ಬೊಗಳೂರು ಲೇಟ್ ಫ್ಲ್ಯಾಶ್ ನ್ಯೂಸ್
ಬೊಗಳೂರು, ಜೂ.8- ಸತ್ಯ ವಾಕ್ಯವೆ ನೆಚ್ಚಿ ನಡೆದರೆ ಮೆಚ್ಚನಾ ಪರಮಾತ್ಮನು ಎಂಬ ಪರಮಧ್ಯೇಯದೊಂದಿಗೆ ಅಸತ್ಯಾನ್ವೇಷಿ ಅಮೆರಿಕದಲ್ಲಿ ಬುಷ್ ಜತೆ ಮಾತನಾಡುತ್ತಿದ್ದಾಗ ಇದ್ದಕ್ಕಿದ್ದಂತೆ ನಾಪತ್ತೆಯಾಗಿಬಿಟ್ಟಿರುವುದರಿಂದ ಇಂದಿನ ಸಂಚಿಕೆ ಪ್ರಕಟವಾಗಿಲ್ಲ.
ಅಸತ್ಯಾನ್ವೇಷಿ ನಿಗೂಢ ನಾಪತ್ತೆ ಕುರಿತಾದ ಹಸಿ ಹಸಿ ಬಿಸಿ ಬಿಸಿ ಸುದ್ದಿಗಾಗಿ ಕಾಯಲಾಗುತ್ತಿದೆ. ನಾಳಿನ ನಿಮ್ಮ ಪ್ರತಿಗಳನ್ನು ಇಂದೇ ಕಾದಿರಿಸಿ.
ಇಂದಿನ ಸುದ್ದಿ- ನಾಳೆ ಆಗದು ರದ್ದಿ ಎಂಬ ಭರವಸೆಯೊಂದಿಗೆ
-ಬೊಗಳೂರು ಏಕವ್ಯಕ್ತಿ ಬ್ಯುರೋ
"ಅಸತ್ಯಾನ್ವೇಷಿ ಅಮೆರಿಕದಲ್ಲಿ ಬುಷ್ ಜತೆ ಮಾತನಾಡುತ್ತಿದ್ದಾಗ ಇದ್ದಕ್ಕಿದ್ದಂತೆ ನಾಪತ್ತೆಯಾಗಿಬಿಟ್ಟಿರುವುದರಿಂದ ..."
ReplyDeleteಮೇಲಿನ ವಾಕ್ಯದಲ್ಲಿ ಅಸತ್ಯಾನ್ವೇಷಿಯೇ ನಾಪತ್ತೆಯಾಗಿದ್ದಾನೆಂದು ಅರ್ಥಮಾಡಿಕೊಳ್ಳಬೇಕಿಲ್ಲ, ಬುಷ್ ನಾಪತ್ತೆಯಾಗಿರುವುದೂ ಇರಬಹುದು! ಅಷ್ಟಕ್ಕೂ ಬುಷ್ ಏನು ಪಿ.ಸಿ.ಸರ್ಕಾರ್ ? ಉದಯ ಜಾದೂಗಾರ್? ಪ್ರೊ}ಶಂಕರ್?
ಸ್ವಲ್ಪ beating around the bush ಮಾಡಿನೋಡಿ. ನಾಪತ್ತೆಯಾದವರಾರಿದ್ದರೂ ಪತ್ತೆಯಾಗುತ್ತಾರೆ.
ಅಸತ್ಯಾನ್ವೇಷಿಯವರು ಸಿಕ್ಕಿದ್ದಾರೆ. ಮನೆಯಲ್ಲಿ ಮಡದಿಯೊಂದಿಗೆ ಜಗಳವಾಗಿ ಜೋಳಿಗೆ ಏರಿಸಿಕೊಂಡು ಹಿಮಾಲಯಕ್ಕೆ ಹೋಗುವೆ ಎಂದು ಸಿಕ್ಕಿದ ಟ್ರೈನ್ ಏರಿ ಹೊರಟಿದ್ದರು. ಅವರ ದುರಾದೃಷ್ಟಕ್ಕೆ ಆ ಟ್ರೈನ್ ಯಾರ್ಡ್ಗೆ ಹೋಗುತ್ತಿತ್ತು. ಯಾರ್ಡ್ನಲ್ಲಿ ಒಬ್ಬರೇ ಕುಳಿತಿದ್ದರು. ಸ್ವಲ್ಪ ಹೊತ್ತಿಗೆ ಹೊಟ್ಟೆ ಹಸಿಯಲು ಮನೆಗೆ ಹೋಗಿದ್ದಾರಂತೆ.
ReplyDeleteನಾಳೆ ರದ್ದಿ ಸಿಗದಿದ್ದರೂ ಪರವಾಗಿಲ್ಲ, ಲದ್ದಿ ಮಾತ್ರ ಕೊಡಬೇಡಿ.
ಎಂದಿನಂತೆ ಪತ್ರಿಕೆಗಾಗಿ ಕಾಯುತ್ತಿರುವ ...
ಈ ಬ್ಲಾಗಿಗೆ ಬಂದು ಹೋಗಿ , ಮಾಡುತ್ತಿರುವ ನಮ್ಮ ಮೇಲೆ ಗುಮಾನಿ ಬರುವುದಿಲ್ಲ ತಾನೇ?
ReplyDeleteಹೌದು,ಜೋಶ್ಇ ಅವರೆ,
ReplyDeleteಪೊದೆ(bush)ಗೆ ಬೀಟ್ ಮಾಡುತ್ತಿದ್ದಾಗ ಅಸತ್ಯಾನ್ವೇಷಿ ಇರಾಕಿನಲ್ಲಿ ಸಿಕ್ಕಿ ಬಿದ್ದಿದ್ದಾರೆ, ಅಲ್ಲಲ್ಲ..., ಬಿದ್ದು ಸಿಕ್ಕಿದ್ದಾರೆ.
ಮಾವಿನ ಅರಸರೆ,
ReplyDeleteಅಸತ್ಯಾನ್ವೇಷಿಗಳು ಯಾರ ಮಡದಿಯೊಂದಿಗೂ ಜಗಳವನ್ನೇ ಆಡಿಲ್ಲ ಎಂಬುದು ದೃಢಪಟ್ಟಿದೆ!
ಚಾ-ತಕ ಪಕ್ಷಿಯಂತೆ ಪತ್ರಿಕೆಗೆ ಕಾಯುತ್ತಿರುವ ನಿಮ್ಮ ಅಭಿಮಾನಕ್ಕೆ ಅಸತ್ಯಲೋಕದಿಂದ ಧನ್ಯವಾದಗಳು.
Sritri ಅವರೆ,
ReplyDeleteಗುಮ್ಮಾನೀ ಅಮ್ಮನ ಕರೆಯದಿರೆ.....! ಅಂತ ಎಲ್ಲೋ (ಬೊಗಳೆ) ದಾಸರ ಪದ ಕೇಳಿದ್ದು ನೆನಪಾಯಿತು.
ಯಾರಾದ್ರೂ ಕೇಳಿದ್ರೆ, "ಏನು? ಬೊಗಳೆಯೇ? ಹಾಗಂದ್ರೇನು?!" ಅವರಿಗೇ ಕೇಳಿ ಕೈ ತೊಳೆದುಕೊಳ್ಳುವಿರಂತೆ.
Post a Comment
ಏನಾದ್ರೂ ಹೇಳ್ರಪಾ :-D