[ಬೊಗಳೂರು ಶಂಕಿತ ಬ್ಯುರೋದಿಂದ]
ಬೊಗಳೂರು: ಜಾಗತಿಕವಾಗಿ ಕೊರೊನಾ ವೈರಸ್ಸನ್ನು ಬೇಕು ಬೇಕೆಂದೇ, ತಾವಾಗಿಯೇ ಅಂಟಿಸಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವಂತೆಯೇ, ಆಸ್ಪತ್ರೆಗಳೂ ನಿಧಾನವಾಗಿ ತುಂಬಿ ತುಳುಕಾಡಲಾರಂಭಿಸಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ, "ನಮಗೇನೂ ಚಿಕಿತ್ಸೆ ಬೇಕಾಗಿಲ್ಲ, ನಮ್ಮನ್ನು ದೇವ್ರೇ ರಕ್ಷಿಸ್ತಾರೆ" ಅಂದುಕೊಂಡವರೆಲ್ಲಾ ಬಲವಂತವಾಗಿ ಆಸ್ಪತ್ರೆ ಸೇರುತ್ತಿದ್ದಾರೆ. ಅಷ್ಟೇ ಅಲ್ಲ, ತಮ್ಮನ್ನು ರಕ್ಷಿಸಲು ಬಂದ ದೇವರ ಮೇಲೆಯೇ ಉಗಿದವರೆಲ್ಲರನ್ನೂ ಬಲವಂತವಾಗಿ ಆಸ್ಪತ್ರೆಗೆ ಸೇರಿಸಿ, ಅವರು ಮತ್ತಷ್ಟು ಮಂದಿಗೆ ವೈರಸ್ ಹರಡಂತೆ ಬೊಗಳೂರು ಸರ್ಕಾರವೂ ಕ್ರಮ ಕೈಗೊಳ್ಳುತ್ತಿದೆ.

ಇದೀಗ ಆಸ್ಪತ್ರೆ ಸೇರಿರುವ ಕೋವಿಡ್-19 ರೋಗಿಗಳು, ತಮಗಿನ್ನೂ ಯಾವುದೇ ಕಾಯಿಲೆ ಇಲ್ಲ ಎಂದು ಹೇಳುತ್ತಾ, ಊರಿಗೆ ಪ್ರಸಾದ ಹಂಚಲು ಹೊರಡುತ್ತಿದ್ದಾರೆ. ಇವರ ಆಟಾಟೋಪಗಳನ್ನು ನೋಡಿದ ಕೊರೊನಾಗೆ ತಲೆಕೆಟ್ಟುಹೋಗಿರುವುದಾಗಿ ವರದ್ದಿಯಾಗಿದೆ.

ಈ ಕುರಿತು ಉಗುಳಿ ಪರಾರಿಯಾದವನನ್ನು ಬೊಗಳೆ ಬ್ಯುರೋ ಪತ್ತೆ ಹಚ್ಚಿ ಮಾತನಾಡಿದಾಗ ಆತ ಹೇಳಿದ್ದೇನೆಂದರೆ, ನಮಗೆ ಚಿಕ್ಕಂದಿನಿಂದಲೂ ಸಂಗೀತ ಕಲಿಯುವ ಆಸೆಯಿತ್ತು. ಉಗುಳಿ ಉಗುಳಿ ರಾಗ ಅಂತ ಯಾರೋ ಹೇಳಿದ್ರು ಅಂತ, ತಾನು ತಿಳಿದುಕೊಂಡಿದ್ದೇ ಸರಿ ಎಂಬ ಮನೋಭಾವ ಪ್ರದರ್ಶಿಸಿ, ಮತ್ತಷ್ಟು ಮುಂದಕ್ಕೆ ಪರಾರಿಯಾಗಿರುವುದಾಗಿ ಮೂಲಗಳು ವರದ್ದಿ ಮಾಡಿವೆ.

ಈ ಎಲ್ಲ ಚಟುವಟಿಕೆಗಳಿಂದ ತಲೆಕೆಟ್ಟು ಮತ್ತು ಕೆಡದೆಯೂ ರೋಸಿ ಹೋದ ಕೊರೊನಾ ವೈರಸ್ಸೇ ಈಗ, ಆಸ್ಪತ್ರೆಯಿಂದ ಪರಾರಿಯಾಗಿರುವ ಅಘಟಿತ ಘಟನೆಯೊಂದನ್ನು ಬೊಗಳೆ ವರದ್ದಿಗಾರರು ಹೆಕ್ಕಿ ತಂದಿದ್ದಾರೆ.

2 Comments

ಏನಾದ್ರೂ ಹೇಳ್ರಪಾ :-D

  1. ಉಗುಳುವುದರಲ್ಲಿಯೇ ವಿಶ್ವರಿಕಾರ್ಡ ಮಾಡಲು ಕೆಲವರು ಪೈಪೋಟಿ ನಡೆಸುತ್ತಿದ್ದಾರೆ. ಇವರಿಗೆ ಉಗುಳುಶ್ರೀ, ಉಗುಳುಭೂಷಣ ಹಾಗು ಉಗುಳುರತ್ನ ಎನ್ನುವ ಬಿರುದು ಕೊಡಬೇಕೆಂದು ಸರಕಾರಕ್ಕೆ ನನ್ನ ಮನವಿಯಾಗಿದೆ.

    ReplyDelete
    Replies
    1. ಓ ಹೌದಲ್ವಾ... ಉಗುಳುರತ್ನ ಮಾತ್ರ ನಮ್ಮ ನಮ್ಮವರಿಗೇ.... (ಗರಿಷ್ಠ ಹಗರಣ ಮಾಡಿರಬೇಕು ಅವರು)!

      Delete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post