ಬೊಗಳೆ ರಗಳೆ

header ads


ದಾಂಧ(ಖ)ಲೆ ಮಾಡಿದ್ದು ಕಮಿಷನರ್ !

(ಅಸತ್ಯಾನ್ವೇಷಿ ರಹಿತ ಬ್ಯುರೋದಿಂದ)
ಬೊಗಳೂರು, ಮೇ 5- ರಾಜ್ ಅಂತ್ಯಕ್ರಿಯೆ ಸಂದರ್ಭ ಬೆಂಗಳೂರಿನಲ್ಲಿ ದಾಖಲೆ ಮಾಡಲು ಹೊರಟವರನ್ನು ಗುರುತಿಸಿ ಪುರಸ್ಕರಿಸುವುದಕ್ಕಾಗಿ ಪೊಲೀಸರು ಪ್ರಯತ್ನಗಳನ್ನು ಆರಂಭಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯ ಬಾಲ ಹಿಡಿದು ಹೊರಟ ಅಸತ್ಯಾನ್ವೇಷಿ ತಲುಪಿದ್ದು ಬೆಂಗಳೂರಿನ ಪೊಲೀಸ್ ಆಯುಕ್ತ ಡಾ.ಅಜಯ್ ಕುಮಾರ್ ಸಿಂಗ್ ಅವರ ಮನೆ ಮುಂಭಾಗಕ್ಕೆ. ಇಲ್ಲೇನು ಸಿಕ್ಕಾಪಟ್ಟೆ ಭದ್ರತೆ ಇದೆಯಲ್ಲ ಅಂತ ಒಂದು ಕ್ಷಣ ತಡವರಿಸಿದರೂ, ಸಾವರಿಸಿಕೊಂಡು ಮುಂದೆ ನುಗ್ಗಿದಾಗ ಎದುರಾದ ನಗರ ಪೊಲೀಸ್ ಕಮಿಷನರ್ ಅವರನ್ನು ತಕ್ಷಣವೇ ಹಿಡಿದು ಎಳೆದಾಡಿದ ಅಸತ್ಯಾನ್ವೇಷಿ, ನೀವು ಕೂಡ ದಾಂಧಲೆಯಲ್ಲಿ ಭಾಗವಹಿಸಿದ್ದೀರಿ ಅನ್ನೋದಕ್ಕೆ ನನ್ನ ಬಳಿ ದಾಖಲೆ ಇದೆ ಎಂದು ಪತ್ರಿಕಾ ವರದಿಯನ್ನು ತೋರಿಸಿದ.

"ಇಲ್ಲಿ ನೋಡಿ, ನಿಮ್ಮ ಫೋಟೋ ಪತ್ರಿಕೆಯಲ್ಲಿ ಬಂದಿದೆ" ಎಂದು ಪೇಪರ್ ಕಟ್ಟಿಂಗ್ ತೋರಿಸಿದ ಅಸತ್ಯಾನ್ವೇಷಿ, "ಇವರನ್ನೆಲ್ಲಾದರೂ ಕಂಡರೆ ಮಾಹಿತಿ ನೀಡಿ, ಶಾಂತಿಗೆ ಸಹಕರಿಸಿ" ಅಂತ ಪೊಲೀಸರೇ ಕೋರಿಕೊಂಡಿದ್ದಾರೆ, ಅದರ ಕೆಳಗೆ ನಿಮ್ಮದೇ ಫೋಟೋ ಎದ್ದು ಕಾಣುತ್ತಿದೆ. ನೀವು ತಕ್ಷಣವೇ ಪೊಲೀಸ್ ಠಾಣೆಗೆ ಬಂದು ಹಾಜರಿ ಹಾಕತಕ್ಕದ್ದು ಎಂದು ಆದೇಶಿಸಿದ್ದಾನೆ. ಪರಿಣಾಮ ಈಗ ಅಸತ್ಯಾನ್ವೇಷಿ ಜೈಲಿನೊಳಗೆ ಎಷ್ಟು ಕಂಬಿಗಳಿವೆ ಅಂತ ಎಣಿಸುತ್ತಾ ಕೂತಿದ್ದು, ಇಂದು ಸಂಜೆವರೆಗೆ ಈತನ ಲೆಕ್ಕಾಚಾರ ಪ್ರಕ್ರಿಯೆ ಮುಗಿಯುವ ಸೂಚನೆಗಳಿಲ್ಲ ಎಂಬ ಖಚಿತ ಮಾಹಿತಿ ದೊರಕಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

8 ಕಾಮೆಂಟ್‌ಗಳು

 1. ಅಸತ್ಯಾನ್ವೇಷಿಗಳು ಜೈಲಿನಲ್ಲಿ ಕಂಬಿಗಳನ್ನು ಕೂಡುತ್ತಾ ಕಳೆಯುತ್ತಾ ಕೊಳೆಯುತ್ತಾ ಕೂತಿರುವಾಗ ಅದರ ವರದಿ ಪ್ರಸ್ತುತಪಡಿಸಿದ ಮಹಾನುಭಾವರು ಯಾರು? ಬ್ಲಾಗ್ ಗಳ ಮೇಲೆಲ್ಲಾ ದಾಂಧಲೆ ಮಾಡುತ್ತಿದ್ದ ಅಸತ್ಯಾನ್ವೇಷಿಗಳು ಮಾವನ ಮನೆಯಲ್ಲಿ ಬಗ್ಗುಬಡಿಸಿಕೊಂಡ ವರದಿ ಯಾವಾಗ ಬರುತ್ತದೆ?

  ಪ್ರತ್ಯುತ್ತರಅಳಿಸಿ
 2. ಅಸತ್ಯಾನ್ವೇಷಿಯ ಧೈರ್ಯ ಮೆಚ್ಚುವಂಥದ್ದೇ. ಸಾರ್ವಜನಿಕ ಹಿತಾಸಕ್ತಿಯಿಂದ ವರದಿಗಾರಿಕೆಗೆ ಹೋದ ವರದಿಗಾರನನ್ನೇ ಬಂಧಿಸಿದ್ದನ್ನು ಅಖಿಲ ವಿಶ್ವ ವರದಿಗಾರರ ಕೂಟ ಕಂಡಿಸುತ್ತದೆ!

  ಪ್ರತ್ಯುತ್ತರಅಳಿಸಿ
 3. ಪೋಲಿ (ಸ್) ಕಳ್ಳರು ಎಲ್ಲಿ ಅಡಗಿದ್ದಾರೆ ಎಂದು ನನಗೆ ಗೊತ್ತು. ಅವರನ್ನು ಹಿಡಿದುಕೊಟ್ಟರೆ ನನಗೇನು ಲಾಭ?

  ಪ್ರತ್ಯುತ್ತರಅಳಿಸಿ
 4. ಅಯ್ಯಯ್ಯೋ.... ಕಾಮೆಂಟ್ ಕೊಡಲಿಕ್ಕಾಗುವುದಿಲ್ಲಾ...

  ಪ್ರತ್ಯುತ್ತರಅಳಿಸಿ
 5. ಅಯ್ಯಯ್ಯೋ.... ಕಾಮೆಂಟ್ ಕೊಡಲಿಕ್ಕಾಗುವುದಿಲ್ಲಾ....

  ಪ್ರತ್ಯುತ್ತರಅಳಿಸಿ
 6. ಅಡಚಣೆಗಾಗಿ ಕ್ಷಮಿಸಿ....
  ತಾಂತ್ರಿಕ ಕಾರಣಗಳಿಂದಾಗಿ ಕಾಮೆಂಟಿಸುವ ಯಂತ್ರ ಕೆಟ್ಟು ಹೋಗಿತ್ತು. ಈಗ ಸರಿಯಾಗಿದೆ.

  ಪ್ರತ್ಯುತ್ತರಅಳಿಸಿ
 7. ನಾನು ಥರ್ಲ್ಡ್ ಕ್ಲಾಸ್ ಅಲ್ಲಲ್ಲ ವರ್ಲ್ಡ್ ಕ್ಲಾಸ್ ಕಾಮೆಂಟ್ ಹಾಕಿದ್ದೆ. ಎಲ್ಲಿ ಹೋಯ್ತೋ? ಅದೇನು ಬರೆದಿದ್ನೋ ಅದೂ ನೆನಪಿಲ್ಲ. ಇನ್ನೇನು ಮಾಡುವುದು. ಚೆನ್ನಾಗಿ ಬೊಗಳೆ ಬಿಟ್ಟಿದ್ದೀರ, ಎಂದಷ್ಟೇ ಹೇಳಬಹುದು.

  ಪ್ರತ್ಯುತ್ತರಅಳಿಸಿ
 8. ಧನ್ಯವಾದ ಮಾನಸವಿನಯರೇ,
  ನಿಮ್ಮ ಮೂರನೇ ತರಗತಿಯ ಕಾಮೆಂಟು ಇನ್ನೂ ಸಿಕ್ಕಿಲ್ಲ. ನಿಮಗೆಲ್ಲಾದರೂ ಸಿಕ್ಕಿದರೆ ಹೆಕ್ಕಿ ಕೊಡಿ.

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D