರೇಣು ಕಾ ಚೌಧುರೀಣೆ ಈ ರೀತಿ ಮಾಲಾಶ್ರೀ ಮಾರ್ಗ ಹಿಡಿಯುವುದೇಕೆಂದೂ ಗೊತ್ತಾಗಿಹೋಯಿತು. ಬಹುಶಃ ಆಕೆಯೇ ಬ್ರಿಟನಿನಲ್ಲಿ ಈ ಕುರಿತು ಪ್ರಚಾರ ಮಾಡಿರಬಹುದೇ?

  ReplyDelete
 4. ಗುರುಗಳೆ,
  ಮೊನ್ನೆ ಪಿಂಕ್ ಚಡ್ಡಿಗಳು ತಪ್ಪಾಗಿ ರೇಣು ಕಾಕಾಕಾಕಾ ಮನೆಗೇ ತಲುಪಿದೆ ಎಂಬ ವರದಿಗಳು ಇಲ್ಲಿಗೆ ಬಂದಿವೆ. ಆಕೆ ಅದನ್ನು ರೀಡೈರೆಕ್ಟ್ ಮಾಡಿದ್ದಾರೆಂದೂ ಸಂಚೋದಿಸಲಾಗಿದೆ. ಪಿಂಕ್ ಚಡ್ಡಿಗಳ ಜತೆಗೆ ಮಂಗಳೂರನ್ನು ತಾಲಿಬಾನೂರು ಎಂದು ಹೊಗಳಿದ್ದಕ್ಕಾಗಿ ಎಫ್ಐಆರ್ ಕೂಡ ಇತ್ತು!

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post