{ನವೆಂಬರ್ ಉತ್ಸವ ಇಂದಿಗೆ ಕೊನೆಗೊಳ್ಳುತ್ತಿರುವ ಸಂದರ್ಭದಲ್ಲಿ ವಿಶೇಷ ವರದಿ}
(ಬೆಂಗಳೂರು ಜಾಮ್ ಬ್ಯುರೋದಿಂದ)
ಬೊಗಳೂರು, ನ.30- ಬ್ಯಾಂಗಲೋರ್, ಮ್ಯಾಂಗಲೋರ್, ಮೈಸೋರ್ ಮುಂತಾದ Oreಗಳ ಹೆಸರನ್ನು ಊರು ಅಂತ ಬದಲಾಯಿಸಿ ಕನ್ನಡೀಕರಣ ಮಾಡುವಲ್ಲಿ ಸಾಕಷ್ಟು ಪ್ರಯತ್ನಗಳು ನಡೆಯುತ್ತಿರುವಂತೆಯೇ ಅದನ್ನು ಗುಜರಾತಿಗೆ ಹೋಲಿಸುವ ಮತ್ತೊಂದು ಹೊಸ ಪ್ರಯತ್ನ ನಡೆಸುತ್ತಿದೆ ಎಂಬುದು ಬೊಗಳೆ ರಗಳೆ ಬ್ಯುರೋದ ಗಮನಕ್ಕೆ ಬಂದಿದ್ದು ಇಲ್ಲಿ.
ಗುಜರಾತಿನ ಜಾಮ್ ನಗರವನ್ನು ಹೈಜಾಕ್ ಮಾಡಿ ಬೆಂಗಳೂರೆಂಬ ಬ್ರೆಡ್‌ಗೆ ಅಂಟಿಸಿಬಿಡೋ ಯತ್ನ ನಡೆಸಲಾಗುತ್ತಿದ್ದು, ಇದನ್ನು ಬೊಗಳೂರು ಬ್ಯುರೋ ತೀವ್ರವಾಗಿ ವಿರೋಧಿಸುತ್ತದೆ. ಇದರ ಹಿಂದಿರುವ ಪ್ರಮುಖ ಕಾರಣವೆಂದರೆ ಮುಂದೊಂದು ದಿನ ಬೊಗಳೂರಿನ ಹೆಸರನ್ನೂ ಬದಲಾಯಿಸಿಬಿಡಬಹುದೆಂಬ ಆತಂಕವೇ ಆಗಿದೆ ಎಂಬುದು ಯಾರಿಗೂ ತಿಳಿಯದ ಅಸತ್ಯ.
ಇದೀಗ ಟ್ರಾಫಿಕ್ ಜಾಮ್ ನಗರ ಎಂದು ಬದಲಾಯಿಸುವ ಯತ್ನದಿಂದ ತೀವ್ರವಾಗಿ ಆಕ್ರೋಶಿತರಾಗಿರುವ ಕಟ್ಟಾಳುಗಳು, ಮತ್ತೊಂದು ಪ್ರತಿಭಟನೆ ಏರ್ಪಡಿಸಿ ಟ್ರಾಫಿಕ್ ಜಾಮ್ ಮಾಡಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಮುಂಬಯಿಯನ್ನು ಬೊಂಬಾಯಿಯಾಗಿಸಲು ಯತ್ನಿಸುವ ವಿರುದ್ಧ ಈ ಹಿಂದೆಯೇ ಬೊಗಳೂರು ಬ್ಯುರೋ ಜನಜಾಗೃತಿ ಮೂಡಿಸಿದ್ದನ್ನು ಇಲ್ಲಿ ಸ್ಮರಿಸಿಕೊಂಡು ದೀಪ ಹಚ್ಚಬಹುದು.
ಬೆಂಗಳೂರು ಈಗಾಗಲೇ ಐಟಿ, ಬಿಟಿ ಕಂಪನಿಗಳಿಗೆ ಚಿನ್ನದ ore ನೀಡುವ ತಾಣವಾಗಿದೆ. ಮತ್ತು ಸಾಮಾನ್ಯ ಕನ್ನಡಿಗರಿಗೆ daily Bread ನೀಡುವ ತಾಣವೂ ಆಗಿದೆ. ಮಾತ್ರವಲ್ಲ ಇಲ್ಲಿ ನಾಯಿಗಳಿಗೂ ಬಾಲ ಅಲ್ಲಾಡಿಸಲು ಜಾಗದ ಕೊರತೆಯಿದೆ. ಈ ಕಾರಣಕ್ಕೆ ಟ್ರಾಫಿಕ್ ಜಾಮ್ ಸೇರಿಸಿಕೊಂಡು ಅದಕ್ಕೆ ಜಾಮ್ ಹಚ್ಚಲು ಹೊರಡುತ್ತಿರುವುದಕ್ಕೂ ಪ್ರತಿಭಟನೆ ಮಾಡದಿದ್ದರೆ ನಾವೇಕೆ ಇರುವುದು ಎಂಬ ಕೂಗಾಟ ಕೇಳಿಬರುತ್ತಿದೆ.
ಈಗಾಗಲೇ ಸುವರ್ಣ ರಾಜ್ಯೋತ್ಸವ ಆಚರಣೆ ಆರಂಭವಾಗಿ ಒಂದು ತಿಂಗಳಾಗಿದೆ. ಈ ಸಂದರ್ಭದಲ್ಲೇ ಇಂಥ ದುಸ್ಸಾಹಸಕ್ಕೆ ಇಳಿಯುವವರಿಗೆ ಎಚ್ಚರಿಕೆ ನೀಡಲು ಪ್ರತಿದಿನ ಒಂದು ಪುಟ್ಟ ಪ್ರತಿಭಟನೆ ಏರ್ಪಡಿಸಲು ನಿರ್ಧರಿಸಲಾಗಿದೆ.
ಒಂದು ಪುಟ್ಟ ಪ್ರತಿಭಟನೆಯಿಂದ ಇಡೀ ಬೆಂಗಳೂರು ನಗರದ ಸಂಚಾರ ವ್ಯವಸ್ಥೆ ಅಲ್ಲೋಲ ಕಲ್ಲೋಲವಾಗುತ್ತದೆ ಎಂಬ ಕಟು ಸತ್ಯವೇ ಅವರ ಈ ಪ್ರತಿಭಟನೆಗೆ ಪ್ರೇರಣೆ ಎಂದೂ ತಿಳಿದುಬಂದಿದೆ.
4 ಕಾಮೆಂಟ್‌ಗಳು
ಜಾಮ್ ನಗರದ ಜಾಮ್ ಜಾಮ್ ಎನ್ನುವ ಜಾಮಿಗೆ ಬೆಂಗಳೂರಿನ ಬೇವಾರ್ಸಿ (ವಾರಸುದಾರರಿಲ್ಲದಿರುವುದು) ಬ್ರೆಡ್ಡೇ ಯಾಕೆ ಬೇಕಂತೆ?
ಪ್ರತ್ಯುತ್ತರಅಳಿಸಿಹತ್ತಿರದಲ್ಲಿಯೇ ಇರುವ ಮಜವಾದ ಮುಂಬಯಿಯ ಮಾಡರ್ನ್ ಮುದ್ದೆಯ ಜೋಡಿ ಸರಿ ಹೋಗಲ್ವಾ? ಇಲ್ಲೂ ಟ್ರಾಫಿಕ್ ಜಾಮ್ - ಜಾಮ್ ಜಾಮ್ ಅಂತ ಇರತ್ತೆ. ಒಮ್ಮೆ ಚಮಚೆಗೆ ಅಂಟಿದರೆ ಬಿಡಿಸೋದು ಕಷ್ಟ.
ಏನೂ ಅರ್ಥ ಆಗ್ಲಿಲ್ಲ ಹೋಗ್ರೀ..ಬರೀ ಬೊಗಳೆ..
ಪ್ರತ್ಯುತ್ತರಅಳಿಸಿಮಾವಿನ ಅವರೆ,
ಪ್ರತ್ಯುತ್ತರಅಳಿಸಿಮುಂಬಯಿಯಲ್ಲಿ ಮಾಡರ್ನ್ ಮುದ್ದೆಗೆ ಸೈಡ್ ಡಿಶ್ ಆಗಿ ನೀವು ಮಾವಿನ ರಸಾಯನ ಮಾರುತ್ತಿದ್ದೀರಂತೆ. ಅದುವೇ ಅಂಟಿಕೊಳ್ಳುತ್ತಿರಬಹುದು. ಸ್ವಲ್ಪ ನೋಡಿ. !
ಕೇಸರಿ,
ಪ್ರತ್ಯುತ್ತರಅಳಿಸಿಅರ್ಥವಾದರೆ ಯಾರು ಕೇಳುತ್ತಾರೆ? ಅರ್ಥವಾಗದ ಕಾರಣ ನೀವಾದ್ರೂ ಕೇಳಿದ್ರಿ....
ಅರ್ಥವಾಗದಿದ್ದರೂ ಅನ್-ಅರ್ಥವಾಗದಿದ್ದರೆ ಸಾಕು !
ಏನಾದ್ರೂ ಹೇಳ್ರಪಾ :-D