(ಬೊಗಳೂರು ನೆಟ್ವರ್ಕ್ ಬ್ಯುರೋದಿಂದ)
ಬೊಗಳೂರು, ಜೂ.24- ಇಂಗ್ಲಿಷ್ ಗೊತ್ತಿಲ್ಲದಿದ್ದರೂ ಇಂಗ್ಲಿಷಿನಲ್ಲೇ ಪ್ರಮಾಣ ವಚನ ಸ್ವೀಕರಿಸಿ ಕನ್ನಡಾಭಿಮಾನ ಮೆರೆದ ಕರ್ನಾಟಕದ ವಿಧಾನ ಪರಿಷತ್ತಿಗೆ ಆಯ್ಕೆಯಾದ ಹೊಸ ಸದಸ್ಯ ಅಮೀರ್ ಜಹ್ಮದ್ ಅವರು, ನನಗೆ ನಿನ್ನೆ ರಾತ್ರಿಯಿಡೀ ನಿದ್ದೆ ಇಲ್ಲ ಎಂದು ಹೇಳಿರುವ ಹಿನ್ನೆಲೆಯನ್ನು ಅರಸಿ ಹೋದಾಗ ತಥ್ಯ ಬಯಲಾಗಿದೆ.

ನನ್ನಿಂದ ಅಪರಾಧವಾಗಿದೆ, ಕೈಮುಗಿದು ಬೇಡಿಕೊಳ್ಳುವೆ ಎಂಬಿತ್ಯಾದಿಯಾಗಿ ಅವರು ವರದಿಗಾರರೆದುರು ಬೊಗಳೆ ಬಿಟ್ಟಿದ್ದು ಕನ್ನಡ ಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಬಹುದೆಂಬ ಭೀತಿಯ ಕಾರಣಕ್ಕಲ್ಲ. ಇಂಗ್ಲಿಷಿನಲ್ಲಿ ಪ್ರಮಾಣವಚನ ಸ್ವೀಕರಿಸುವಾಗ ಅವರು ಕೆಲವು ಅಕ್ಷರಗಳನ್ನು ತಪ್ಪು ತಪ್ಪಾಗಿ ಉಚ್ಚರಿಸಿದ್ದೇ ಅವರ ಈ ಕೀಳರಿಮೆಗೆ, ಕಳವಳಕ್ಕೆ ಕಾರಣ ಎಂದು ತಿಳಿದುಬಂದಿದೆ.

ಕ್ಷಮೆ ಕೋರಿದ್ದು ಕೂಡ ಉರ್ದು-ಇಂಗ್ಲಿಷ್ ಮಿಶ್ರಿತ ಭಾಷೆ ಆಗಿದ್ದುದರಿಂದ ಅದು ಕನ್ನಡವೋ ಅಥವಾ ಖಣ್ಣಢವೋ ಎಂಬುದು ಅರಿವಾಗದೆ ಎನ್ನಡ ಎಂದು ಬೆಚ್ಚಿ ಬೀಳುವ ಸರದಿ ಒದರಿಗಾರರದು.

ನಮ್ಮ ತಾಯಿ ಬಯಸಿದ್ದು ನಾನು ವೈದ್ಯ, ಎಂಜಿನಿಯರ್ ಆಗಬೇಕೆಂದು. ಉರ್ದು ಕೂಡ ಸರಿ ಇಲ್ಲ, ಇಂಗ್ಲಿಷ್ ಅರ್ಧಂಬರ್ಧ, ಕನ್ನಡವೂ ಅಪಥ್ಯ. ನನಗೆ ಏನೂ ತಲೆಗೆ ಹತ್ತಲಿಲ್ಲ. ಎಲ್ಲೂ ಸಲ್ಲದವನಂತಾಗಿಬಿಟ್ಟೆ. ಆದುದರಿಂದಾಗಿ ರಾಜಕೀಯವೇ ಸರಿ ಅನಿಸಿತು. ಆದರೆ ಆಕೆಗೇನು ಗೊತ್ತು ರಾಜಕೀಯಕ್ಕೆ ಬಂದರೆ ಉಳಿದೆಲ್ಲಕ್ಕಿಂತ ಹೆಚ್ಚು ಲಾಭ ಎನ್ನೋದು ಎಂಬುದು ಅಮೀರ್ ಅವರು ಅಸತ್ಯಾನ್ವೇಷಿಗೆ ನೀಡಿದ ಸಂದರ್ಶನಲ್ಲಿ ತಿಳಿಸಿದ ಸಂಗತಿ.

ಆದರೂ ಎರಡೂ ಕೈಕಟ್ಟಿದ ಬಳಿಕ ಅವರು ಪ್ರಮಾಣವಚನ ಸ್ವೀಕರಿಸುವಾಗ ಕೈಮುಗಿದದ್ದು ಹೇಗೆ ಎಂಬುದು ಅನ್ವೇಷಿಗೆ ತಿಳಿಯದ ಸಂಗತಿ.

18 Comments

ಏನಾದ್ರೂ ಹೇಳ್ರಪಾ :-D

 1. ರಾಜಕಾರಣಿಯವರ ತಪ್ಪು ವದರಿಕೆಗೆ ಕಾರಣ ಬರಹವನ್ನು ಸರಿಯಾಗಿ ಉಪಯೋಗಿಸದ ಕಂಗ್ಲೀಷ್ ಬಳಕೆ ಇರಬಹುದು ಅನ್ನಿಸುತ್ತಿದೆ. ಕಂಗ್ಲೀಷಿನಲ್ಲಿ ಕುಟ್ಟಿ ಕನ್ನಡಕ್ಕೆ ಬದಲಾಯಿಸುವಾಗ ಗಂಗಿ ಕಮಂಗಿಯಾಗುವುದನ್ನು ನಾನು ಗಮನಿಸಿದ್ದೇನೆ.

  ಇನ್ನು ಈ ಮಂತ್ರಿಗಳು ನಿಷ್ಕಲ್ಮಶ ಹೃದಯಿಗಳು ಎಂಬುದರಲ್ಲಿ ಸಂದೇಹವಿಲ್ಲ. ಶಾಲೆ ಎಂದರೇನು ಎಂಬುದನ್ನೂ ತಿಳಿಯದ, ಎಡಗೈ ಹೆಬ್ಬೆಟ್ಟು ಬಲಗೈ ಹೆಬ್ಬೆಟ್ಟಿಗೆ ವ್ಯತ್ಯಾಸ ತಿಳಿಯದ, ಬಂಟನ ನಂಟನು ನಂಬಿಯೇ ರಾಜಕೀಯದಲ್ಲಿ ಮೆರೆಯುತ್ತಿರುವರೇನೂ ಕಡಿಮೆ ಇಲ್ಲ. ಕಾರು ಚಾಲಕ ತನ್ನ ಸ್ವಾಮಿಯ ವೀಕ್‍ಲಿಂಕು ತಿಳಿದು, ಮೇಲೇರಿ ಮಿನಿಸ್ಟರ್ ಆಗುವುದಲ್ಲದೇ ನಟಿಯೊಡನೆ ಗನ್ನೇರುಬೆಟ್ಟದಲ್ಲಿ ಸಿಕ್ಕಿಬಿದ್ದು ತಾನಲ್ಲ ಅದು ಇನ್ಯಾರೋ ಎಂದು ಹೇಳಿಕೆ ಕೊಟ್ಟಿದ್ದು ನೆನಪಿಲ್ಲವೇ? ಅವರಿಗಿಂತ ಇವರೆಷ್ಟೋ ವಾಸಿ.

  ReplyDelete
 2. > ಆದರೂ ಎರಡೂ ಕೈಕಟ್ಟಿದ ಬಳಿಕ ಅವರು ಪ್ರಮಾಣವಚನ
  > ಸ್ವೀಕರಿಸುವಾಗ ಕೈಮುಗಿದದ್ದು ಹೇಗೆ ಎಂಬುದು ಅನ್ವೇಷಿಗೆ > ತಿಳಿಯದ ಸಂಗತಿ.

  ಅನ್ವೇಷಿಗೆ ತಿಳಿಯದ ಇನ್ನೂ ಒಂದು ಸಂಗತಿಯಿದೆ. ಎರಡೂ ಕೈಕಟ್ಟಿದವರು (ಪ್ರಮಾಣವಚನ) "ಸ್ವೀಕರಿಸಿದ್ದು" ಹೇಗೆ? ಕಾಲಿನಲ್ಲೇ?

  -ಪಬ್

  ReplyDelete
 3. ಹೌದು ರಸಾಯನರೆ,
  ಗಂಟಿನ ಗಂಟನು ನಂಬಿಯೇ ಎಲ್ಲರೂ ರಾಜಕೀಯಕ್ಕಿಳಿಯೋದು.

  ಸ್ವಲ್ಪ ತಾಳಿ, ನಾವೂ ಟ್ರೈ ಮಾಡೋಣ್ವಾ?

  ಆದ್ರೆ ಬಹುಶಃ ನಮಗಲ್ಲಿ ಸ್ಥಾನ ಇಲ್ಲದಿರಬಹುದು. ಯಾಕೆಂದರೆ ನಮಗೆ ಕನ್ನಡ ಓದಲು ಬರೆಯಲು ಬರುತ್ತದಲ್ಲಾ!

  ReplyDelete
 4. ರಾಜಕಾರಣಿಗಳು ಅನಿಸಿಕೊಂಡವರಿಗೆ ಕೈ-ಕಾಲುಗಳೇಕೆ ಬೇಕು ಪಬ್ಬಿಗರೇ?

  ಅವರಿಗೆ ಬಾಯಿಯೇ ಬಂಡವಾಳವಲ್ವಾ. ಪ್ರಮಾಣ ವಚನವನ್ನು ಅಸತ್ಯದ ಮೇಲೆ ಪ್ರಮಾಣ ಮಾಡಿ ಸ್ವೀಕರಿಸುತ್ತಾರಲ್ಲವೇ?

  ReplyDelete
 5. ಹೌದು ಅಸತ್ಯಾನ್ವೇಷಿಗಳೇ, ಇದೇ ನಾವು ಮಾಡಿದ ಮೊದಲನೆಯ ತಪ್ಪು. ಚಿಕ್ಕಂದಿನಿಂದಲೇ ಸೈಕಲ್ ಶಾಪಿನಲ್ಲಿ, ಕಾರ್ ಗ್ಯಾರೇಜ್‍ನಲ್ಲಿ ಕೆಲಸ ಮಾಡಿಕೊಂಡಿದ್ದು, ಶಾಲೆಗೆ ಸೇರದಿದ್ದಿದ್ದರೆ ನಮ್ಮ ಬಾಳು ಬಂಗಾರ ಆಗ್ತಿತ್ತು. ಈಗಲೂ ನಮ್ಮ ಜೀವನ ಒಂದು ರೀತಿಯ ಬಂಗಾರವೇ, ಆದರೆ ಕಾಗೆ ಬಂಗಾರ ಅಥವಾ ಮರಾಠಿಯ ಭಂಗಾರ (ಗುಜರಿ).

  ಎಲ್ಲೆಲ್ಲೂ ಆವರಿಸುತ್ತಿರುವ ಅನಾನಸ ಪಬ್ಬಣ್ಣನವರ ನನಗೇನೋ ಅನುಮಾನ. ಇವರು ಆ ರಾಜಕಾರಣಿಗಳ ಬಂಟ ಇರಬಹುದೇ? ಇನ್ನೆರಡು ಮೂರು ವರುಷಗಳಲ್ಲಿ ದೇಶದ ಪ್ರಧಾನಮಂತ್ರಿ ಆಗುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ.

  ReplyDelete
 6. ಹೌದಲ್ವಾ ಸವಿ ಮಾವಿನವರೆ,

  ಈ ಅನಾನಸರು ಪಬ್ಬಲ್ಲೇ ಯಾವತ್ತೂ ಕುಳಿತಿರುವುದು ಭವ್ಯ ಭಾರತದ ಭಾವೀ ಪ್ರಧಾನಿಯ ಲಕ್ಷಣಗಳಲ್ಲೊಂದು.

  ಆದಕಾರಣ, ನಾವ್ ಪಬ್ಬನ್ನೇ ಈಗಲೇ ಬುಟ್ಟಿಗೆ ಹಾಕಿಕೊಳ್ಳೋಣ. ಆಗದೆ?

  ಆದ್ರೆ ಒಂದು ಕಂಡಿಷನ್ನು. ಚೀರಾಡಿದರೂ ಪರವಾಗಿಲ್ಲ....
  ತೂರಾಡಬಾರದು !

  ReplyDelete
 7. ಬೆಂಗಳೂರಿಗೆ ಭಾರತದ ಪಬ್ ಕ್ಯಾಪಿಟಲ್ ಎಂಬ ಹೆಸರಿರುವುದು ನಿಮಗೆ ಗೊತ್ತಿಲ್ಲವೇ? ಡಾ| ರಾಜಾ ರಾಮಣ್ಣನವರು ಬೆಂಗಳೂರಿಗೆ bar-galore ಎಂದಿದ್ದರು. ನಾನಂತೂ unbelievable (U.B.) ಮಲ್ಯರ ಅನುನಾಯಿ. ನನ್ನ ತಾತನವರಾಗಿದ್ದ ಹೆಂಡ್ಕುಡುಕ ರತ್ನ ನಿಮಗೆ ಗೊತ್ತೇ ಇರಬೇಕಲ್ಲವೇ?

  -ಪಬ್

  ReplyDelete
 8. ಪಬ್ಬಿನಲ್ಲಿ ಹೆಂಡಾನೂ ಸಿಗುತ್ತಾ?

  ಅದ್ಕೇ ನಿಮ್ ಕಾಮೆಂಟ್ ಕ್ಲಿಕ್ ಮಾಡಿದ ತಕ್ಷಣ ಏನೋ ಒಂಥರಾ ಅಮಲು....

  ReplyDelete
 9. This comment has been removed by a blog administrator.

  ReplyDelete
 10. ನಮ್ಮ ದೇಶದ ರಾಜಕಾರಣಿಗಳಿಗೆ ಮಾತ್ರವಲ್ಲ, ಪದವೀಧರರಿಗೆ ಕೂಡ ಸರಿಯಾದ ವಿದ್ಯಾಭ್ಯಾಸ ಇಲ್ಲ ಎಂಬುದನ್ನು ನನ್ನ ಬ್ಲಾಗ್‌ನಲ್ಲಿ ವಿವರಿಸಿದ್ದೇನೆ.

  -ಪವನಜ

  ReplyDelete
 11. ಆಮೀರ್ ಬಗ್ಗೆ ಮತ್ತೆ ಓದಿದಂತಾಯಿತು.
  ಸಭಾ ತ್ಯಾಗ ಮಾಡಿದ ವಾಟಾಳ್ ಬಗ್ಗೆ ಬರಿಬೇಕಿತ್ತು.
  ಎಮ್.ಈ.ಎಸ್. ಮುಂದಿನ ಗುರಿ ಇರಬೊಹುದೇನೊ?

  ReplyDelete
 12. ಅಮೀರ್ ಸಾಬ್‍ದೂಕ್ಕೆ ಎನೂ ಮಿಸ್ಟೀಕ್ ಮಾಡಿಲ್ಲ.ಅವುರುದೊಕ್ಕೆ ಪಾಪ ಒಂದ್ಸಲ ಇಂಗ್ಲೀಸ್‍ನಲ್ಲಿ ಮಾತಾಡಬಿಟ್ಟ್ರೆ ಏನಾತು? ಅವ್ರುದಕ್ಕೆ ಮಿಸ್ಟೀಕ್ ಮಾಡಿದೆ ಅಂತಾ ಒಪ್ಪಕೊಳ್ಳೋ ಅಚ್ಚಾ ಮೈಂಡ್ ಇದೆ..

  ಅವ್ರನ್ನ ವಾಟಾಳ್ ಹತ್ತಿರ ಕನ್ನಡ ಕಲಿಯೋಕ್ಕೆ ರಾತ್ರಿ ಶಾಲೆಗೆ ಕಳಸಿಬೇಕು..

  ReplyDelete
 13. ಪವನಜ ಅವರೆ,

  ನಿಮ್ಮ ವಾದ ಖಂಡಿತಾ ಹೌದು. ನಿಮ್ಮ ಬ್ಲಾಗಿನಲ್ಲಿರುವ ವಿಷಯ ನೋಡಿದ್ರೆ, ಈ ಪದವೀಧರ ಶಿಕ್ಷಕರು ಅರ್ಹರಲ್ಲದಿದ್ದರೂ ಮೀಸಲಾತಿ ಪಡೆದು ಕೆಲಸ ಗಿಟ್ಟಿಸಿಕೊಂಡವರಿರಬಹುದೇ ಎಂಬ ಸಂಶಯ ಕಾಡುತ್ತಿದೆ.

  ಯಾರಾದ್ರೂ ಸತ್ಯವೇನು ಎಂಬುದನ್ನು ಅನ್ವೇಷಿಸಲಿ. ಯಾಕಂದ್ರೆ ಅದು ಅಸತ್ಯ ಬ್ಯುರೋದ ವ್ಯಾಪ್ತಿಗೆ ಬರುವುದಿಲ್ಲ!
  :)

  ReplyDelete
 14. ಮಾನ್ಯ ಫ್ಯಾಂಟಮರೇ,

  ನೀವು ಆಗಾಗ್ಗೆ ಹಾರಿ ಬಂದು ನಮ್ಮ ಬಾಲ್ಯದಲ್ಲಿ ಕಾಮಿಕ್ಸ್ ಓದಿ ಖುಷಿಪಡುತ್ತಿದ್ದ ದಿನಗಳನ್ನು ನೆನಪಿಸುತ್ತಿರುವುದಕ್ಕೆ ತುಂಬಾ ಧನ್ಯವಾದ.

  ಎಂಇಎಸ್ ಅಂದ್ರೆ ಮರಾಠಿಗರು ಇಲ್ಲದ (ಹೋರಾಟ)ಸಂಘ ಎಂದಿರಬಹುದು ಅಲ್ವೇ?

  ReplyDelete
 15. ಹೌದು ಸೀವ್ ಅವ್ರೆ,

  ಅಮೀರ್ದುಕು ಉರ್ದುನೂ ಬರಂಗಿಲ್ಲ, ಕನ್ನಡ್ದಾಗೂ ಒದರೋಕೆ ಆಗ್ದು. ಆದ್ಕೆ ಮೊದಲ್ನೇ ಸಲ ಇಂಗ್ಲೀಸ್ ಬಾಸೇನ ವಿಧಾನ್ ಸೌಧದೊಳ್ಗೆ ಉದುರಿಸಿದ್ರಲ್ಲಾ, ಅದು ಇಂಗ್ಲೀಸ್ ಟೆಸ್ಟ್ ಮತ್ತು ಟೇಸ್ಟ್ ಮಾಡೋಕೆ ಇರ್ಬೋದು....

  ವಾಟಾಳರ ಕೋಪ ಇನ್ನೂ ಆರದೆ ಅವರು ಸದನದಲ್ಲಿ ಗಂಟೆ ಬಾರಿಸೋದು ಖಚಿತ ಅಂತ ತಿಳಿದುಬಂದಿದೆ.

  ReplyDelete
 16. ಎಲ್ಲಿಯೂ ಸಲ್ಲದವರು ಖಂಡಿತವಾಗಿಯೂ ರಾಜಕೀಯದಲ್ಲಿ ಸಲ್ಲುತ್ತಾರೆ ಎಂಬುದಕ್ಕೆ ಜಮೀರ್ ಅಹ್ಮದ್ ಉತ್ತಮ ಉದಾಹರಣೆ. ಅದಕ್ಕೇ ಇರಬೇಕು ಖ್ಯಾತ ಲೇಖಕ ಟಿಜೆಎಸ್ ಜಾರ್ಜ್ ಅವರು ರಾಜಕಾರಣಿಗಳನ್ನು "Scoundrels of politics" ಅಂತ ಕರೆದಿರುವುದು.

  ReplyDelete
 17. ವಿಶ್ವನಾಥರೇ,
  ಟಿಜೆಎಸ್ ಜಾರ್ಜ್ ಕೂಡ ತಪ್ಪಿದ್ದಾರೆ.
  Scoundrals of ಪೋಲಿ tricks ಆಗ್ಬೇಕಿತ್ತು ಅಲ್ವಾ?

  ReplyDelete
 18. eshtu mandi nimma blog oduttare My God namma naxalnext bagge svalpa pracara kodi anvashi!

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post