ಉದ್ದೇಶಪೂರ್ವಕವಾಗಿ ಏಪ್ರಿಲ್ 1ರಂದೇ (1960) ಹುಟ್ಟಿ ದಿ ಟೈಮ್ಸ್ ಆಫ್ ಡೆಕ್ಕನ್, ಮುಂಗಾರು ಮತ್ತು ಕೊನೆಗೆ ದಿ ವೀಕ್‌ನಲ್ಲಿ ವಾರೆಕೋರೆ ಚಿತ್ರಕಾರರಾಗಿ ಹೆಸರು ಮಾಡಿದ್ದ ಪ್ರಕಾಶ್ ಶೆಟ್ಟಿ ಅವರು, ಗಂಭೀರವಾಗಿ ಒಂದು ದುಸ್ಸಾಹಸಕ್ಕೆ ಇಳಿದಿದ್ದಾರೆ ಎಂದರೆ ನಂಬಲೇಬೇಕು. ಹೌದು. ಅವರು ವಾರೆಕೋರೆ ಎಂಬೊಂದು ಪತ್ರಿಕೆಯನ್ನೇ ಆರಂಭಿಸಿಬಿಟ್ಟಿದ್ದಾರೆ.

ಇದು ಚಂದಾದಾರರಿಗೆ ಉಚಿತವಂತೆ! ಇವುಗಳನ್ನು ಓದಿದ ಬಳಿಕ ನಿಮ್ಮ ಬಾಯೊಳಗಿರುವ 32 ಹಲ್ಲುಗಳಲ್ಲಿ ಒಂದೆರಡು ನಾಪತ್ತೆಯಾದರೆ ನಾವು ಜವಾಬ್ದಾರರಲ್ಲ.

ಮತ್ತು ಮನೆಯಲ್ಲಿರೋ ಪುಟಾಣಿಗಳು ಅತ್ತುಬಿಟ್ಟರೆ ಅವರ ಸಮಾಧಾನಕ್ಕೆ ನೀವು ಬುಗ್ಗೆ(ಪುಗ್ಗ)ಗಳನ್ನು ಇಲ್ಲಿಂದಲೇ ತರಿಸಿಕೊಳ್ಳಬಹುದು... ಅದೇ... ನಗೆ ಬುಗ್ಗೆಗಳನ್ನು!

ಹೆಚ್ಚಿನ ಮಾಹಿತಿ ಬೇಕಿದ್ದರೆ ಇಲ್ಲಿ ಪಿನ್ ಚುಚ್ಚಿ....
ನೀವೂ ಓದಿ, ನಿಮ್ಮವರಿಗೂ ಓದಿಸಿ... ತಿಳಿಸಿ...

4 Comments

ಏನಾದ್ರೂ ಹೇಳ್ರಪಾ :-D

 1. ವ್ಹಾರೆ ಕ್ಯಾರೆ!
  ಪ್ರಥಮ ನೂರು ಚಂದಾದಾರರಿಗೆ ಬಕ್ರಿ ಮೂತ್ರ ಉಚಿತ ಅಂತ ಬರೆದಾರಲ್ಲ. ನಿಮ್ಮ ನಂಬರು ಎಷ್ಟು?

  ReplyDelete
 2. ಸುನಾಥರೆ,
  ನನ್ನ ನಂಬರು ಮೂರು ನಾಮ ಹೋಲುವ ನೂರಾಹನ್ನೊಂದು...ಸೋ... ನಾನು ಔಟ್

  ReplyDelete
 3. ಬೆಕ್ಕು ಎಲ್ಲಿ ? ನಾನು ಆಗಾಗ ಆಟ ಆಡ್ತಿದ್ದೆ ಅದರ ಜೊತೆ....ಎಲ್ಲಿ ಹೋಯ್ತು ಈಗ ? ಅದರ ಹಿಂದೆ ಒಂದು ಬ್ಯೂರೋ ನ ಕಳಿಸಿ ಅನ್ವೇಷಿಗಳೇ...ಪ್ಲೀಸ್ !

  ReplyDelete
 4. ಲಕ್ಷ್ಮಿ ಅವರೆ,

  ಬೆಕ್ಕನ್ನು ಓಡಿಸಿಬಿಟ್ಟೆ... ಅದು ಸಿಕ್ಕಾಪಟ್ಟೆ ಹಣ ಮಾಡುವ ದಂಧೆಯಲ್ಲಿ ತೊಡಗಿಬಿಟ್ತು...

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post