ಬೊಗಳೆ ರಗಳೆ

header ads

ಬಾಲ ಕಾಮುಕರಿಗೆ ನಿಷೇಧ: ಕೇಂದ್ರ ಆದೇಶ

(ಬೊಗಳೂರು ಕಾರ್-ಮಿಕ ಬ್ಯುರೋದಿಂದ)
ಬೊಗಳೂರು, ಆ.8- ದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ಪ್ರಜೆಗಳಿಗೆ ಬದುಕಲು ಸೂಕ್ತ ಸೌಲಭ್ಯಗಳನ್ನು ಒದಗಿಸಲು ಅನುವಾಗುವಂತೆ ಕೇಂದ್ರ ಸರಕಾರವು ಬಾಲ ಕಾಮುಕರನ್ನು ನಿಷೇಧಿಸಿ ಆದೇಶ ಹೊರಡಿಸಿದೆ.

ಇತ್ತೀಚೆಗೆ ಚಲನಚಿತ್ರಗಳಲ್ಲಿ ಮತ್ತು ಇತರ ಮಾಧ್ಯಮಗಳಲ್ಲಿ ಅರೆಬರೆ ಉಡುಗೆಗಳ ಸೀನು-ಸೀನರಿಗಳು ಹೆಚ್ಚಾಗುತ್ತಿರುವುದರಿಂದ ಅಂಥ ಚಲನಚಿತ್ರಗಳನ್ನು ವೀಕ್ಷಿಸಲು ಬಾಲ-ಕರುಗಳು ಹಣ ಸಂಪಾದನೆಗಾಗಿ ದಂಧೆಗಿಳಿದಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಕಾರಣಕ್ಕೆ ಇನ್ನು ಮುಂದೆ ಪ್ರಾಯಕ್ಕೆ ಬಂದವರು ಮಾತ್ರವೇ ಈ ರೀತಿ ಮೈಬಗ್ಗಿಸಿ ದುಡಿಯಬಹುದು ಎಂದು ಕೇಂದ್ರದ Unprecedented Price Agenda ಸರಕಾರವು ಆದೇಶಿಸಿದೆ.

ಇತ್ತೀಚೆಗೆ ಬೀದಿ ಬೀದಿಗಳಲ್ಲಿ ಮಕ್ಕಳು ಮರಿಗಳ ಸುತ್ತಾಟ ಹೆಚ್ಚಾಗಿರುವುದು ಕಳವಳಕ್ಕೆ ಕಾರಣವಾಗಿದೆ. ಈ ಮಕ್ಕಳ ಸಂಖ್ಯೆ ಎಲ್ಲಿಂದ ಹುಟ್ಟುತ್ತದೆ ಎಂಬುದೇ ಸರಕಾರಕ್ಕೆ ಅರ್ಥವಾಗದ ವಿಷಯವಾಗಿತ್ತು. ಈ ಬಗ್ಗೆ ಬೊಗಳೆ ರಗಳೆ ಬ್ಯುರೋಕ್ಕೆ ಮನವಿ ಮಾಡಿಕೊಂಡಿದ್ದ UPA ಸರಕಾರವು, ಬಾಲ ಕಾಮುಕತನ ನಿವಾರಣೆಗೆ ಏನಾದರೂ ಮಾಡುವಂತೆ ಮನವಿ ಮಾಡಿಕೊಂಡಿತ್ತು.

ಬೀದಿ ಬದಿಗಳಲ್ಲಿ ಮಕ್ಕಳು-ಮರಿಗಳು ಭಿಕ್ಷಾಟನೆ ನೆವದಲ್ಲಿ ಬಸ್ ಪ್ರಯಾಣಿಕರಿಗೆ ಕಿರುಕುಳ ಕೊಡುವುದು, ಹೋಟೆಲ್-ಲಾಡ್ಜ್ ಇತ್ಯಾದಿಗಳಲ್ಲಿ ಮೈಬಗ್ಗಿಸಿ ದುಡಿಯುವುದು, ಹೋಟೆಲ್‌ಗಳಲ್ಲಿ ತೊಳೆಯುವುದು, ಲಾಡ್ಜ್‌ಗಳಲ್ಲಿ ಹಾಸಿಗೆ ಹಾಸುವುದು, ಬೀದಿ ಬದಿಯಲ್ಲಿ ತಿರುಗಾಡುತ್ತಾ ಬಸ್‌ನಲ್ಲಿ ಕುಳಿತವರ ಮೇಲೆ ಕೈ ಹಾಕುವುದು (ofcourse.... ಅಮ್ಮಾ, ಏನಾದ್ರೂ ಕೊಡಿ... ಅಂತ ಕೇಳುತ್ತಾರೆ), ಬಾರ್‌ಗಳಲ್ಲಿ ಮದಿರೆ ಸುರಿಯುವುದು.... ಇವೇ ಮುಂತಾದ ಬಾಲಕಾಮುಕತೆಗಳನ್ನು ಪ್ರದರ್ಶಿಸಿ ಸಂಭಾವಿತರಿಗೆ ಕಿರುಕುಳ ನೀಡುತ್ತಿದ್ದರು.

ಮಕ್ಕಳು ಈ ರೀತಿಯಾಗಿ ದುಡಿಯುವುದು ದೇಶಕ್ಕೆ ಕೆಟ್ಟ ಹೆಸರು ಮತ್ತು ಬಾಲ-ಕರುಗಳ ಆರೋಗ್ಯಕ್ಕೂ ಒಳ್ಳೆಯದಲ್ಲ ಎಂದು ಮನಗಂಡ ಸರಕಾರ ಈ ಕ್ರಮ ಕೈಗೊಂಡಿದೆ.ಈ ಮಧ್ಯೆ, ಬೊಗಳೆ-ರಗಳೆ ಬಾಲ ಬಿಚ್ಚಲು ಹೋಗದಂತೆಯೂ ಕೇಂದ್ರವು ಮನವಿ ಮಾಡಿಕೊಂಡಿದೆ.

(ಸೂಚನೆ: ಕಂಪ್ಯೂಟರ್ ಸಮಸ್ಯೆಯಿಂದಾಗಿ ಒಂದು ನಿರ್ದಿಷ್ಟ ಪದ ತಪ್ಪಾಗಿ ಮುದ್ರಣವಾಗುತ್ತಿದೆ... :))

ಕಾಮೆಂಟ್‌‌ ಪೋಸ್ಟ್‌ ಮಾಡಿ

11 ಕಾಮೆಂಟ್‌ಗಳು

 1. ಈ UPA ಬಗ್ಗೆ ಮೊದಲೂ ಬರೆದಿದ್ರಿ ಅಲ್ವಾ? ಯಾವ ಪದ ತಪ್ಪಾಗಿ ಮುದ್ರಿತವಾಗುತ್ತಿದೆ ಅಂತ ತಿಳಿಯಲಿಲ್ಲ. ಕೆಲವೊಮ್ಮೆ ಎಲ್ಲವೂ ತಪ್ಪಾಗಿ ಮುದ್ರಿತವಾಗಿದೆ ಎನ್ನಿಸಿದರೆ, ಇನ್ನೊಮ್ಮೆ ನಿಮ್ಮ ಕೈನಲ್ಲೇ ಏನೋ ತಪ್ಪಾಗಿದೆ ಎಂದೆನ್ನಿಸುತ್ತಿದೆ.

  ಇದರಲ್ಲಿ ಚೊತ್ತ ರಾಜನ್ ಕೈವಾಡವಿದೆಯೇ?

  ಪ್ರತ್ಯುತ್ತರಅಳಿಸಿ
 2. ಛೆ, ನೀವು ತಪ್ಪು ತಿಳ್ಕೊಂಡುಬಿಟ್ರಿ ಶ್ರೀನಿವಾಸ್
  ನಮ್ ಕೀ ಬೋರ್ಡ್ ಸರಿ ಇಲ್ಲ. ಆದರೆ ಓದುಗರ ಕಂಪ್ಯೂಟರುಗಳು ಕೂಡ ಅವನ್ನು ತಪ್ಪಾಗಿ ತೋರಿಸುತ್ತಿರುವುದಕ್ಕೆ ನಾವು ಜವಾಬ್ದಾರರಲ್ಲ.
  :)

  ಪ್ರತ್ಯುತ್ತರಅಳಿಸಿ
 3. ಓಹ್! ಈಗ ತಿಳಿಯಿತು. ಮಂಗಣ್ಣನಿಗೆ ಯಾಕೆ ಚಡ್ಡಿ ಹಾಕಿಲ್ಲ ಅಂತ. ಕೀಬೋರ್ಡ್ ಸರಿ ಇಲ್ಲ ಮತ್ತು ನಮ್ಮ ಕಂಪ್ಯೂಟರ್ ಕೂಡಾ ಸರಿಯಾಗಿ ತೋರಿಸುತ್ತಿಲ್ಲ.

  ಪ್ರತ್ಯುತ್ತರಅಳಿಸಿ
 4. Yapppaa... yenta tappu! Kukki computer na!

  Nam Anveshi na 'badnaam' maaDiddake! :)

  ಪ್ರತ್ಯುತ್ತರಅಳಿಸಿ
 5. ಮಹಾಂತೇಶ್ ಅವರೆ
  ನಿಮ್ಮ ಡೌಟು ಖಂಡಿತಾ ಮತ್ತೊಮ್ಮೆ ಆಲೋಚಿಸುವಂತೆ ಮಾಡಿದೆ. ಕೂಲ್ ಡ್ರಿಂಕ್ಸ್ ತಗೋಣ್ವಾ?
  ಅಥವಾ ನಿಮ್ಮ ಕಂಪ್ಯೂಟರಿಗೇ ಕೂಲ್ ಡ್ರಿಕ್ ಸುರಿದುಬಿಡಿ, ಇಲ್ಲಿ ಬರುತ್ತೋ ನೋಡೋಣ...

  ಪ್ರತ್ಯುತ್ತರಅಳಿಸಿ
 6. ಸಿಂಧು
  ಅನ್ವೇಷಿನಾ bad name ಇದ್ದದ್ದು badnaam ಅಂತ transliterate ಮಾಡಿ ಹೇಳ್ತಾ ಇದೀರಾ....?
  ಎರಡರ ಅರ್ಥ ಒಂದೇಯಾ? ಅಥವಾ ಬದ್‌ನಾಮ್ ಅನ್ನೋದು ನನಗಿಷ್ಟವಾದ ಪದವಾಗಿರಬಹುದೇ?

  ಮಹಾಂತೇಶ್ ಕಂಪ್ಯೂಟರ್ ಕುಕ್ಕಿದ ಸದ್ದು ಕೇಳಿಸ್ತಾ ಇದೆಯಾ?
  ನನ್ನನ್ನು ಕಾಪಾಡಿದ್ದಕ್ಕೆ ಥ್ಯಾಂಕ್ಸ್....

  ಪ್ರತ್ಯುತ್ತರಅಳಿಸಿ
 7. re satyigaLE,
  e thanks yaakE? innu computer kukkida saddu naanirO jaagadalli kelta illa...

  ಪ್ರತ್ಯುತ್ತರಅಳಿಸಿ
 8. ಮಹಾಂತೇಶರೆ,

  ನೀವು ಕಂಪ್ಯೂಟರ್ ಕುಕ್ಕಿದ್ದು ಜೋರಾದ ಕಾರಣವೇ ತಾನೇ ನಿಮ್ಮನ್ನು ಚಂಡೀಗಢದಿಂದ ಬೆಂಗಳೂರಿಗೆ ಓಡಿಸ್ತಾ ಇರೋದು?
  ನಮಗೆ ಗೊತ್ತಾಗಿದೆ...
  ಬನ್ನಿ ಒಂದು ಕಾಲು ನೋಡ್ಕೋತೀವಿ...
  :)

  ಪ್ರತ್ಯುತ್ತರಅಳಿಸಿ
 9. ಛೇ ಛೇ, ಏನ್ರೀ ನೀವು ಹೇಳುವುದು? ಯಾರಾದರೂ ಬಾಲವನ್ನು ಕಾಮಿಸುತ್ತಾರೆಯೇ? ಎಲ್ಲಿ ಹೋಯಿತು ನಿಮ್ಮ ಮೆದುಳು?

  -ಪಬ್

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D