Subscribe Us

ಜಾಹೀರಾತು
header ads

ಹಮಾಲಿ ಹುದ್ದೆ: ಮೇಲ್ವರ್ಗದವರ ಪೈಪೋಟಿ

(ಹಾಯ್ ಬೊಗಳೂರು-ರಗಳೆ ಬ್ಯುರೋದಿಂದ)
ಬೊಗಳೂರು, ಜೂ.14- ಮೀಸಲಾತಿಯಿಂದಾಗಿ ಬೀದಿಗೆ ಬಿದ್ದ ಮೇಲ್ವರ್ಗದವರು ಕಸ ಗುಡಿಸುವ ಹುದ್ದೆಗೆ ಪೈಪೋಟಿ ನಡೆಸಿರುವ ಸಂಗತಿ ಇಲ್ಲಿ ಪ್ರಕಟವಾಗಿರುವ ಬಗ್ಗೆ ತಡವಾಗಿ ನೆಗೆದುಬಿದ್ದ ಬೊಗಳೆ ಬ್ಯುರೋ ಸಿಬ್ಬಂದಿ, ಲಕ್ನೋಗೆ ಪ್ರವಾಸಕ್ಕಾಗಿ ಹೊರಟಿದ್ದು, ಮೀಸಲಾತಿಯಿಂದಾಗಿ ರೈಲಿನ ಟಿಕೆಟ್ ಸಿಗದೆ ಪರದಾಡಿದ ಪ್ರಸಂಗ ವರದಿಯಾಗಿದೆ.

ಇಲ್ಲಿ ಹಿಂದುಳಿದವರಿಗೆ ಮಾತ್ರವೇ ರೈಲು ಟಿಕೆಟ್ ಎಂದು ಕಡ್ಡಾಯ ಮಾಡಿದ ಹಿನ್ನೆಲೆಯಲ್ಲಿ ಅಸತ್ಯಾನ್ವೇಷಿ ಮರಳಬೇಕಾಯಿತು.

ಇನ್ನು ವಿಮಾನವೇರೋಣ ಎಂದು ಹೋದಾಗ ಯಾವ ಕ್ಲಾಸ್‌ನ ಟಿಕೆಟ್ ಬೇಕೆಂಬ ಪ್ರಶ್ನೆ ತೂರಿಬಂತು. ಮೂರನೇ ದರ್ಜೆ ಅಂತ ಹೇಳಿದಾಗ ಟಿಕೆಟ್ ಕೊಡುವವರ ಹುಬ್ಬು 90 ಡಿಗ್ರಿಯಷ್ಟು ಮೇಲಕ್ಕೆ ನೆಗೆಯಿತು. ಈಗ ಸಾವರಿಸಿಕೊಂಡ ಅಸತ್ಯಾನ್ವೇಷಿ, ಏನೋ ಉಪಾಯ ಹೊಳೆದಂತಾಗಿ ಶೆಡ್ಯೂಲ್ಡ್ ಕ್ಲಾಸ್ ಅಂತ ಒದರಿದಾಗ ಟಿಕೆಟ್ ನೀಡುವ ಯುವತಿಯ ಮೂಗಿನ ಕೆಳಗೆ U ಆಕಾರದ ನಗೆಯೊಂದು ಮಿಂಚಿ ಮಾಯವಾಯಿತು. ಹೇಗಿದ್ದರೂ ಇದು ಮಾಯಾವತಿ ಆಳಿದ ನಾಡಲ್ಲವೆ...!

ಸಾರಿ, ಶೆಡ್ಯೂಲ್ಡ್ ಕ್ಲಾಸ್‌ಗೆ ಟಿಕೆಟ್ ಇಲ್ಲ. ಶೆಡ್ಯೂಲ್ಡ್ ಟ್ರೈಬ್ ಮತ್ತು ಕಾಸ್ಟ್ ಗಳಿಗೆ ಮಾತ್ರ ಎಂಬ ಉತ್ತರ ಬಂತು. ಉತ್ತರ ಕೇಳಿ ತತ್ತರಿಸಿದ ಅನ್ವೇಷಿ ಸ್ವಲ್ಪ ಯೋಚಿಸತೊಡಗಿದ.

ಲಕ್ನೋದಲ್ಲಿ ವಿಮಾನ ಇಳಿಯಲು ಜಾಗವಿಲ್ಲ, ಅಲ್ಲಿನ ಎಲ್ಲಾ ಸ್ಥಳಗಳು ಮೀಸಲಾಗಿಬಿಟ್ಟಿವೆ. (Sold Out ಮಾದರಿಯಲ್ಲಿ). ಇನ್ನು ರೈಲು ತುಂಬಾ ಉದ್ದವಿರುವುದರಿಂದ ಅಷ್ಟುದ್ದದ ರೈಲು ಲಕ್ನೋ ತಲುಪುವುದು ನಿಧಾನವಾಗುತ್ತದೆ. ಬಸ್ಸಿನಲ್ಲಿ ಹೋಗುವುದು ರಗಳೆಯ ವಿಷಯ. ಇದಕ್ಕಿಂತ ಸ್ವಂತ ಕಾಲಿನಲ್ಲೇ ಹೋಗುವುದು ವಾಸಿ ಅಂದುಕೊಂಡಾಗ ಹೊತ್ತು ಮೀರಿತ್ತು.

ಆದರೆ ನಂತರ ವಿಷಯ ತಿಳಿದ ಪ್ರಕಾರ, ಲಕ್ನೋದಲ್ಲಿ ಕಸ ಗುಡಿಸುವ ಹುದ್ದೆಗೆ ಅರ್ಜಿ ಸಲ್ಲಿಸಿದ ಬ್ರಾಹ್ಮಣರ ಸಂಖ್ಯೆ ಮೇರೆ ಮೀರಿದ್ದರಿಂದ ಅಲ್ಲಿ ಹಿಂದುಳಿದವರು ಮತ್ತು ಮುಂದೆ (ತಟಸ್ಥವಾಗಿ) ಉಳಿದವರ ಮಧ್ಯೆ ಘರ್ಷಣೆ ನಡೆದಿದೆ

ಹಮಾಲಿ ಹುದ್ದೆ, ಟಾಯ್ಲೆಟ್ ಕ್ಲೀನಿಂಗ್, ಮನೆಕೆಲಸ, ಸೆಗಣಿ ಸಾರಿಸುವಿಕೆ, ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವುದು, ರಸ್ತೆ ಸ್ವಚ್ಛಗೊಳಿಸುವುದು ಇತ್ಯಾದಿ ಸಂಭಾವಿತ ಹುದ್ದೆಗಳಿಗೂ ಹೋರಾಟ ನಡೆಯಲಾರಂಭಿಸಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಮೇಲ್ವರ್ಗಿಗಳು, ಎಲ್ಲ ಹುದ್ದೆಗಳನ್ನು ಮೀಸಲಿರಿಸಿದರೆ ನಾವು ಬದುಕುವುದು ಬೇಡವೇ? ದೇಶದಲ್ಲಿ ಮುಂದುವರಿದವರನ್ನೇ ಇಲ್ಲದಂತಾಗಿಸಿ, ಬರೇ ಹಿಂದುಳಿದವರ ರಾಷ್ಟ್ರವಾಗಿಸುವ ಉದ್ದೇಶವೇ ಎಂದು ಪ್ರಶ್ನಿಸಿದ್ದಾರೆ.

ಹೋರಾಟ ಜೋರಾಗುತ್ತಿದೆ ಅಂತ ತಿಳಿದಾಗ ಬ್ಯುರೋ ಸಿಬ್ಬಂದಿ ರೈಲು, ಬಸ್ಸು ಮತ್ತು ವಿಮಾನ- ಈ ರೀತಿ ಮೂರೂ ನಿಲ್ದಾಣಗಳಿಂದ ಒಂದೇ ಓಟ. ಉಸಿರು ಬಿಟ್ಟದ್ದು ಬೊಗಳೆ-ರಗಳೆ ಕಚೇರಿಯಲ್ಲೇ.

ಇನ್ನೂ ಏದುಸಿರು ಬಿಡುತ್ತಿರುವ ಸಿಬ್ಬಂದಿಯ ಸಂದರ್ಶನಕ್ಕೆ ಎನ್‌ಡಿಟಿವಿ, ಸಿಎನ್‌ಎನ್-ಐಬಿಎನ್, ಬಿಬಿಸಿ, ಟೈಮ್ಸ್ ನೌ ಮುಂತಾದ ಚಾನೆಲ್‌ಗಳ ವರದಿಗಾರರು ಕಾದು ಕುಳಿತಿದ್ದಾರೆ ಎಂಬಲ್ಲಿಗೆ ಮೀಸಲಾತಿ ಪುರಾಣದ ಮುಗಿಯಲಾರದ ಕಂತುಗಳಲ್ಲೊಂದು ಮುಗಿದೇಬಿಟ್ಟಿತು.

Post a Comment

8 Comments

 1. ರೈಲ್ ಹತ್ತೋಕೆ ಮೀಸಲಾತಿ ಬೇಕಾ? ಇದು ಪರಮ ಅನ್ಯಾಯ. ದುಂಡೂರಾಯರಾಳಿದ ನಾಡಿದು. ಮಬ್ಬಯ್ಯನವರು ಗುಡುಗಿದ ಬೀಡಿದು. ಇಂತಹ ನಾಡಿನ ಮಕ್ಕಳಿಗೆ ಮೀಸಲಾತಿಯಾ?

  ದುಂಡೂರಾಯರ ಸರ್ಕಾರ ಆಡಳಿತದಲ್ಲಿದ್ದಾಗ ಒಮ್ಮೆ ಮಬ್ಬಯ್ಯನವರು ದುಂಡೂರಾಯರ ಜಾತಿಯ ಬಗ್ಗೆ ಜಿಲ್ಲಾಧಿಕಾರಿಗಳು ಕೊಟ್ಟ ಒಂದು ಸರ್ಟಿಫಿಕೇಟ್ ತೋರಿಸಿದ್ದರು. ಅದೆಲ್ಲಿ ಸಿಗುವುದೆಂದು ಕೇಳಿದ್ದಕ್ಕೆ, ಜಿಲ್ಲಾಧಿಕಾರಗಳ ಕಛೇರಿಯ ಮುಂಭಾಗದಲ್ಲಿರುವ ಸೈಕಲ್ ಸ್ಟ್ಯಾಂಡ್ ಕಡೆಗೆ ಮಬ್ಬಯ್ಯನವರು ಕೈ ತೋರಿದ್ದರು.

  ಇಂತಹ ನಾಡಿನ ಮಕ್ಕಳಿಗೆ ಮೀಸಲಾತಿಯಿಂದ ಏನೂ ತೊಂದರೆಯಿಲ್ಲ. ಅದಿರ್ಲಿ, ನಾವೆಲ್ಲಾ ಮಾಡ್ತಿರೋ ಕೆಲಸ ಇನ್ನೇನು ಅಂತ ತಿಳಿದಿದ್ದೀರಿ. ಕಸ ಗುಡಿಸುವುದೇ ನಮ್ಮ ಕಾಯಕ. ಪೊರಕೆಯೇ ನಮ್ಮ ಲಾಂಛನ.

  ReplyDelete
 2. ನಿಮ್ಮ ನೆನಪಿನ ಬುತ್ತಿಯಿಂದ ನಮಗೂ ಒಂದಿಷ್ಟು ಉಣಿಸಿದ್ದಕ್ಕೆ ಧನ್ಯವಾದ ಮಾವಿನರಸರೆ.

  ಪೊರಕೆಯನ್ನು ಮುಂಬಯಿಯ ಜನನಿಬಿಡ ರೈಲಿನಲ್ಲಿ ಹೊರಗೆಳೆಯಬೇಡಿ ಮತ್ತೆ.... ಕದ್ಕೊಂಡು ಹೋದಾರು!

  ReplyDelete
 3. ಹೀಗಾದರೂ ಕ್ರಾಂತಿಯಾಯಿತಲ್ಲಾ ಎಂದು ಕ್ರಾಂತಿಕಾರಿಗಳು ಸಂತೋಷ ಪಡಬಹುದು :-)

  ReplyDelete
 4. ಕ್ರಾಂತಿಕಾರಿಗಳಿಗೆ ಸಂತೋಷವಾದರೆ, ಇನ್ನು ವಾಂತಿಕಾರರಿಗೆ, ಭ್ರಾಂತಿಕಾರರಿಗೆ ... ಏನಾಗಬಹುದು?
  ಕಾಲೆಳೆಯೋದು ಸ್ವಲ್ಪ ಜಾಸ್ತಿ ಆಯ್ತು ಅಂತೀರಾ?

  ReplyDelete
 5. ಹೌದು ಶ್ರೀತ್ರಿ ಅವರೆ,
  ಖಂಡಿತವಾಗಿಯೂ ಇದು ವೋಟಿನ ಕ್ರಾಂತಿ
  ಮತ್ತು ಮಾವಿನರಸರು ಹೇಳಿದ ಹಾಗಿ ವೋಟಿನ ಭ್ರಾಂತಿಯೂ ಹೌದು.

  ReplyDelete
 6. nanna kelavu snehitharige kannda baruvudilla. so avara korikeya merege badlaisede.

  sampada dalli nanna kannada blog ide alli nanu kannda dalli blogisalu prayathnisedeene

  ReplyDelete
 7. ಇನ್ನು ಸ್ಪಲ್ಪ ದಿನದಲ್ಲಿ ಬ್ಲಾಗ್ ಮಾಡೋದಿಕ್ಕೆ ಮೀಸಲಾತಿ ಇರುತ್ತೆ ಅಂತೆ.ಹಂಗೆ ಕಾಮೆಂಟಿಸಲು ಸಹ ಮೀಸಲಾತಿಯಂತೆ..

  ಅದು ಬರೋಕ್ಕಿಂತ ಮುಂಚೆ ನೀವು ಅದಷ್ಟು ಬದೆದುಬಿಡಿ..ನಾವು ಅದಷ್ಟು ಕಾಮೆಂಟಿಸಿಬಿಡ್ತೆವೆ..ಆಮೇಲೆ ಬ್ಲಾಗ್‍ ಮಾಡಲು ಪೈಪೋಟಿ ಅಂತ ಒಂದು ಲೇಖನ ಬರುತ್ತೆ !

  ReplyDelete
 8. ಕಾಮೆಂಟಿಸಲು ಮೀಸಲಾತಿ ತಂದುಬಿಟ್ರೆ ಖೋಟಾ ಸರ್ಟಿಫಿಕೆಟ್ ಮೂಲಕ ಹಿಂದುಳಿದವ ಅಂತ ಸಾಬೀತುಪಡಿಸಿಕೊಳ್ತೀನಿ ಶಿವ್ ಅವರೆ.

  ಬೊಗಳೆ ಬಿಡುವುದಕ್ಕೆ ಪೈಪೋಟಿಯಾ.... ಬರಲಾರದು ಅಂತ ನನ್ನ ಭಾವನೆ. ಯಾಕಂದ್ರೆ ಬೊಗಳೆಯಲ್ಲಿ ರಾಜಕಾರಣಿಗಳಿಗೆ ಹಣ ಎಲ್ಲಿ ಸಿಗುತ್ತೆ?

  ReplyDelete

ಏನಾದ್ರೂ ಹೇಳ್ರಪಾ :-D