ಬೊಗಳೆ ರಗಳೆ

header ads

ಇನ್ನು ಮುಂದೆ ಒಳಉಡುಪುಗಳನ್ನೂ ಧರಿಸಬಹುದು!

(ಬೊಗಳೂರು ಬಿಚ್ಚೋಲೆ ಬ್ಯುರೋದಿಂದ)
ಬೊಗಳೂರು, ಜೂ.3- ಇನ್ನು ಯಾವುದೇ ಎಗ್ಗಿಲ್ಲದೆ ಮಂದಿರಗಳಿಗೆ ಪ್ರವೇಶಿಸಬಹುದು ಎಂಬುದು ಈಗ ಖಚಿತವಾಗಿದೆ. ಒಳಉಡುಪುಗಳನ್ನು ಕೂಡ ಧರಿಸಬಹುದು ಎಂದು ತೀರ್ಪು ನೀಡಿದ ಹಿನ್ನೆಲೆಯಲ್ಲಿ ಸಂಪ್ರದಾಯವಾದಿಗಳು ಬೊಗಳೆ ರಗಳೆ ಕಚೇರಿಯೆದುರು ಬಂದು ನಿಟ್ಟುಸಿರುಬಿಟ್ಟಿದ್ದಾರೆ.

ದುಡ್ಡು ಲೆಕ್ಕ ಮಾಡುವಾಗ ಕೆಲವರು ಇದೇ Underwear ಅನ್ನು Overweight ಆಗಿಸುವ ಮೂಲಕ ತಮ್ಮ ಜೇಬನ್ನೂ ಹರಿಯುವಷ್ಟರ ಮಟ್ಟಿಗೆ ತುಂಬಿಸಿಕೊಳ್ಳುತ್ತಿದ್ದರು. ಹೀಗಾಗಿ ದೇವಳದ ಆಡಳಿತವು ಎಲ್ಲರೂ ಎಲ್ಲವನ್ನೂ ಬಿಚ್ಚಿಹಾಕಿ ಹಣ ಲೆಕ್ಕ ಮಾಡಲು ಬರಬೇಕು ಎಂದು ಹೇಳಿತ್ತು. ಅದು... ಅತ್ತ ಇತ್ತ ಅಡ್ಡಾಡುತ್ತಿದ್ದ ಬೊಗಳೂರಿನ ಮಂದಿಗೆ ಇರಿಸುಮುರಿಸಿಗೆ ಕಾರಣವಾದ ಹಿನ್ನೆಲೆಯಲ್ಲಿ ಅನ್ಯಾಯಾಲಯವು ಈ ಕ್ರಮ ಕೈಗೊಂಡಿರುವುದಾಗಿ ಮೂಲಗಳು ವರದ್ದಿ ಮಾಡಿವೆ.

ಒಳಉಡುಪುಗಳನ್ನು ಕೂಡ ಧರಿಸಬಹುದು ಎಂಬ ಈ ತೀರ್ಪಿನಿಂದ ಸಂತಸಗೊಂಡಿರುವ ಬೊಗಳೂರಿನ ಜನತೆ, ಒಳಉಡುಪುಗಳು ಕೂಡ ಧರಿಸಲು ಯೋಗ್ಯವಾದುದು ಎಂದು ಜ್ಞಾನೋದಯ ಮಾಡಿಸಿದ ಪ್ರಕರಣಕ್ಕೆ ಅಭಿನಂದಿಸಿದ್ದಾರೆ.

ಆದರೆ, ಈ ತೀರ್ಪು ಸಿನಿಮಾ ನಟಿಯರಿಗೆ ಅನ್ವಯವಾಗುವುದಿಲ್ಲ ಎಂದು ಬಿಚ್ಚೋಲೆ ನಟೀಮಣಿಯರ ಸಂಘದ ಅಧ್ಯಕ್ಷೆ ಗೌರಮ್ಮ ಅವರು ತುರ್ತು ಪಾನ-ಪತ್ರಿಕಾಗೋಷ್ಠಿ ಕರೆದು ಘೋಷಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

8 ಕಾಮೆಂಟ್‌ಗಳು

  1. Registration- Seminar on the occasion of kannadasaahithya.com 8th year Celebration

    ಪ್ರೀತಿಯ ಅಂತರ್ಜಾಲ ಸ್ನೇಹಿತರೆ,

    ಕನ್ನಡಸಾಹಿತ್ಯ.ಕಾಂ ತನ್ನ ಎಂಟನೇ ವಾರ್ಷಿಕೊತ್ಸವದ ಅಂಗವಾಗಿ ಜೂನ್ ಎಂಟರಂದು ಕ್ರೈಸ್ಟ್ ಕಾಲೇಜಿನಲ್ಲಿ ಒಂದು ದಿನದ ವಿಚಾರ ಸಂಕಿರಣವನ್ನು ಏರ್ಪಡಿಸುತ್ತಿದೆ.
    ವಿಷಯ:
    ಅಂತರ್ಜಾಲದ ಸಂಧರ್ಭದಲ್ಲಿ, ಪ್ರಾದೇಶಿಕ ಭಾಷೆಯಲ್ಲಿ ಸೃಜನಶೀಲತೆ: ಗತಿಸ್ಥಿತಿ ಸವಾಲು.

    ಕಾರ್ಯಕ್ರಮಕ್ಕೆ ಸೀಮಿತ ಆಸನಗಳು ಲಭ್ಯವಿರುವ ಕಾರಣ ಭಾಗವಹಿಸಲು ಆಸಕ್ತಿ ಇರುವವರು ದಯಮಾಡಿ ಮುಂಚಿತವಾಗಿ ಕೆಳಗೆ ಕೊಟ್ಟಿರುವ ಲಿಂಕ್‍ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ.

    http://saadhaara.com/events/index/english

    http://saadhaara.com/events/index/kannada
    ಸಮಾರಂಭದಲ್ಲಿ ಭಾಗವಹಿಸಲು ನೋಂದಾವಣೆ ಕಡ್ಡಾಯ.

    ಉತ್ಸಾಹ ಮತ್ತು ಸಮಯ ಇದ್ದರೆ ವಿಚಾರಸಂಕಿರಣದ ನಂತರ ಅನೌಪಚಾರಿಕವಾಗಿ ಬ್ಲಾಗಿಗಳಿಗೆ ‘ಬ್ಲಾಗೀ ಮಾತುಕತೆ’ ನಡೆಸುವ ಉದ್ದೇಶವೂ ಇದೆ.

    ನೀವೂ ಬನ್ನಿ ಮತ್ತು ಆಸಕ್ತಿಯಿರುವ ನಿಮ್ಮ ಗೆಳೆಯರನ್ನು ಕರೆತನ್ನಿ.

    -ಕನ್ನಡಸಾಹಿತ್ಯ.ಕಾಂ ಬಳಗ

    ಪ್ರತ್ಯುತ್ತರಅಳಿಸಿ
  2. ನಮಸ್ಕಾರ,

    ಬೊಗಳೆ ಓದಿ ಮನಃಪೂರ್ವಕವಾಗಿ ನಕ್ಕು ಬಿಟ್ಟೆ:-) ತುಂಬಾ ಧನ್ಯವಾದಗಳು. ಆಗಾಗ ಬರುತ್ತಿರುವೆ. (ಅಂದಹಾಗೆ ನನ್ನ ಬ್ಲಾಗ್ ಸಕ್ರೀಯವಾಗಿದೆ. ಇದು ಬೊಗಳೆಯಂತೂ ಅಲ್ಲ ;-) )

    ಪ್ರತ್ಯುತ್ತರಅಳಿಸಿ
  3. ಅಯ್ಯೋ ರಾಮ! ಎಂತಹ ಕಾಲ ಬಂದಿತಪ್ಪಾ ದೇವರೇ?

    ನಿನ್ನ ಹತ್ತಿರ ಬರೋವಾಗ್ಲೂ ಬಟ್ಟೆ ಧರಿಸಬೇಕಾ? ಶಾಂತಮ್ಮ ಪಾಪಮ್ಮ!

    ಇಂತಹ ಸನ್ನಿವೇಶ ಯಾರಿಗೂ ಬರಬಾರದಿತ್ತು. ದೇವರಾದ ನಿನಗೇ ಹೀಗೆ ಅಂದ್ರೆ, ನಮ್ಮಂತಹವರ ಪಾಡು ...

    ಯಾರಲ್ಲಿ ಸುತ್ತಲಿ ದಾರ ಕೊಡಿ, ತುಂಬೆ ಗಿಡಕ್ಕೆ ಕಟ್ಟಿ ನೇಣು ಹಾಕಿ ಕೊಳ್ಳುವೆ
    ಇಲ್ಲದೇ ಇದ್ದರೆ ಒಂದು ಚೊಂಬಿನಲ್ಲಿ ನೀರು ತುಂಬಿ ಅದರೊಳಗೆ ಮುಳುಗಿ ಪ್ರಾಣ ಬಿಡುವೆ, ಇಂತಹದ್ದನ್ನು ಈ ಪಾಪಿಕಣ್ಣಿಗಳಿಂದ ನೋಡಲಸಾಧ್ಯ

    ಕಲಿಗಾಲವಯ್ಯಾ ಕಲಿಗಾಲ
    ಬಟ್ಟೆ ಹಾಕಿಯೂ ಮೈ ಕಾಣುವ ಕಾಲ
    ಯಾರ ಬಳಿ ತೋಡಿಕೊಳ್ಳಲಿ ಈ ಜಾಲ
    ನಮ್ಮ ಅಪ್ಪ ಹಾಕಿದ್ದಾರಲ್ಲವೇ ಆ ಆಲ (ಅದಕ್ಕೇ ಜೋತು ಬೀಳುವೆ)

    ಪ್ರತ್ಯುತ್ತರಅಳಿಸಿ
  4. ಅಂತರಂಗ ಸ್ವಚ್ಛವಿದ್ದವನಿಗೆ अंदर-wear ಯಾಕೆ?

    ಪ್ರತ್ಯುತ್ತರಅಳಿಸಿ
  5. ರವೀ ಅವರೆ,
    ಒಳ್ಳೆಯ ಪ್ರಯತ್ನ... ನಮ್ಮದೂ ಬೆಂಬಲವಿದೆ...
    ಧನ್ಯವಾದ

    ಪ್ರತ್ಯುತ್ತರಅಳಿಸಿ
  6. ತೇಜಸ್ವಿನಿ ಅವರೆ,

    ನಿಮಗೂ ಬೊಗಳೆ ಸ್ವಾಗತ...

    ನೀವು ಮನಃಪೂರ್ವಕವಾಗಿ ನಕ್ಕು ಬಿಟ್ಟೀದ್ದೀರಿ ಅಂತ ಹೇಳಿದ್ದನ್ನು ಕೇಳಿ ಆಘಾತವಾಗಿದೆ. ನಕ್ಕು ನಕ್ಕು ಹೊಟ್ಟೆ ಹುಣ್ಣಾಗಿದ್ದರೆ ನಮ್ಮ ಮೇಲೆ ದಯವಿಟ್ಟು ಕೇಸು ಹಾಕಬೇಡಿ. ಈ ರೀತಿಯಾಗದಂತೆ ಆದಷ್ಟು ಪ್ರಯತ್ನಿಸುತ್ತೇವೆ. ಆದ್ರೂ ಬರೋದನ್ನು ಬಿಡಬೇಡಿ...

    ನಿಮ್ಮ ಬ್ಲಾಗು ಓದಲು ಸಿಕ್ಕಾಪಟ್ಟೆ, ಕಂಡಾಬಟ್ಟೆ, ಚೆನ್ನಾಗಿರುವುದರಿಂದ ಲಿಂಕಿಸಿದ್ದೇವೆ.

    ಪ್ರತ್ಯುತ್ತರಅಳಿಸಿ
  7. ಶ್ರೀನಿವಾಸರೆ,

    ಸಿಂಗನಪುರದಿಂದ ಸಿಂಗನಂತಾಗದೆ ಮರಳಿ ಬಂದಿದ್ದೀರಿ. ಆದ್ರೆ ಇದೇನು ರಾಮ ರಾಮ ಅಂತ ಜಪಿಸ್ತಾ ಇದ್ದೀರಿ... ಜತೆಯಲ್ಲೇ ಶಾಂತಮ್ಮ ಮತ್ತು ಪಾಪಮ್ಮನನ್ನೂ ಕರೆತಂದಿದ್ದೀರಿ.

    ಕಲಿಗಾಲವನ್ನು ಓಡಿಸುವ ಪ್ರಯತ್ನ ನಡೆಯುತ್ತಿದೆ. ಶಾಂತರಾಗಿರಿ ಶಾಂತರಾಗಿರಿ...

    ಪ್ರತ್ಯುತ್ತರಅಳಿಸಿ
  8. ಸುನಾಥರೆ,
    ಅಂದರ್ ಯಾವತ್ತೂ ಸುಂದರವಾಗಿರಬೇಕೆಂಬುದು ಹಾಗೆ ಅಂದವರ ಬಯಕೆ.
    ಅಂದರ್ ಇದ್ದದ್ದೆಲ್ಲಾ ಬಾಹರ್ ಬರುವಂತೆ ತುಂಬಿಸಿಟ್ಟರೆ ಇದೇ ಗತಿಯಾಗುತ್ತದೆ ಎಂಬ ಎಚ್ಚರಿಕೆಯೂ ಇಲ್ಲಿದೆ

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D