Subscribe Us

ಜಾಹೀರಾತು
header ads

ಬ್ರೇಕ್ ಕಿಂಗ್‌(ಫಿಶರ್) ನ್ಯೂಸ್ !

(ಬೊಗಳೂರು ಅಮಲು ಬ್ಯುರೋದಿಂದ)
ಬೊಗಳೂರು, ಜು.24- ಇಲ್ಲದಿದ್ದರೂ ಬದುಕಲಾಗದು, ಇದ್ದರೂ ಬದುಕುವುದು ಸಾಧ್ಯವಿಲ್ಲ- ಏನದು?

ಎಂಬ ಒಗಟಿನಿಂದ ನಮ್ಮ ಇಂದಿನ ಸಂಚಿಕೆಯನ್ನು ಆರಂಭಿಸುತ್ತಿದ್ದೇವೆ.

ನಾವು ಮೊದಲು ಉತ್ತರ ಹೇಳಿಬಿಡುತ್ತೇವೆ. ಆಮೇಲೆ ನಮ್ಮ ಓದುಗರು ಹೇಳಬೇಕಾಗಿ ವಿನಂತಿ. ಯಾಕೆಂದರೆ ಅದರ ಕ್ರೆಡಿಟ್ ನಮಗೇ ಸಿಗಬೇಕೆಂಬ ನಿಸ್ವಾರ್ಥ ಬಯಕೆ!

ಉತ್ತರ ಕುಡಿತ. ಕೆಲವರಿಗೆ ಅದನ್ನು ಎಷ್ಟು ಮಾತ್ರಕ್ಕೂ ಕಡಿತ ಮಾಡದಂತಹ ತುಡಿತ. ಕಡಿತ ಮಾಡಿದರೋ.... ಇಡೀ ದಿನ ಅಲ್ಲಲ್ಲಿ ಕಡಿತ!

ಇನ್ನು ಮುಂದೆ ಬೆಳಗ್ಗೆ ಎದ್ದ ತಕ್ಷಣ ಯಾಕೆ ಕುಡೀತೀರಿ ಅಂತ ಹೆಂಡ್ತಿ ಇನ್ನು ಬಯ್ಯೋಹಾಗಿಲ್ಲ. ಮಾತ್ರವಲ್ಲ, ಇನ್ನು ಯಾರು ಕೂಡ ಕುಡುಕ ಅಂತ ಸರ್ಟಿಫಿಕೆಟ್ ಕೂಡ ಕೊಡೋಹಾಗಿಲ್ಲ.

ಇದರ ಶೋಧನೆಗೂ ಕಾರಣವಿದೆ. ಕಚೇರಿ ಕೆಲಸದ ಮಧ್ಯೆ ಆಗಾಗ್ಗೆ ಕುಡಿಯಲೇಬೇಕು ಅಂತ ಅನ್ನಿಸಿದರೆ ಎದ್ದು ಹೋಗುವಂತಿಲ್ಲ ಎಂಬ ಕಾರಣಕ್ಕೆ ವಿಜ್ಞಾನಿಗಳು ಕಂಡುಹುಡುಕಿದ್ದಾರೆ ಆಲ್ಕೋಹಾಲ್ ಪಿಲ್.

ಮತ್ತು ಮತ್ತೆನ್ನೊಡನೆ
ನಿತ್ತುಕೊಂಡೀ ರಣದಿ? !
ಉತ್ತರವ ಕೊಡುವೆ
ಬಲು ಧೂರ್ತ ಸುಗ್ರೀವಾ....!!

ಎಂಬ ವಾಲಿ-ಸುಗ್ರೀವ ಕಾಳಗ ಯಕ್ಷಗಾನದ ಹಾಡಿನಿಂದ ಪ್ರೇರಣೆ ಪಡೆದುಕೊಂಡ ವಿಜ್ಞಾನಿಗಳು ಮತ್ತು ಮತ್ತೆ ಮತ್ತೇರಿಸುವ ಮಾತ್ರೆ ಕಂಡುಹುಡುಕಿದ್ದಾರಂತ ಇಲ್ಲಿ ಗೊತ್ತಾಗಿದೆ.

ಇನ್ನು ಮುಂದೆ ಮದ್ಯದ ಹೊಳೆ ಹರಿಯುವಂತಿಲ್ಲ. ಆ ಮದ್ಯದ ಹೊಳೆಯಲ್ಲಿ ಈಜಾಡುವ ಕಷ್ಟವಿಲ್ಲ. ಕುಳಿತಲ್ಲೇ ತೇಲಾಡಬಹುದು.

ನಮ್ಮಂಥ ಪತ್ರಿಕಾ ಶಿಖಾಮಣಿಗಳಿಗೆ "ಇಂತಿಂಥಾ ಶಾಸಕರ ಕ್ಷೇತ್ರದಲ್ಲಿ ಮದ್ಯದ ಹೊಳೆ ಹರಿಯುತ್ತಾ ಇದೆ, ಕುಡುಕರೇ ತುಂಬಿರುವ ಊರು, ಕುಡಿದು ಕುಡಿದು ಸತ್ತ" ಎಂಬಿತ್ಯಾದಿ ಹೆಡ್ಡಿಂಗ್ ಕೊಡದಂತೆ ಮಾಡಿರುವ ವಿಜ್ಞಾನಿಗಳ ವಿರುದ್ಧ ಶೀಘ್ರವೇ ಅಮಲುನಷ್ಟ ದಾವೆ ಹೂಡಲಾಗುತ್ತದೆ ಎಂದು ತಿಳಿದುಬಂದಿದೆ.

ಈ ಸುದ್ದಿ ಕೇಳಿದ ತಕ್ಷಣ ಕುಡಿಯುವವರ (ಯೆಂಡ್ಕುಡುಕ ರತ್ನನ ಮುಂದಾಳುತ್ವ) (ಸೂ: ಅಂದ್ರೆ "ಸುದ್ದಿ ಕೇಳಿದ ತಕ್ಷಣವೇ ಕುಡಿದುಬಿಡುವವರ" ಎಂದು ಅರ್ಥವತ್ತಾಗಿ ಓದಿಕೊಳ್ಳದಿರಿ) ಮತ್ತು ಕುಡಿಸುವವರ ಸಂಘಗಳು (ಬಾರ್ ಮಾಲೀಕರ ನೇತೃತ್ವ) ಬೀದಿಗೆ ಇಳಿದಿವೆ. ಮದ್ಯ ತಯಾರಕರು ಆಕ್ರೋಶಗೊಂಡಿದ್ದಾರೆ, ಗುತ್ತಿಗೆದಾರರು ಕಂಗಾಲಾಗಿದ್ದಾರೆ.

ಇಷ್ಟೆಲ್ಲಾ ಆಲ್-ಕೋಲಾಹಲದ ನಡುವೆ ಎಲ್ಲಾ ನೆಟ್ಕುಡುಕರ ಸಂಘಕ್ಕೆ ಮದಿರೆ ಪಾರ್ಟಿ ಏರ್ಪಡಿಸಲಾಗಿದೆ. ಇದು par-Tea ಆಗಿರುವುದರಿಂದ ಚಹಾ ವಿತರಿಸಲಾಗುವುದಿಲ್ಲ ಎಂದು ಕಚೇರಿ ಕೆಲಸದ ಮಧ್ಯೆ ಮಧ್ಯೆ ಮದ್ಯ ಕುಡಿಯುವವರ ಸಂಘದ ಅತಿ-ಕಾರಿಗಳು ತಿಳಿಸಿದ್ದಾರೆ.

Post a Comment

11 Comments

 1. ತವಿಶ್ರಿಗಳೇ,
  ನಿಮ್ಮ ಅಲ್-ಕೋಲಾಹಲಗಳ ವರದಿ ನೋಡಿ ಸಕ್ರಾರ ಈ ಸಂಶೋಧನೆಗೆ ಮಾಡ್ಸಿದ್ದಾರೆ ಅಂತ ನನ್ನ ಗುಮಾನಿ....
  ಮದ್ಯ ತಯಾರಕರು ,ಕುಡಿಸುವವರ ಸಂಘಗಳು ಮತ್ತು
  ಗುತ್ತಿಗೆದಾರರ ಹೊಟ್ಟೆ ಮೇಲೆ ತಣ್ಣೀ-ರು ಬಟ್ಟೆ ಹಾಕೋಳ್ಳ ಹಾಗೆ ಮಾಡಿದ್ದೀರಾ ಅಂತ ಬೊಗಳೆ ರಗಳೆ ಗುಸು ಗುಸು ನಡಿತಾ ಇದೆ ಅಂತೆ?

  ಅಂದ ಹಾಗೆ ನಿಮ್ಮ ಒಗಟ-ಇಲ್ಲದಿದ್ದರೂ ಬದುಕಲಾಗದು, ಇದ್ದರೂ ಬದುಕುವುದು ಸಾಧ್ಯವಿಲ್ಲ- ಏನದು?
  ಸರ್ರಿಯಾಗಿರೋ ಉತ್ತರ ಹೆಂಡ್ತಿ (wife)ಅಂತ ನಾನು ಮತ್ತೆ ನನ್ನ ಗೆಳಯನ ಅಭಿಪ್ರಾಯ. ನೀವ್ವೆಂತೀರಿ???

  ReplyDelete
 2. ಓಹ್ ಮಹಂತೇಶರೇ, ಇದು ತವಿಶ್ರೀ ಬೊಗಳೆಯಲ್ಲ. ಬೊಗಳೆಕಾರರು ಬೇರೆ. ನನ್ನ ತಾಣ ಬೇರೆ.

  ಬೊಗಳೆಕಾರರು ಕಛೇರಿಯಲ್ಲಿ ಕುಡಿಯುವುದರ ಬಗ್ಗೆ ಅನುಭವಸ್ಥ ಲೇಖನ ಬರೆದಿದ್ದಾರೆ. ಇದೇ ತರಹ ಗಟಾರಿ ಅಮಾವಾಸ್ಯೆಯ ಬಗ್ಗೆ ನೀವು ಇಲ್ಲಿ ಓದಬಹುದು.

  ReplyDelete
 3. ಅಮಲಾಂತೇಶ್ ಅವರೆ,
  ಬಹುಷಃ ನೀವು ಕುಲು-ಮನಾಲಿಯಲ್ಲಿ ಕುಲುಕಾಡುತ್ತಿದ್ದಾಗ ಅಲ್-ಕೋಲಾಹಲ್ ಪಿಲ್ ಅನ್ನು ನಿಮ್ಮ ಮೇಲೆಯೇ ಪ್ರಯೋಗಿಸಿದಂತಿದೆಯಲ್ಲಾ.... (ಅನ್ವೇಷಿ ಇದ್ದದ್ದು ತವಿಶ್ರೀ ಅಂತ ಗೋಚರಿಸಿದ್ದು)!!!!!

  ಏನೇ ಇರಲಿ, ನಮ್ಮ ಒಗಟಿಗೆ ನಿಮ್ಮ ಅನುಭವದ ಉತ್ತರ ಕೇಳಿ ದೆವ್ವ ಬಡಿದಂತಾಯಿತು.

  ReplyDelete
 4. ಮಾವಿನಯನಸ ಯಾನೆ ತವಿಶ್ರೀ ಅವರೆ,
  ನೀವು ಅಲ್-ಕೋಲಾಹಲ ಇರುವ ಬೊಗಳೆ ನಿಮ್ಮದಲ್ಲ ಅಂತ ಹೇಳಿಕೊಂಡ ಗುಟ್ಟು ಏನು? ಅಂದರೆ ಈ ಬೊಗಳೆ ಅಲ್-ಕೋಲಾಹಲ್ ದಿಂದಲೇ ನಡೆಯುತ್ತದೆ ಎಂದೇ ನಿಮ್ಮ ಮಾತಿನ ಅಪಾರ್ಥ?

  ಹೋಗಿ ಹೋಗಿ ನೀವು ಅಮಾವಾಸ್ಯೆಯನ್ನು ಗಟಾರಕ್ಕೆ ಹಾಕಿದ್ದೇಕೆ?

  ReplyDelete
 5. ಮಾವಿನರಸರೇ(ತವಿಶ್ರೀ),ಬೊಗಳೆಯವರೇ (ಅಸತ್ಯಿಗಳೇ)
  ಕನಫೂಸ್ ಅಗಿಬಿಟ್ಟೆ ಸಾರ್. ಮುಂದೆ ಈ ತರಾ ಅಗೊಲ್ಲಾ ....

  ReplyDelete
 6. ಮಹಂತೇಶರೇ ನಿಮ್ಮ ಕಕ್ಕಾಬಿಕ್ಕಿ ತಮಾಷೆಯಾಗಿದೆ. ದಯವಿಟ್ಟು ಮನಸ್ಸಿಗೆ ಹಚ್ಚಿಕೊಳ್ಳಬೇಡಿ. ಇದೊಂದು ತರಹದ ಹುಡುಗಾಟಿಕೆಯಷ್ಟೆ.

  ReplyDelete
 7. ಮಹಾಂತೇಶರೇ,
  ನಾವು ಕಾಲೆಳೆದದ್ದು ಜೋರಾಯಿತೇ?
  ಬೇಕಿದ್ದರೆ ನೀವು ಕಾಲು ಎಳೆಯಿರಿ...

  ಬದುಕು ಕುಟುಕೋ ಬಂಡಿ...
  ಬ್ಲಾಗದರ ಸಾಹೇಬ ಅಲ್ವಾ....?

  ReplyDelete
 8. ಸದ್ಯದಲ್ಲೇ ಕಲಬೆರೆಕೆ ಹೆಂಡದ ಮಾತ್ರೆಗಳೂ ತಯಾರಾಗಲಿವೆ ಎಂಬುದನ್ನು ತಿಳಿದು ಬಹಳ ದುಃಖವಾಯಿತು.

  ನನ್ನ ತಾತನನ್ನು ನೆನಪಿಸಿಕೊಂಡದಕ್ಕೆ ಧನ್ಯವಾದಗಳು.

  -ಪಬ್

  ReplyDelete
 9. ಓ ಪಬ್ಬಿಗರೇ,
  ನಿಮ್ಮ ವೇದನೆ ನಮಗರ್ಥವಾಗುತ್ತಿದೆ. ಆದರೆ ಈ ಸುದ್ದಿ ನಿಮಗೆ ಇಷ್ಟು ತಡವಾಗಿ ಗೋಚರಿಸಲು ಸಿಕ್ಕಾಪಟ್ಟೆ ಮಾತ್ರೆ ಸೇವನೆ ಕಾರಣವಿರಬಹುದೇ?

  ReplyDelete
 10. ಈ ಮಾತ್ರೆ ಮಾರುವ ಸಂಪೂರ್ಣ ಡೀಲರ್‍ಶಿಪ್ ಅನ್ನು ನಾನು ತೆಗೆದುಕೊಂಡಿದ್ದೇನೆ.ಆದರೆ ಮುಂಬೈ ಪ್ರಾಂತ್ಯವನ್ನು ಮಾವಿನರಸರಿಗೆ ಕೊಡಲಾಗಿದೆ.ಅವರದು ಭಯಂಕರ ಇನ್-ಪ್ಲೋಯನ್ಸ್ ಅಂತೆ ಮುಂಬೈನಲ್ಲಿ..

  ಅಸತ್ಯಿಗಳೇ,
  ಈ ಮಾತ್ರೆಗಳು ಬಂದ ಮೇಲೆ..ಜಾಹೀರಾತುಗಳು ಹಿಂಗಿರುತ್ತೆ..
  'ರಂಗ್ ಜಾಮೇಗಾ ಜಬ್ಬ್ ಮಿಲ್ ಬೈಟೆಂಗೆ ತೀನ್ ಯಾರ್ - ಆಪ್,ಮೇ ಔರ್ ಮೇರಾ ಬ್ಯಾಗ್-ಗುಳಿಗೆ'

  ReplyDelete
 11. This site is one of the best I have ever seen, wish I had one like this.
  »

  ReplyDelete

ಏನಾದ್ರೂ ಹೇಳ್ರಪಾ :-D