ಜನತೆಯನ್ನು ಕಂಗೆಡಿಸಿದ ನಿಗೂಢ ಪ್ರಾಣಿಗಳು ಪತ್ತೆಯಾಗಿವೆ ಎಂಬುದು ನಿಮಗೆ ಗೊತ್ತೇ?...

ನಿಮ್ಮಲ್ಲಿ ಕೆಲವರಾದ್ರೂ ಈಗಾಗ್ಲೇ ಅದನ್ನು ನೋಡಿರ್ಬೋದು...

ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿರುವ ಇವೇನು, ಅನ್ಯಗ್ರಹ ಜೀವಿಗಳೇ?

ಗುಂಡ್ಅಣ್ಣ ಮತ್ತು ರಂಅಣ್ಣ ನಡುವಣ ಸಂಭಾಷಣೆಯಿಂದ ತಿಳಿದುಬಂದ ಅಂಶವನ್ನು ಬೊಗಳೆ ರಗಳೆ ಸ್ಟಿಂಗ್ ಬ್ಯುರೋ ಪತ್ತೆ ಹಚ್ಚಿ ನಿಮ್ಮ ಮುಂದಿಡುತ್ತಿದೆ.!!!

ಏನು? ಎತ್ತ... ಎಂಬಿತ್ಯಾದಿ ಕುತೂಹಲವಿದ್ದರೆ ಅದಕ್ಕೆ ಈಗಲೇ ತಣ್ಣೀರು ಹಾಕಿ ಶಮನ ಮಾಡಿಕೊಳ್ಳಿ...

ಅದು ಶೀಘ್ರವೇ ಬೊಗಳೆ ರಗಳೆಯಲ್ಲಿ ಮೂಡಿಬರಲಿದೆಯಾದುದರಿಂದ ಈಗಲೇ ನೀವು ತಣ್ಣೀರು ಹಾಕಿಕೊಳ್ಳದಿದ್ದರೆ ಇಲ್ಲಿ ಪ್ರಕಟವಾದಾಗ ನಿಮ್ಮಲ್ಲಿ ಕುತೂಹಲದ ಬಿಸಿ ಇರಲಾರದು.

ನಿಮ್ಮ ಪ್ರತಿಗಳನ್ನು ಮೊದಲೇ ಕಾದಿರಿಸಿ. ಯಾಕೆಂದರೆ ಈಗಾಗಲೇ ನಾವು ಒಂದೂವರೆ ಪ್ರತಿಯನ್ನು ಮುದ್ರಿಸುತ್ತಿದ್ದೇವೆ. ಈ ಪ್ರಸಾರ ಸಂಖ್ಯೆಯನ್ನು ಎರಡೂವರೆಗೆ ಏರಿಸಬೇಕಿದ್ದರೆ ಇನ್ನೊಂದಾದರೂ ಪ್ರತಿ ಹೆಚ್ಚು ಮುದ್ರಿಸಬೇಕಾಗಬಹುದು. ಇದು ತುಂಬಾ ಕಷ್ಟ...

4 Comments

ಏನಾದ್ರೂ ಹೇಳ್ರಪಾ :-D

 1. ಓಹ್!!! ಆ ಪ್ರಾಣಿಗಳನ್ನೆಲ್ಲಾ ನಾನು ನೋಡಿದ್ದೇನೆ - ಅವುಗಳು ಹೇಗಿವೆ? ಎಲ್ಲಿವೆ? ಎನ್ನುವುದನ್ನು ಯಾರಿಗೂ ಹೇಳುವುದಿಲ್ಲ. ಹಾಗೆ ಹೇಳಿದೆನಾದರೆ, ನಿಮ್ಮ ಒಂದೂವರೆ ಪ್ರತಿಯೂ ನಿಮ್ಮಲ್ಲಿಯೇ ಉಳಿದು ಹೋಗಿ, ನಿರುದ್ಯೋಗಿಗಳಾಗುವಿರಿ - ಅದನ್ನು ಈ ಪಾಪಿ ಕಣ್ಣುಗಳು ನೋಡಲಿಚ್ಛಿಸುವುದಿಲ್ಲ :D

  ReplyDelete
 2. ಏನ್ರೀ ಇದು!! ಬೇಗ್ಬೇಗ ಪ್ರಕಟಿಸ್ರೀ! ಮೊದ್ಲೇ ಚಳಿ, ತಣ್ಣೀರು ಹೊಯ್ಕೊಂಡು ಈಗ ಮೈ ಗಢಗುಡ್ತಾ ಇದೆ.. :(

  ReplyDelete
 3. ಶ್ರೀನಿವಾಸರೆ,

  ನೀವು ಆ ಗುಂಪಿನಿಂದಲೇ ತಪ್ಪಿಸಿಕೊಂಡವರೋ ಎಂಬ ಆಮ ಶಂಕೆ ನಮಗೆ ಕಾಣಿಸಿಕೊಂಡಿದೆ. ಉದ್ಯೋಗರಹಿತರಾದ ನಮಗೆ ನೀವು ನಿರುದ್ಯೋಗ ನೀಡುವಿರಿ ಅಂತ ತಿಳಿದು ಸಂತೋಷವಾಗಿದೆ. ನಮೋ ವೆಂಕಟೇಶಾ... ನಮೋ ಶ್ರೀನಿವಾಸಾ... :)

  ReplyDelete
 4. ಸುಶ್ರುತರೇ,

  ಓಹ್... ಚಳಿ ಅಂತ ನಮಗೆ ಗೊತ್ತೇ ಇರಲಿಲ್ಲ...ಯಾಕೆಂದ್ರೆ ನಾವಿರೋದು ಚಳಿ ಸೋಕದ ನಾಡಿನಲ್ಲಿ. ಈಗ ಗೊತ್ತಾಗಿದೆ. ಹಾಗಾಗಿ ಇನ್ನೊಂದು ಕೆಲವೇ ತಿಂಗಳಲ್ಲಿ ನಿಮ್ಮ ಗೀಜರನ್ನು ರಿಪೇರಿ ಮಾಡಿಸುತ್ತೇವೆ. ನೀವು ಮಾತ್ರ ಹೆದರದೆ, ಬೆದರದೆ, ಬೆಚ್ಚದೆ, ಅಳುಕದೆ "ನೀರೀ"ಕ್ಷಿಸುತ್ತಾ ಇರಿ.

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post