ಬೊಗಳೆ ರಗಳೆ

header ads

ಪುತ್ರಕರ್ತರೂ, ಪುತ್ರಿಕೋದ್ಯಮವೂ...

(ಬೊಗಳೂರು ಕಳಪೆ ಬ್ಯುರೋದಿಂದ)
ಬೊಗಳೂರು, ಜು.12- ಶ್ರೀಮಂತರ ಓಲೈಕೆ, ಕಳಪೆ ಸುದ್ದಿಗಳತ್ತ ಪತ್ರಿಕೋದ್ಯಮ ಸಾಗುತ್ತಿದೆ ಎಂದು ಪ್ರಜಾವಾಣಿ ಮಾಜಿ ಸಂಪಾದಕ ಕೆ.ಎನ್.ಹರಿಕುಮಾರ್ ಆತಂಕ ವ್ಯಕ್ತಪಡಿಸಿರುವುದು ಪ್ರಕಟವಾಗಿರುವುದರಿಂದ ತೀವ್ರವಾಗಿ ಆತಂಕಕ್ಕೊಳಗಾದ ಬೊಗಳೆ ರಗಳೆ ಬ್ಯುರೋ, ಹೆಗಲು ಮುಟ್ಟಿಕೊಂಡು ನೋಡಿದ ಪ್ರಕರಣ ವರದಿಯಾಗಿದೆ.
 
ವಿಶ್ವದಲ್ಲೇ ಅತ್ಯಂತ Fakest ಸುದ್ದಿಗಳನ್ನು ನೀಡುತ್ತಿರುವ ಬೊ.ರ. ಪತ್ರಿಕೆಯನ್ನೇ ಅವರು ಗುರಿಯಾಗಿರಿಸಿ ಈ ರೀತಿಯಾಗಿ ಕ್ಯಾಕರಿಸಿ ಹೊಗಳಿದ್ದಾರೆ ಎಂದು ಅಂದಾಜಿಸಲಾಗಿದೆ.
 
ಅವರು ಈ ಮಾತನ್ನು ಹೇಳಿರುವುದು ಅಭಿವೃದ್ಧಿ ಪತ್ರಿಕೋದ್ಯಮ ಪ್ರೋತ್ಸಾಹ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎಂಬುದನ್ನು ಇಲ್ಲಿ ಗಮನಿಸಬೇಕು. ಇಲ್ಲಿ ಅಭಿವೃದ್ಧಿ ಎಂದರೆ ಯಾರ ಜೇಬಿನ ಅಭಿವೃದ್ಧಿ ಎಂಬುದನ್ನು ಅವರು ಸ್ಪಷ್ಟವಾಗಿ ಉಲ್ಲೇಖಿಸದಿರುವುದು ಹಲವು ಸಂದೇಹಗಳಿಗೆ ಕಾರಣವಾಗಿದೆ.
 
ಕೊನೆಯಲ್ಲಿ ಏನೇನೂ ಅರ್ಥವಾಗದೆ ಗೊಂದಲದ ಕೂಪದಲ್ಲಿ ಬಿದ್ದಿರುವ ಬೊ.ರ. ಬ್ಯುರೋ, ಅಭಿವೃದ್ಧಿ ಪತ್ರಿಕೋದ್ಯಮವೆಂದರೆ ಸಂತಾನಾಭಿವೃದ್ಧಿ ಪುತ್ರಿಕೋದ್ಯಮವೇ ಎಂದು ಬಲವಾಗಿ ಪ್ರಶ್ನಿಸುತ್ತದೆ. ಹಾಗಿದ್ದರೆ ಪತ್ರಕರ್ತರೆಲ್ಲಾ ಪುತ್ರಕರ್ತರೇ ಎಂಬುದಕ್ಕೂ ಅವರು ಉತ್ತರಿಸಬೇಕಾಗಿದೆ. ಈ ಸಮಾರಂಭದಲ್ಲಿ ಗೌರವಾನ್ವಿತ ರಾಜ್ಯಪಾಲರು ಕೂಡ ಭಾಗವಹಿಸಿರುವುದು ಹಲವರ ಹುಬ್ಬೇರಿಸಿದೆ.
 
ಈ ಮಧ್ಯೆ, ವಿಜಯ ಕರ್ನಾಟಕ, ಪ್ರಜಾವಾಣಿ ಬಳಿಕ ಝೀ ನ್ಯೂಸ್ ಕೂಡ ಬೊಗಳೆ ರಗಳೆ ವಿರುದ್ಧ ತಲೆ ತಿರುಗಿ ಬಿದ್ದಿದ್ದು, ಸುಪ್ರೀಂ ಕೋರ್ಟ್ ಮೂಲಕ ಅದು ಆದೇಶವನ್ನು ಹೊರಡಿಸಿ ಜಗಜ್ಜಾಹೀರು ಮಾಡಿದೆ ಎಂಬುದು ನಮ್ಮ ಗಮನಕ್ಕೆ ಬಂದಿದೆ.
 
ಆದರೂ "ಸತ್ಯ ವಾಕ್ಯವ ನೆಚ್ಚಿ ನಡೆದರೆ ಮೆಚ್ಚನಾ ಪರಮಾತ್ಮನು" ಎಂಬ ನಮ್ಮ ಧ್ಯೇಯ ವಾಕ್ಯಕ್ಕೆ ಬದ್ಧವಾಗಿರುವುದಾಗಿ ಬೊ.ರ. ಬ್ಯುರೋ ಬೋರಲಾಗಿ ಸಾರುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

11 ಕಾಮೆಂಟ್‌ಗಳು

  1. Devegoudar santati illu kalitt hagiyitu anni!!!!!!!!
    adre idu shatamangalinda agta barta ide saar!!! enu madodu heli... Son ge tandey feild bittu bere feild gottirolla ansutte...
    enantira????/

    ಪ್ರತ್ಯುತ್ತರಅಳಿಸಿ
  2. ಮಹಾನ್ ತೇಷ್ ಅವರೇ,

    ದೇವೇಗೌಡರಿಗೂ ಸನ್ ಗೂ ಏನ್ ಸಂಬಂಧ ಅಂತ ನಮಗೆ ಗೊತ್ತೇ ಇಲ್ಲ!

    ಪ್ರತ್ಯುತ್ತರಅಳಿಸಿ
  3. ಸ್ವಾಮಿ, ಮಹಾನ್ ಅಸತ್ಯಾನ್ವೇಷಿ

    ನಿಮ್ಮ ಮೇಲೆ ಇಡೀ ವಿಶ್ವವೇ ತಲೆ ತಿರುಗಿ ಬಿದ್ದಂತಿದೆಯಲ್ಲಾ...

    ಈಗ ಏನು ಮಾಡುತ್ತೀರಿ?

    ಪ್ರತ್ಯುತ್ತರಅಳಿಸಿ
  4. ಬೊ-ರ ಈ ಲೆವೆಲ್‍ಗೆ ಏರುತ್ತದೆ ಎಂದು ನಾನು ಕನಸು ಮನಸಿನಲ್ಲೂ ಎಣಿಸಿರಲಿಲ್ಲ. ಅವರ್ಯಾರೋ ಕ್ಯಾಕರಿಸಿದ್ದಾರೆ ಅಂದ್ರಲ್ಲ, ಆ ಕ್ಯಾಕರಿಕೆಯಲ್ಲಿ ಕಫ ಏನಾದ್ರೂ ಇತ್ತೇ? ಅಥವಾ ಆರ್‍‍ಡಿಎಕ್ಸ್ ಅಂಶವೇನಾದರೂ ಇತ್ತೇ?

    ಪ್ರತ್ಯುತ್ತರಅಳಿಸಿ
  5. ಬ್ಲಾಗ್‌ನ ನಿರ್ವಾಹಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  6. ಲಿಂಕಿಲ್ಲದ ಶೀಲಾ,

    ವಿಶ್ವವೇ ತಲೆ ತಿರುಗಿ ಬಿದ್ದರೆ, ಅದನ್ನು ಇನ್ನೂ 180 ಡಿಗ್ರಿ ತಿರುಗಿಸಿ ಸರಿಪಡಿಸಿಕೊಂಡು ಓದುತ್ತೇವೆ.

    ಪ್ರತ್ಯುತ್ತರಅಳಿಸಿ
  7. ಮಾವಿನರಸರೆ,

    ಮುಂಬಯಿ ಸ್ಫೋಟದಿಂದ ಬೆಂದು, ನೊಂದು ಸೊರಗಿದ ನೀವು ಚಾ-ತರಿಸಿಕೊಂಡು ಕುಡಿದಿರೇ?

    ಆದ್ರೆ XXX ಕುಡಿದ ಅಮಲಿನಲ್ಲಿ ಮತ್ತು ಸ್ಫೋಟದ ಅಮಲಿನಲ್ಲಿ ಇನ್ನೂ RDX RDX ಅಂತ ಹೇಳುತ್ತಿದ್ದೀರಾ?

    RDX ಆಗಿದ್ದರೆ ಖಂಡಿತಾ ನಿಮಗೆ ಕಳುಹಿಸುವುದಿಲ್ಲ!

    ಪ್ರತ್ಯುತ್ತರಅಳಿಸಿ
  8. Kudiyuvua ( alchohol endu bhavisi) bagege comment post madabaaradu.

    Kudukara budhhi balakke hedarabekaaguttade , ondu divasa.

    Internet ondu amalu, nEnapirali

    ಪ್ರತ್ಯುತ್ತರಅಳಿಸಿ
  9. ಓ ಅಮಲು ಅನಾನಿಮಸರೇ,
    ನಿಮ್ಮ ಮಾತು ಕೇಳಿ ಭೇದಿ ವೃಕ್ಷದಡಿ ಜ್ಞಾನೋದಯವಾದಂತಾಯಿತು.
    ಆದರೆ ನಿಮ್ಮ ಹೆಸರಿನವರೇ (ananymous) ಸಾಕಷ್ಟು ಮಂದಿ ಬರುತ್ತಿದ್ದಾರೆ. ಸ್ವಲ್ಪ ಎಚ್ಚರವಹಿಸಿ....!!!

    ಪ್ರತ್ಯುತ್ತರಅಳಿಸಿ
  10. ಬ್ಲಾಗ್‌ನ ನಿರ್ವಾಹಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  11. ಬ್ಲಾಗ್‌ನ ನಿರ್ವಾಹಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D