ಬೊಗಳೆ ರಗಳೆ

header ads

ಬರಲಿದೆ ಪ್ರಯಾಸ ಕಥನ!!!

ಬೊಗಳೆ ರಗಳೆ ಬ್ಯುರೋದಿಂದ ಆವಂತಿಕಾಪುರಿ(ಉಜ್ಜಯಿನಿ) ಪ್ರಯಾಸ ಕಥನ!
 
ಭಟ್ಟಿ ವಿಕ್ರಮಾದಿತ್ಯನ ನಾಡಿಗೆ ಅಸತ್ಯಾನ್ವೇಷಿ ಭೆಟ್ಟಿ!
 
ಎಂದೂ ಕಂಡು ಕೇಳರಿಯದ ಪ್ರಯಾಸ ಕಥನ ಶೀಘ್ರವೇ ಸಚಿತ್ರವಾಗಿ ಮೂಡಿಬರಲಿದೆ.
 
ಕಾಳಿದಾಸನಿಗೊಲಿದ ಕಾಳಿ ನೆಲೆನಿಂತ ನಾಡಿನಲ್ಲಿ ಕಾಲಿ ದೋಸೆ ತಿಂದು ಅಲೆದಾಡಿ ಧೂಳಿದಾಸನಾದ ಕಥೆ
 
ಶ್ರೀಕೃಷ್ಣ-ಬಲರಾಮ-ಸುದಾಮರು LKG ಕಲಿತ ಸಾಂದೀಪನಿ ಆಶ್ರಮದಲ್ಲಿ ಅ, ಆ, ಇ, ಈ ಓದಿದ ಅಸತ್ಯಾನ್ವೇಷಿ.
 
ಜ್ಯೋತಿರ್ಲಿಂಗಗಳಲ್ಲೊಂದಾಗಿರುವ ಮಹಾಕಾಲೇಶ್ವರ ಮಂದಿರದಲ್ಲಿ ಅರ್ಚಕರನ್ನು ರುದ್ರಭಯಂಕರರಾಗಿಸಿದ ಕಥೆ...
 
ನಿರೀಕ್ಷಿಸಬೇಡಿ...
 
ಯಾಕೆಂದರೆ ಆಸೆಯೇ ದುಃಖಕ್ಕೆ ಮೂಲ...
 
ನಿರೀಕ್ಷಿಸಿದರೆ ಅನಿರೀಕ್ಷಿತವಾಗಿರುವುದೇ ಘಟಿಸೀತು...!!!

ಕಾಮೆಂಟ್‌‌ ಪೋಸ್ಟ್‌ ಮಾಡಿ

12 ಕಾಮೆಂಟ್‌ಗಳು

 1. ಹಾಗೆಯೇ ಮಾಂಡುವಿನ ಕೋಟೆಯಲ್ಲಿ ರಾಣಿ ರೂಪಮತಿಯವರನ್ನು ಭೇಟಿ ಮಾಡಿದುದನ್ನೂ ಬರೆಯಿರಿ.

  -ಪವನಜ

  ಪ್ರತ್ಯುತ್ತರಅಳಿಸಿ
 2. ಓಹೋ...ಈಗ ಅರ್ಥವಾಯಿತು..ಭೇಟಿಯ ಉದ್ದೇಶ..ದಯವಿಟ್ಟು ತಮ್ಮ ಶ್ರೀಮತಿಯವರ ವಿಳಾಸವನ್ನು ಕೊಡಿ. "ರಾಣಿ ರೂಪಮತಿಯವರ ಬಗ್ಗೆ ಹೇಳಿ..ಸ್ವಲ್ಪ " ಹುಳಿ ಹಿಂಡುವ" ಕೆಲಸ ಮಾಡುವುದಿದೆ...!!

  ಪ್ರತ್ಯುತ್ತರಅಳಿಸಿ
 3. ಪವನಜರೆ,

  ರಾಣಿ ರೂಪಮತಿಯ ಹುಡುಕಾಟದಲ್ಲಿದ್ದಾಗ, ಅಲ್ಲೆಲ್ಲಾ ನಮ್ಮ ಸಂತಾನದವರ ಕಾಟವೇ ಜಾಸ್ತಿಯಾಗಿಬಿಟ್ಟಿತ್ತು.

  ಅಲ್ಲಲ್ಲಿ ಗುರ್ರ್‌ಗುಡುತ್ತಾ ಕೈಯಲ್ಲಿದ್ದ ಬಾಳೆ ಹಣ್ಣು ಕಿತ್ತುಕೊಳ್ಳುವ ಮಾಂಡುವಿನ ಪೂರ್ವಜರಿಂದಾಗಿ ರೂಪಮತಿ ಸಿಗಲೇ ಇಲ್ಲ.

  ಪ್ರತ್ಯುತ್ತರಅಳಿಸಿ
 4. ಅನಾನಿಮಸರೇ,

  ನೀವಿಲ್ಲಿ ನಮ್ಮ ಮಾನ ತೆಗೆಯುವ ಯೋಜನೆಯೊಂದನ್ನು ರೂಪಿಸುತ್ತಿದ್ದೀರಿ ಅಂತ ತಿಳೀತು. ರೂಪಮತಿ ಭೇಟಿಯಾದುದನ್ನು ಶ್ರೀಮತಿಗೆ ಹೇಳಿ ನಮ್ಮ ಮತಿ ತಪ್ಪಿಸಬೇಡಿ ಸ್ವಾಮೀ....!

  ಆದರೂ ರೂಪಮತಿಯನ್ನು ಭೇಟಿಯಾಗಲೇ ಇಲ್ಲ ಅಂತ ನಾವು ಖಡಾಖಂಡಿತವಾಗಿ ನಿರಾಕರಿಸುತ್ತೇವೆ (ಕೃಪೆ: ರಾಜಕಾರಣಿಗಳ ನಿರಾಕರಣೆ).

  ಪ್ರತ್ಯುತ್ತರಅಳಿಸಿ
 5. ಭಟ್ಟಿ ವಿಕ್ರಮಾದಿತ್ಯನ ನಾಡು ಅಂದರೆ ಕಳ್ಳಭಟ್ಟಿ ಮಾರುವ ಜಾಗ ಎಂದು ಅನ್ವೇಷಿ ತಿಳಿದಿದ್ದರೆ... ಅದು ಅಸತ್ಯವೆಂದು ತಿಳಿದ ಮೇಲೆ ನಿರಾಶೆ ಕಟ್ಟಿಟ್ಟ ಬುತ್ತಿ !!

  ಪ್ರತ್ಯುತ್ತರಅಳಿಸಿ
 6. ಸ್ರಿತ್ರಿ ಯವರೆ, ಇದು ಪಬ್ಬಿಗರೊಂದಿಗೆ ಅಸತ್ಯಾನ್ವೇಶಿಗಳು ಹಾಕಿದ ಪ್ಲಾನ್ ಅನ್ಸುತ್ತೆ. ಇಲ್ಲಿ ನಿರಾಸೆಯಗುವದು ಅಸತ್ಯಾನ್ವೇಶಿಗಳಲ್ಲ ಪಬ್ಬಿಗರು..ಭೂತ ಎಲ್ಲಿದ್ದೀರಾ ?

  ಪ್ರತ್ಯುತ್ತರಅಳಿಸಿ
 7. ಶ್ರೀತ್ರೀ ಅವರೆ,

  ಹೇಳುವ ಮೊದಲೇ ಗುಟ್ಟು ರಟ್ಟು ಮಾಡಿದ್ದೀರಿ.

  ಹಾಗಾಗಿ ನಿರಾಶೆಗೆ ಅವಕಾಶವೇ ಇಲ್ಲ.

  ಪ್ರತ್ಯುತ್ತರಅಳಿಸಿ
 8. mohd ಅವರೆ,

  ವಿಕ್ರಮಾದಿತ್ಯನ ಹೆಗಲೇರಿದ ಬೇತಾಳ ನಾಡಿಗೆ ಹೋಗಿದ್ದು, ಭೂತವನ್ನು ಕರೆದರೆ ನಮ್ಮ ಬೆಂಬಲಕ್ಕೆ ಬೇತಾಳವಿದೆ. ಎಚ್ಚರಿಕೆ!

  ಪ್ರತ್ಯುತ್ತರಅಳಿಸಿ
 9. ಶ್ರಿತ್ರಿ, ಅಸತ್ಯಾನ್ವೇಷಿಗಳು ಸತ್ಯವನ್ನು ಹುಡುಕುತ್ತಿಲ್ಲ. ಹಾಗಿರುವಾಗ ಅವರಿಗೆ ನಿರಾಶೆ ಯಾಕಾಗಬೇಕು.

  mohd, ಅಸತ್ಯಾನ್ವೇಷಿಗಳು ರಾಣಿ ರೂಪಮತಿಯನ್ನು ಗುಟ್ಟಾಗಿ ಭೇಟಿಯಾಗಲು ಹೋದದ್ದು. ಹಾಗಿರುವಾಗ ಪಬ್ಬಿಗರಿಗೇಕೆ ನಿರಾಸೆಯಾಗಬೇಕು?

  -ಪಬ್

  ಪ್ರತ್ಯುತ್ತರಅಳಿಸಿ
 10. ನನಗೆ ಆಯಾಸವಾಗುತ್ತಿದೆ. ಕಣ್ಣು ಮುಚ್ಚುವ ಮೊದಲೇ ನಿಮ್ಮ ಪ್ರಸವದ ಕಥಾನಕವನ್ನು ನನ್ನ ಕಣ್ಣ ಮುಂದಿಟ್ಟುಬಿಡಿ.

  ಪ್ರತ್ಯುತ್ತರಅಳಿಸಿ
 11. ಪಬ್ಬಿಗರೇ
  ದಯವಿಟ್ಟು ನಾನು ಹೇಳೋ ಅಸತ್ಯವನ್ನು ನಂಬಿ.
  ನಾನು ರೂಪಮತಿಯನ್ನು ಭೇಟಿಯಾಗಲೇ ಇಲ್ಲ !

  ಪ್ರತ್ಯುತ್ತರಅಳಿಸಿ
 12. ಮಾವಿನರಸರೇ,
  ಕಣ್ಣು ಮುಚ್ಚಿ ಗಟ್ಟಿಯಾಗಿ ನಿದ್ದೆ ಮಾಡಿ ಎದ್ದಾಗ ಎಲ್ಲಾ ಪ್ರಕಟವಾಗಿರುತ್ತೆ... ನೋಡಿ.

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D