(ಬೊಗಳೂರು ತಮಿಳುಕಾಡು ಬ್ಯುರೋದಿಂದ)
ಬೊಗಳೂರು, ನ.10- ನಮಗೆ ಹೊಗೇನಕಲ್ ಬೇಡ, ಕಾವೇರಿ ನೀರು ಕೂಡ ಬೇಡ ಎಂದು ತಮಿಳುಕಾಡು ಮಂದಿ ವರಾತ ತೆಗೆದಿದ್ದಾರೆ.

ಇದರ ಹಿಂದಿನ ಅಸತ್ಯ ಶೋಧನೆಯಲ್ಲಿ ಹೊರಟಾಗ ಬೊಗಳೆ ಬ್ಯುರೋದ ಮಂದಿಗೆ ಹಲವಾರು ಎಡರು ಮತ್ತು ತೊಡರುಗಳು ಎದುರಾದವು.

ಅವುಗಳಲ್ಲಿ ಪ್ರಮುಖವಾದ ವಾದವೆಂದರೆ ಬೊಗಳೂರು ಬ್ಯುರೋ ಇರುವುದೇ ತಮಿಳುಕಾಡಿನ ಮಧ್ಯೆ. ಹೀಗಾಗಿ ಇದರ ಹಿಂದೆ ಬೊಗಳೆ ಬ್ಯುರೋದ್ದೇ ಏನಾದರೂ ಸಂಚು ಇರಬಹುದು ಎಂಬ ಗಂಭೀರ ಶ್ಲಾಘನೆಭರಿತ ಆರೋಪ. ಇದನ್ನು ಥತ್ ಎಂದು ಕೊಡವಿಕೊಂಡು ಮುಂದುವರಿಯಲಾಯಿತು.

ಅಸತ್ಯಾನ್ವೇಷಣೆ ಸಂದರ್ಭ ದೊರೆತ ಬಲುದೊಡ್ಡ ವಿಚಾರವೆಂದರೆ, ತಮಿಳುಕಾಡಿನ ಮಂದಿಯೆಲ್ಲರೂ ಇದೀಗ ಬೊಗಳೂರು ತೊರೆದು ಕನ್ನಡದ ರಾಜಧಾನಿಯಾಗಿರುವ ಬೆಂಗಳೂರು ಎಂಬ ಮಹಾನಗರಿ ಸೇರಿಕೊಳ್ಳತೊಡಗಿದ್ದಾರೆ. ಅವರೆಲ್ಲರೂ ಕುಡಿಯುವುದು ಕಾವೇರಿ ನೀರನ್ನೇ! ಹೀಗಾಗಿ ಕಾವೇರಿ ನೀರನ್ನು ತಮಿಳುನಾಡಿಗೆ ಕಳುಹಿಸಿದರೆ ಇಲ್ಲಿದ್ದುಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳಲು ಕೂಡ ನೀರು ಇರಲಾರದು ಎಂಬ ಭಯಾತಂಕ. ಹೀಗಾಗಿ ಅವರು ಹೊಗೇನಕಲ್ಲಿನಲ್ಲಿ ಹೊಗೆ ಏಳದಂತೆ ಮಾಡಲು ಕಟ್ಟೆಚ್ಚರ ವಹಿಸುತ್ತಿದ್ದಾರೆ ಎಂಬುದನ್ನು ತನಿಖೆಯ ಮೂಲಕ ಕಂಡುಕೊಳ್ಳಲಾಗಿದೆ.

ಹಿಂದೊಂದು ಸಲ ತಮಿಳುಕಾಡಿನ ಜಗಮಗಿಸುವ ಸಿನಿಮಾ ರಂಗದ ಮಂದಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ, ತಮಿಳು ನಿರ್ಮಾಪಕನೊಬ್ಬ ವೀರಾವೇಶದ ಭೀಷಣ ಭಾಷಣ ಮಾಡಿ, "ನನಗೆ ಹೊಗೇನಕಲ್ ಎಂದ್ರೆ ತುಂಬಾ ಇಷ್ಟ, ಅದು ನಮಗೆ ಬೇಕು, ಹಾಗೆಯೇ ಬೆಂಗಳೂರು ಅಂದ್ರೂ ತುಂಬಾನೇ ಇಷ್ಟ. ಅದು ಕೂಡ ನಮಗೇ ಸೇರಬೇಕು' ಎಂದೆಲ್ಲಾ ಭೀಕರವಾಗಿ ಕಿರುಚಾಡಿದ್ದು ನೆನಪಿರಬಹುದು. ಇಲ್ಲದಿದ್ದರೂ ಅದನ್ನು ನೆನಪಿಸಿಕೊಳ್ಳಲು ಕೋರಿಕೊಳ್ಳಲಾಗುತ್ತಿದೆ.

ಈ ಕಾರಣಕ್ಕಾಗಿಯೇ ತಮಿಳರು ಸೂ.... ಸಾ... ಎಂದು ಉಸಿರು ಬಿಡದೆ ಇದ್ದಾರೆ ಎಂಬುದನ್ನು ಪತ್ತೆ ಹಚ್ಚಲಾಗಿದೆ. ಆದರೆ ಬೆಂಗಳೂರಿನಲ್ಲಿ ತಮಿಳರು ಜಾಸ್ತಿಯಾಗುತ್ತಿರುವುದಕ್ಕೂ, ಬೊಗಳೆ ಬ್ಯುರೋ ಎರಡು ವರ್ಷದ ಹಿಂದೆ ಇಲ್ಲಿ ಪ್ರಕಟಿಸಿದ ವರದಿಗೂ ಯಾವುದೇ ರೀತಿಯಲ್ಲೂ, ಲವಲೇಶವೂ, ಎಳ್ಳು ಕಾಳಿನಷ್ಟೂ ಸಂಬಂಧವಿಲ್ಲ ಎಂದು ಬಲವಾಗಿ, ಭರ್ಜರಿಯಾಗಿ, ಕೀಬೋರ್ಡ್ ಎತ್ತಿ ಎತ್ತಿ, ಕುಕ್ಕಿ ಕುಕ್ಕಿ ಸ್ಪಷ್ಟಪಡಿಸಲಾಗುತ್ತಿದೆ.

7 Comments

ಏನಾದ್ರೂ ಹೇಳ್ರಪಾ :-D

 1. ಇದು ಬಹಳ ಹಳೆಯ ವಿಷಯ ಅಲ್ವಾ? - ಹೊಗೆಯಿದ್ದೆಡೆ ಬೆಂಕಿ ಇರುವುದಂತೆ - ಹೊಗೇನಕಲ್ಲಿದ್ದೆಡೆ ಬೆಂಕಿ ಇಡುವ ಮಂದಿ ಇರುವರಂತೆ :P ನಮ್ಮ ದೇಶ ಒಂದಲ್ಲ, ೨೮. ಎಲ್ಲೆಲ್ಲೂ ನಾವೇ, ಎಲ್ಲರೂ ನಮ್ಮವರೇ. ತಮಿಳ, ತೆಲುಗ, ಕನ್ನಡಿಗ, ಮರಾಠಿಗ, ಬಿಹಾರಿ, ಬಾಂಗ್ಲಾ ಬಂಧು, ಉಪ್ರದ ವಿಪ್ರ ಹೀಗೆ ಎಲ್ಲರೂ ಕಾಣಸಿಗುವರೇ ಹೊರತು, ಭಾರತೀಯರೆಲ್ಲೂ ಇಲ್ಲವಂತೆ (ಕಾಮತರ ಅಂಬೋಣ).

  ಅದ್ಸರಿ, ಇಷ್ಟು ದಿನ ನೀವೆಲ್ಲಿ ಹೋಗಿದ್ರಿ! ನಿಮ್ಮ ಪತ್ರವನ್ನು ನಮಗೇ ಮಾರಿಸಿ ಕೊಡಿ ಅಂತ ಇಲ್ಲೊಂದು ಮಾರಿ ನನ್ನ ಹಿಂದೆ ಬಿದ್ದಿದೆ :o

  ReplyDelete
 2. ಕರುಣಾಕಿಡಿಯ ಘೋಷಣೆ:
  ೨೦೦೮ರಲ್ಲಿ ಕಾವೇರಿ;
  ೨೦೧೫ರಲ್ಲಿ ತುಂಗಭದ್ರೆ!

  ReplyDelete
 3. ಲಕ್ಷ್ಮಿ ಅವರೆ,
  ಇಲ್ಲೆಲ್ಲಾ ನೀವುದುರಿಸಿದ ವಕ್ರ ಗೆರೆಗಳ ಬಗ್ಗೆ ರಿಸರ್ಚ್ ಆಂಡ್ ಅನಾಲಿಸಿಸ್ ವಿಂಗ್ ಮೂಲಕವೇ ತನಿಖೆ ನಡೆಸಲು ಗೋರಿಗೋರಿ ಕೊಂಡಿದ್ದೇವೆ. ಇಲ್ಲಿ ನಿಮ್ಮ Nokia, Shock-ia, Shokia ಮತ್ತು ಶಾಕ್iaಗಳನ್ನೂ ಸೇರಿಸಿ ತನಿಖೆ ಮಾಡಲಾಗುತ್ತದೆ.

  ReplyDelete
 4. ಕುರುಕುರೇ.... ಸಾರಿ... ತಿರುಕರೇ,

  ತಮಿಳುಕಾಡಿನ ರಾಜನ ಗಡ್ಡಕ್ಕೆ ಬೆಂಕಿ ಇಡೋಣವೆಂದರೆ ಬೆಂಕಿಯೇ ಇಲ್ಲವಲ್ಲ ಎಂಬ ಕೊರಂಗು... ತಮಿಳುಕಾಡಿಗರದು.

  ನೀವು ಪತ್ರ ಮಾರಿ ಬಿಡಿ, ಉಳಿದದ್ದೆಲ್ಲಾ ಮಾರಿಮುತ್ತು ನೋಡಿಕೊಳ್ಳುತ್ತಾಳೆ.

  ReplyDelete
 5. ಸುನಾಥರೆ,
  ಮತ್ತೊಂದು ವರ್ಷದ ಬಳಿಕ ಅವರಿಗೆ ಬೇಕಾಗಿರೋದು ಶ್ರೀಲಂಕಾದಲ್ಲಿ ಹರೀತಾ ಇರೋ ರಕುತದೋಕುಳಿ ಹರಿಯುವ ನದಿ.

  ReplyDelete
 6. ಕರುಣಾನಿಧಿ ಎಂಬ ಮಂಗ ಮತ್ತೆ ಲಂಕೆಗೆ ಹೋಗುವ ತಾಪತ್ರಯವೇ ಬೇಡ ಎಂದು ಸೇತುಸಮುದ್ರವನ್ನು ನಾಶ ಮಾಡಲು ಹೊರಟಿದ್ದಾನೆ. ಹಾಗೆಯೇ ಕಾವೇರಿ, ಹೊಗೆನಕಲ್ ಸಮಸ್ಯೆಗಳನ್ನು ಕೆದಕುತ್ತಾ ಬೊಗಳಿ ಬೊಗಳಿ ಸಾಯುವ ಹಂತಕ್ಕೆ ತಲುಪಿದ್ದಾನೆ. ಈ ಎಲ್.ಟಿ.ಟಿ.ಇ. ಬೆಂಬಲಿಗನನ್ನು ಯಾಕೆ ದೇಶದ್ರೋಹದ ಆಪಾದನೆ ಹೊರಿಸಿ ಬಂಧಿಸಬಾರದು?. ತಮಿಳರು ಮಾತ್ರ ಭಯೋತ್ಪಾದಕರಿಗೆ ಬೆಂಬಲ ನೀಡಬಹುದೆನ್ನುವುದು ಸದ್ಯದ ಕೇಂದ್ರದ ನೀತಿ. ಇಲ್ಲದಿದ್ದಲ್ಲಿ ಕಾಂಗ್ರೆಸಿಗ ರಾಜೀವ್ ಗಾಂಧಿ ಹತ್ಯೆ ಮಾಡಿದ ತಮಿಳರಿಗೆ ಕೇಂದ್ರ ಯಾಕೆ ಬೆಂಬಲ ನೀಡುತ್ತಿದೆ?. ಮತ್ತೊಂದು ಕಾರಣವೆಂದರೆ, ಕರುಣಾನಿಧಿ ಒಬ್ಬ ಕ್ರಿಶ್ಚಿಯನ್ ಆಗಿರುವುದು. ಯಾಕೆಂದರೆ ಸೋನಿಯಾಗೆ ಮತಾಂತರ ಮಾಡಲು ಈ ಶ್ವಾನಪುತ್ರನ ಅವಶ್ಯಕತೆ ಬಹಳಷ್ಟಿದೆ. ಧಿಕ್ಕಾರವಿರಲಿ ಈ ದೇಶದ್ರೋಹಿಗಳಿಗೆ. ಕಾವೇರಿ, ಹೊಗೆನಕಲ್ ಯಾವತ್ತಿದ್ದರೂ ಕನ್ನಡಿಗರದ್ದು, ಅದನ್ನು ತಮ್ಮದೆನ್ನುವ ಈ ಕುನ್ನಿಗಳಿಗೆ ಸರಿಯಾದ ಶಾಸ್ತಿ ಕಾದಿದೆ.

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post