ಬೊಗಳೆ ರಗಳೆ

header ads

'ಶಿಕ್ಷಕರೇ, ಮರಳಿ ಬನ್ನಿ' ಯೋಜನೆ ಜಾರಿಗೆ

(ಬೊಗಳೂರು ಸರ್ವ ಶಿಕ್ಷಾ ಬ್ಯುರೋದಿಂದ)
ಬೊಗಳೂರು, ನ.16- ಮಕ್ಕಳ ಹಾಜರಾತಿ ಕೊರತೆಯಿಂದಾಗಿ ರಾಜ್ಯ ಸರಕಾರವು ಸರ್ವ ಶಿಕ್ಷಾ ಅಭಿಯಾನದಡಿ 'ಮರಳಿ ಬನ್ನಿ ಶಾಲೆಗೆ' ಎಂಬ ಯೋಜನೆ ಹಮ್ಮಿಕೊಂಡು ಮಕ್ಕಳಿಗೆ ಹಾಲು, ಮೊಟ್ಟೆ, ಅಕ್ಕಿ... ಇತ್ಯಾದಿ ಹಾಳು ಮೂಳು ಕೊಡಲು ಆರಂಭಿಸಿದ್ದು ಹಳೆಯ ಕಥೆಯಾಗಿದ್ದು, ಈಗ ಶಿಕ್ಷಕರಿಗಾಗಿ 'ಮರಳಿ ಬನ್ನಿ ಶಾಲೆಗೆ' ಎಂಬ ಹೊಸ ಯೋಜನೆ ಜಾರಿಗೊಳಿಸಲು ಸಿದ್ಧತೆ ನಡೆಯುತ್ತಿದೆ.
 
ಇತ್ತೀಚೆಗೆ ಶಾಲೆಗೆ ಹಾಜರಾಗುತ್ತಿರುವ ಶಿಕ್ಷಕರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದ್ದು, ಅವರಿಗೆ ಕಲಿಸಲು ಬೇರೆ ಕಡೆಯೂ ಕೆಲಸವಿದೆ ಎಂಬುದು ಇದರ ಹಿಂದಿರುವ ಕಾರಣವೆಂದು ಪತ್ತೆ ಹಚ್ಚಲಾಗಿದೆ. ಶಿಕ್ಷಕರ ಮತ್ತು ಶಿಕ್ಷಕಿಯರ ಹಾಜರಾತಿ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.
 
ಈ ಮಧ್ಯೆ, ಶಾಲೆಗೆ ಚಕ್ಕರ್ ಹೊಡೆಯುತ್ತಿರುವ ಮತ್ತು ಬಾಲ-ಕರುಗಳಿಗೆ ಶಿಕ್ಷೆ ನೀಡುತ್ತಲೇ "ಶಿಕ್ಷ-ಕರು" ಎಂದು ಹೆಸರು ಗಳಿಸಿರುವವರ ವಿರುದ್ಧ ವಿದ್ಯಾರ್ಥಿಗಳು ತಾವು ಕೂಡ ತರಗತಿಗೆ ಚಕ್ಕರ್ ಹೊಡೆಯಲು ಇದೇ ಸುಸಮಯ ಎಂದುಕೊಂಡು ಬೀದಿಗಿಳಿಯಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
 
ಮಕ್ಕಳನ್ನು ಮರಳಿ ಶಾಲೆಗೆ ಕರೆಸಲು ಹಾಲು ಹಣ್ಣು ಅಕ್ಕಿ ಇತ್ಯಾದಿ ಆಮಿಷವೊಡ್ಡಲಾಗಿತ್ತು. ಆದರೆ ಶಿಕ್ಷಕರನ್ನು ಶಾಲೆಯತ್ತ ಸೆಳೆಯಲು ಯಾವ ಕ್ರಮ ಕೈಗೊಳ್ಳಬಹುದು, ಯಾವ ಆಮಿಷ ಒಡ್ಡಬಹುದು ಎಂಬುದನ್ನು ಆಲೋಚಿಸಲಾಗುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

9 ಕಾಮೆಂಟ್‌ಗಳು

 1. ಏನು ಪುಣ್ಯವಂತರಪ್ಪಾ...ಈಗಿನ ಮಕ್ಕಳು...! ನಮ್ಮ ಕಾಲದಲ್ಲಿ...ಯಾವ ಶಿಕ್ಷ"ಕರು" ಚಕ್ಕರ್ ಹೋಡಿತಾ ಇರಲಿಲ್ಲ ನಮ್ಮಗಳ ಆಗಿನ ಶಾಪವೇ ಈಗಿನ ಮಕ್ಕಳಿಗೆ ವರ..!

  ಪ್ರತ್ಯುತ್ತರಅಳಿಸಿ
 2. ಅನಾನಿಮಸೋತ್ತಮರೆ,
  ಶಿಕ್ಷ-ಕರುಗಳು "ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ" ಎಂಬೋ ನಾಣ್ಣುಡಿಯನ್ನು ಗಟ್ಟಿಯಾಗಿ ಹಿಡ್ಕೊಂಡು ಬಿಟ್ಟಿದ್ದಾರೆ....!

  ಪ್ರತ್ಯುತ್ತರಅಳಿಸಿ
 3. :ಓ
  ಶಿಕ್ಶಕರು ಚಕ್ಕರ್ ಹೋಡಿದ್ದಿದ್ದು ಏನನ್ನೋ :ಯೋ

  ವಾಪಸ್ ದೊಡ್ಡ ಕರುಗಳನ್ನು ಶಾಲೆಗೆ ತರಲು, ಒಳ್ಳೆ ಉಪಾಯ ಅಂದ್ರೆ, ಹಳ್ಳಿ ಮೇಷ್ಟ್ರು ಸಿನಿಮಾದಲ್ಲಿ ಇದ್ ಹಾಗೆ, ಸಿಲ್ಕ್ ಸ್ಮಿಥನ ಕರ್ಕೊಂಡ್ಬರ್ಬೇಕು :)

  ಇಂತಿ
  ಸಿಲ್ಕ್ಭೂತ

  ಪ್ರತ್ಯುತ್ತರಅಳಿಸಿ
 4. ಅಸತ್ಯಿಗಳೇ,

  ಸಿಕ್ಕಸಿಕ್ಕವರು..ಅದೇ ಶಿಕ್ಷಕರನ್ನ ಕರೆ ತರೋಕೆ ಯಾಕೇ ಯತ್ನಿಸಿದಿರೋ ಗೊತ್ತಾಗಲಿಲ್ಲ..ಶಾಲೆಗಳಲ್ಲಿ ಹೆಂಗಿದ್ದರೂ ಮಕ್ಕಳು ಕಲಿಯೋದು ಅಷ್ಟೆಕ್ಕೆ ಇದೇ..ಪಾಪ ಈ ಮಕ್ಕಳಿಗೋ mms-sms ಗಳಲ್ಲಿ ಸಮಯ ಸಿಕ್ಕರೆ ಪಾಠ ಬೇಕಾದಿತೆನೋ

  ಪ್ರತ್ಯುತ್ತರಅಳಿಸಿ
 5. ಅನ್ವೇಷಿಗಳೇ,

  ನಾನು ಪಬ್ಬಿನ ಮಬ್ಬುಗತ್ತಲಿನಲ್ಲಿ ಕುಟ್ಟಿದ ಕಾಮೆಂಟ್ ಎಲ್ಲೋಯ್ತು? ಸ್ವಲ್ಪ ಅನ್ವೇಷಣೆ ನಡೆಸುತ್ತೀರಾ?

  ಪ್ರತ್ಯುತ್ತರಅಳಿಸಿ
 6. ಓ ಸಿಲ್ಕ್ ಭೂತವೆ,
  ಹಾಗೇನಾದರೂ ಆದರೆ ಆ ಶಾಲೆಯಲ್ಲಿ ಮಕ್ಕಳಿಗಿಂತ ಶಿಕ್ಷಕರ ಸಂಖ್ಯೆಯೇ ಹೆಚ್ಚಾಗಿ, ಮಕ್ಕಳೇ ಶಿಕ್ಷಕರಿಗೆ ಪಾಠ ಮಾಡುವ ಪರಿಸ್ಥಿತಿ ಬರಬಹುದು.

  ಪ್ರತ್ಯುತ್ತರಅಳಿಸಿ
 7. ಶಿವ್ ಅವರೆ,
  ಇದೆಲ್ಲಾ ಮಕ್ಕಳ ಯತ್ನ ಅಲ್ಲವೇ ಅಲ್ಲ. ಈಗ ಶಿಕ್ಷಕರನ್ನು ಮರಳಿ ಶಾಲೆಗೆ ಕರೆತರಲು ಯತ್ನಿಸುವವರಿಗಾಗಿ ಈ ಮಕ್ಕಳು ಶೋಧ ಆರಂಭಿಸಿವೆಯಂತೆ. ಸಿಕ್ಕಿದ್ರೆ ಒಂದು ಗತಿ ಕಾಣಿಸಲು!

  ಪ್ರತ್ಯುತ್ತರಅಳಿಸಿ
 8. ಪಬ್ಬಮಲಿಗರೇ,
  ನೀವು ಅಮಲಿನಲ್ಲೇ ಅದನ್ನು ಕುಟ್ಟಿದ್ದೀರಿ ಅಂತ ಗೊತ್ತಾದ ಕಾರಣ, ಅದನ್ನು ಜೋಪಾನವಾಗಿ ಕಾಯ್ದಿರಿಸಿದ್ದೇವೆ ಎಂದು ಬೇಕಾದರೂ ಹೇಳಬಹುದು.

  ಆದರೆ ನೀವು ಮಬ್ಬುಗತ್ತಲಲ್ಲಿ ಇಲ್ಲೇ ಕುಟ್ಟಿದ್ದೀರಿ ಅನ್ನೋದಕ್ಕೆ ಏನು ಗ್ಯಾರಂಟಿ?

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D