ಬೊಗಳೆ ರಗಳೆ

header ads

320 ಕಾಂಡೋಂ ಗುಳುಂಕರಿಸಿದ ಹೀರೋಯಿನ್

(ಬೊಗಳೂರು ಮಾದಕ ಬ್ಯುರೋದಿಂದ)
ಬೊಗಳೂರು, ಜೂ.28- ಮಾದಕತೆಗೂ ಕಾಂಡೋಮ್‌ಗೂ ಏನು ಸಂಬಂಧ ಅನ್ನೋದೇ ತಿಳಿಯದ ಕಾರಣ ಸಿಡ್ನಿಗೆ ಪ್ರಯಾಣ ಬೆಳೆಸಿದಾಗ ಸಂಬಂಧ ಸ್ವಲ್ಪ ಬಲವಾಗಿಯೇ ಇದೆ ಅಂತ ತಿಳಿದು ಬಂದಿದ್ದು ಇಲ್ಲಿ ಪ್ರಕಟವಾದ 25ರ ಮಹಿಳೆಯೊಬ್ಬಳು 320 ಕಾಂಡೋಮ್‌ಗಳನ್ನು ಗುಳುಂಕರಿಸಿದ ಘಟನೆ ಬಳಿಕ.
 
ಇತ್ತೀಚೆಗೆ ನಮ್ಮ ಬ್ಯುರೋ ಪೆಪ್ಸಿ ಬಾಟಲಿಯೊಳಗೆ ಕಾಂಡೋಮ್ ನೀಡುವ ವರದಿ ಪ್ರಕಟಿಸಿದ ಬಳಿಕ ಕಾಂಡೋಮ್‌ಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ ಎಂದು ಸಿಬಿಐ ಅಧಿಕಾರಿಗಳು ನಮ್ಮ ವರದಿಗಾರರನ್ನು ತರಾಟೆಗೆ ತೆಗೆದುಕೊಂಡ ತಕ್ಷಣ ಇದರ ಹಿಂದಿನ ಅಸತ್ಯ ಅನ್ವೇಷಣೆಗೆ ಹೊರಟಾಗ ಕಾರಣವೂ ದೊರಕಿಬಿಟ್ಟಿತು.
 
ಬರೇ 25 ವರ್ಷ ಪ್ರಾಯದ ಈ ಮಹಿಳೆ ತನ್ನ ಹಲ್ಲುಗಳಿಗಿಂತ 10ಪಟ್ಟು ಸಂಖ್ಯೆಯ ಕಾಂಡೋಮ್‌ಗಳನ್ನು ನುಂಗಿದ್ದಾಳಂತೆ. ಆದರೆ ಕಾಂಡೋಮ್‌ನಲ್ಲಿ ಮಾದಕತೆ ಎಲ್ಲಿಂದ ಬಂತು ಎಂದು ಕೇಳಿದರೆ, ಹೀರೋಯಿನ್‌ಗಳು! ಅಲ್ಲಲ್ಲ ಇದು ಹೆರಾಯಿನ್ ಅಂತ ಖಚಿತವಾಗಿದೆ.
 
ಆದರೂ ಮಾದಕತೆ ಬಗ್ಗೆ ಮಾತನಾಡ ಹೋದರೆ ಇಂದಿನ Heroineಗಳಿಗೂ Heroinಗೂ ಹೆಚ್ಚು ವ್ಯತ್ಯಾಸವಿಲ್ಲ ಎಂಬುದು ನಮ್ಮ ಬ್ಯುರೋ ಶೋಧಿಸದ ಸತ್ಯ.
 
ಈಕೆ ಸಿಂಗಪುರ ವಿಮಾನ ನಿಲ್ದಾಣದಲ್ಲಿ ಮಂಗನಂತೆ ಛಂಗನೆ ನುಂಗಿದ ಹೆರಾಯಿನ್ ತುಂಬಿದ ಕಾಂಡೋಮ್‌ಗಳನ್ನು ಹೊರ ತೆಗೆದದ್ದು ಹೇಗೆ ಎಂಬುದು ಎಲ್ಲರನ್ನೂ ಯೋಚನೆಗೀಡು ಮಾಡಿರುವ ಸಂಗತಿ ಎಂಬುದು ಬೊಗಳೆ ರಗಳೆ ಬ್ಯುರೋ ಗಮನಕ್ಕೆ ಬಂದಿದೆ.

ಹೊರಗೆ ತೆಗೆದಾಗ ಕಾಂಡೋಮ್ ಏನಾದರೂ ಒಡೆದು ಹೆರಾಯಿನ್ ದೇಹ ಕೋಶದೊಳಗೆ ಸೇರಿಕೊಂಡುಬಿಟ್ಟಿದ್ದಿದ್ದರೆ..... ಅನಾಹುತವೇ ಆಗುತ್ತಿತ್ತು !!!  ಬೇಡ, ಅದನ್ನು ನೆನಪಿಸಿಕೊಳ್ಳೋದೂ ಬೇಡ ಅಂತ ಬ್ಯುರೋ ಸುಮ್ಮನಾಗಿದೆ.
 
ಆದರೆ ಈ 320 ಕಾಂಡೋಮ್‌ಗಳನ್ನು ಯಾವ ಗಣಿ-ತಜ್ಞ ಖಚಿತವಾಗಿ ಲೆಕ್ಕ ಹಾಕಿದ ಎಂಬ ಬಗ್ಗೆ ಅನ್ವೇಷಣೆ ನಡೆಯುತ್ತಿದೆ. ಮತ್ತು ಅದು ಹೊರಬರುವವರೆಗೂ ಕಾದು ಕುಳಿತ ಅಧಿಕಾರಿಗಳ ಮನಸ್ಥಿತಿಯ ಬಗ್ಗೆಯೂ ಶೋಧ ನಡೆಯಲಾರಂಭಿಸಿದೆ.
 
ಕೊಟ್ಟ ಕೊನೆಯದಾಗಿ ಹೆರಾಯಿನ್ ನುಂಗಿದ್ದನ್ನೇ ನೆಪವಾಗಿಟ್ಟುಕೊಂಡು ಆಕೆಯನ್ನೇ ಹೀರೋಯಿನ್ ಮಾಡಲು ಭರ್ಜರಿ ಸಿದ್ಧತೆ ನಡೆದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

15 ಕಾಮೆಂಟ್‌ಗಳು

 1. "ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ..."
  "ಬಯಲು ಆಲಯದೊಳಗೊ ಆಲಯವು ಬಯಲೊಳಗೊ..."
  "ಕುಸುಮ ಗಂಧದ ಒಳಗೊ ಗಂಧ ಕುಸುಮದ ಒಳಗೊ..."

  ಇತ್ಯಾದಿ queಶ್ನೆಗಳನ್ನು ಹರಿಗೆ ಕೇಳಿ ಅವನ ಕಿವಿ ಹರಿಯುವಂತೆ ಮಾಡಿದ ಕನಕದಾಸರಿಗೂ

  "ಕಾಂಡೊಮ್ ಪೆಪ್ಸಿಯ ಒಳಗೊ ಹೆ(ಹಿ)ರೊಯಿನ್ ಕಾಂಡೊಮ್‌ನೊಳಗೊ...
  ಪೆಪ್ಸಿ-ಕೊಂಡೊಮ್-ಹೆರಾಯಿನ್ಗಳೆಲ್ಲವೂ ಹಿರೊಯಿನ್‌ನ ಹೊಟ್ಟೆಯೊಳಗೊ..."
  ಎಂದು queಶ್ನಿಸಿದರೆ ಅದು ಉ(ದ್ದ)ದ್ಧಟತನವಾದೀತು ಅನಿಸಬಹುದು!

  ಪ್ರತ್ಯುತ್ತರಅಳಿಸಿ
 2. ಬೊಗಳೂರು ಬ್ಯುರೋ ಅವರು ಏನೇನೋ ತನಿಖೆ ಮಾಡ್ತಿದ್ದಾರೆ. ನಿಮ್ಮ ಏಜೆಂಟರಿಗೆ ಬೇರೆ ಏನೂ ಹುಡುಕೋಕ್ಕೆ ಸಿಕ್ಕಲ್ವಾ? ಇದೊಂದೂ ನನಗೆ ಅರ್ಥ ಆಗ್ತಿಲ್ಲ. ಇನ್ಮೇಲೆ ನೀವು ಉಪಯೋಗಿಸೋ ಪದಗಳ ಅರ್ಥವನ್ನೂ ಹಾಕಿದ್ರೆ ಒಳಿತು.

  ಹೆರಾಯಿನ್ ಅಂದ್ರೇನು, ಡಾಂಕಮ್ ಅಂದ್ರೇನು? ಅದನ್ನೇ ಯಾಕೆ ಅವಳು ನುಂಗಬೇಕಿತ್ತು. ತನ್ನ ಶೂ ತಳದಲ್ಲಿ ಇರಿಸಬಹುದಿತ್ತಲ್ವಾ?

  ಪ್ರತ್ಯುತ್ತರಅಳಿಸಿ
 3. ಜೋಷಿ punಡಿತರೆ,

  ನಿಮ್ಮ ಈ ಕವಿತೆಗಳುನ್ನು ಕೇಳಿದ ಪೊಲೀಸರು, ಎಲ್ಲವನ್ನೂ ಹೀರೊಯಿನ್ ಹೊಟ್ಟೆಯೊಳಗೆ ಹಾಕಿದವರು ಯಾರು ಅಂತ ಪೊಲೀಸರು punಡಿತರ ಬೆನ್ ಬಿದ್ದಿದ್ದಾರಂತೆ.
  :)

  ಪ್ರತ್ಯುತ್ತರಅಳಿಸಿ
 4. ಮಾವಿನಯನಸರೇ,

  ನಿಮಗೊಂದು ನರಿಯನ್ನು ಕಳುಹಿಸಬೇಕೆಂದಿರುವೆ.

  ಈ Tom, Dick and ಷ-ನರಿಯಲ್ಲಿ ನಿಮಗೆ ಬೇಕಾದ ಎಲ್ಲವೂ ಇರುತ್ತದೆ. ಆದರೆ ಈ Dick-ಷನರಿಯಲ್ಲಿ ಹೆಚ್ಚು dig ಮಾಡಲು ಹೋಗಬೇಡಿ ಅಂತ ಬಲವಾದ ಎಚ್ಚರಿಕೆ.

  ಮತ್ತೂ ಅರ್ಥವಾಗದಿದ್ರೆ, ಮುಂಬಯಿಯಲ್ಲೇ ಒಂದು ಏರಿಯಾ ಇದೆಯಲ್ವಾ, ಅದೇನು ಗ್ರಾಂಟ್ ರೋಡೋ, ಅಥವಾ ರೋಮಿಯೋ ರೋಡೋ.... ಅಲ್ಲಿಗೆ ವಿಚಾರಿಸಲು ಮಾತ್ರವೇ ಹೋಗಬಹುದು ಅಂತ ಕಟುವಾದ ಸೂಚನೆಯೂ ಕೊಡಲಾಗುತ್ತಿದೆ.!

  ಪ್ರತ್ಯುತ್ತರಅಳಿಸಿ
 5. ಓಹ್ ಆ ರಸ್ತೆಯಾ? ಅಲ್ಲಿಯೇ ನಾನು ಕಂಪ್ಯೂಟರ್ ಕೊಂಡದ್ದು. ಇದೆಲ್ಲಾ ಅಲ್ಲಿ ಸಿಗತ್ತಾ? ಹೋಗ್ಲಿ ಬಿಡಿ, ನೀವು ಎಚ್ಚರಿಕೆ ಕೊಟ್ಟ ಮೇಲೆ ನಾನು ಆ ಕಡೆ ಹೋಗಲ್ಲ.

  ಅದರ ಪಕ್ಕದ ರಸ್ತೆಯಲ್ಲಿ ಎಲ್ಲಿ ನೋಡಿದರೂ ಪೆಂಕು ದೀಪಗಳಿರತ್ವೆ, ಪೆಕರರಿಗೆ ಅಲ್ಲಿ ತಪರಾಕಿ ಬೀಳತ್ತೆ ಹೋಗ್ಬೇಡ ಅಂತ ನನ್ನ ಸ್ನೇಹಿತ ಒಮ್ಮೆ ಹೇಳಿದ್ದ. ಅದನ್ನಲ್ಲ ತಾನೇ ನೀವು ಹೇಳ್ತಿರೋದು.

  ಪ್ರತ್ಯುತ್ತರಅಳಿಸಿ
 6. ಹೆರೋಇನಾನ್ವೇಶಿಗಳೆ,

  ೩೨೦ ಕಾಂಡೋಂ, ಹೊಟ್ಟೆನೊ ಗೋದಾಮೋ? ಅಸ್ಟು ತಿಂದು ಬದುಕಿದ್ದರೆ ಆ ೨೫ರ ಪ್ರಾಯದ ಮಹಿಳೆ ಅಂದರೆ ಮೆಚ್ ಬೇಕಾದ್ದೆ.

  ಸಿಂಗಪುರ ಆದಕ್ಕೆ ಪರ್ವಾಗಿಲ್ಲ, ಇಂಡೋನೇಸಿಯನೋ ಚೀನನೋ ಆಗಿದ್ರೆ, ೨೫ರ ಪ್ರಯಕ್ಕೆ ಪರಲೋಕದ ಪಯಣವಾಗ್ತ ಇತ್ತು.

  ಭೂತ

  ಪ್ರತ್ಯುತ್ತರಅಳಿಸಿ
 7. ಫ್ಯಾಂಟಮರೇ,

  ಪರಲೋಕ ಯಾನದ ನಿಮ್ಮ ಕಳಕಳಿ ಮೆಚ್ಚುವಂಥಾದ್ದೇ.

  ಮತ್ತೆ ನೀವು ಅತ್ತಕಡೆ ದಯವಿಟ್ಟು ತಲೆ ಹಾಕಬೇಡಿ...

  ಅಲ್ಲಿಗೂ ಶೀಘ್ರವೇ ಮೀಸಲಾತಿ ತರಲಾಗುತ್ತದೆ ಅಂತ ನಮಗೆ ಸುದ್ದಿ ಬಂದಿದೆ.

  ಪ್ರತ್ಯುತ್ತರಅಳಿಸಿ
 8. ಹೌದು ಮಾವು ರಸವತ್ತಾದವರೆ,

  ಪೆಂಕು ದ್ವೀಪವೇ ಅದು. ಅಲ್ಲಿಂದಾನಾ ನೀವು ಕಂಪ್ಯೂಟರ್ ಕೊಂಡಿದ್ದು? ಯಾವುದಕ್ಕೂ ಹುಷಾರಾಗಿರಿ...!

  ಪ್ರತ್ಯುತ್ತರಅಳಿಸಿ
 9. ಅಂದ ಹಾಗೆ ಕಾಂಡೂಮ್‌ಗೆ ಕನ್ನಡದಲ್ಲಿ (ಅರೆ ಸಂಸ್ಕೃತದಲ್ಲಿ?) ಶಿಶ್ನಟೋಪಿ ಎನ್ನುತ್ತಾರೆ ಗೊತ್ತ?

  -ಪಬ್

  ಪ್ರತ್ಯುತ್ತರಅಳಿಸಿ
 10. ಪಬ್ಬಿ ಡಬ್ಬಿಯೊಳಗೆ ಕುಳಿತಿರುವ ಈ ಅನಾನಿಮಸರ ಧ್ವನಿಯನ್ನು ಎಲ್ಲಿಯೋ ಕೇಳಿದಂತಿದೆ? ಇವರು ವೈದ್ಯ ಮಾರುತಿ ಆಗಿರಬಹುದಾ?

  ಪ್ರತ್ಯುತ್ತರಅಳಿಸಿ
 11. ಪಬ್ ಪ್ರಿಯರದ್ದು
  ನೋ ಕಾಮೆಂಟ್ಸ್
  ಅಂದ್ರೆ ಕಾಮೆಂಟ್ಸ್ ಅಲ್ಲ!

  ಪ್ರತ್ಯುತ್ತರಅಳಿಸಿ
 12. ಮಾವಿನಯನಸರು ಕೇಳಿಸಿಕೊಂಡಿದ್ದು ಸರಿ ಇರ್ಬೇಕು
  ಅಲ್ವಾ?

  ಪ್ರತ್ಯುತ್ತರಅಳಿಸಿ
 13. ಇವರು ವೈದ್ಯ ಮಾರುತಿ ಆಗಿರಬಹುದಾ?

  ಏನ್ರೀ ಮಾವಿನ ರಸಾಯನರೇ? ವೈದ್ಯೋ ನಾರಾಯಣೋ ಹರಿಃ ಎಂದಿರುವಲ್ಲಿ ನಾನು ವೈದ್ಯನನ್ನು ಮಾರುತ್ತಿದ್ದೇನೆ ಎಂದು ಹೇಳಲು ನಿಮಗೆ ಎಷ್ಟು ಧೈರ್ಯ? ಈ ರೀತಿ ದೋಷಾರೋಪಣೆ ಮಾಡಲು ನೀವು ಖಂಡಿತ ಮಾವಿನ ರಸಾಯನದ ಬದಲು ಇನ್ನೇನೋ ಕುಡಿದಿರಬೇಕು. ಇದನ್ನು ಪತ್ತೆಹಚ್ಚಲು ಆ-ಸತ್ಯಾನ್ವೇಷಿಗೇ ಸಾಧ್ಯ.

  -ಪಬ್

  ಪ್ರತ್ಯುತ್ತರಅಳಿಸಿ
 14. ಅಂದ್ರೆ ಪಬ್ಬಿಗರೇ, ನೀವು ವೈದ್ಯೋ ಮಾರೋಣವೇ ಹರಿಯೇ?
  ಹರ ಹರಾ ಶ್ರೀ ಚನ್ನ ಪಬ್ಬಿಗೇಶ್ವರಾ....

  ಮಾವಿನರಸ ಕುಡಿದದ್ದು ಏನು ಅಂತ ನನಗೆ ಗೊತ್ತು. ಅವರು ಮಾವಿನ ರಸದ ಬದಲು ದ್ರಾಕ್ಷಾ ರಸ ಕುಡೀಬೌದು.

  ಪ್ರತ್ಯುತ್ತರಅಳಿಸಿ
 15. ಬಹುಷಃ ಈ ಮಹಿಳೆ ಹೋದ ಜನ್ಮದಲ್ಲಿ ಯಾವುದೋ ಕಾಂಡೋಮ್ ವೆಂಡಿಗ್ ಮಿಷೀನ್ ಆಗಿದ್ದರಬಹುದು !

  ಆ ದೇಶದಲ್ಲಿ ಲೈಂಗಿಕ ಶಿಕ್ಷಣ ಕೊಟ್ಟಿಲ್ಲ ಅನಿಸುತ್ತೆ..ಯಾವುದನ್ನೋ ಯಾವುದಕ್ಕೋ ಉಪಯೋಗಿಸುತ್ತಿದ್ದಾರೆ..

  ಬಾಲಿವುಡ್ ‍ನಲ್ಲಿ ಆ ಕಾಂಡೆಮ್ ಸ್ತ್ರೀ ಯ ಹೊಸ ಚಿತ್ರ - 'ತುಮಾರ ಕಾಂಡೋಮ್ ಹಮಾರ ಪಾಸ್ ಹೈ'ಬರಲಿದೆಯಂತೆ

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D