Subscribe Us

ಜಾಹೀರಾತು
header ads

"ಜಾಹೀರಾತು ಪ್ರೇಮ" ಪತ್ರ !

(ಬೊಗಳೂರು ಜಾಹೀರಾತು-ನಿಷೇಧ ವಿಭಾಗದಿಂದ)
 
ಬೊಗಳೂರು, ಆ.9- ಬೊ.ರ. ಪತ್ರಿಕೆಗೆ ಯಾವುದೇ ಜಾಹೀರಾತು ದೊರಕದಿರುವ ಹಿನ್ನೆಲೆಯಲ್ಲಿ ತೀವ್ರ ರೋಷಾವೇಶಗೊಂಡಿರುವ ಬ್ಯುರೋ ಎಲ್ಲಾ ಜಾಹೀರಾತುದಾರರ ಜಾತಕ ಜಾಲಾಡಲು ನಿರ್ಧರಿಸಿದೆ.
 
ಅವರು ಜಾಹೀರಾತು ನೀಡಲು ನಿರಾಕರಿಸಿರುವುದರಿಂದ ತೀವ್ರ ನೊಂದು ಕೊಂಡಿರುವುದರಿಂದ, ಅವುಗಳಿಗೆ ತಕ್ಕ ಶಾಸ್ತಿ ಮಾಡಲು ನಮ್ಮ ಏಕೈಕ ಸದಸ್ಯರ ಬ್ಯುರೋ ಬಹುಮತದ ನಿರ್ಣಯ ಕೈಗೊಂಡಿದೆ.
 
ಈಗ ಪ್ರೇಮಜ್ವರ ಪೀಡಿತರೇ ಈ ಖೋಟಾ ಪತ್ರ ತಯಾರಿಸಿರುವುದರಿಂದ ಇದಕ್ಕೊಂದು love ಲೇಪನವಿದೆ. ಜಾಹೀರಾತುದಾರರ ಮನಕೆರಳಿಸುವ ನಿಟ್ಟಿನಲ್ಲಿ ಈ ಪತ್ರವನ್ನು ನಾವು ಇಲ್ಲಿ ಪ್ರಕಟಿಸುತ್ತಿದ್ದೇವೆ.
 
ನ್ನ ಪ್ರೀತಿಯ FAIR and LOVELY (ಏಕ್ ಚಾಂದ್ ಕಾ ಟುಕ್‌ಡಾ),
 
ನೀನೇ ನನ್ನ TVS SCOOTY (first love) ಮತ್ತು ನನ್ನ AIWA (pure passion). ನಾನು ಯಾವತ್ತೂ BPL (believe in the best) ಮತ್ತು ನೀನೇನಿದ್ದರೂ SANSUI (better than the best).
 
ನೀನು ನನಗೆ DOMINO'S PIZZA (delivering a million smiles**) ಇದ್ದ ಹಾಗೆ. ಇದು ನನ್ನಲ್ಲಿ COLGATE ENERGY GEL (seriously fresh) ಭಾವನೆ ಉಂಟುಮಾಡುತ್ತಿದೆ.
 
ನೀನು ನನ್ನ ಜೀವನ ಸಂಗಾತಿಯಾಗಬೇಕೆಂದು ನಾನು ಬಯಸುತ್ತೇನೆ, ಆದರೆ ನೀನು KAWASAKI BAJAJ CALIBER (The unshakable ) ಆಗಿರುವ ನಿನ್ನಪ್ಪನ ಬಗ್ಗೆ ಚಿಂತಿತಳಾಗಿದ್ದೀ ಅಂತ ನನಗೆ ಗೊತ್ತು. ನನ್ನಪ್ಪನೂ CEAT (born tough ). ಆದರೆ ಚಿಂತಿಸದಿರು, ನಾನು ಕೂಡ FORD ICON (the josh machine) ಮತ್ತು ನನ್ನ ಮನೆಯ ಇತರ ಮಂದಿ KELVINATORS (the coolest ones).
 
ಅವರೆಲ್ಲಾದರೂ ಬೇಡ ಅಂತ ಹೇಳಿದರೆ, ನಾವು ಓಡಿ ಹೋಗಿ ಮದುವೆಯಾಗೋಣ ಮತ್ತು PHILIPS (let's make things better) ಮಾಡೋಣ. ಆಗವರು MIRINDA (zor ka jhatka dhire se lage) ಅಂತ ಭಾವಿಸುತ್ತಾರೆ. ಆದರೆ ನಾನು ಯಾವತ್ತೂ COCA COLA (Jo chahe ho jaye)ದಲ್ಲಿ ನಂಬಿಕೆ ಇಟ್ಟಿರುವವ.
 
ನಮ್ಮ ಮದುವೆಗೆ SAMSUNG DIGITALL (everyone's invited) ಮತ್ತು ಮದುವೆಯ ಬಳಿಕ ನಾವಿಬ್ಬರೂ WHIRLPOOL (U and me — the world's best homemakers). ಯಾವತ್ತಿಗೂ NOKIA (connecting people) ದಂತಿರುವ, ಎಲ್ಲರನ್ನೂ ಪ್ರೀತಿಸುವ ದೇವರ ಮೇಲೆ ನಂಬಿಕೆ ಇಡು. ಈಗ ಪ್ರೀತಿಯ ಗೀತೆಯನ್ನು HYUNDAI (we are listening)., ಪ್ರೀತಿ ಎನ್ನುವುದು DAIRY MILK (real taste of life ) ಅಂತ ನೀನು ಯಾವತ್ತೂ ತಿಳಿದಿರಬೇಕು. ಅಲ್ವೇ?
 
ಆದ್ದರಿಂದ ಯಾವತ್ತೂ ನನ್ನನ್ನು ಮರೆಯಬೇಡ. Ok bye!
 
ನಾನೀ ಪತ್ರದಲ್ಲಿ ಬರೆದದ್ದು ಸ್ವಲ್ಪ ಮಾತ್ರ, ಆದ್ರೆ... PEPSI (Yeh dil mange more)!!!
 
LG (digitally yours)
xyz

Post a Comment

12 Comments

 1. yaari nimma A priyatame? nimma jodi Favikal thara anoka baMdan agirali....aMda haage raKi dina prema patra bareda uddeshavenu?
  nanagenu doubt sAr nimma mEle?

  ReplyDelete
 2. ಪ್ರೇಮಪತ್ರ ಚೆನ್ನಾಗಿದೆ. ನನ್ನ ಹೆಸರಿನಲ್ಲೂ ಒಂದು ಸ್ಕೂಟಿ ಇದೆಯಾ? ಹಾಗಿದ್ರೆ ಅದರ ಪೇಟೆಂಟ್ ಹಣ ನನಗೆ ಕೊಡಿಸಿ.

  ಮದುವೆಯಾಗಿ ಓಡಿ ಹೋಗೋದೋ ಅಥವಾ ಓಡಿ ಹೋಗಿ ಮದುವೆ ಆಗೋದೋ?

  ಕೊನೆಯದಾಗಿ ಪೆಪ್ಸಿ ಕುಡಿಯೋದರ ಬಗ್ಗೆ ಹೇಳಿದ್ದೀರ. ಪ್ರೇಮ ಭಂಗವಾದರೆ ಪೆಪ್ಸಿ ಕುಡಿಯಿರಿ. ಅದರಲ್ಲಿ ವಿಷ ಇದೆಯಂತೆ.

  ಯಾರು ಪ್ರೇಮ ಮಾಡಿದ್ರೆಷ್ಟು ಬಿಟ್ರೆಷ್ಟು. ಅಂತೂ ಪತ್ರಿಕೆ ನೋಡೋ ಹಾಗಾಯ್ತಲ್ಲ. ಅದೇ ಸಂತೋಷದ ವಿಷಯ.

  ReplyDelete
 3. ಮಹಾಂತೇಶ್....

  ಧೂ... ಹೋಗ್ರೀ.... ನನಗೆ ನಾಚಿಕೆಯಾಗುತ್ತೆ....
  ಅನೋಖಾ ಬಂಧನವಾಗಿದೆ.

  ನಿಮ್ಮ ಡೌಟನ್ನು ನಮ್ಮ ಮೇಲೆ ಯಾಕೆ ಹಾಕುತ್ತೀರಿ.... ?

  ರಾಖಿ ದಿನ ಪ್ರೇಮ ಪತ್ರ ಬರೆದಿದ್ದಕ್ಕೆ ಕೈಕೊಟ್ಟ ರಾಖೀ ಸಾವಂತೇ ಕಾರಣ !

  ReplyDelete
 4. ಮಾವಿನಯನಸರೆ,
  ನಿಮ್ಮ ಟಿವಿಎಸ್ ಸ್ಕೂಟಿ ಈಗ ಎಲ್ಲಿರಬಹುದು? :)

  ಸದ್ಯಕ್ಕೆ ನಮಗೆ ಪೆಪ್ಸಿಯೇ ಗತಿ ಅಂತ ಕಾಣ್ಸುತ್ತೆ.... :)

  ಆದ್ರೆ ನೀವು ಪತ್ರಿಕೆ ನೋಡೋ ಹಾಗಾಯ್ತು ಅಂದ್ರಲ್ಲಾ... ಏನದು... ಪ್ರೇಮ ಪತ್ರಿಕೆಯೇ?

  ReplyDelete
 5. ಪ್ರೇಮ ಪತ್ರಿಕೆಯಲ್ಲ, ಬೊ-ರ ಪತ್ರಿಕೆ. ಪ್ರೇಮಪತ್ರಿಕೆಯನ್ನು ಹಾಗೆಲ್ಲಾ ಪಬ್ಲಿಕ್ಕಾಗಿ ತೋರಿಸಬಾರದಂತೆ. ಗಂಡು ಹೆಣ್ಣು ಏನೇನೋ ಬರ್ಕೊಂಡಿರ್ತಾರಂತೆ. ಲಗ್ನಪತ್ರಿಕೆಯನ್ನು ಬಹಳ ಬೇಗ ಮುದ್ರಿಸಿ ಹಾಕಿ. ನಿಮ್ಮನ್ನು ನಾಚಿಸುತ್ತಿರುವ ನಾರೀಮಣಿ ಯಾರು ಅಂತ ಕುತೂಹಲ.

  ReplyDelete
 6. NaarimaNi bagge bEga heli......
  elli idare ? enu madakoMDidire aMta?

  ReplyDelete
 7. ಏನು ಮಾಡಿಕೊಂಡಿದ್ದಾರೆ ಅಂತ ಮಾತ್ರ ನಾನು ಕೇಳೋಲ್ಲ. ಎಲ್ಲಿದ್ದಾರೆ, ಹೇಗಿದ್ದಾರೆ ಅಂತ ಮಾತ್ರ ಸಚಿತ್ರವರದಿ ಕೊಡಿ. ಇದು ಬೇಡಿಕೆಯಲ್ಲ ಕೋರಿಕೆ.

  ReplyDelete
 8. ಛೆ ಛೆ... ಎಂತಾದ್ದು ಮಾರಾಯ್ರೆ ನೀವಿಲ್ಲಿ ಜಗಳ ಮಾಡ್ಕೋತಿರೋದು ನೋಡಿ ಹೊಟ್ಟೆ ಉರಿದು ಹೋಯ್ತು...

  ನಾರೀಮಣಿ ಅಂದ್ರೆ ಮುಂಬಯಿಯಲ್ಲಿ ನರಿಮನ್ ಪಾಯಿಂಟ್‌ಗೆ ಹೋದ್ರೆ ಸಿಗುತ್ತೆ ಅಂತ ಶ್ರೀನಿವಾಸ್‌ಗೆ ಗೊತ್ತಿದೆ.

  ನಾನು ಥೂ ಹೋಗ್ರೀ ಅಂತ ಬೈದಿದ್ದಕ್ಕೆ ನೀವೇಕೆ ನಾಚಿಕೊಳ್ಳಬೇಕು?

  ReplyDelete
 9. Nike!

  I mean "Just Do It"!

  ReplyDelete
 10. ಜೋಷಿ ಅವರೆ,
  ನೀವು ನೈಕ್ ಅಂದಿದ್ದು
  ಮನೆಯಲ್ಲಿ ಒಮ್ಮೆ ಸುಮ್ಮನೆ ಮಲಗಿ ಗಟ್ಟಿಯಾಗಿ ನಿದ್ರಿಸುತ್ತಿದ್ದ ನಾಯಿ ಮರಿಯ ಬಾಲ ತುಳಿದಾಗ ಕೇಳಿ ಬಂದಿದ್ದ ಸದ್ದಿನಂತೆ ಕೇಳಿಸಿತು.
  I just did it !

  :)

  ReplyDelete
 11. ಅಸತ್ಯಿಗಳೇ,

  ನನಗೆ ಸ್ಪಲ್ಪ ಸರಿ ಅನಿಸಲಿಲ್ಲ..
  ನಿಮ್ಮ ಓದುಗರು ನಿಮ್ಮಿಂದ ನಿಮ್ಮ ಟ್ರೆಡ್ ಮಾರ್ಕ್ ಲೇಖನಗಳನ್ನು ಎದುರು ನೋಡುತ್ತಿರುತ್ತಾರೆ.ನೀವು ಈ ರೀತಿ ಹಳೆಯ forwared mailನ್ನು ಓದುಗರಿಗೆ ಕೊಟ್ಟರೆ ಹೆಂಗ್ರೀ?

  ಬೇಜಾರ್ ಮಾಡ್ಕೋಬೇಡಿ ನನಗೆ ಅನಿಸಿದನ್ನು ನಾ ಹೇಳಿದೆ..ಆಂದಂಗೆ ನೀವು ಏನೂ ಬರೆದ್ರೂ ಓದ್ತೀವಿ.ನಿಮ್ಮ ಆಫೀಸ್ ಡಾಕ್ಯೂಮೇಂಟ್ಸ್ ತಂದು ನಿಮ್ಮ ಬ್ಲಾಗನಲ್ಲಿ ಹಾಕಿದರೂ ಪರ್ವಾಗಿಲ್ಲ :)

  ReplyDelete
 12. ಶಿವ್ ಅವರೆ, ನಿಮ್ಮ ಅನಿಸಿಕೆ ಸರಿ,
  ಸಲಹೆಗೆ ಧನ್ಯವಾದ.

  "Busy"ness ಜಾಸ್ತಿ ಆದಾಗ ಆಗಾಗ ಹೀಗಾಗಿದೆ. ಆಫೀಸ್ ಡಾಕ್ಯುಮೆಂಟ್ಸ್ ಹಾಕಿದ್ರೆ ಬ್ಲಾಗು-ಸ್ಫೋಟ ಆಗುತ್ತೆ...
  )

  ReplyDelete

ಏನಾದ್ರೂ ಹೇಳ್ರಪಾ :-D