ಬೊಗಳೆ ರಗಳೆ

header ads

ನಮಗಿನ್ನು ಬರ್ಮುಡಾ ಬೇಡ : ಟೀಂ ಇಂಡಿಯಾ

(ಬೊಗಳೂರು ಜಾಹೀರಾತು ಬ್ಯುರೋದಿಂದ)
ಬೊಗಳೂರು, ಮಾ. 26- ಭಾರತೀಯ ಕ್ರಿಕೆಟಿಗರು ಇನ್ನು ಮುಂದೆ ಪ್ರಾಕ್ಟೀಸ್ ವೇಳೆ ಬರ್ಮುಡಾ ತೊಡದಿರಲು ಪಣ ತೊಟ್ಟಿದ್ದಾರೆ.

ತಾವು ಬರ್ಮುಡಾ ವಿರುದ್ಧ ವಿಶ್ವದಾಖಲೆಯ ಬ್ಯಾಟಿಂಗ್ ಪ್ರದರ್ಶಿಸಿ, ಈ ಕ್ರಿಕೆಟ್ ಶಿಶುಗಳಿಗೆ ಉತ್ತಮವಾಗಿ ಬೌಲಿಂಗ್ ಪ್ರಾಕ್ಟೀಸ್ ಮಾಡಿಸಿದ್ದರೂ, ಅವರು ಅಷ್ಟು ಸಣ್ಣ ಬಾಂಗ್ಲಾ ದೇಶದೆದುರು ಬರ್ಮುಡಾಕ್ಕಿಂತಲೂ ಕಿರಿದಾದ ಚಡ್ಡಿ ತೊಟ್ಟು ಹೊರ ನಡೆದಿದ್ದು, ಟೀಂ ಇಂಡಿಯಾವನ್ನು ಮೇಲಕ್ಕೇರಿಸಲು ವಿಫಲವಾಗಿರುವ ಆಕ್ರೋಶವೇ ಇದಕ್ಕೆ ಕಾರಣ.

ಹೇಗೆ ಬೌಲಿಂಗ್ ಮಾಡಬೇಕು ಎಂದು ನಾವು ಬರ್ಮುಡಾಕ್ಕೆ ತರಬೇತಿ ಕೊಟ್ಟಿದ್ದೆವು. ಆದರೆ ನಮ್ಮನ್ನೂ ಸೋಲಿಸುವಷ್ಟು ದುರ್ಬಲವಾಗಿರುವ ಬಾಂಗ್ಲಾ ವಿರುದ್ಧ ಗೆಲ್ಲಲು ಬರ್ಮುಡಾಕ್ಕೇನುನು ಧಾಡಿ ಎಂದು ಪ್ರಶ್ನಿಸಿರುವ ಭಾರತೀಯ ಕ್ರಿಕೆಟಿಗರು, ಇಂಥ ಬರ್ಮುಡಾಗಳಿಗೆಲ್ಲಾ ಕ್ರಿಕೆಟ್ ಕಲಿಸುವುದೇ ವ್ಯರ್ಥ. ಬರ್ಮುಡಾದಲ್ಲಿ ಕ್ರಿಕೆಟ್ ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ಬರ್ಮುಡಾದವರಿಗೆ ಕ್ರಿಕೆಟ್ ಆಡುವುದು ಹೇಗೆಂಬುದೇ ಗೊತ್ತಿಲ್ಲ. ಎಷ್ಟು ಕಲಿಸಿದರೂ ಕಲಿತುಕೊಳ್ಳುವುದಿಲ್ಲ. ಥತ್...!!! ಎಂಥ useless fellows!!! ಇವರು ಅಯೋಗ್ಯ ಕ್ರಿಕೆಟಿಗರು ಎಂದು ದೂರಿರುವ ಭಾರತೀಯ ಕ್ರಕೆಟಿಗರು, ನಿಮ್ಮ ದೇಶಕ್ಕೆ ಹೋಗಿ ನೀವು ಹೇಗೆ ಮುಖ ತೋರಿಸುತ್ತೀರಿ ಎಂಬುದನ್ನು (ಒಂದು ಕೈ) ನೋಡುತ್ತೇವೆ, ಯಾವ ರೀತಿಯ ಹಾರ ನಿಮಗೆ ಕಾದಿದೆ ಎಂಬುದು ನಿಮಗೆ ಗೊತ್ತಿದೆಯೇ ಎಂದು ಬರ್ಮುಡಾ ಆಟಗಾರರನ್ನು ಪ್ರಶ್ನಿಸಿದ್ದಾರೆ.

ಅಲ್ಲದೆ ನಿಮ್ಮ ರಾಷ್ಟ್ರದಲ್ಲಿ ಎಷ್ಟು ಜೀವಗಳ ಸಾವಿಗೆ ಕಾರಣರಾಗಿದ್ದೀರಿ ಎಂದು ಕೂಡ ಬರ್ಮುಡಿಗರನ್ನು ಪ್ರಶ್ನಿಸಿದ್ದಾರೆ.

ಇನ್ನು ನೀವು ಹೇಗೆ ಜೀವನ ಸಾಗಿಸುತ್ತೀರಿ ಎಂದು ಬರ್ಮುಡಾ ಕ್ರಿಕೆಟಿಗರನ್ನು ಪ್ರಶ್ನಿಸಿರುವ ಟೀಂ ಇಂಡಿಯಾ, ನಿಮಗೆ ಇನ್ನು ಯಾವುದೇ ಪ್ರಾಯೋಜಕರು ಸಿಗುವುದಿಲ್ಲ. ನಿಮ್ಮ ಮೇಲೆ ಹಣ ಹೂಡಿದ್ದ ಎಲ್ಲರೂ ಸಾಕಷ್ಟು ನಷ್ಟ ಮಾಡಿಕೊಂಡಿದ್ದಾರೆ.... ಇನ್ನು ಮುಂದೆ ನಿಮಗೆ ಜಾಹೀರಾತು ದೊರೆಯುವುದೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.

ಅಲ್ಲದೆ, ನಿಮ್ಮ ರಾಷ್ಟ್ರಕ್ಕೆ ವಾಪಸಾಗುವಾಗ ಒಂದೋ ಹೆಲ್ಮೆಟ್ ತೊಟ್ಟು ತೆರಳಿ, ಇಲ್ಲವೇ ಬರ್ಮುಡಾ ತೆಗೆದು ಬುರ್ಖಾ ಹಾಕಿಕೊಂಡು ತೆರಳಿ ಎಂಬ ಸಲಹೆಯನ್ನೂ ಟೀಂ ಇಂಡಿಯಾವು ಬರ್ಮುಡಾ ಕ್ರಿಕೆಟಿಗರಿಗೆ ನೀಡಿದೆ.

(ಮನವಿ : ನಿಮ್ಮ ಬ್ಲಾಗು ಅಥವಾ ಮಿತ್ರರ ಬ್ಲಾಗು ಈ ಕೆಳಗಿರುವ ಕನ್ನಡ ಬ್ಲಾಗೋತ್ತಮರು ಪಟ್ಟಿಯಲ್ಲಿ ಇದೆಯೇ? ಇಲ್ಲವಾದಲ್ಲಿ, ಅದನ್ನು ಲಿಂಕಿಸುವ ಸಮ್ಮತಿಯೊಂದಿಗೆ ದಯವಿಟ್ಟು ಅದರ ಯುಆರ್ಎಲ್ ಮತ್ತು ಶೀರ್ಷಿಕೆ ಸಹಿತ asatya ಡಾಟ್ anveshi @ ಜಿಮೇಲ್ ಡಾಟ್ ಕಾಮ್ ಗೆ ತಿಳಿಸಿಬಿಡಿ.)

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

 1. ಅಸತ್ಯಿಗಳೇ,

  ಈ ಒಂದು ಸಂದರ್ಭದಲ್ಲಿ ನಮ್ಮ ಭಾರತೀಯ ಕ್ರಿಕೆಟಿಗರನ್ನು ಜಮೈಕದಿಂದ ಬರ್ಮುಡಾಕ್ಕೆ ರವಾನಿಸಿ ಅಲ್ಲೇ ಇದ್ದು ಕ್ರಿಕೆಟ್ ಅಭಿವೃದ್ದಿ ಮಾಡಿದರೆ ಅವರ ಹೆಸರು ಅಜರಾಮರವಾಗಿರುತ್ತೆ.
  ಅವರು ಭಾರತಕ್ಕೆ ಬರಲೇ ಇಲ್ಲವೆಂದರೆ ಹಾರ-ಬುರ್ಕಾ-ಚಪ್ಪಲ್ಗಳ ಅವಶ್ಯಕತೆಯಾದರು ಎನು?

  ಅಂದಾಗೆ ಅಸತ್ಯಿಗಳಿಗೆ ಚಪ್ಪಲ್‍ರಂತೆ ಗೇಟ್‍ಪಾಸ್ ಕೊಡಬೇಕೆಂದು ಒಂದು ಅಗ್ರಹ ನಮ್ಮ ಪಾತರಗಿತ್ತಿಯ ಕಾಮೆಂಟೋಂದರಲ್ಲಿ ಇತ್ತೀಚಿಗೆ ಬಂದಿದೆ :)

  ಪ್ರತ್ಯುತ್ತರಅಳಿಸಿ
 2. ಓಯ್, ಶಿವು! ಅನ್ಯಾಯ ಕಣಪ್ಪ!! ನಿದ್ದೆ ಮಂಪರಿನಂತೆ ಆಕಳಿಸುತ್ತಿದ್ದವರಿಗೆ ಗೇಟ್ ಪಾಸ್ ಕೊಡಿ ಅಂತ ಕೇಳಿಕೊಂಡಿದ್ದನ್ನು, ಗೇಟ್, ಕಿಟಿಕಿ, ಬಾಗಿಲು... ಎಲ್ಲ ಪಾಸ್ ಕೊಡೋಣ ಅಂತ ಪಾಸ್ ಮಾಡಿ, ಇಲ್ಲಿ ಬಂದು ಹೀಗೆ ದೂರು ಕೊಡುತ್ತಿರೋದು.... ತೀರಾ ಅನ್ಯಾಯ!!!

  ಭಾಗವತರು ನನ್ನನ್ನ ಅವರ ಕುಂದಗನ್ನಡ ಪಾಠಗಳಿಗೆ inspector ಅಂತ ಹೇಳಿದಾಗಿನಿಂದ ಯಾರು ಸರಿಯಾಗಿ ಪಾಠ ಕೇಳ್ತಿದ್ದಾರೆ, ಯಾರು ನಿದ್ದೆ ಮಾಡ್ತಿದ್ದಾರೆ ಅಂತ ಕಣ್ಣಿಡುವ ಅಭ್ಯಾಸ ಆಗಿದೆ. ಅದಕ್ಕೇ ಆssssss ಅಂತ ಆಕಳಿಸುತ್ತಿದ್ದ ಅನ್ವೇಷಿಗಳಿಗೆ ಗೇಟ್ ಪಾಸ್ ಅಂತ ಹೇಳಿದ್ದು. ಇದರಲ್ಲೇನೋ ಮೋಸ ಇದೆ, ಸರಿಯಾದ ತನಿಖೆ ನಡೀಬೇಕು....
  ಇಂತಿ
  ನೋವು ಮರೆತು ನಗುವವಳು.

  ಪ್ರತ್ಯುತ್ತರಅಳಿಸಿ
 3. ಶಿವ್ ಅವರೆ,
  ನೀವು ಹೇಳಿದ್ದು ನೋಡಿದ್ರೆ... ಇನ್ನು ಮುಂದೆ ಭಾರತದಲ್ಲಿ ಚಪ್ಪಲಿ ಮತ್ತು ಹಾರಗಳಿಗೆ ಬೇಡಿಕೆ ಕಡಿಮೆಯಾಗಿ, ಬ್ಯುಸಿನೆಸ್ ತೀವ್ರ ಕುಸಿತವಾಗುವ ಲಕ್ಷಣಗಳು ಕಾಣಿಸುತ್ತಿವೆ.

  ಪ್ರತ್ಯುತ್ತರಅಳಿಸಿ
 4. ಗೇಟ್ ಪಾಸ್ ನೀಡಲು ಹೇಳಿ ನೋವು ಮರೆತು ಗಹಗಹಿಸಿ ಅಟ್ಟಹಾಸಗೈಯುತ್ತಿರುವ ಸುಪ್ತದೀಪ್ತಿಯವರೆ,

  ಮೊದಲನೆಯದಾಗಿ, ನಿಮಗಾದ ಅನ್ಯಾಯಕ್ಕೆ ನಮ್ಮ ಬೆಂಬಲವಿದೆ!!!

  ನೀವು "ಭಾಗವತರು, ನಿದ್ದೆ" ಅಂತೆಲ್ಲಾ ಹೇಳುತ್ತಿದ್ದರೆ ಯಕ್ಷಗಾನದ ಮಂಪರಿನಲ್ಲಿದ್ದೀರಿ ಅನ್ನುವುದು ದೃಢವಾಗುತ್ತಿದೆ. ಹಾಗಾಗಿ ಬಹುಶಃ ನೀವು ಅನ್ವೇಷಿಗೆ ಗೌರವ ಪಾಸ್ (ರೌರವ ಪಾಸ್???) ಅಂತ ಅಂದಿದ್ದು, ಮಂಪರಿನಲ್ಲಿ ಗೇಟ್ ಪಾಸ್ ಅಂತ ತಪ್ಪಾಗಿರಬಹುದು ಅಂತ ಸಮಾಧಾನಿಸಿಕೊಳ್ಳುತ್ತಿದ್ದೇವೆ. ಸರಿಯಾದ ತನಿಖೆಗಾಗಿ ನಿಮ್ಮನ್ನು ಮಂಪರು ಪರೀಕ್ಷೆಗೆ ಒಳಪಡಿಸಲಾಗುತ್ತದೆ.

  ಪ್ರತ್ಯುತ್ತರಅಳಿಸಿ
 5. ಜಾನೆ ಮಾರಾಯ್ರೆ, ಉಂದು ವಾ ಊರುದೊ ಪಂಚಾತಿಗೆ. ಓಳು ಉಳ್ಳರ್ ನಿಂಕ್ಳು? ಜಾದೊ ಕತೆ? ಯಕ್ಷಗಾನಂತೊ ನೆನಪು ಉಂಡು, ಅಂದ್. ಮಂಪರ್? ಅವುಳು ಪಗೆಲ್, ಮೂಳು ರಾತ್ರೆ; ಅಂಚ ಮಂಪರ್ ಆಪುಣು, ಆಡೆ ಊರುಗ್ ಬನ್ನಗ.... ಪರೀಕ್ಷೆ ಅಂಪೆರೆ ನಿಂಕುಳೇ ಈಡೆ ಬರ್ಪರಾ, ಎಂಕುಳು ಆಡೆಗೇ ಬರೊಡಾ?

  ಪ್ರತ್ಯುತ್ತರಅಳಿಸಿ
 6. ಸುಪ್ತದೀಪ್ತಿ ಅವರೆ,
  ಬಲೆ ಬಲೆ... ಇಂಕ್ಳು ಸಾನ್ ಜೋಸ್ ತ್ತು ರಾತೊಂದು ಬನ್ನಗ ಚೆನ್ನೈಡೇ ಜತ್ತ್ ತ್ ಬಲೆ...

  ಮೂಳೇ ಮಂಪರು ಪರೀಕ್ಷೆ ಅಂಪುಗ. :)

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D