ಬೊಗಳೆ ರಗಳೆ

header ads

ಫುಟ್ಬಾಲ್ ಬಗ್ಗೆ ಬೊಗಳೆ-ರಗಳೆ ನಿರ್ಲಕ್ಷ್ಯ: ಸ್ಪಷ್ಟನೆ

(ಬೊಗಳೂರು ಕಾಲೆಳೆಯೋ ಬ್ಯುರೋದಿಂದ)
ಬೊಗಳೂರು, ಜು.11- ಇಡೀ ವಿಶ್ವಕ್ಕೆ ಫುಟ್ಬಾಲ್ ಜ್ವರ ಬಂದು ಹೋಗಿದ್ದರೂ ಬೊಗಳೆ ರಗಳೆ ಬ್ಯುರೋ ಮಾತ್ರ ಗಡದ್ದಾಗಿ ನಿದ್ದೆ ಮಾಡುತ್ತಿದ್ದುದೇಕೆ ಎಂದು ವಿಶ್ವಾದ್ಯಂತ ನಮ್ಮ ಪತ್ರಿಕೆಯ ಒಂದೆರಡು ಓದುಗರ ಬಲುದೊಡ್ಡಸಮುದಾಯವು ಬೈಗುಳದ ಸುರಿಮಳೆ ಸುರಿಸಿದ್ದರಿಂದ ಕಣ್ಣಿಗೆ ನೀರು ತಗುಲಿದಂತಾಗಿ ಎಚ್ಚೆತ್ತುಕೊಂಡ ಬ್ಯುರೋ, ಏನಾದರೂ ಮಾಡಬೇಕಲ್ಲ ಎಂದು ಯೋಚಿಸಿತೊಡಗಿದಾಗ ಸ್ಪಷ್ಟನೆ ನೀಡುವುದೇ ಸರಿಯಾದ ಹೆಜ್ಜೆ ಎಂಬುದು ತಿಳಿಯಿತು.
 
ಆಗ ಹೊಳೆದದ್ದು 'ಕೋಟೆ ಸೂರೆ ಹೋದ ಮೇಲೆ ದಿಡ್ಡಿ ಬಾಗಿಲು ಹಾಕಿದರಂತೆ' ಎಂಬ ಪದದ ಅರ್ಥವನ್ನು ಓದುಗರಿಗೆ ವಿವರಿಸುವುದು. ಅದರ ಪರಿಣಾಮವೇ ಈ ಕಾಲೆಳೆಯೋ.... ಕಾಲ್ಚೆಂಡಿನ ವರದಿ.
 
ಓದುಗರ ಆಗ್ರಹದ ಮೇರೆಗೆ ಮೊದಲಾಗಿ ನಮ್ಮ ಬ್ಯುರೋದಿಂದ ಸ್ಪಷ್ಟನೆ:
 
"ಕಾಲ್ಚೆಂಡಾಟದಲ್ಲಿ ಚೆಂಡುಗಳು ಅತ್ತಿಂದಿತ್ತ ಅಲ್ಲಾಡುವುದು ಯಾವತ್ತೂ ರಾತ್ರಿ ವೇಳೆಯಲ್ಲೇ. ಅದೂ ಅಲ್ಲದೆ ಕೇವಲ ಆ ಒಂದು ಚೆಂಡಿಗಾಗಿ 11+11 ಮಂದಿ ಹೋರಾಡುವುದು, ಒಂದು ಗೋಲು ಬಾರಿಸಬೇಕಿದ್ದರೆ ಮೈದಾನದೊಳಗೆಯೇ ಕನಿಷ್ಠ 10 ಕಿ.ಮೀ. ಓಡುವುದು.... ಇವೆಲ್ಲಾ ಅರ್ಥ ಹೀನ ವಿಷಯ. ಎಲ್ಲರಿಗೂ ಒಂದೊಂದು ಚೆಂಡು ಕೊಟ್ಟುಬಿಟ್ಟಿದ್ದರೆ ಇರೋ ಒಂದು ಚೆಂಡಿಗಾಗಿ ಇಷ್ಟೊಂದು ಮಾರಾಮಾರಿ ನಡೆಯುವುದು ತಪ್ಪುತ್ತಿತ್ತು.
 
ಅಲ್ಲದೆ, ಹಗಲಲ್ಲೂ ಕಾಲೆಳೆಯೋ ಆಟ ಆಡಿ ಸುಸ್ತಾಗಿರುವ ನಮ್ಮ ಬ್ಯುರೋ ಸಿಬ್ಬಂದಿಗೆ ರಾತ್ರಿಯೂ ಕಾಲಿನಿಂದ ಒದೆಯೋ ಆಟದ ಬಗ್ಗೆ ಗಮನ ಹರಿಸುವುದು ಅಸಾಧ್ಯ.
 
ಹಗಲೂ-ರಾತ್ರಿ ಕಾಲು ಉಪಯೋಗಿಸಿದರೆ ಅದರ ಬಳಕೆ ಹೆಚ್ಚಾಗಿ ಕಾಲು ಕೈಕೊಟ್ಟರೆ, ಅಂದರೆ ನೇತಾಡಿದರೆ(hang ಆದ್ರೆ)?
ಮತ್ತು ಜಾಸ್ತಿ ಉಪಯೋಗದಿಂದಾಗಿ ಅದು ಹ್ಯಾಂಗ್ ಆಗಿ ಹ್ಯಾಂಗ್ ಹ್ಯಾಂಗೋ ಆಡಿದರೆ ಕಾಲನ್ನು ಕಟ್ ಡೌನ್ ಮಾಡಿ, ಕಾಲಾಡಿಸುವ ದೇಹವನ್ನು ಶಟ್ ಡೌನ್ ಮಾಡಿ ರೀಸ್ಟಾರ್ಟ್ ಮಾಡಬೇಕಾಗಬಹುದು ಎಂಬ ಆತಂಕ."
 
ಇಟಲಿ ವಿಜಯಕ್ಕೂ ಕಾಂಗ್ರೆಸ್ ಅಧ್ಯಕ್ಷರ
 
ನಿವಾಸದಲ್ಲಿ ಹರ್ಷಾಚರಣೆ ನಡೆಯಿತೆ?
 
ಕೊನೆಯದಾಗಿ, ಇಡೀ ವಿಶ್ವಕ್ಕೆ ತಗುಲಿಕೊಂಡ ಫುಟ್ಬಾಲ್ ವಿಶ್ವಕಪ್ ಜ್ವರ ಕೊನೆಗಾಣಿಸುವ ನಿಟ್ಟಿನಲ್ಲಿ ಇಟಲಿಯು ಕಪ್ಪುಕಪ್ಪಾದ ಕಪ್ಪನ್ನು ಗೆದ್ದುಕೊಂಡಾಗ ನವದೆಹಲಿಯಲ್ಲಿರುವ 10, ಜನಪಥದಲ್ಲಿರುವ ಕಾಂಗ್ರೆಸ್ ಅಧ್ಯಕ್ಷರ ನಿವಾಸದಲ್ಲಿ ಹೊಸವರ್ಷಾಚರಣೆಯ ಮಾದರಿಯಲ್ಲಿ ಹೊಸ ಹರ್ಷಾಚರಣೆ ನಡೆಯಿತೇ ಎಂಬ ಬಗ್ಗೆ ಅಸತ್ಯಾನ್ವೇಷಿ ತಲೆಕೆಡಿಸಿಕೊಂಡ ಕಾರಣ, ತಲೆಯೂ ಫುಟ್ಬಾಲ್ ಮಾದರಿಯಲ್ಲಿ ಅತ್ತಿಂದಿತ್ತ ಓಲಾಡತೊಡಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

13 ಕಾಮೆಂಟ್‌ಗಳು

 1. ಪುಟ್ಟ ಬಾಲಿಗೋಸ್ಕರ ೨೨ ಜನ ಕಾದಾಡ್ಬೇಕಾ? ಇನ್ನಿಬ್ಬರು ಪೀಪೀ ಊದ್ತಿರ್ತಾರಲ್ಲ ಅವರುಗಳು ಯಾರು? ಅವರುಗಳಂತೂ ಒಂದು ಕ್ಷಣ ಒಂದೆಡೆ ನಿಲ್ಲದೆ ಬಹಿರ್ದೆಶೆಗೆ ಹೋಗಲು ಅವಸರವಾದವರಂತೆ ಓಡ್ತಿರ್ತಾರೆ. ಈ ಆಟ ಅದ್ಯಾಕೋ ನನಗೆ ಅರ್ಥ ಆಗ್ಲಿಲ್ಲ. ಅಲ್ಲ ಹೋಗಿ ಹೋಗಿ ರಾತ್ರಿ ಹೊತ್ತು ಆಡ್ಬೇಕಾ ಇದನ್ನು. ಬೆಳಗ್ಗೆ ಆಡಕ್ಕೇನಂತೆ - ವಿದ್ಯುತ್ ಖರ್ಚಾದರೂ ಉಳಿಸಬಹುದು.

  ಆ ಚೆಂಡನ್ನು ಕಾಲಿನಲ್ಲೇ ಯಾಕೆ ಒದ್ದು ಬಲೆಯೊಳಗೆ ಹಾಕ್ಬೇಕು. ಕೈನಲ್ಲಿ ಎತ್ತಿ ಬಿಸಾಕಿದ್ರೆ ಆಗೋಲ್ವೇ? ಅಸತ್ಯಾನ್ವೇಷಿಗಳು ಇದರ ಬಗ್ಗೆ ಸ್ವಲ್ಪ ಬೆಳಕು ಚೆಲ್ಲಬೇಕು (ವಿದ್ಯುತ್ ಬೆಳಕಲ್ಲ).

  ಪ್ರತ್ಯುತ್ತರಅಳಿಸಿ
 2. ಮಾವಿನರಸರೆ,
  ನಿಮ್ಮ ಕಾಳಜಿ ನಮಗೆ ಅರ್ಥವಾಗುತ್ತದೆ. ಆದರೆ ಫಿಫಾಕ್ಕೆ ಯಾವಾಗ ಅರ್ಥವಾಗುವುದೋ, ಬಹುಶಃ ಫಿಫಾವೇ ಇಬ್ಬರ ಕೈಲಿ ಪೀಪೀ ಕೊಟ್ಟು ಅಟ್ಟಾಡಿಸುತ್ತಿರಬೇಕು.
  ಸ್ವಲ್ಪ ಪರೀಕ್ಷಿಸಿ ನೋಡಿ.

  ಪ್ರತ್ಯುತ್ತರಅಳಿಸಿ
 3. ಅಸತ್ಯಾನ್ವೇಷಿyavare!!!!!

  italy win agiddake khandivagi janpatnalli celebration agittu...nanu yake hlta idini adre murudin janpat hatr tumba olle vatavaran ittu...

  ಪ್ರತ್ಯುತ್ತರಅಳಿಸಿ
 4. ಮಹಾನ್ ಅಂತೇಶ್ ಅವರೆ,

  ನಮ್ಮ ಅನ್ವೇಷಣೆಗೆ ಸಾಕ್ಷ್ಯ ಒದಗಿಸಲು ಸಿದ್ಧರಾಗಿರುವ ನಿಮಗೆ ಧನ್ಯವಾದಗಳು.

  ಆದ್ರೆ ನಿಮ್ಮ ಲಿಂಕ್ ಕ್ಲಿಕ್ಕಿಸಿದರೆ ಬ್ಲಾಗರ್ ನಾಟ್ ಫೌಂಡ್ ಅಂತ ಬರ್ತಿದೆಯಲ್ಲ.... ಅಂದ್ರೆ ಬ್ಲಾಗರ್ ಪರಾರಿ ಅಂತನಾ?

  ಪ್ರತ್ಯುತ್ತರಅಳಿಸಿ
 5. ಫುಟ್ಬಾಲ್ ಆಟದಲ್ಲಿ ಬಾಯಿಗೆ ಬಂದದ್ದೆಲ್ಲಾ ಬೊಗಳಿಕೊಂಡು, ಗುದ್ದಾಟ, ರಗಳೆ ರಂಪಾಟಗಳನ್ನೆಲ್ಲಾ ಮಾಡಿಕೊಂಡಿರುವುದು ಸತ್ಯವೇ ಆಗಿರುವಾಗ ನೀವು ರಾತ್ರಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಹುಡುಕಿದರೂ ಅಸತ್ಯ ಸಿಕ್ಕುವುದು ಕಷ್ಟವೇ ಆಗುತ್ತಿತ್ತೇನೋ! ಆದ್ದರಿಂದ ನೀವು ಅದರ ಬಗ್ಗೆ ತಲೆ ಕೆಡಸಿಕೊಳ್ಳದಿದ್ದುದೆ ಉತ್ತಮ ಎಂದು ನನ್ನ ಅನಿಸಿಕೆ:)

  ಪ್ರತ್ಯುತ್ತರಅಳಿಸಿ
 6. ಫುಟ್ಬಾಲ್ ಬಗ್ಗೆ ನಿರ್ಲಕ್ಷ್ಯ ತೋರಿಸಿದ್ದಕ್ಕೆ ಅನ್ವೇಷಿಗೆ ಶಿಕ್ಷೆ : ಫ್ರಾನ್ಸ್ ತಂಡದ (ಇನ್)ಫೇಮಸ್ ನಾಯಕ ಜಿದಾನ್‍ನ ಎದುರಿಗೆ ಅನ್ವೇಷಿಯನ್ನು ನಿಲ್ಲಿಸುವುದು! (ಮಾರ್ಕೊ ಮಾಟರಾತ್ಸಿಯ ಎದೆಗೆ ತನ್ನ ತಲೆಯನ್ನು ಅಪ್ಪಳಿಸಿ ಜಿದಾನ್ ಅವನನ್ನು ಬೀಳಿಸಿದ್ದನಲ್ಲ? ಹಾಗೆಯೇ ಅನ್ವೇಷಿಯನ್ನೂ...?)

  ಪ್ರತ್ಯುತ್ತರಅಳಿಸಿ
 7. ಕಲ್ಯಾಣ್ ಅವರಿಗೆ ಬೊಗಳೆ ಬ್ಯುರೋ ಸ್ವಾಗತ.

  ನೀವು ಹೇಳಿದಂತೆಯೇ ನಾವು ತಲೆ ಕೆಡಿಸಿಕೊಂಡಿಲ್ಲ. ಯಾಕೆಂದರೆ ತಲೆ ಇದ್ದವರು ಮಾತ್ರ ಕೆಡಿಸಿಕೊಳ್ಳುತ್ತಾರೆ ಅಂತ ಕೇಳಿ ಬಲ್ಲೆವು.!

  ಪ್ರತ್ಯುತ್ತರಅಳಿಸಿ
 8. ಅಯ್ಯಯ್ಯಪ್ಪೋ.... ಬೇಡಾ ಜೋಷಿ ಅವರೆ,

  ಜಿದಾನ್ ಎದುರು ಹೋದೋನ್ ಬದುಕಿದ್ರೆ ಬೇಡಿ ತಿಂದಾನ್...!

  ಆದ್ರೂ ಒಂದ್ಸಲ ಜಿದಾನ್ ಎದ್ರು ಕರ್ಕೊಂಡು ಹೋಗಿ ನೋಡೋಣ, ಅವನಿಗೆ ಸಿಕ್ಕಿದ ಚಿನ್ನದ ಫುಟ್ಬಾಲ್ ನನ್ನ ಕೈಲಿರುತ್ತದೆ.!

  ಪ್ರತ್ಯುತ್ತರಅಳಿಸಿ
 9. ಬ್ಲಾಗ್‌ನ ನಿರ್ವಾಹಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

  ಪ್ರತ್ಯುತ್ತರಅಳಿಸಿ
 10. ಅಸತ್ಯಾನ್ವೇಷಿgale....

  blognalli innu enu baridilla..ondu thara ambegaliduv magu anta helbahud :)) adastu beg nanu post madatane eondu blognna.. Farrari aguv yochane e antu illa.....

  ಪ್ರತ್ಯುತ್ತರಅಳಿಸಿ
 11. ಬ್ಲಾಗ್‌ನ ನಿರ್ವಾಹಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

  ಪ್ರತ್ಯುತ್ತರಅಳಿಸಿ
 12. ಬ್ಲಾಗ್‌ನ ನಿರ್ವಾಹಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

  ಪ್ರತ್ಯುತ್ತರಅಳಿಸಿ
 13. ಬ್ಲಾಗ್‌ನ ನಿರ್ವಾಹಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D