(ಬೊಗಳೂರು ಮ-ರಗಳೆ ಬ್ಯುರೋದಿಂದ)
ಬೊಗಳೂರು, ಆ.3- ಫಲ ಕೊಡುವ ಮಗಳನ್ನು ಬೆಳೆಸಿ ಪೋಷಿಸುವುದು ಮಾವನಾದವನ ಕರ್ತವ್ಯ.

ಈ ವಾಕ್ಯ ನೋಡಿ ಆಶ್ಚರ್ಯವಾದ ಹಿನ್ನೆಲೆಯಲ್ಲಿ ಮಾವನೇಕೆ ಮಗಳನ್ನು ಬೆಳೆಸಬೇಕು ಎಂದು ಕೇಳಿದಾಗ, ಉಸಿರು ಬಿಡಬೇಕಿದ್ದರೆ, ಜೀವನ ಹಸಿರಾಗಬೇಕಿದ್ದರೆ ಮಗಳು ಬೇಕು ಎಂಬ ಗೊಂದಲದ ಉತ್ತರವೇ ಸಿಕ್ಕಿತ್ತು. ಅಂತೂ ಬ್ಯುರೋದ ಮ-ರಗಳೆ ಗೊಂದಲದ ಗೂಡಾಗಿ ಪರಿವರ್ತಿತವಾಯಿತು.

ಗಿಡ ನೆಡಬಹುದು, ಮರಗಳನ್ನೇ ನೆಡುವುದು ಹೇಗಪ್ಪಾ.... ಎಂದು ರಪರಪನೆ ತಲೆ ಕೆರೆದುಕೊಂಡಾಗ ಈ ಸಂದೇಹಕ್ಕೆ ಪರಿಹಾರ ಸಿಕ್ಕಿದ್ದು ಇಲ್ಲಿ ಪ್ರಕಟವಾಗಿರುವ ಸುದ್ದಿಯಿಂದ.

ಒಂದಿಡೀ ಮರವನ್ನೇ ಕಡಿದು.... ಅಲ್ಲಲ್ಲ... ಬೇರು ಸಮೇತ ಕಿತ್ತು ಬೇರೆಡೆ ನೆಟ್ಟು ಸುಲಲಿತವಾಗಿ ಸ್ಥಳಾಂತರ ಮಾಡಲಾಗಿದೆ!

ಈ ವಿಷಯಕ್ಕೆ ಅರ್ಧದಲ್ಲೇ, ಸೆಮಿ ಕೋಲನ್ ಹಾಕೋಣ.....

ಈಗ ಈ ಸ್ಲೋಗನ್ ಹಿಂದೆ ಅನ್ವೇಷಣೆಗೆ ಹೊರಟಾಗ ಇದು ಸ್ವರಲೋಪ.... ಅಲ್ಲಲ್ಲ ವ್ಯಂಜನ ಲೋಪ ಸಂಧಿ ಎಂಬುದು ಗೊತ್ತಾಯಿತು.

ಮಗಳನ್ನು ಎನ್ನುವ ಕಡೆ ಮಧ್ಯದಲ್ಲಿ ಒಂದು 'ರ' ಹಾಗೂ ಮಾವನಾದವನ ಎಂಬುದರ ಮಧ್ಯದಲ್ಲಿ 'ನ' ಎಂಬುದು ವೈಯಾಕರಣಿಗಳ ಯಾವುದೋ ಒಂದು ಲೋಪ ಸಂಧಿಗೆ ಸೇರಿಕೊಂಡಿರುವ ಕಾರಣದಿಂದಾಗಿ ಇದು ಒಂದು ಕಾಲದಲ್ಲಿ ಪರಿಸರ ಸಂರಕ್ಷಕರ ಸ್ಲೋಗನ್ ಆಗಿದ್ದಿರಬಹುದು ಎಂಬುದು ಬ್ಯುರೋಗೆ ಆಮೇಲೆ ತಿಳಿದುಬಂದ ವಿಷಯ.

ಈಗ ಸೆಮಿ ಕೋಲನ್‌ನಿಂದ ಮುಂದುವರಿಸಲಾಗಿ....

ಮೇಲಿನ ಸ್ಲೋಗನ್‌ಗೂ ಈ ಪ್ರಕರಣಕ್ಕೂ ಸಾಕಷ್ಟು ಸಂಬಂಧವಿದೆ ಎಂಬುದು ಬೊಗಳೆರಗಳೆ ಬ್ಯುರೋ ತನಿಖೆಯಿಂದ ಗೊತ್ತಾಗಿದೆ.ಈ ಮರ ನೆಟ್ಟ ನಾರಾಯಣಸ್ವಾಮಿ ಎಂಬವರು ಈ ಸ್ಲೋಗನ್ನನ್ನು ಅಕ್ಷರಶಃ ಪಾಲಿಸಿದ್ದಾರೆ. ಮಗಳನ್ನು ಬೇರೆಯವರಿಗೆ ಕೊಟ್ಟು ಮದುವೆ ಮಾಡಿದ ಸ್ಮರಣಾರ್ಥ ಅವರು ಈ ಸಸಿ ನೆಟ್ಟಿದ್ದರು. ಅದೀಗ ಫಲಕೊಡುವ ಮರವಾಗಿದೆ. ಮಾವ ಮಗಳನ್ನೂ ಕೊಟ್ಟಾಗಿದೆ, ಮರಗಳನ್ನೂ ಬೆಳೆಸಿಯಾಗಿದೆ ! ಮಗಳನ್ನು ಮನೆಯಿಂದ ಹೊರ ಹಾಕಿ ಆಗಿದೆ, ಮರವನ್ನೂ ಮನೆಯಿಂದ ದೂರ ಇಟ್ಟೂ ಆಗಿದೆ!!

15 Comments

ಏನಾದ್ರೂ ಹೇಳ್ರಪಾ :-D

 1. ಮಾವನ ಮಗಳನ್ನು ಹುಡುಕಿಕೊಂಡು ಹೋಗಿದ್ರಾ? ಅದಕ್ಕೇ ಇವತ್ತಿನ ಪತ್ರಿಕೆ ತಡವಾಗಿದೆ. ಮಾವ ಸಿಕ್ಕಿದರೋ ಅಥವಾ ಮಾವನ ಮಗಳೋ? ಅಥವಾ ಅವರ ಮನೆಯಲ್ಲಿ ನಿಮ್ಮ ಮಗಳೇನಾದರೂ ಸಿಕ್ಕಿದಳೋ!

  ವ್ಯಂಜನ ಲೋಪ ಸಂಧಿ ಅಂದ್ರಲ್ಲ. ವ್ಯಂಜನ ಅಂದ್ರೆ ಕಾಯಿಪಲ್ಲೆಯಿಂದ ತಯಾರಿಸುವ ತಿನಿಸಲ್ವೇ? ಇದರಲ್ಲಿ ಏನು ಲೋಪವಾಗಿತ್ತು. ಉಪ್ಪಾ? ಸಾಮಾನ್ಯವಾಗಿ ಮಾವನ ಮನೆಯಲ್ಲಿ ಪಲ್ಯಕ್ಕೆ ಉಪ್ಪು ಕಡಿಮೆ ಹಾಕಿ, ಮದುವೆ ಆಗಲು ಬರುವ ಭಾವೀ ಅಳಿಯನನ್ನು ಗೋಳು ಹುಯ್ದುಕೊಳ್ಳೋದು ಸಾಮಾನ್ಯದ ಸಂಗತಿ. ಈ ಮಾವನ ಮನೆಯನ್ನು ಹುಡುಕಲು ಎಷ್ಟು ಸಂದಿ ಗೊಂದಿಗಳನ್ನು ದಾಟಿದಿರಿ.

  ಇನ್ನೊಂದು ವಿಷಯ - ಈ ಮಾವನಿಗೆ ಮೀಸೆ ಬಲು ದಪ್ಪ ಇದೆಯಂತೆ. ಹೌದೇ?

  ReplyDelete
 2. arare maavan magane nimage maduve aagideya
  nimma EE vyangya brahadinda naanu pracodithanaagi 1 article barediddeene
  kumara parva
  samajavaniyllide

  ReplyDelete
 3. ಜಿತೇಂದ್ರರೇ, ನೀವೇನೋ ಒಳ್ಳೆಯ ಲೇಖನ ಬರೆದಿದ್ದೀರಿ. ಆದರೆ ನನಗೆ ಓದೋಕ್ಕೇ ಆಗ್ತಿಲ್ಲ. ನನ್ನನ್ನು ಓದಲು ಪ್ರಚೋದಿಸಿ. (ಬಹುಶ: ನೀವು ansi ಉಪಯೋಗಿಸಿರಬೇಕು)

  ReplyDelete
 4. ಮಾವಿನ ಅರಸರೆ,
  ನಮ್ಮ ಮಾವನ ಮಗಳು ನನ್ನ ಬಳಿಯಲ್ಲೇ ಇದ್ದಾಳೆ. ಬೇರೆ ಯಾರನ್ನೋ ಹುಡುಕಿಕೊಂಡು ಹೋಗಿದ್ರಿಂದ ಪತ್ರಿಕೆ ತಡವಾಗಿದೆ. :)

  ಮನೆಯಿಂದ ಕೆಲವೇ ದೂರದಲ್ಲಿ ಕಿಟಕಿ ಸಮೀಪವೇ ಮಾವನ ಮಗಳು ಇರುತ್ತಾಳೆ.... ಆ ಮನೆಗೆ ಹೋದಾಗ ಮಾತ್ರ ಲೋಪವಾಗಿದ್ದು ನಮ್ಮ ಕೈ-ಕಾಲುಗಳು ಮಾರಾಯ್ರೇ.... :)

  ReplyDelete
 5. ಜಿತೇಂದ್ರ ಅವರೆ,
  ನಿಮ್ಮ ಬ್ಲಾಗು ನೋಡಿದೆ.
  ಆದ್ರೆ ನೀವು ನುಡಿಯಲ್ಲಿ ನುಡಿಯುತ್ತಿರುವುದರಿಂದ ಅದನ್ನು install ಮಾಡಿಕೊಳ್ಳೋದು ಹೆಚ್ಚಿನವರಿಗೆ ಕಷ್ಟದ ವಿಷಯ. ಆದುದರಿಂದ ನೀವು unicode font ಬಳಸಿಕೊಳ್ಳುವುದು ಸೂಕ್ತ.
  ಇಲ್ಲವಾದಲ್ಲಿ ಬೇರೆಯವರು ಭೇಟಿ ಕೊಡಲಾರರು.

  ನೀವು ಕೂಡ ಮಾವನನ್ನು ಅರಸಿಕೊಂಡು ಹೋದ್ರಂತೆ...!!!

  ReplyDelete
 6. ನಿಮ್ಮ ಮಾವನ ಮಗಳು ಕಿಟಕಿ ಬಳಿ ಏಕಿದ್ದಾರೆ? ಕಿಟಕಿಗೆ ಕಂಬಿಗಳಿವೆಯಾ? ಮನೆಯೊಳಗೆ ತಾಟಕಿ ಇದ್ದಾಳಾ? ಬಾಗಿಲು ಹಾಕಿದೆಯಾ? ಮಗಳನ್ನು ಒಳಗೆ ಸೇರಿಸಿ, ಮುಂಬಾಗಿಲಿಗೆ ಬೀಗ ಹಾಕಿದ್ದಾರಾ?

  ಮಾವನ ಮಗಳನ್ನು ನೋಡಿದ ಕೂಡಲೇ ನಿಮ್ಮ ಕೈಕಾಲು ಲೋಪವಾಗುತ್ತದೆಯಾ? ಅಂದರೆ ಮಗಳ ಹತ್ತಿರ ಹೋದರೆ ಕಾಲುಮುರೀತೀನಿ ಅಂತ ಮಾವನವರು ತಾಕೀತು ಮಾಡಿದ್ದಾರಾ?

  ಹೆಚ್ಚಿನ ಸಲಹೆ ಬೇಕಿದ್ದರೆ ನನಗೆ ತಿಳಿಸಿ. ಪುಕ್ಕಟೆ ಸಲಹೆ ಕೊಡುವೆ.

  ReplyDelete
 7. ಏನಿಲ್ಲಾ.... ವರದಿ ಈ ಕ್ಷಣವೇ ಕಳುಹಿಸಿಕೊಡಿ ಅಂದಿದ್ದೆ ನಾನು....

  ಅವರು ಅದನ್ನು ವರದಕ್ಷಿಣೆ ಅಂತ ತಪ್ಪಾಗಿ ತಿಳ್ಕೊಂಡ್ರು. ಅದ್ಕೆ ಮಾವನ ಮಗಳನ್ನು ಕರ್ಕೊಂಡು ಹೋಗೇ ಬಿಟ್ರು....

  ಕಂಬಿಯ ಹಿಂದೆನೇ ಇದ್ರೂ ಕಂಬಿ ಎಣಿಸಬೇಕಾಗುವ ಆತಂಕ ಇರೋದು ನನಗೇ... :)

  ReplyDelete
 8. :} Akshara lOpawaad bagge bardaddu bhaaL cchhandit noDri!

  ReplyDelete
 9. ಇಲ್ಲಿ ಬರಿ ಮಾವ-ಮಗಳು ಬಗ್ಗೆ ಚರ್ಚೆಯಾದರೆ ಅಳಿಯನ ಕೇಳೋರು ಯಾರು ಇಲ್ವೇ? ಛೇ ಛೇ..

  ಈಡೀ ಮರವನ್ನು 'ಟ್ರಾನ್ಸ್ ಪ್ಲಾಂಟ್' ಮಾಡಿದ್ದು ಹೇಗೆ?ಅದು 'ಟ್ರಾನ್ಸ್ ಟ್ರೀ' ಆಗಬೇಕು ಅಲ್ವಾ :)ಯಾಕೇಂದರೆ ಅದು ನೋ ಮೋರ್ ಪ್ಲಾಂಟ್..

  ಅದೇ ಸ್ಕೀಮು ಪ್ರಕಾರ ಅಲ್ಲಿಂದ ಒಂದೆರಡು ಆಲದ ಮರ,ಒಂದು ಹಲಸಿನ ಮರ,ನೇರಳೆ ಹಣ್ಣಿನ ಮರ..ಇಲ್ಲಿಗೆ ಕಳುಸಿಬೇಕೆಂದು ಕೋರಿಕೆ.ನಮ್ಮ ಮೇಲೆ ಸ್ಪಲ್ಪ ಮರ-ಕ ಇರಲಿ..

  ReplyDelete
 10. ಸ್ವಾಮೀ, ಲಟ್ಟಣಿಗೆ ಏಟು ತಿಂದಿದ್ದೂ ಸಾಲೋದಿಲ್ಲೇನು!
  ಯಾವ್ದೋ ಸಂಧಿ ಸುಡುಗಾಡು ತಿರುಗ್ ಬ್ಯಾಡಿ ಅಂತ ಎಷ್ಟು ಸರ್ತಿ ಹೇಳ್ಲಿಲ್ಲಾ, ಈಗ ಅನುಭವಿಸಿ...

  ReplyDelete
 11. Anveshi, Happy Friendship Day, ri!
  Zabardast friend!!!

  ReplyDelete
 12. ಸಿಂಧು,
  ನಮ್ಮ ರಾಕ್ಷಸತಾ.... ಅಲ್ಲಲ್ಲ ಸಾಕ್ಷರತಾ ಆಂದೋಲನದ ಪರಿಣಾಮವೇ ಈ ಲೋಪ ಸಂಧಿ.

  ಆದ್ರೆ ನೀವು ಅದನ್ನು ಭಾಳ ಚಂದ ಇತ್ತ್ ಅಂತ ಹೇಳಿದ್ರಿಂದ ನಿಮ್ಮನ್ನೇ ರಾಕ್ಷಸತಾ ಆಂದೋಲನಕ್ಕೆ ಟೀಚರ್ ಮಾಡ್ತಾವ್ರಂತೆ... :)

  ReplyDelete
 13. ಶಿವ್ ಅವರೆ,
  ನಿಮ್ಮ ಕಾಳಜಿ ನಮಗೆ ಅರ್ಥವಾಗುತ್ತದೆ. ಅಳಿಯನಾಗಲು ಹೊರಟಿರುವವರಿಗೆ ಅಳಿಯ ದೇವರ ಬಗ್ಗೆ ಮರ-ಕ ಜಾಸ್ತಿ....
  ನಿಮ್ಮ ಪಾತರಗಿತ್ತಿ ಎಲ್ಲೆಡೆ ಓಡಾಡುತ್ತಾ ಮರದಿಂದ ಮರಕ್ಕೆ ಹಾರುತ್ತಿದೆ. ಆದುದರಿಂದ ನೇರಳೆ, ಮಾವು ಇತ್ಯಾದಿ ಹಣ್ಣುಗಳನ್ನು ಅದುವೇ ತಂದುಕೊಡುತ್ತದೆ ಅಂತ ನಂಬಿದ್ದೇವೆ.
  ಆದರೂ ನೀವು ಕೇಳಿದ್ದಕ್ಕೆ ಇಲ್ಲವೆನ್ನಲಾಗದು. ತಕ್ಷಣವೇ ಮಾನ(ನ)ವನ ಮ(ರ)ಗಳನ್ನು ಕಳುಹಿಸಲಾಗುತ್ತದೆ.

  ReplyDelete
 14. ಕಾಳೂ ಅವರೆ ಯಾನೆ ಅವರೆ ಕಾಳು ಅವರೆ...

  ನೀವು ನಮ್ಮ ಬಗ್ಗೆ ಮರುಕಪಡುತ್ತಿರುವುದು ನೋಡಿ ಲಟ್ಟಣಿಗೆ ಏಟು ತಿಂದಷ್ಟೇ ಖುಷಿಯಾಗಿದೆ.

  ಗಲ್ಲಿ ಗೊಲ್ಲಿ ಸುತ್ ಬೇಕು ರೀ, ಯಾಕಂದ್ರೆ ಅದು ಅಭ್ಯಾಸ ಬಲಾ ರೀ... ಹುಟ್ಟುಗುಣ ನೀರಿಲ್ಲದೂರಿಗೆ ಹೋದರೂ ಬಿಡದು...
  :)

  ReplyDelete
 15. Thanks Sindhu
  ನನ್ನ ಜಾಬಾರ್-ದೋಸ್ತ್ ಅಂತ ರೇಗಿಸಿದ್ದಕ್ಕೆ
  :)
  Same to U toooooo

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post