(ಬೊಗಳೂರು ರಾಜಕೀಯ ಬ್ಯುರೋದಿಂದ)
ಬೊಗಳೂರು, ಮಾ.6- ಬಿಜೆಪಿ ಅಭ್ಯರ್ಥಿಯೊಬ್ಬನ ಕೈ ಕತ್ತರಿಸಿರುವುದಾಗಿ ಇಲ್ಲಿ ವರದಿಯಾಗಿರುವುದನ್ನು ಎನ್‌ಸಿಪಿ ಕಾರ್ಯಕರ್ತರು ನಿರಾಕರಿಸಿದ್ದಾರೆ ಮಾತ್ರವಲ್ಲದೆ ಆಕ್ಷೇಪವನ್ನೂ ವ್ಯಕ್ತಪಡಿಸಿದ್ದಾರೆ.

ನಮಗೆ ಕೋಪ ಇರುವುದು ಕಾಂಗ್ರೆಸ್‌ನ ಕೈ ಚಿಹ್ನೆಯ ಮೇಲೆ. ಅದಕ್ಕಾಗಿ ಬಿಜೆಪಿ ಮಂದಿ ಕಮಲ ಚಿಹ್ನೆಯನ್ನು ಹಿಡಿದುಕೊಳ್ಳುವುದು ಬಿಟ್ಟು ರಾಜಕೀಯ ಸಭೆಗಳಲ್ಲಿ, ಚುನಾವಣಾ ಪ್ರಚಾರ ಸಭೆಗಳಲ್ಲಿ ಕೈಯನ್ನೆತ್ತಿ ತೋರಿಸುತ್ತಾ ಕಾಂಗ್ರೆಸ್ಸನ್ನು ಬೆಂಬಲಿಸುವಂತೆ ಪರೋಕ್ಷವಾಗಿ ಪ್ರಚಾರ ಮಾಡುತ್ತಿರುವುದು ನಮ್ಮನ್ನು ಸೋಲಿಸುವ ಯತ್ನವಾಗಿತ್ತು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಮ್ಮ ಪಕ್ಷದಿಂದ ಓಟು ಸೆಳೆದು ಕಾಂಗ್ರೆಸಿನ "ಕೈ"ಗೆ ಒಪ್ಪಿಸುವ ಕಾರ್ಯವನ್ನು ಬಿಜೆಪಿ ಕಾರ್ಯಕರ್ತರು ಮಾಡುತ್ತಿದ್ದುದರಿಂದಾಗಿ ನಾವು ಕೈ ಚಿಹ್ನೆಯನ್ನು ಮಾತ್ರ ಕತ್ತರಿಸಿದೆವು ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

4 Comments

ಏನಾದ್ರೂ ಹೇಳ್ರಪಾ :-D

 1. ಕಾಂಗೆಸ್ಸಿನವರ ಈ ಕೃತ್ಯವನ್ನು ಕಂಡು ಹಲವು ಬಾಜಪಾದವರು ಸಧ್ಯ ಕಾಂಗೆಸ್ಸಿಗೆ `ತಲೆ' ಗುರುತು ಇಲ್ಲವಲ್ಲ ಅಂತ ನಿಟ್ಟುಸಿರು ಬಿಟ್ಟರಂತೆ!

  ReplyDelete
 2. ಎನ್ ಸಿ ಪಿ ಗೂ ಕಾಂಗ್ರೆಸ್ಸಿಗೂ ಏನು ಸಂಬಂಧ? ಬಿಜೆಪಿಯವರು ತಲೆಯನ್ನು ಚಿಹ್ನೆಯಾಗಿ ಮಡಿಕೊಂಡ್ರೆ ಇನ್ನೂ ಒಳ್ಳೆಯದು.

  ReplyDelete
 3. ಸುಪ್ರೀತರೆ,
  ಈಗ ಗೊತ್ತಾಯಿತು ಸ್ವಾಮಿ.. ಬೊಗಳೆ ರಗಳೆ ಬ್ಯುರೋದಲ್ಲಿರೋರಿಗೆ ತಲೆ ಯಾಕೆ ಇಲ್ಲ ಅಂತ...!!! ಈಗ ನಾವೂ ಕೂಡ ರಾಜಕೀಯ ಹೋರಾಟಕ್ಕೆ ಧುಮುಕಲಿದ್ದೇವೆ. ತಲೆ ಕತ್ತರಿಸಿದವರಿಗೆ ತಕ್ಕ ಶಿಕ್ಷೆಯಾಗಲಿ....

  ReplyDelete
 4. ಶ್ರೀನಿವಾಸರೆ,
  ನಿಮ್ಮ ತಲೆಯಿಂದಲೇ ಅಪಾಯಕಾರಿ ಸಲಹೆ ಉದುರಲಾರಂಭಿಸಿರುವುದು ಎದುರಾಳಿಗಳ ಕಣ್ಣು ಕುಕ್ಕಿಸಿದೆಯಂತೆ. ಎಚ್ಚರಿಕೆ ವಹಿಸಿ.

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post