(ಬೊಗಳೂರು ಶ್ವಾನಾನ್ವೇಷಿ ಬ್ಯುರೋದಿಂದ)
ಬೊಗಳೂರು, ನ.15- ಬೆಂಗಳೂರಿನಲ್ಲಿ ನಾಯಿಗಳ ತೀವ್ರ ಕೊರತೆ ಇದೆ.
ಹಿಂದೊಂದು ಕಾಲವಿತ್ತು, ಬಸ್ಸಿಂದ ಕೆಳಗೆ ಕಾಲಿಟ್ಟ ತಕ್ಷಣ ನಾಯಿಗಳು ಇರುವೆಗಳಂತೆ ಮುತ್ತಿಕೊಳ್ಳುತ್ತಿದ್ದವು. ಆದರೆ ಈಗ ಕಾಲ ಬದಲಾಗಿದೆ. ನಾಯಿಗಳು ನಗರ ಜೀವನದಿಂದ ರೋಸಿ ಹೋಗಿವೆ. ಅವುಗಳು ಬೇರೆ ಪುಟ್ಟ ಪಟ್ಟಣಗಳಿಗೆ ಮತ್ತು ಗ್ರಾಮಾಂತರ ಪ್ರದೇಶಗಳಿಗೆ ವಲಸೆ ಹೋಗುತ್ತಿವೆ.
ಇದಕ್ಕೆ ಕಾರಣವೆಂದರೆ ನಾಯಿಗಳಿಗೆ ಬಾಲ ಅಲ್ಲಾಡಿಸಲು ಜಾಗವೇ ಇಲ್ಲ. ಇರೋದು ಒಂದು ಬಾಲ. ಅದನ್ನೂ ಅಲ್ಲಾಡಿಸಲು ಜಾಗವಿಲ್ಲದ ಮೇಲೆ ನಮಗೇಕ್ರೀ ಬೇಕು ಈ ಸಿಲ್ಲಿ-ಕಾನ್ ಸಿಟಿಯ ಸಹವಾಸ ಅಂತ ಹೇಳಿ ಶ್ವಾನಮಹೋದಯರು ಅಲ್ಲಿಂದ ಕಾಲ್ಕಿತ್ತಿರುವುದಾಗಿ ವರದಿಯಾಗಿದೆ.
ಇನ್ನೊಂದು ನಾಯಿಯನ್ನು ಸಮೀಪ ಕರೆದು ಅದರ ಮೂತಿಯ ಬಳಿ ಬಾಯಿ ಇರಿಸಿ ಕೇಳಲಾಯಿತು. "ನಿಜಕ್ಕೂ ನೀವುಗಳು ಈ ನಗರಿ ಬಿಡಲು ಕಾರಣವೇನು?"
ಅದಕ್ಕೆ ಬಂದ ಉತ್ತರ ಮಾತ್ರ ಸಖತ್ತಾಗಿತ್ತು.
ಅದಕ್ಕೆ ಬಂದ ಉತ್ತರ ಮಾತ್ರ ಸಖತ್ತಾಗಿತ್ತು.
ಅಲ್ಲ ಬೊಗಳೆ ಮಹೋದಯರೇ, ನೀವು ಕೂಡ ನಮ್ಮಂತೆಯೇ ಬೊಗಳ್ತಾ ಇರ್ತೀರಿ. ಇಲ್ಲಿ ಕನ್ನಡ ಮಾತಾಡ್ಕೋತಾ, ಖುಷಿಯಾಗಿ ಬಾಲ ಅಲ್ಲಾಡಿಸುತ್ತಾ ನಮ್ ಪಾಡಿಗೆ ನಾವಿದ್ವಾ? ಇಲ್ಲಿಗೆ ತೆಲುಗಿನಲ್ಲಿ, ತಮಿಳಿನಲ್ಲಿ ಬೊಗಳೆ ಬಿಡೋ (ಬೊಗಳೋ ಅಂತ ಖಂಡಿತವಾಗಿಯೂ ಹೇಳಿಲ್ಲ) ಮಂದಿ ಬರಾಕ್ ಹತ್ತಿದರು. ಅವುಗಳು ಕೂಡ ಬಾಲ ಬಿಚ್ಚಲಾರಂಭಿಸಿದವು. ಮಾತ್ರವಲ್ಲ ಜೋರಾಗಿಯೇ ಅಲ್ಲಾಡಿಸತೊಡಗಿದವು. ಸಿಕ್ಕಿದ್ದನ್ನು ಮೇಯ್ದು ಗಟ್ಟಿಮುಟ್ಟಾದ ಕಪ್ಪು ಕಪ್ಪನೆಯ ದಪ್ಪ ಶರೀರವಲ್ವೇ...? ಹಾಗಾಗಿ ಅವುಗಳ ಬಾಲ ಅಲ್ಲಾಡಿಸುವಿಕೆಯ ಮಧ್ಯೆ ನಮ್ಮ ಬಾಲ ತೂರಿಸಲು ಅವಕಾಶವೇ ಸಿಗುತ್ತಿಲ್ಲ. ಅಷ್ಟು ಗಟ್ಟಿಯಾಗಿ ಬಾಲ ಅಲ್ಲಾಡಿಸುತ್ತಿವೆ ಎಂಬ ಉತ್ತರ ಬಂದಿತು.
ಈ ಕಾರಣಕ್ಕೆ ಅಲ್ಲಿದ್ದವುಗಳು ಬಾಲ ಮಡಚಿಕೊಂಡು ಊರು ಬಿಡತೊಡಗಿವೆ. ಪರಊರಿನ ನಾಯಿಗಳೇ ಅಲ್ಲಿ ಠಿಕಾಣಿ ಹೂಡುತ್ತಿವೆ ಎಂಬ ಆತಂಕಕಾರಿ ವಿದ್ಯಮಾನ ನಡೆದಿರುವ ಹಿನ್ನೆಲೆಯಲ್ಲಿ ಬೊಗಳೂರನ್ನು ಬೆಂಗಳೂರಿನಂತಾಗಲು ಬಿಡುವುದಿಲ್ಲ ಎಂದು ಬೊಗಳೂರು ಬ್ಯುರೋ ಪ್ರತಿಜ್ಞೆ ತೊಟ್ಟಿದೆ.
ಸರಿಯಾಗಿ ಬರೆದಿರುವಿರಿ. ಕನ್ನಡಿಗರ ಗತಿ ಕೂಡ ನಾಯಿ ಪಾಡಾಗಿದೆ ಬೆಂಗಳೂರಿನಲ್ಲಿ.
ReplyDeleteಶ್ರೀನಿಧಿಯವರಿಗೆ ಸ್ವಾಗತ,
ReplyDeleteಸರಿಯಾಗಿ ಬರೆದಿದ್ದೇವೆ ಅಂತ ಹೇಳಿ ನಮ್ಮ ಕಣ್ಣು ತೆರೆಸಿದ್ದೀರಿ. ಇನ್ನು ಮುಂದೆ ಹಾಗಾಗದಂತೆ ನೋಡಿಕೊಳ್ಳುತ್ತೇವೆ.
ಬರುತ್ತಾ ಇರಿ.
ಹೌದು...ನಿಮ್ಮ ಮಾತು ಸರಿ....ಅದಕ್ಕೆ ನಾವೆಲ್ಲ...ಊರು ಬಿಟ್ಟು ಬಂದು...ಇಲ್ಲಿ ಕಣ್ಣು ಕಣ್ಣು ಬಿಡುತ್ತಾ ಇದ್ದೇವೆ ..
ReplyDeleteಅತ್ಯುತ್ತಮ ವಕ್ರ ಬರಹ!:)
ReplyDeleteಅನಾನಿಮಸರೆ,
ReplyDeleteನೀವೆಲ್ಲಿ ಕಣ್ಣು ಕಣ್ಣು ಬಿಡುತ್ತಿದ್ದೀರಿ? ನಮ್ಮ ಹಾಗೆ ನೀವೂ ಪರದೇಸಿಗಳಾಗಿದ್ದೀರೇ?
ಹಾಗಾದರೆ "ನಾಯಿ ಬಾಲ ಡೊಂಕು..." ಎಂಬ ಗಾದೆ ಮತ್ತು "ಡೊಂಕುಬಾಲದ ನಾಯಕರೆ..." ಹಾಡು ಇತ್ಯಾದಿ ಸಹ ಆ ನಾಯಿಗಳನ್ನು ಹಿಂ'ಬಾಲಿ'ಸಿಕೊಂಡು ಹೋಗಬಹುದೇ?
ReplyDelete'ನಾಯಿಮರಿ ನಾಯಿಮರಿ ತಿಂಡಿ ಬೇಕೇ?' ಎಂದು ಮುದ್ದಾಗಿ ಹಾಡಿ ಬಿಸ್ಕೇಟ್ ಹಾಕಲು ಯತ್ನಿಸಿದರೂ ಆ ನಾಯಿಗಳು ಮರಳಿಬಾರವೇ?
ಓ ದೇವರೇ, ಇದೇ'ನಾಯಿ'ತು!!!!
ಶ್ರೀನಿಧಿ (ದ್ವಿತೀಯ) ಅವರೆ,
ReplyDeleteಅತ್ಯುತ್ತಮ ವಕ್ರ ಬರಹ ಅಂತ ಹೇಳಿ ಹೀ.....ಗೆಳೆದು ತುಂತುರು ಹನಿಗಳನ್ನು ಚಿಮುಕಿಸಿದ್ದಕ್ಕೆ ಧನ್ಯವಾದ.
ಬರ್ತಾ ಇರಿ.
ಶ್ವಾನಾನ್ವೇಷಿಗಳೆ,
ReplyDeleteವ್ಯಂಗ್ಯ ಸೊಗಸಾಗಿ ಮೂಡಿಬಂದಿದೆ.
ಅಷ್ಟು ಕೆಟ್ತದಾಗಿಲ್ಲ ಪರಿಸ್ತಿತಿ ಅಂದ್ಕೊತಿನಿ. ಪರಊರಿನ ನಾಯಿಗಳು, ಸ್ತಳಿಯ ನಾಯಿಗಳ ಭಾಷೆ ಕಲಿಯುವ ಆಸೆ ವ್ಯಕ್ತವಂತು ಪಡಿಸಿವೆ.
ಇವತ್ತಿನ ಟೈಮ್ಸ್ ಆಫ್ ಇಂಡಿಯದ, ಮುಖ ಪುಟ ನೋಡಿ :)
ಕನ್ನಡ ಕಲಿಯಿರಿ ಅನ್ನೊದಕ್ಕಿಂತಲು, ಕನ್ನಡ ಕಲಿಸಿರಿ ಅನ್ನುವುದು ಉತ್ತಮ.
ಇಂತಿ
ಭೂತ ಬ್ರಹ್ಮ
ಜೋಷಿ ಅವರೆ,
ReplyDeleteನಾಯಿ ಅನ್ನೋದು ನಾರಾಯಣ ಮತ್ತು ಯೀಶ್ವರ ಅಂದಿದ್ದಾರೆ ದೊಡ್ಡೋರು.
ಡಾಗ್ ಬಿಸ್ಕಿಟುಗಳನ್ನೂ ತಿಂದು ತೇಗುವವರಿರುವ ಈ ಕಾಲದಲ್ಲಿ ನಿಮ್ಮ ತಿಂಡಿಗೆ ಯಾರೂ ಬರಲಾರರು, ತೀರ್ಥಕ್ಕೆ ಬೇಕಾದರೆ ಬಂದಾವು ಜೋಕೆ!
ಭೂತ ಸೃಷ್ಟಿಕರ್ತರೇ,
ReplyDeleteಪರವೂರಿನವುಗಳು ಭಾಷೆ ಕಲಿಯದಿದ್ದರೆ ಬದುಕಲು ಬಿಡದ ಕೆಲವರಿಂದಾಗಿ ನಿಮ್ಮ ಹೇಳಿಕೆಗೆ ಪುಷ್ಟಿ ದೊರೆತಿದೆ. ಕನಿಷ್ಠ ಪಕ್ಷ ಚೌಕಾಶಿ ಮಾಡಲಾದರೂ ಸ್ಥಳೀಯ ಭಾಷೆ ಬೇಕಾಗುತ್ತದೆ ಎಂಬ ಕಾರಣಕ್ಕಿರಬಹುದು ಆ ಆಸ್ಥೆ.
ನಮ್ಮ ನಾಯಿಗಳು ಬೀದಿ ನಾಯಿಗಳಾಗಿದ್ದು ಮಾತ್ರ ನಮ್ಮದೇ ತಪ್ಪಲ್ಲವೇ? ಒಂದಾಗಿರೋದು ಬಿಟ್ಟು ನಮ್ಮ ನಮ್ಮಲ್ಲೇ ಕಚ್ಚಿಕೊಂಡು, ಅಷ್ಟೇ ಅಲ್ಲ ಬೇರೆ ನಾಯಿಗಳ ಬೊಗಳಿಕೇನೆ ನಮಗೆ ಇಷ್ಟವಾಗಿ ಹೋಯಿತಲ್ಲಾ !!!
ReplyDeleteಮೊದ್ಲು ನಮ್ಮ ಬೊಗಳೋದನ್ನ ನಾವು ಮರೆಯದೆ ಇರೋಣ. ಆಮೇಲೆ ನಮ್ಮೆಲ್ಲರ ಬೊಗಳಿಕೆ ಮುಂದೆ ಬೇರೆ ಜಾತಿ ನಾಯಿಗಳ ಬೊಗಳಿಕೆ ಎಲ್ಲಿ... ಸುಮ್ಮನೆ ಬಾಲ ಮುದಿರಿಸಿಕೊಂಡು ಹೋಗ್ತವೆ
ಎಂಡಿ ಅವರೆ,
ReplyDeleteನಿಮ್ಮ ಮಾತು ಸರಿ.
ಆದರೆ ಬಾಲಗಳೆಲ್ಲವನ್ನೂ ಒಂದಕ್ಕೊಂದು ಕಟ್ಟೋದು ಯಾರು? ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆ.
I still cant read Kannada, but just came here to know if ur still writing. Just wanted to tell you that I had put up the photo I took of Abhishek during Diwali in a small photography club and it got the first prize. Thought i should thank the 'model' in that picture.
ReplyDeleteThe link to the snap
ನಮ್ಮ ನಾಯಿಗಳಿಲ್ಲದ ಊರು ನಮಗೂ ಬೇಡ ಅಂತ ಕನ್ನಡಿಗರೆಲ್ಲ ಮನೆಮಠ ಮಾರಿ ಹೋಗ್ರಿರೋದು ಇದಕ್ಕೇನಾ?
ReplyDeleteಶ್ರೀತ್ರೀ ಅವರೆ,
ReplyDeleteಕನ್ನಡಿಗರು ಮನೆ ಮಠ ಮಾರಿ ಹೋದ್ರೂ ಅಲ್ಲೇ ಠಿಕಾಣಿ ಹೂಡಿ ಅಲ್ಲಿಯೂ ಕನ್ನಡ ಮರೀದೆ ಮೆರೀತಾರೆ ಅನ್ನೋದಕ್ಕೆ ನೀವೆಲ್ಲಾ ಸಾಕ್ಷಿಗಳಿದ್ದೀರಲ್ಲಾ...
ಆದರೆ ಕನ್ನಡದ ರಾಜಧಾನಿ ಬಡವಾಗುತ್ತಿದೆಯಲ್ಲಾ
Dear Sudhu,
ReplyDeleteThanks a lot for the snaps.
ಒಂದು ಬಾಲದ ವ್ಯಥೆ..
ReplyDeleteನಮ್ಮ ಬೀದಿನಲ್ಲೇ ನಮ್ಮ ಬಾಲಕ್ಕೆ ಹಿಂಗಾದರೆ ಹೆಂಗೆ?
ಈ ರೀತಿ ಮಾಡಿದೋರನ್ನ ಬಾಲ್ ಬಾಲ್ ಕೀಳಬೇಕು
ಶಿವ್ ಅವರೆ,
ReplyDeleteಬಾಲ ಸುಟ್ಟ ಬೆಕ್ಕಿನಂತೆ ನಾವು ಚಡಪಡಿಸಬೇಕಷ್ಟೇ.
Post a Comment
ಏನಾದ್ರೂ ಹೇಳ್ರಪಾ :-D