ಬೊಗಳೆ ರಗಳೆ

header ads

ವಿಶ್ವ ಏಡ್ಸ್ ದಿನ : ಸಡಗರದ ಆಚರಣೆ !

(ಬೊಗಳೂರು ಆಚರಣೆ ಬ್ಯುರೋದಿಂದ)
ಬೊಗಳೂರು, ಡಿ.1- ಇಂದು ಅಂತಾರಾಷ್ಟ್ರೀಯ ಏಡ್ಸ್ ದಿನಾಚರಣೆ. ಈ ದಿನವನ್ನು ವಿಶ್ವಾದ್ಯಂತ ಸಂಭ್ರಮ ಸಡಗರಗಳಿಂದ ವಿಧ್ಯುಕ್ತವಾಗಿ ಆಚರಿಸಲಾಯಿತು ಎಂದು ತಿಳಿದುಬಂದಿದೆ.
 
ಸುಮಾರು 25 ವರ್ಷಗಳ ಹಿಂದೆ ಏಡ್ಸ್‌ಗೆ ಕಾರಣವಾಗುವ ಎಚ್ಐವಿ (ವೈರಸ್) ಪತ್ತೆಯಾದ ಬಳಿಕ ಏಡ್ಸ್‌ ಕುರಿತಾಗಿ ಭರ್ಜರಿ ಪ್ರಗತಿಯಾಗಿದೆ. ಈ ಬಗ್ಗೆ ಗ್ರಾಮ ಗ್ರಾಮಗಳಲ್ಲೂ ಸಾಕಷ್ಟು ಬೆಳವಣಿಗೆ ಕಂಡಿದ್ದು, ತನ್ನ ಆಳವಾದ ಬೇರುಗಳನ್ನು ಕುಗ್ರಾಮಗಳಿಗೂ ತೂರಿಸಿದೆ.
 
ಈ ಶುಭವಸರದಲ್ಲಿ, ಏಡ್ಸ್ ನಿಷೇಧಿಸಲು ಸರಕಾರ ಚಿಂತಿಸುತ್ತಿದೆ ಎಂದು ತಿಳಿದುಬಂದಿದೆ.
 
ಏರುತ್ತಿರುವ ಜನಸಂಖ್ಯೆ ಹತೋಟಿಗೆ ತರಲು ಪ್ರಮುಖ ಆಯುಧಗಳಲ್ಲೊಂದಾಗಿರುವ ಈ ರೋಗವನ್ನು ನಿಷೇಧಿಸಿದರೆ ಜನಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂಬುದು ಪ್ರತಿಪಕ್ಷಗಳ ಕೂಗಾಟ.
 
ಆದರೆ ಪ್ರತಿಪಕ್ಷಗಳ ಒಕ್ಕೂಟ ಅಂಗ ಪಕ್ಷವೊಂದು, ಏಡ್ಸ್ ನಿಷೇಧಿಸಿದಲ್ಲಿ ನಾವು ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕುವುದಾದರೂ ಹೇಗೆ ಎಂಬ ಕಳವಳ ವ್ಯಕ್ತಪಡಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

14 ಕಾಮೆಂಟ್‌ಗಳು

  1. ಏಡ್ಸಾನ್ವೇಷಿಗಳೆ,

    ನಮ್ಮ ಭೂತ ಜಗತ್ತಿನಲ್ಲಿ, ಆತ್ಮಸಂಖ್ಯೆ ಏರುತ್ತಿದೆ ಎಂಬುದು ಕಾಕತಾಳಿಯವಲ್ಲ ಮಾತ್ರ.

    ಅದ್ರಲ್ಲಿಯು, ಕಳೆದ ೨೫ ವರುಷಗಳಲ್ಲಿ, ಲೆಕ್ಕವಿಲ್ಲದಷ್ಟು ಆತ್ಮಗಳು, ಬಂದು ಸೇರಿವೆ.

    ಇದರ ಬಗ್ಗೆ ಒಂದು ಅದ್ಯಯನ ಕೈಗೊಳ್ಳುವ ನಿಟ್ಟಿನಲ್ಲಿ, ಸುತ್ತೋಲೆ ಹೊರಡಿಸಿದ್ದೆನೆ.

    ನಂತರ ಆಂಗ್ಲದಲ್ಲಿ ಪುಸ್ತಕ ಪ್ರಕಟಿಸುವೆ.

    "From aids to Atma"
    A journey beyond recognition in hell :)

    ಕನ್ನಡದಲ್ಲಿ

    "ಏಡ್ಸ್ನಿಂದ ಆತ್ಮದೆಡೆಗೆ"

    ಸ್ವರ್ಗ ನಿಲುಕದ ಪಯಣ :)

    ಇಂತಿ
    ಭೂತಸ್ರೇಷ್ಟ

    ಪ್ರತ್ಯುತ್ತರಅಳಿಸಿ
  2. ಭೂತಶ್ರೇಷ್ಠರೇ,
    hell done hell done...
    ಹೀಗೇ ಪುಸ್ತಕ ಬರೀತಿರಿ ! :)
    ಏಡ್ಸ್‌ನೆಡೆಗೆ ನಮ್ಮಯ ನಡಿಗೆ ಅಂತ ಮಾತ್ರ ಬೇಡ!

    ಪ್ರತ್ಯುತ್ತರಅಳಿಸಿ
  3. ಅಸತ್ಯಿಗಳೇ,

    ಎಡ್ಸ್ ಬೆಳ್ಳಿ ಹಬ್ಬದ ಈ ಅ-ಶುಭ ಸಂದರ್ಭದಲ್ಲಿ ಅದನ್ನು ಎಷ್ಟು ಜನಪ್ರಿಯ ಮಾಡಿದ ಕೆಲವರನ್ನು ಸನ್ಮಾನ ಮಾಡಬಹುದೇನೋ...ಹೆದ್ದಾರಿ ಚಾಲಕರು..

    ಪ್ರತ್ಯುತ್ತರಅಳಿಸಿ
  4. ಭೂತವೇ,

    ಭಗವದ್ಗೀತೆಯ ಪ್ರಕಾರ ಈ ಬ್ರಹ್ಮಾಂಡದಲ್ಲಿರುವ ಒಟ್ಟು ಆತ್ಮಗಳ ಸಂಖ್ಯೆ is a constant. ಹಾಗಿರುವಾಗ ಹೊಸ ಆತ್ಮಗಳು ಎಲ್ಲಿಂದ ಬಂದು ಸೇರಿದವು? ಮನುಷ್ಯರ ಸಂಖ್ಯೆಯೂ ಜಾಸ್ತಿ ಆಗುತ್ತಿದೆ. ಈ extra ಆತ್ಮಗಳು ಮನುಷ್ಯರಿಗೆ ಎಲ್ಲಿಂದ ಸಿಕ್ಕವು. ಬಹುಶಃ ಪ್ರಾಣಿ, ಕ್ರಿಮಿ, ಕೀಟ, ಇತ್ಯಾದಿಗಳು ಮನುಷ್ಯರಾಗುತ್ತಿವೆಯೇನೋ? ಆದುದರಿಂದಲೇ ಈಗಿನ ಮನುಷ್ಯರು ಹೆಚ್ಚು ಹೆಚ್ಚು ಪ್ರಾಣಿ ಕೀಟಗಳಂತೆ ವರ್ತಿಸುತ್ತಿರುವುದು. ಅನ್ವೇಷಿಗಳು ಇದರ ಬಗ್ಗೆ ಅನ್ವೇಷಣೆ ನಡೆಸಬಹುದು.

    - ಪವನಜ

    ಪ್ರತ್ಯುತ್ತರಅಳಿಸಿ
  5. ಶಿವ್ ಅವರೆ,
    ನಮ್ಮೂರ ಹೆದ್ದಾರಿ ಚಾಲಕರು ನೀವು ಹೇಳಿದ ಕೆಲಸದ ಜತೆಗೆ, ಸಿಕ್ಕಾಪಟ್ಟೆ ಅಪಘಾತ ನಡೆಸುವ ಮೂಲಕ ಜನಸಂಖ್ಯೆ ನಿಯಂತ್ರಿಸುವ ಕಾಯಕವನ್ನೂ ಮಾಡುತ್ತಿರುತ್ತಾರೆ. ಅವರದು ಒಂಥರಾ Balancing act.

    ಪ್ರತ್ಯುತ್ತರಅಳಿಸಿ
  6. ಪಬ್ ರತ್ನ ಅವರೆ,
    ಏಡ್ಸ್ ದಕ್ಷಿಣ ಆಫ್ರಿಕಾದಿಂದ ಹರಡಿತು ಮತ್ತು ಮಂಗನಿಂದ ಮಾನವನಿಗೆ ಬಂತು ಎಂಬ ಕುರಿತು ನನಗೆ ನಮ್ಮದೇ ಬ್ಯುರೋ ಈ ಹಿಂದೆ ಪ್ರಕಟಿಸಿದ ಈ ಸುದ್ದಿ ಓದಿದ ನಂತರ ಮತ್ತೊಂದು ಡೌಟು ಕೂಡ ಖಚಿತವಾಗತೊಡಗಿದೆ ...!!!! ಈ ನಿಟ್ಟಿನಲ್ಲಿ ಅನ್ವೇಷಣೆಯಲ್ಲಿದ್ದೇವೆ ! :)

    ಪ್ರತ್ಯುತ್ತರಅಳಿಸಿ
  7. ಪವನಜರೆ,
    ಭೂತದ ಬಾಯಿಗೆ ಭಗವದ್ಗೀತ ಯಾಕೆ ಹಾಕುತ್ತಿರುವಿರಿ?

    " ಈಗಿನ ಮನುಷ್ಯರು ಹೆಚ್ಚು ಹೆಚ್ಚು ಪ್ರಾಣಿ ಕೀಟಗಳಂತೆ ವರ್ತಿಸುತ್ತಿರುವುದು" ಅಂತ ಹೇಳಿ ನಮ್ಮ ಮೇಲೆಯೇ ಗೂಬೆಯೊಂದನ್ನು ಕೂರಿಸುವ ನಿಮ್ಮ ಸಂಚಿನ ಹಿಂದಿನ ಮರ್ಮ ಅನ್-ಅರ್ಥವಾಗುತ್ತಿಲ್ಲ.

    ಪ್ರತ್ಯುತ್ತರಅಳಿಸಿ
  8. ನಾನು ಡಾ| ಪವನಜರಿಂದ ಕದ್ದದ್ದು ಎಂಬುದನ್ನು ಅನ್ವೇಷಿಸಿದ್ದಕ್ಕೆ ಅಭಿನಂದನೆಗಳು. ಅವರು ನನ್ನನ್ನು ಈಗಾಗಲೇ ಕ್ಷಮಿಸಿದ್ದಾರೆ.

    ಪ್ರತ್ಯುತ್ತರಅಳಿಸಿ
  9. ಈ ಏಡ್ಸ್ ಅಂದರೇನು? ಇದೊಂದು ಪ್ರಶಸ್ತಿಯೇ? ಹೆದ್ದಾರಿಯಲ್ಲಿ ಲಾರಿ ಚಲಿಸುವ ಚಾಲಕರಿಗೆ ಕೊಡುತ್ತಾರಾ? ಅಂದ್ರೆ ಆಕ್ಸಿಡೆಂಟ್ ಮಾಡದೇಮ್ ತಾವು ಸಾಯದೇ, ತಮ್ಮನ್ನು ನಂಬಿದವರುಗಳಿಗೆ ಮೋಸ ಮಾಡದೇ ಇರುವವರಿಗೆ ಕೊಡುವ ಪ್ರಶಸ್ತಿಯಾ?

    ಅಸತ್ಯರು ಮುಖ್ಯ ರಸ್ತೆಯಿಂದ ಕೆಳಗಿಳಿದು, ಬೀದಿ ಬದಿಯಲ್ಲಿಯೂ ಅನ್ವೇಷಣಾ ಕಾರ್ಯ ನಡೆಸಿದಂತಿದೆ. ಏನೇನೋ ಮಾಡ್ತೀರಿ - ನಿಮಗೆ ಇಂತಹ ಅಗಾಧ ಶಕ್ತಿ ಅದೆಲ್ಲಿಂದ ಬಂದಿತೋ ಏನೋ - ತಿಳಿಯದಾಗಿದೆ. ನಮಗೂ ಹೇಳಿ ಕೊಡಿ ಸಾರ್.

    ಪ್ರತ್ಯುತ್ತರಅಳಿಸಿ
  10. ಪಬ್ಬಿಗರೇ,
    ಕದ್ದದ್ದು ಅಂತ ಖಂಡಿತಾ ವೃಥಾ ಆರೋಪ ಹೊರಿಸುವುದಿಲ್ಲವಾದುದರಿಂದ ಮತ್ತು ನಾವೂ ಕಳ್ಳರೇ ಆಗಿರುವುದರಿಂದ ನಾವಂತೂ ನಮ್ಮನ್ನೂ ಕ್ಷಮಿಸಿಕೊಂಡಿದ್ದೇವೆ.

    ಪ್ರತ್ಯುತ್ತರಅಳಿಸಿ
  11. ಮಾವಿನ ಅರಸರೆ,
    ಏಡ್ಸ್ ಅನ್ನೋದು ಒಂದು ರೀತಿಯಲ್ಲಿ ಪ್ರಶಸ್ತಿಯೇ ಅನ್ನಬಹುದು. ಹೆಚ್ಚಾಗಿ ಮುಂಬಯಿಯ ಕೆಂಪು ದೀಪ ಹಾಕಿದ್ದರೂ ದಾರಿಗಾಣದೆ ಗಲ್ಲಿಗಳಲ್ಲಿ ದಾರಿ ತಪ್ಪಿ ಹೋದಾಗ ದೊರೆಯುವ ಪ್ರಶಸ್ತಿ ಅಂತ ಅನ್ವೇಷಿಸಲಾಗಿದೆ.

    ಆಮೇಲೆ,
    ನಾವು ಇಲ್ಲಿ ಬೀದಿಗೆ ಬಿದ್ದಿದ್ದೇವೆ ಅನ್ನುವುದು ಸತ್ಯಸ್ಯ ಸತ್ಯ. ನಮಗೇ ದಾರಿಗಾಣದಂತಾಗಿದೆ.

    ಪ್ರತ್ಯುತ್ತರಅಳಿಸಿ
  12. ಡಾ. ಪವನಜರೇ,

    ನಿಜ್ವಾಗ್ಲು ನಂಬ್ತೀರ ಆತ್ಮಗಳು ಜಾಸ್ತಿ ಆಗ್ತ ಇಲ್ಲ ಅಂತ.

    ನಿಮ್ ಪ್ರಕಾರ, ಹಳೆ ಕಾಲದ ಡೈನಸಾರ್ಗಳು, ತಮ್ಮ ಆತ್ ಗಳನ್ನ, ನಮ್ಮ ಮನುಷ್ಯರಲ್ಲಿ ತುಂಬಿ, ೬ ಬಿಲಿಯನ್ ನಿಂದ ೭ ಬಿಲಿಯನ್ ನಡೆಗೆ ಜನಸಂಖ್ಯೆ ಬೆಳೆಸುವಲ್ಲಿ ಸಹಯ ಮಾಡುತ್ತಿವೇ ಅಂತಿರ?

    ನಾನು ಭುತ ಗಣನೆ ಆರಂಬ ಮಾಡ್ಬೇಕು ಅಂತ ಇದ್ದಿನಿ.

    ರೆಸೈಕಲ್ಡ್ ಆತಮಗಳು ಎಷ್ಟು ಅನ್ನೊ ಒಂದು ಪಟ್ಟಿ ಸೇರಿಸ್ಕೊ ಬೇಕು ಇವಾಗ :)

    ಇಂತಿ
    ಭುತಾಣು

    ಪ್ರತ್ಯುತ್ತರಅಳಿಸಿ
  13. ಅನ್ವೇಷಿ ಮತ್ತು ಅನುಯಾ('ನಾ'ಅಲ್ಲ!)ಯಿಗಳ ಗಮನಕ್ಕೆ:

    ಆಂಗ್ಲದಲ್ಲಿ ಬ್ಲಾಗಿಸುವ ಕನ್ನಡಿಗ ರಾಮಕೃಷ್ಣ ಬೆಳ್ಳೂರ್ ಅವರ ಇವತ್ತಿನ (ಡಿ.1) ಏಡ್ಸ್-ದಿನಾಚರಣೆ ವಿಶೇಷ ಸಂಚಿಕೆಯನ್ನು ಸಹ ನೋಡಿ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D