ಬೊಗಳೆ ರಗಳೆ

header ads

ಕುಡಿಯದೆಯೂ ಸುಳ್ಳು ಹೇಳಬಲ್ಲೆವು: ಗುಲಾಮನಬೀಜಾದ್

(ಬೊಗಳೂರು ಅರಾಜಕ ಬ್ಯುರೋದಿಂದ)
ಬೊಗಳೂರು, ಮಾ. 27- ನಾವು ರಾಜಕಾರಣಿಗಳು ಕುಡಿಯದೆಯೂ ಸುಳ್ಳು ಹೇಳಬಲ್ಲೆವು ಎಂಬುದನ್ನು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಗುಲಾಮನ ಬೀಜಾದ್ ಅವರು ಸ್ಪಷ್ಟಪಡಿಸಿದ್ದಾರೆ.

ಎಲ್ಲರೂ ಕುಡಿದು ಸುಳ್ಳು ಹೇಳುತ್ತಾರೆಂಬುದನ್ನು ನಾನು ಒಪ್ಪುವುದಿಲ್ಲ. ಯಾಕೆಂದರೆ ಕುಡಿದವರು ಹೆಚ್ಚಾಗಿ ಸತ್ಯವನ್ನೇ ತಮಗರಿವಿಲ್ಲದಂತೆಯೇ ಹೇಳುತ್ತಾರೆ. ಹಾಗಾಗಿ ನಾವು ಕುಡಿದರೆ ನಮಗೇ ನಷ್ಟ ಎಂದು ಅವರು ತಿಳಿಸಿದ್ದಾರೆ.

ಸುಳ್ಳು ಹೇಳಬೇಕಿದ್ದರೆ ಕುಡಿಯಲೇಬೇಕೆಂದಿಲ್ಲ. ನಾವೆಲ್ಲರೂ ಕುಡಿಯದೆಯೇ ಸುಳ್ಳು ಹೇಳುವುದಿಲ್ಲವೇ ಎಂದು ಪ್ರಶ್ನಿಸಿರುವ ಅವರು, ನಾನೆಂದಿಗೂ ಜೀವನದಲ್ಲಿ ಇದುವರೆಗೆ ಸುಳ್ಳು ಹೇಳಲೇ ಇಲ್ಲ, ಸುಳ್ಳು ಹೇಳುವುದೂ ಇಲ್ಲ ಎಂದು ಕುಡಿಯದೆಯೇ ಹೇಳುತ್ತಿರುವುದಾಗಿ ಒತ್ತಿ ಒತ್ತಿ ನುಡಿದಿದ್ದಾರೆ.

ಅಂತೆಯೇ, ಜನರು ನನಗೆ ಓಟು ಹಾಕದಿದ್ದರೂ ಪರವಾಗಿಲ್ಲ, ರಾಜ್ಯದ ಅಭಿವೃದ್ಧಿ ಮಾಡುತ್ತಲೇ ಇರುತ್ತೇನೆ ಎಂದು ಕೂಡ ಅವರು ಕುಡಿಯದೆಯೇ ಹೇಳಿದ್ದಾರೆ.

(ಮನವಿ : ನಿಮ್ಮ ಬ್ಲಾಗು ಅಥವಾ ಮಿತ್ರರ ಬ್ಲಾಗು ಈ ಕೆಳಗಿರುವ ಕನ್ನಡ ಬ್ಲಾಗೋತ್ತಮರು ಪಟ್ಟಿಯಲ್ಲಿ ಇದೆಯೇ? ಇಲ್ಲವಾದಲ್ಲಿ, ಅದನ್ನು ಲಿಂಕಿಸುವ ಸಮ್ಮತಿಯೊಂದಿಗೆ ದಯವಿಟ್ಟು ಅದರ ಯುಆರ್ಎಲ್ ಮತ್ತು ಶೀರ್ಷಿಕೆ ಸಹಿತ asatya ಡಾಟ್ anveshi @ ಜಿಮೇಲ್ ಡಾಟ್ ಕಾಮ್ ಗೆ ತಿಳಿಸಿಬಿಡಿ.)

ಕಾಮೆಂಟ್‌‌ ಪೋಸ್ಟ್‌ ಮಾಡಿ

10 ಕಾಮೆಂಟ್‌ಗಳು

 1. ಗುನಬೀಜಾ ಹೇಳಿರುವುದು ಕೇಳಿ ಒಂದು ಕ್ಷಣ ಸಾಕ್ಷಾತ್ ಬೊಗಳೆರಗಳೆಯವರೇ ಹೇಳಿದ್ದು ಅನಿಸಿತು.ಗುನಬೀಜಾ ಯಾವಾಗಲಾದರೂ ಬೊಗಳೆ ಕಚೇರಿಗೆ ಬಂದಿದ್ದು ಉಂಟ ಅಥವಾ ಗನ್‍ಗಳ ಮತ್ತಿನಲ್ಲಿ ಮುಳುಗಿರುವ ಕಾಶ್ಮೀರಿಗಳಿಗೆ ಸುಳ್ಳು-ಸತ್ಯಗಳ ನಡುವೆ ಅಂತರ ಗೊತ್ತಿಲ್ಲಾವೆಂದು ಈ ರೀತಿ ಹೇಳಿರಬಹುದೇ..

  ಅಂದಾಗೆ ಗೇಟ್ ಪಾಸ್ ಕಥನಕದಲ್ಲಿ ಎಲ್ಲಾ ಕಡೆಯಿಂದ ಪಾಸ್ ತಗೊಂಡ ಬೊ.ರ ಅವರನ್ನು ಓದುಗರು ಶಾಲು ಹೊದಿಸಿ ಸನ್ಮಾಸಿದರಂತೆ..ಹೌದೇ ??

  ಪ್ರತ್ಯುತ್ತರಅಳಿಸಿ
 2. ಗುಲಾಮನ ಬೀಜ ದ ಮಾತಿಗೆ ನೀವೇನೂ ಬೆಲೆ ಕೊಡ ಬೇಕಾಗಿಲ್ಲ.

  ಪ್ರತ್ಯುತ್ತರಅಳಿಸಿ
 3. ಕುಡಿದವರೆಂದಿಗೂ ಸುಳ್ಳು ಹೇಳೋಲ್ಲ. ಕುಕ್ಡಿಯದವರೇ ಸುಳ್ಳು ಹೇಳೋದು, ಏಕೆಂದರೆ ಅವರಿಗೆ ಮನದ ಮೇಲೆ ಮತ್ತು ಚಿಂತನೆಗಳ ಮೇಲೆ ಹತೋಟಿ ಇರುತ್ತದೆ. ಸ್ವಾನುಭವವೇ ಅಂತ ಕೇಳ್ಬೇಡಿ, ನನ್ನ ಆಪ್ತ ಸ್ನೇಹಿತರು ಹೇಳಿದ್ದು.

  ಅದ್ಸರಿ ಬಹಳ ದಿನಗಳಿಂದ ತಪ್ಪಿಸಿಕೊಂಡಿದ್ರಲ್ಲ, ಎಲ್ಲಿ ಹೋಗಿದ್ರಿ? ಪೊಲೀಸರು ನಿಮ್ಮ ಹಿಂದೆ ಬಿದ್ದಿದ್ದರಂತೆ ಹೌದಾ?

  ಪ್ರತ್ಯುತ್ತರಅಳಿಸಿ
 4. ಗುಲಾಬನಬೀಜಾದರ ಮಾತುಗಳನ್ನು ಅಕ್ಷರ(ಒತ್ತಕ್ಷರ)ಸಹ ಸರಿ ಎಂದು ಖಡಾಖಂಡಿತವಾಗಿ ಘೋಷಿಸಿರುವ ಮಾಜಿ ಪ್ರಧಾನಿ, ಹಾಲಿ ಮಹಾಪಿತ ವೇದೇಗೌಡರು ನಾನು ಜೀವನದಲ್ಲೇ ಒಂದು ತೊಟ್ಟು ಕುಡಿದಿಲ್ಲ ಆದರೂ ಸರಕಾರ ಉರುಳಿಸಿ ಸರಕಾರ ಏಲಿಸುವಂಥ ಸುಳ್ಳನ್ನು ಹೇಳಿಲ್ಲವಾ ಎಂದು ಸವಾಲೆಸೆದಿದ್ದು. ನನ್ನ ಸಾಧನೆಯ ಮುಂದೆ ಗುಲಾಮರದ್ದು ಏನೂ ಇಲ್ಲ ಎಂಬುದಾಗಿ ಖಾಸಗಿ ಸಂದರ್ಶನದಲ್ಲಿ ಹೇಳಿದ್ದಾರಂತೆ.

  ಪ್ರತ್ಯುತ್ತರಅಳಿಸಿ
 5. shiv,
  hoonri mumbiayalli asatyigaLu kudiyade suLLu helta irodru noDi avarige shalu sanman maadidru aMta blog lokda tuMba gusu-gusu habbide..
  satyigaLe-
  mumbaige yaake hogiddu heLi....ella aMdre gate pass aMta shiv kanavarasita idare..

  ಪ್ರತ್ಯುತ್ತರಅಳಿಸಿ
 6. @ ಶಿವ್
  ಗೇಟ್ ಪಾಸ್ ಕಥೆಯಲ್ಲಿ ಬೊ.ರ. ಅವರನ್ನು ಅವ-ಮಾನಿಸಿದ್ದು ಹೌದಾದರೂ ಶಾಲು ಮಾತ್ರ ಹಾಕಿದ್ರು, "ಹಾರ" ಹಾಕಿಲ್ಲ ಕಣ್ರೀ...!!!!

  ಪ್ರತ್ಯುತ್ತರಅಳಿಸಿ
 7. ಪಬ್ಬಿಗರೇ,

  ನೀವು ಗುಲಾಮನಬೀಜರನ್ನು ಬೆಂಬಲಿಸುತ್ತಿದ್ದೀರಾ ಅಥವಾ ಪಬ್ ನಲ್ಲಿರುವವರೆಲ್ಲರನ್ನು ನೋಡಿ ನೋಡಿ ಅನುಭವದಿಂದ ಈ ಮಾತು ಹೇಳುತ್ತಿದ್ದೀರಾ?

  ಪ್ರತ್ಯುತ್ತರಅಳಿಸಿ
 8. ಶ್ರೀನಿವಾಸರೆ,
  ನಿಮ್ಮ ಸ್ವಾನುಭವ ಅಂತ ನಮಗೆ ತಿಳಿದಿದ್ದರೂ ನಾವು ನಿಮ್ಮನ್ನು ಮತ್ತೆ ಮತ್ತೆ ಈ ಕುರಿತು ಪ್ರಶ್ನಿಸಲು ಹೋಗುವುದಿಲ್ಲ!!!

  ಆಮೇಲೆ,
  ಪೊಲೀಸರು ನಮ್ಮ ಹಿಂದೆ ಬೀಳುವುದಿರಲಿ, ನಾವೇ ಅವರ ಹಿಂದೆ ಬಿದ್ದುಬಿಟ್ಟಿದ್ದೆವು!

  ಪ್ರತ್ಯುತ್ತರಅಳಿಸಿ
 9. ಸುಪ್ರೀತರೆ,
  ನಿಮ್ಮ ಖಾಸಗಿ ಸಂದರ್ಶನದ ವರದಿಯು ತುಂಬಾ ಚೆನ್ನಾಗಿ, ಹಾಸ್ಯಾಸ್ಪದವಾಗಿ ಮೂಡಿಬಂದಿದೆ.
  ಮಾಜಿ ನಿಧಾನಿಯವರ ಪ್ರಕಾರ ಹೊಸ (ತ)ಗಾದೆ "ಮುದ್ದೆ ತಿಂದವರು ಸಾರು ಕುಡಿಯಲೇಬೇಕು"!

  ಪ್ರತ್ಯುತ್ತರಅಳಿಸಿ
 10. ಮಹಾಂತೇಶರೆ,
  ಮುಂಬಯಿಯಲ್ಲಿ ನಮಗೆ ಮಾಡುವಂಥದ್ದು ಏನೂ ಇಲ್ಲ.... ಅಲ್ಲಿ ಬೇಕಾದಷ್ಟು ಮಂದಿ ಜಗತ್ತಿನ ಕೆಳಗೆ (ಅಂದ್ರೆ Under world) ಏನೆಲ್ಲಾ ಮಾಡ್ತಾ ಇದ್ದಾರಲ್ಲ... ಅವರೆಲ್ಲಾ ಇರೋವಾಗ ನಮಗೇನೂ ಕೆಲಸ ಇಲ್ಲ....

  ಆದ್ರೆ... ಹಾರ ಹಾಕಿ, ತಲೆಯ ಸಮೀಪ ದೀಪ ಇಟ್ಟು ಸನ್ಮಾನ ಮಾಡಿದ್ದು ನಮಗಲ್ಲ, ಭಾರತದ ಕ್ರಿಕೆಟ್ ತಂಡಕ್ಕೆ!!!!

  ಇನ್ನೊಂದು ವಿಷಯ ಅಂದ್ರೆ, ಶಿವ್ ಅವರಿಗೆ ಕನವರಿಸಲು ಬೇರೆಯೇ ಆಪ್ತ ವಿಷಯ ಇದೆ!!!

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D