(ಬೊಗಳೂರು ವರದಕ್ಷಿಣೆ ಉಬ್ಬರ ಬ್ಯುರೋದಿಂದ)
ಬೊಗಳೂರು, ಆ.25- ದೇಶವು ಹಣದುಬ್ಬರಕ್ಕೆ ತತ್ತರಿಸುತ್ತಿರುವುದರಿಂದ ವರದಕ್ಷಿಣೆಯ ಮೇಲೂ ಇದು ಪರಿಣಾಮ ಬೀರಿರುವುದರಿಂದ ವರದಕ್ಷಿಣೆ ದರವೂ ಏರಿಕೆ ಕಂಡಿದ್ದು, ಅದರ ಬೇಡಿಕೆಯ ಸೊತ್ತುಗಳು ಕೂಡ ಭರ್ಜರಿಯಾಗಿ ಆಧುನೀಕರಣಗೊಂಡಿವೆ.

ಹಿಂದಿನ ಕಾಲದಲ್ಲಿ ಕಾರು, ಬಂಗಾರ ಇತ್ಯಾದಿಗಳಿದ್ದ ವರದಕ್ಷಿಣೆ ಪಟ್ಟಿಯಲ್ಲಿಯೂ ಯುಪಿಎ ಸರಕಾರದ ಆಳ್ವಿಕೆಯಿಂದಾಗಿ ಭಾರೀ ಬದಲಾವಣೆ ಕಂಡಿದ್ದು, ಬೊಗಳೂರಿನ ವರದಕ್ಷಿಣಿಗರ ಪಟ್ಟಿಯಲ್ಲಿ ಒಂದು ಲೀಟರ್ ಪೆಟ್ರೋಲ್, ಒಂದು ಕಿಲೋ ತರಕಾರಿ, ಒಂದು ನೂರು ಗ್ರಾಂ ಬೇಳೆ, ಅರ್ಧ ತೆಂಗಿನ ಕಾಯಿ... ಇತ್ಯಾದಿಗಳೆಲ್ಲವೂ ಸೇರಿಕೊಂಡು ಬಿಟ್ಟಿವೆ.

ಇದಲ್ಲದೆ, ದುಡ್ಡು ಕೊಡಲು ಬಂದರೆ, ದುಡ್ಡು ಯಾರಿಗೆ ಬೇಕ್ರೀ... ನೀವೇ ಇಟ್ಕೊಳಿ ಎಂದು ಧಮಕಿ ಹಾಕುವ ವರ ಮಹಾಶಯರು, ತಮಗೆ ಒಂದು ಕಿಲೋ ತರಕಾರಿ ಸಪ್ಲೈ ಮಾಡಿ ನೋಡೋಣ ಎಂದು ವಾರೆಗಣ್ಣಿನಿಂದ ಭಾವೀ ಮಾವಂದಿರಿಗೆ ಸವಾಲು ಹಾಕುತ್ತಿರುವ ದೃಶ್ಯವೂ ಅಲ್ಲಲ್ಲಿ ಕಂಡುಬಂದಿದೆ.

ಹೇಗೂ, ದೇಶದ ಪರಮೋಚ್ಚ ನ್ಯಾಯಾಲಯವೂ ಬೆಲೆ ಏರಿಕೆಯಿಂದಾಗಿ ಈ ದೇಶದ ಪರಿಸ್ಥಿತಿಯನ್ನು ನೆನೆದು ತೀರಾ ಹತಾಶೆ ವ್ಯಕ್ತಪಡಿಸಿದೆ. ಹೀಗಾಗಿ, ಆಡಳಿತಾರೂಢರು ತಮ್ಮ ತಮ್ಮ ಜೇಬು ತುಂಬಿಸಿಕೊಳ್ಳುವುದರಲ್ಲೇ ಮಗ್ನರಾಗಿದ್ದಾರೆ. ಹಣದುಬ್ಬರ ಹೆಚ್ಚಾಗಿರುವುದರಿಂದ, ಹಣದ ಬೆಲೆ ಕಡಿಮೆಯಾಗಿರುವುದರಿಂದ ಎಷ್ಟು ತುಂಬಿಸಿಕೊಂಡರೂ ತಮ್ಮ ಜೇಬು ತುಂಬುತ್ತಿಲ್ಲ ಎಂಬುದು ಈ ಜಾರಕಾರಣಿಗಳ ಅರಿವಿಗೂ ಬಂದಿದ್ದು, ಅವರು ಇನ್ನೂ ತುಂಬದ ಜೇಬು ಭರ್ತಿಯಾಗಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿದ್ದಾರೆ ಎಂದು ಅವರ ಕಚೇರಿ ಮೂಲಗಳು ತಿಳಿಸಿವೆ.

ಈ ಕಾರಣದಿಂದ, ಜಾರಕಾರಣಿಗಳು ಕೂಡ ವರದಕ್ಷಿಣೆಯತ್ತ ತಮ್ಮ ದೃಷ್ಟಿ ಹರಿಸಿದ್ದಾರೆ. ಮದುವೆಯಾಗುವಾಗ ಮಾತ್ರವೇ ಅಲ್ಲ, ಜಾರಕಾರಣಿ ಆಗುವವನಿಗೂ ವರದಕ್ಷಿಣೆ ಕೊಡುವುದು ಕಡ್ಡಾಯ ಮಾಡುವ ಕಾಯಿದೆಯೊಂದಕ್ಕೆ ಅವರೆಲ್ಲರೂ ಚಿಂತಿಸುತ್ತಿದ್ದಾರೆ ಎಂದು ನಮ್ಮ ಬೊ.ರ. ಬ್ಯುರೋದ ಸ್ಟಿಂಗ್ ಕಾರ್ಯಾಚರಣಾ ಪಡೆಯ ವ-ರದ್ದಿಗಾರರು ಫ್ಯಾಕ್ಸ್ ಮಾಡಿದ್ದಾರೆ.

5 Comments

ಏನಾದ್ರೂ ಹೇಳ್ರಪಾ :-D

 1. ಬೊಗಳೂರು ಸಂಸ್ಥಾನದ ಮಠಾಧೀಶ, ೧೦೮ ಛೀ ಅಸತ್ಯಾನಂದ ಅನ್ವೇಷಿಯವರು ತಮ್ಮನ್ನು ಆಲೂಗಡ್ಡೆಯಲ್ಲಿ ತುಲಾಭಾರ ಮಾಡಿರಿ ಎಂದು ತಮ್ಮ ಶಿಷ್ಯವರ್ಗಕ್ಕೆ ಗಂಟು ಬಿದ್ದಿದ್ದಾರೆ. ಹೆದರಿ ಹೋದ ಶಿಷ್ಯರು ಬೊಗಳೂರಿನಿಂದ ಬಿಹಾರಿಗೆ ಪಲಾಯನ ಮಾಡಿದ್ದಾರೆ ಎಂದು ಸುದ್ದಿ.

  ReplyDelete
 2. ತಿಗಳೂರು ಮಹಾ ಸಂಸ್ಥಾನದ ಮಠಾಧೀಶರಾದ ಛೀಛೀಛೀ ಪುಟಗೋಸಿ,ರಣಕರ್ಕಶ ಮಹಾಮಾರಿ,ಮಹಾ ಕೋಪಿಷ್ಟ,ಭಿಕಾರಿ,ರೌಡಿ,ರಾಷ್ಟ್ರೀಯ ಭಯೋತ್ಪಾದಕ, ಅಲೂ ಪ್ರಸಾದ್ ಮಹಾಸ್ವಾಮಿಗಳು ಚಂಡಿ ಬಟ್ಟೆಯಲ್ಲಿ ಇಡೀ ದೇಶವನ್ನು ರೈಲಿನಲ್ಲಿ ಉಚಿತವಾಗಿ ಪ್ರಯಾಣಿಸಿ ಎಲ್ಲರಿಗೂ (ಕಾಂಗ್ರೆಸ್‍ಗೆ ಓಟು ಕೊಟ್ಟ ದೇಶದ ಭಿಕಾರಿ ಮತದಾರರು)ಮೆಟ್ಟಲ್ಲಿ ಹೊಡೆಯಲಿದ್ದಾರೆ.

  ReplyDelete
 3. ಶೀಶೀಶೀ ಸುನಾಥೇಂದ್ರ ತೀರ್ಥ ರೂಪಿಗಳೇ,

  ಶಿಷ್ಯ ಗಡಣವು ಹೆದರಿ ಹೋದದ್ದಲ್ಲ, ಬದಲಾಗಿ ಅಲ್ಲಿ ಬೇಕಾದಷ್ಟು, ಹೊಟ್ಟೆ ತುಂಬುವಷ್ಟು ಬೂಸಾ ಸಿಗುತ್ತದೆ ಎಂದು ತಿಳಿದೇ ಅಲ್ಲಿಗೆ ಪಲಾಯನ ಮಾಡಿದ್ದಾರೆಂತ ನಮಗಾಗದವರು ನಮ್ಮ ಪರವಾಗಿ ಪರಪರನೆ ಮತ್ತು ರಪರಪನೆ ಸ್ಪಷ್ಟನೆ ನೀಡಿದ್ದಾರೆ.

  ReplyDelete
 4. ಗುರುಗಳೇ,
  ಕಾಂಗ್ರೆಸಿಗೆ ಯಾರೂ ಯಾವತ್ತೂ ಓಟು ಕೊಡುವುದಲ್ಲ, ಕೈ ಕೊಡುವುದು ಅಂತ ಹೈಕ-ಮಾಂಡಿನಿಂದ ಸ್ಪಷ್ಟನೆ ಶೀಘ್ರವೇ ಹೊರಬೀಳಲಿದ್ದು, ಕೈಕೊಟ್ಟವರೆಲ್ಲರೂ ಮಂತ್ರಿಗಿರಿಗಾಗಿ ಕಮಲದ ತೆಕ್ಕೆಯೊಳಗೆ ಸೇರಿಕೊಳ್ತಿದ್ದಾರೇಂತ ಖಚಿತವಾಗಿಬಿಟ್ಟಿದೆ.

  ReplyDelete
 5. first ban congress party Neharu Indira Rajiv Sanjay Soniya gandi What Father next Doughter and Son Next Doughter in law What is india ......................... no no i dont like

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post