(ಬೊಗಳೂರು ಹನಿಕೂಡಿಸುವ ಬ್ಯುರೋದಿಂದ)
ಬೊಗಳೂರು, ಜು.25- ಬೊಗಳೆ-ರಗಳೆ ಬ್ಯುರೋವನ್ನು ಮುಚ್ಚಿ ಬೇರೆಯೇ ಉದ್ಯಮ ಕೈಗೊಳ್ಳಲು ನಿರ್ಧರಿಸಲಾಗಿದೆ.
ಈ ನಿರ್ಧಾರಕ್ಕೆ ನಮ್ಮ ಏಕಸದಸ್ಯ ಬ್ಯುರೋದ ಎಲ್ಲಾ ಸಿಬ್ಬಂದಿಗಳೂ ಟಾಟಾ ಹೇಳಿ ಮುಂಬಯಿಗೆ ತೆರಳಿರುವುದೇ ಕಾರಣ.
ಅಳಿದು ಉಳಿದ ಬ್ಯುರೋ ಕೂಡ ಮುಂಬಯಿಗೆ ಯಾಕೆ ಭೇಟಿ ನೀಡಬಾರದು ಅಂತ ಯೋಚಿಸಿದಾಗ ಮೂರೂವರೆ ಪ್ರಶ್ನೆಗಳು ಧುತ್ತನೆ ಎದುರಾಗಿವೆ. ಇದರ ಅಸತ್ಯಾನ್ವೇಷಣೆಗೆ ಸಕಾಲ ಅಂತ ನಿರ್ಧರಿಸಲಾಯಿತು. ಆ ಪ್ರಶ್ನೆಗಳು ಇಂತಿವೆ:
1. ದೇಶಾದ್ಯಂತ ನಾಣ್ಯಗಳ ಕೊರತೆ ಕಂಡು ಬಂದಿದ್ದರೂ ಎಲ್ಲವೂ ಮುಂಬಯಿಯಲ್ಲಿ ಕ್ರೋಡೀಕರಣಗೊಂಡಿವೆ. ಇದಕ್ಕೆ ಕಾರಣಗಳೇನು?
2. ದೇಶಾದ್ಯಂತ ಜನಸಂಖ್ಯೆ ಹೆಚ್ಚಳವಾಗುತ್ತಿದ್ದರೂ ದಿಢೀರ್ ಹೆಚ್ಚಳ ಕಂಡುಬಂದಿದ್ದು ಮುಂಬಯಿಯಲ್ಲಿ. ಯಾಕೆ?
3. ಮುಂಬಯಿಯಲ್ಲಿ ಬಾಂಬ್ ಸ್ಫೋಟಿಸದಿರುವಾಗಲೂ ಶಬ್ದ ಮಾಲಿನ್ಯ ಹೆಚ್ಚಾಗಲು ಕಾರಣಗಳೇನು?
4. ಮುಂಬಯಿಯಲ್ಲಿರುವವರು ಎಲ್ಲರೂ ಚಿಲ್ಲರೆ ಜನಗಳೇ?
ಅಸತ್ಯಾನ್ವೇಷಿ ತನಿಖೆಗಾಗಿ ನೇರವಾಗಿ Bomb-bayಗೆ ಹೊರಟಿರುವ ಎತ್ತಿನ ಗಾಡಿ ಹತ್ತಿದಾಗ ತಲೆಯಲ್ಲಿ ನೂರಾರು ಯೋಚನೆಗಳು.
ಉಗ್ರಗಾಮಿಗಳೇನಾದರೂ ಎತ್ತಿನ ಗಾಡಿಯಲ್ಲಿ ಬಾಂಬ್ ಇರಿಸಿದ್ದಾರೆಯೇ ಎಂಬ ಆತಂಕದ ನಡುವೆ ಎತ್ತುಗಳ ಕಾಲು ಎತ್ತಿ ತೀವ್ರ ತಪಾಸಣೆಗೆ ಗುರಿಪಡಿಸಿ ಖಚಿತಪಡಿಸಿಕೊಳ್ಳಲಾಯಿತು. ಬಾಂಬಿನಂತಹ ವಸ್ತು ಕಂಡಿತಾದರೂ ಅದಲ್ಲವೆಂದು ತಿಳಿದು ಮುಂದುವರಿಯಲಾಯಿತು.
ಅಲ್ಲಿ ಹೋದಾಗ ಕಂಡದ್ದೇನು? ಎಲ್ಲರೂ ಅಲ್ಲಿ ತಟ್ಟೆ ಹಿಡಿದುಕೊಂಡಿದ್ದಾರೆ, ಎತ್ತಿನ ಗಾಡಿಯ ಕಿಟಕಿಯೊಳಗೂ ಕೈ ತೂರಿಸುತ್ತಿದ್ದಾರೆ. ತಟ್ಟೆಯಲ್ಲಿ ಠಣ್ ಅಂತ ಶಬ್ದ ಕೇಳಿದ ತಕ್ಷಣ ತಟ್ಟೆಗೆ ಅಂಟಿಕೊಂಡಿದ್ದ ಕೈಗಳ ಹಿಂದಿರುವವರ ಮುಖಭಾವವೇ ಬದಲಾಗುತ್ತದೆ. ಅದುವರೆಗೆ ಗಂಟಿಕ್ಕಿದ್ದ ಮುಖ ಆ ಸದ್ದು ಕೇಳಿದ ತಕ್ಷಣ ಅರಳಿಕೊಂಡಿತ್ತು. ವಾಸ್ತವದಲ್ಲಿ, ಇಂಥ ಸದ್ದು ಕೇಳಿದಾಗ ಮುಂಬಯಿಗರು ಹೆದರಬೇಕಿತ್ತು.
ಯಾಕೆ ಹೆದರಿಲ್ಲ.... ಅಂತ ಯೋಚಿಸಿದಾಗ, ಬಹುಶಃ ಮುಂಬಯಿಗರು ಬೊಂ-ಬಾಯಿ ಸದ್ದು ಮತ್ತು ಬಾಂಬ್ ಸದ್ದುಗಳು ಅಷ್ಟೊಂದು Addict ಆಗಿದ್ದಾರೋ ಎಂಬ ಸಣ್ಣ ಸಂಶಯದ ಸುಳಿಯೂ ಬಾರದಿರಲಿಲ್ಲ. ಆ ಶಬ್ದ ಕೇಳಿ ಬಾಂಬ್ ಎಂದು ಮೊದಲು ಹೆದರಿಕೆಯಾದರೂ, ಅಂಥ ಪಾವಲಿ ಬಾಂಬ್ ಇರಲಿಕ್ಕಿಲ್ಲ ಎಂದು ಸಮಾರಾಧನೆ ಮಾಡಿಕೊಂಡು ಮುಂದುವರಿಯಲಾಯಿತು.
ಅಷ್ಟೊಂದು ಗಿಜಿಗಿಜಿ ಗುಟ್ಟುವ ತಟ್ಟೆಗಳು ಮತ್ತು ಆ ತಟ್ಟೆಗಳ ನಡುನಡುವೆ ಕಾಣುತ್ತಿರುವ ತಲೆಗಳ ನಡುವೆ ಬಗ್ಗಿ ನೋಡಿದಾಗ ಕಂಡದ್ದೇನು? 5, 10, 25, 50 ಪೈಸೆಗಳ ನಾಣ್ಯಗಳು!ದೇಶದ ವಾಣಿಜ್ಯ ರಾಜಧಾನಿಯಲ್ಲಿ ಶಬ್ದಗಳಿಗೆ ಬರವಿಲ್ಲ. ಆದರೆ ಇತ್ತೀಚೆಗೆ ತಟ್ಟೆಗೆ ನಾಣ್ಯ ಬೀಳುವ ಶಬ್ದ ಹೆಚ್ಚಾಗಿ ಶಬ್ದಮಾಲಿನ್ಯ ಉಂಟಾಗುತ್ತಿದೆ.
ಮುಂದುವರಿದಾಗ ನಮ್ಮ ಬ್ಯುರೋದಲ್ಲಿ ಕೆಲಸ ಮಾಡುತ್ತಿದ್ದವರೂ ಅಲ್ಲಿದ್ದರು. ಅವರ ತಟ್ಟೆಗಳಿಗೆ ಮಾವಿನಯನಸರಿಂದಲೂ ಒಂದೊಂದು ಠಣ್ ಠಣ್ ಎಸೆತಗಳು ಬಂದು ಸೇರಿಕೊಳ್ಳುತ್ತಿದ್ದವು.ಇದರ ಎಳೆ ಹಿಡಿದಾಗ ದೊರಕಿದ್ದು ಈ ಸುದ್ದಿ. ಮುಂಬಯಿಯಲ್ಲಿ ಧರ್ಮಾನೇ ತಾಯಿ ತಂದೆ ಅಂದುಕೊಂಡೇ ಜೀವನ ಸಾಗಿಸುತ್ತಿರುವವರ ವಾರ್ಷಿಕ ಸಂಪಾದನೆ 180 ಕೋಟಿ ರೂ.!!!! ಇಷ್ಟೊಂದು ಕೋಟಿಯಲ್ಲಿ ಮಾವಿನಯನಸರ ಕೈವಾಡ ಅಥವಾ ಕೈ-ಕೊಡುಗೆ ಎಷ್ಟು ಎಂಬುದನ್ನು ಶೀಘ್ರವೇ ಅನ್ವೇಷಿಸಲಾಗುತ್ತದೆ.
ಮೇಲಿನ ನಾಲ್ಕೂ ಪ್ರಶ್ನೆಗಳಿಗೆ ಓದುಗರು ಈ ಸುದ್ದಿಯಲ್ಲೇ ಉತ್ತರ ಕಂಡುಹುಡುಕಿಕೊಳ್ಳಬೇಕು ಎಂದು ಆದೇಶಿಸಲಾಗಿದೆ.ಬೇಕಾ ಈ ಬೇಕಾರ್ ಉದ್ಯೋಗ? ಅಂದುಕೊಂಡಿದ್ದೇ..... ತಕ್ಷಣಕ್ಕೆ ಹೊಳೆದ ವಿಷಯವೆಂದರೆ ಬ್ಯುರೋಗೆ ಬೀಗ ಹಾಕಿ ಮುಂಬಯಿಗೆ ತೆರಳುವುದು.
ಏನ್ರಿ ಅಸತ್ಯಿಗಳೇ,
ReplyDeleteಮಾಡೋ jobಗಿಂತ ಬೆಗ್ಗು ಮಾಡದೇ ಬೆಟ್ಟರ್ ಅಂತ proof ಮಾಡಿಬಿಟ್ರಿ.ನಡೀರಿ,ನಾನು ನಿಮ್ಮ ಜೋತೆಯಲ್ಲಿ ಸೇರತೀನಿ.ಹೇಗಿದ್ದರೂ ಅಲ್ಲೆ ತವಿಶ್ರೀಗಳ RBI bank ಬೇರೆ ಇದೆ.ತನಿಖೆಗೆ ತುಂಬಾ help ಇದೆ.
ಇಸ್ಟು ಆದಾಯ ಅದು tax ಬೇರೆ ಇಲ್ದೆ ಅನ್ನೊದು ಚಿಂತನೆಗೆ ತೊಡಗಿಸಿದೆ.
Bogale ragale muchchuva nirdhaarada hinde mental kaivaaDa ide. Asatyaanveshigalu Mental Dot Com Bureauda mukhya worrygaararaagi munduvariyaliddare (!!?). Bombaynalli bendu basavaLida Mavinayanasa avaralli bhayOtpaadane unTu maaDalu AnveshigaLu yatnisuttiddare.
ReplyDeleteತವಿಶ್ರೀಗಳು ಇರೋದೇ ಹಣ ಮಾಡುವ ಬ್ಯಾಂಕಿನಲ್ಲಿ. ಅದರ ಎದುರೇ ಹೋಗಿ ನಿಲ್ಲೋಣ್ವಾ ಮಹಾಂತೇಶ್?
ReplyDeleteತಟ್ಟೆ ತನ್ನಿ
ವಾಯ್ ಮೆಂಟಲ್,
ReplyDeleteಏನೇನೋ ಸೆಂಟಿ-ಮೆಂಟಲ್ ಆಗಿ ಮಾತಾಡಿದ್ರೆ, ಮುಖಕ್ಕೆ ಮೆಂಟಾಲಿಕ್ ಆಸಿಡ್ ಸುರಿಯಬೇಕಾಗುತ್ತೆ ಅಂತ ಬಾಂಬ್ ಲಿಂಕ್ ಇರುವ ತವಿಶ್ರೀಗಳ ಮೂಲಕ ಹೆದರಿಸಲು ಸಿದ್ಧರಾಗುತ್ತಿದ್ದೇವೆ.
ಮೆಂಟಾಲಿಕ್ ಆಸಿಡ್ ಅನ್ನು ಆಲ್ಕೋಹಾಲಿಕ್ ಆಸಿಡ್ ಅಂತ ತಿಳಿದುಕೊಂಡು ಕುಡಿಯಬೇಡಿ.
ನೋಟಿನ ಆಮಿಷಕ್ಕೆ ಬಗ್ಗದ ಅಸತ್ಯಾನ್ವೇಷಿಗಳನ್ನು ಅಂತೂ ಇಂತೂ ನಾಣ್ಯದ ತೂಕದಿಂದ ಬಗ್ಗಿಸಿದ ಶ್ರೇಯ ಮುಂಬೈಗೆ ಸಲ್ಲಬೇಕು. ದೇಶದಲ್ಲಿರುವ ಮೂರು ಮಿಂಟ್ಗಳಲ್ಲಿ ಒಂದು ಮುಂಬೈನಲ್ಲಿದೆ. ಆದ್ದರಿಂದ ಇಲ್ಲಿ ಚಿಲ್ಲರೆಗಳಿಗೆ ಕಡಿಮೆ ಇಲ್ಲ. ಅದೂ ಅಲ್ಲದೇ ಈಗ ಚಿಲ್ಲರೆ ನೋಟಿಗಿಂತ ಗಟ್ಟಿಯಾಗಿ ತೂಕವಾಗಿದೆ. ಬೇಕಿದ್ದರೆ ಚಿಲ್ಲರೆ ಇಟ್ಟಿರುವ ನಿಮ್ಮ ಜೇಬು ತೂತಾಗಿದೆಯೋ ಇಲ್ಲವೋ ನೋಡಿಕೊಳ್ಳಿ.
ReplyDeleteಮಹಂತೇಶರು ಮತ್ತು ಅಸತ್ಯಾನ್ವೇಷಿಗಳು ಮುಂಬೈಗೆ ಬಂದರೆ ನಮ್ಮೂರಿಗೂ ಒಳ್ಳೆಯದು. ಅವರೂರುಗಳಿಗೂ ಒಳ್ಳೆಯದು. ಇನ್ನು ಮೆಂಟಲ್ ಅವರು ಬರುವ ಅವಶ್ಯಕತೆ ಇದೆಯಾ ಎಂದು ವಿಚಾರಿಸಿ ನೋಡಬೇಕು. ಇಲ್ಲಿ ಮೆಂಟಲ್ ಕೇಸುಗಳು ಹೆಚ್ಚುತ್ತಿದೆ ಎಂಬ ಕೂಗು ಕೇಳಿ ಬರುತ್ತಿತ್ತು. ಕಡಿಮೆಯಾಗಿದ್ದರೆ ಅವರೂ ಬರಬಹುದು.
ಮಾವಿನಯನಸರೇ,
ReplyDeleteನಮ್ಮ ಇಡೀ ಬ್ಯುರೋ ನಿಮ್ಮ ಮನೆಯೆದುರು ತಟ್ಟೆ ಹಿಡಿದು ನಿಲ್ಲುವ ಸಾಧ್ಯತೆಗಳಿರುವುದರಿಂದ ಬಾಗಿಲು ಹಾಕಿಕೊಳ್ಳಿ.
ಒಳಗಿದ್ದರೂ, ಒಳಗಿಂದಲೇ "ನಾನಿಲ್ಲ, ಮುಂದೆ ಹೋಗಪ್ಪ" ಅಂತ ಹೇಳೋದನ್ನು ಮರೆಯದಿರಿ.
ಮೆಂಟಲ್ ಜೋರಾಗಿ ಗಂಟೆ ಬಜಾಯಿಸಿದ್ದರಿಂದ
ಗಂಟಲ್ಲ್ಲಿ ಸಿಲುಕಿಕೊಂಡಿದೆಯಂತೆ,
ಅದು ನಾಣ್ಯವೇ ಅಂತ ತನಿಖೆಯಾಗಬೇಕಿದೆ.
೧) ನಾಣ್ಯಗಳ ಕೊರತೆಗೆ ಮುಂಬಯಿಭಿಕ್ಷುಕರ ಮೇಲೆ ದೂರು ಹಾಕಿದ್ದನ್ನು ತೀವ್ರವಾಗಿ ಖಂಡಿಸಿರುವ ಮುಂ.ಭಿ.ಸಂ ಇನ್ನು ಮುಂದೆ "Visa/Master/Amex/Discover cards accepted" ಎಂಬ ಫಲಕಗಳನ್ನು ಸಂಘದ ಪ್ರತಿ ಭಿಕ್ಷುಕನಿಗೂ ಒದಗಿಸಲು ನಿರ್ಧರಿಸಿದೆ.
ReplyDelete೨) "ಯೆ ಬಂಬಯ್ ಶಹರ್ ಹಾದ್ಸೋಂಕಾ ಶಹರ್ ಹೈ... ಯಹಾಂ ರೋಜ್ರೋಜ್ ಹರ್ ದೌಡ್ ದೌಡ್ ಪೆ ಮಿಲ್ತಾ ಹೈ ಕೊಯೀ ನ ಕೋಯಿ... ಹಾದ್ಸಾ..." ಎಂಬ ಹಿಂದಿ ಚಿತ್ರಗೀತೆಯೊಂದಿದೆ. ಹಾದ್ಸಾ ಅಂದರೆ accident. ನೀವು ಗಮನಿಸಬೇಕಾದ್ದೆಂದರೆ accident ಮರಣಕ್ಕೆ ಮಾತ್ರ ಹೇತುವಲ್ಲ, ಜನನಕ್ಕೂ ಎಂಬುದನ್ನು!
೩) ಮುಂಬಯಿ 'ಮಹಾ' ರಾಷ್ಟ್ರದ ರಾಜಧಾನಿಯಾದ್ದರಿಂದ ರಾಷ್ಟ್ರದ ಎವರೇಜಿಗಿಂತಲೂ ಅಲ್ಲಿ ಶಬ್ದಮಾಲಿನ್ಯ ಜಾಸ್ತಿ.
೪) ಅಲ್ಲ. ಮುಂಬಯಿಯಲ್ಲಿರುವ ಎಲ್ಲರೂ ನೋಟದಾಗೆ ನಗೆಯಾ ಬೀರಿ ನೋಟಿನಾಗೆ ಚಿಲ್ಲರೆ ಮಾಡಿ... ವ್ಯವಹಾರ ಚಾಲಾಕಿನ ಒಳ್ಳೆಯ ಜನರು.
ಜೋಷಿಯವರೆ,
ReplyDeleteಪ್ರತಿಯೊಬ್ಬರೂ ಜೀವನದಲ್ಲಿ ಆಗಾಗ ACCIDENT ಮಾಡಿಕೊಳ್ತಾರೆ ಎಂಬೋ ಪರಮಾನ್ನಸತ್ಯವನ್ನು ಉಣಬಡಿಸಿ ನೆನಪಿಸಿದ್ದಕ್ಕೆ ಧನ್ಯವಾದ.
ಅದೂ ಕೂಡ ಬಂಬಯೀ ಶಹರಿನಲ್ಲಿ ಆಗಾಗ್ಗೆ ಇಂಥದ್ದು ನಡೆಯುತ್ತಿರುತ್ತದೆ. ಅದಕ್ಕೇ ಬೇರೆಯೇ grant ಆಗಿರುವ ರೋಡಿದೆ ಅಂತ ಮಾವಿನಯನಸರಿಗೆ ಚೆನ್ನಾಗಿ ತಿಳಿದಿದೆಯಂತೆ!!!
ಮಾವಿನಯನಸರು bombಏನಲ್ಲೇ ಏಕೆ ವಾಸಿಸುತ್ತಿರುವುದು ಎಂಬ ಸಮಸ್ಯೆಗೆ ಉತ್ತರ ನೀಡಿದ್ದಕ್ಕೆ ಧನ್ಯವಾದಗಳು.
ReplyDelete-ಪಬ್
ಪಬ್ಬಿಗರೇ,
ReplyDeleteಆಲ್ಕೋಹಾಲ್ ಪಿಲ್ ಸೇವಿಸಿ ಮೇಲೆ ಏರಿರುವ ನೀವು ಮಾವಿನರಸ ಕುಡಿಯಲು ಹೋಗಿದ್ದೇಕೆ?
ನಿಮಗೆ ಅಂಟಿಕೊಂಡಿರುವ ಅನಾನ(ನಿಮ)ಸ್ ರಸವನ್ನು ತುರ್ತಾಗಿ ತೊಳೆದುಕೊಳ್ಳಿ.
YeanO tension ittu. Nim blog Odakke kootkondre ella maaya!!!
ReplyDeleteThanks ri, bareetiri, honestly refreshing.
ಅಸತ್ಯಿಗಳೇ,
ReplyDeleteಮಾವಿನಯಸರು ಹಾಗೂ ಮುಂಬೈ-ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ !
ಅಂತಾ ಮುಂಬೈಯ ಜನ ಚಿಲ್ಲರೆನಾ ಅಂತಾ ಕೇಳಿ ನೀವು ಎಂತಾ ಪ್ರಮಾದ ಮಾಡಿಕೊಂಡಿರೀ ?ನೀವು ಮುಂಬೈಗೆ ಹೋದರೆ ಮಾವಿನರಸರು ಕೇವಲ ಚಿಲ್ಲರೆ-ಚಿಲ್ಲರೆಯಾಗಿ ನಿಮ್ಮನ್ನು ವಿಚಾರಿಸಿಕೊಳ್ಳುವ ಸಾಧ್ಯತೆ ಇದೆ.
ಸಿಂಧು ಅವರೆ,
ReplyDeleteಈ ಬ್ಲಾಗು (ಅಂದರೆ ಕನ್ನಡದಲ್ಲಿ ಬೊಗಳೆ) ಓದಿದರೆ ಎಲ್ಲವೂ ಮಾಯವಾಗುತ್ತದೆ ಅಂತ ಕೇಳಿ ಭಯವಾಗಿದೆ. ಇನ್ನು ಮುಂದೆ ಹಾಗಾಗದಂತೆ ಕಟ್ಟೆಚ್ಚರ ವಹಿಸುವುದಾಗಿ ಭರವಸೆ ನೀಡುತ್ತೇವೆ.
ಅದೇನೋ ಟಿಹೆಚ್ಎಎನ್ಕೆಎಸ್ ಅಂದ್ರಲ್ಲಾ... ಅದು ಅರ್ಥವೇ ಆಗೋದಿಲ್ಲವಾದ ಕಾರಣ ಸಾಕಷ್ಟು ತಲೆ ಕೆಡಿಸಿಕೊಂಡ ಬಳಿಕ ಅದನ್ನು ನಿಮಗೆ ವಾಪಸ್ ಪೋಸ್ಟಿನಲ್ಲಿ ಕಳುಹಿಸಲಾಗುತ್ತದೆ. ನಿಮ್ಮ ಸ್ವವಿಳಾಸ ತಿಳಿಸಿ.
ಶಿವ್ ಅವರೆ,
ReplyDeleteಮಾವಿನಯನಸರು ಚಿಲ್ಲರೆಯಾಗಿ ನಮ್ಮನ್ನು ನೋಡಿಕೊಳ್ಳದಂತಾಗಲು ನಾವು ಕೂಡ ಒಂದು ಕಡೆ ಅವರನ್ನು ಹೊಗಳಿದ್ದೇವೆ. ಅಷ್ಟು ಸಾಕಾಗದೆ?
ಅಂದರೆ ಬಾಂಬ್ ಸದ್ದು ಕೇಳಿ ಕೇಳಿ ಮುಂಬಯಿಗರಿಗೆ ಠಣ್... ಠಣ್ಣ್... ಶಬ್ದಗಳು ಅಭ್ಯಾಸವಾಗಿರುವ ಕಾರಣ ಅವರ ಕಿವಿ ಕಿವುಡಾಗಿರಬಹುದು ಎಂದು ನಾವು ಹೇಳಿದ್ದು ನಿಜವೇ ಆಗಿದೆ. ಅದನ್ನವರು ತಮ್ಮನ್ನು ಸ್ಥಿತ-ಪ್ರಜ್ಞರು, ಯಾವುದಕ್ಕೂ ಹೆದರವರು ಎಂದೇ ಅರ್ಥ ಮಾಡಿಕೊಳ್ಳಬೇಕಷ್ಟೆ. ಹಾಗಿದ್ದರೆ ನಾವ್ ಬಚಾವ್!
ಹಾಯ್ ಡಿಯರ್ ಅನ್ವೇಷಿ,
ReplyDelete"ಉಗ್ರಗಾಮಿಗಳೇನಾದರೂ ಎತ್ತಿನ ಗಾಡಿಯಲ್ಲಿ ಬಾಂಬ್ ಇರಿಸಿದ್ದಾರೆಯೇ ಎಂಬ ಆತಂಕದ ನಡುವೆ ಎತ್ತುಗಳ ಕಾಲು ಎತ್ತಿ ತೀವ್ರ ತಪಾಸಣೆಗೆ ಗುರಿಪಡಿಸಿ ಖಚಿತಪಡಿಸಿಕೊಳ್ಳಲಾಯಿತು. ಬಾಂಬಿನಂತಹ ವಸ್ತು ಕಂಡಿತಾದರೂ ಅದಲ್ಲವೆಂದು ತಿಳಿದು ಮುಂದುವರಿಯಲಾಯಿತು"
ಅಂದ್ರಲ್ಲಾ, ಸ್ವಲ್ಪ ಬಿಡಿಸಿ ಹೇಳಬಾರದೆ?
हाय हाय ಡಿಯರ್ she
ReplyDeleteಬಿಡಿಸಿಹೇಳುವಷ್ಟು ನಮಗೆ ಏನೂ ತಿಳಿದಿಲ್ಲವಲ್ಲಮ್ಮೀ....
ಬಾಂಬ್ ಇರಲಿಲ್ಲ ಅಂತ ಗ್ಯಾರಂಟಿ!
Your are Nice. And so is your site! Maybe you need some more pictures. Will return in the near future.
ReplyDelete»
Post a Comment
ಏನಾದ್ರೂ ಹೇಳ್ರಪಾ :-D