ಬೊಗಳೆ ರಗಳೆಯಲ್ಲಿ ದಿಢೀರ್ ಆಗಿ ಜಾಹೀರಾತು ಕಾಣಿಸಿಕೊಂಡ ತಕ್ಷಣವೇ ಈಗಾಗಲೇ ಬೆದರಿಕೆಗಳು ಬರತೊಡಗಿವೆ. ನಾವು ಪ್ರಾಣಿಯೊಂದರ ನಿಗೂಢತೆ ಬಯಲು ಮಾಡುತ್ತೇವೆ ಅಂತ ಮಾತು ಕೊಟ್ಟಾಗಿದೆ.

ಆದರೆ ಗಮಾರಸ್ವಾಮಿಯಂತೆ ಆಗದಿರಲು ಶ(ತ)ಪಥ ಮಾಡಿರುವ ನಾವು, ಎಷ್ಟೇ ಬೆದರಿಕೆ ಬಂದರೂ, ಎಷ್ಟೇ ಕುರ್ಚಿಯ ಆಮಿಷವೊಡ್ಡಿದರೂ, ಮಗಾ... ಕುರ್ಚಿ ಬಿಡಬೇಡ ಅಂತ ಅಪ್ಪನೇ ಹೇಳುತ್ತಲೇ ಇದ್ದರೂ ಜಗ್ಗದಿರಲು ನಿರ್ಧರಿಸಿದ್ದೇವೆ ಮತ್ತು (ಇಂಥ) ಪಿತೃವಾಕ್ಯ ಪರಿಪಾಲಕರೆಂಬ ಕೆಟ್ಟ ಹೆಸರು ಬಾರದಂತಿರಲು ಎಚ್ಚರಿಕೆ ವಹಿಸುತ್ತಿದ್ದೇವೆ.

ಹೇಗಾದರೂ ಮಾಡಿ, ವಚನ ಭ್ರಷ್ಟ ಮತ್ತು ವಿಶ್ವಾಸದ್ರೋಹ ಎಂಬ ಎರಡು ಪದವಿಗಳು ನಮಗೆ ಪ್ರದಾನವಾಗುವುದನ್ನು ತಪ್ಪಿಸಿಕೊಳ್ಳಲು ತೀರ್ಮಾನಿಸಿರುವ ನಾವು, ಇದೇ ಕಾರಣಕ್ಕೆ ಎರಡು ದಿನ ಭೂ(ತ)ಗತರಾಗಿದ್ದೆವು ಎಂದು ಸ್ಪಷ್ಟಪಡಿಸಲಾಗುತ್ತದೆ.

ಆದುದರಿಂದ ಖಂಡಿತವಾಗಿಯೂ ಈ ನಿಗೂಢ ಪ್ರಾಣಿಗಳ ಕುರಿತ ವಿವರವನ್ನು ಚೂಯಿಂಗ್ ಗಮ್ಮಿನಂತೆ ಬಯಲಿಗೆ ಎಳೆಯುತ್ತೇವೆ. ನೀವು ನಿಮ್ಮ ಮುಂದಿನ ಪ್ರತಿಗಳಿಗೆ ಕೋರಿಕೆ ಸಲ್ಲಿಸುವುದಕ್ಕೆ ಯಾವುದೇ ಅಡ್ಡಿ ಇಲ್ಲ. ನಿರೀಕ್ಷಿಸಲು ಮರೆಯಿರಿ, ಮರೆತು ನಿರಾಶರಾಗಿ!!!!

2 Comments

ಏನಾದ್ರೂ ಹೇಳ್ರಪಾ :-D

 1. ಪಿತೃ ಅಂದ್ರೆ ಯಾರು? ಶ್ರಾದ್ಧ ಮಾಡುವಾಗ ಊಟಕ್ಕೆ ಕುಳಿತುಕೊಳ್ಳುವ ಬ್ರಾಹ್ಮಣರಾ?

  ಈ ಮಾತುಗಳನ್ನು ಯಾರು, ಯಾವಾಗ, ಎಲ್ಲಿ, ಹೇಗೆ, ಯಾಕೆ, ಎಂದು ಹೇಳಿದರು ಎಂಬುದನ್ನು ಪಿಸುಮಾತಿನಲ್ಲಿ ನನ್ನ ಕಿವಿಯಲ್ಲಿ ಉಸುರಿರಿ, ಇಲ್ಲದಿರೆ ನಿಮ್ಮ ತಲೆ ಸಹಸ್ರ ಹೋಳಾದೀತು!!! [;)]

  ಈ ಪಿಸುಮಾತನ್ನು ಕೇಳಲು ನಾನು ನಿಮ್ಮ ಮನೆಗೆ ಸದ್ಯದಲ್ಲಿಯೇ ಬರುತ್ತಿದ್ದೇನೆ, ಕಾದು ನೋಡಿರಿ, ನೋಡಿ ನಿರಾಶರಾಗಿರಿ, ಕ್ಷಮಿಸಿ ನಿರಾಶರಾಗದಿರಿ

  ReplyDelete
 2. ಶ್ರೀನಿವಾಸರೆ,

  ನೀವು ನಿರಾಶೆ ಮಾಡ್ತಿರೋದು ನೋಡಿ ತುಂಬಾ ಖುಷಿಯಾಗ್ಬಿಟ್ಟಿದೆ. ನಿರಾಶ ಮತ್ತು ರಾಗಿಯನ್ನು ಒಟ್ಟಿಗೇ ಕಳಿಸಿ.

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post