ಬೊಗಳೆ ರಗಳೆ

header ads

ಪಾಕಿಸ್ತಾನದಿಂದ ಅನುಷ್ಕಾ ಚಿತ್ರ ನಿಷೇಧದ ಕಾರಣ ಪತ್ತೆ

ಪಾಕಿಸ್ತಾನವು ಅನುಷ್ಕಾ ಶರ್ಮಾ ನಟನೆಯ ಪರಿ ಚಿತ್ರವನ್ನು ಪರಿಪರಿಯಾಗಿ ನಿಷೇಧಿಸಿರುವುದರ ಹಿಂದಿನ ಕಾರಣ ಗೊತ್ತಾಗಿದೆ.

ಭಾರತ ಕ್ರಿಕೆಟ್ ತಂಡವನ್ನು ಹಿಂದಿನಂತೆ ಹೋದಲ್ಲೆಲ್ಲಾ ಚಚ್ಚಲು ಆಗುತ್ತಿಲ್ಲ. ಈಗ ಅದರ ನಾಯಕ ವಿರಾಟ ಕೋಹ್ಲಿ. ಆತನ ಗೆಳತಿಯೇ ಈ ಪರಿ ಚಲನಚಿತ್ರದಲ್ಲಿ ಹವಾ ಎಬ್ಬಿಸುತ್ತಿದ್ದಾಳೆ. ಈ ಚಿತ್ರವನ್ನೇ ನಾವು ನೋಡದೇ ಬಿಟ್ಟರೆ, ಅನುಷ್ಕಾರಿಗೆ ಆಘಾತವಾಗುತ್ತದೆ. ವಿರಾಟ್ ಕೋಹ್ಲಿಯ ಧೈರ್ಯ ಕುಂದುತ್ತದೆ. ಈ ಪರಿಯಾಗಿಯಾದರೂ ಕ್ರಿಕೆಟ್ ಗೆಲ್ಲೋಣ ಎಂಬುದು ಪಾಕಿಸ್ತಾನೀಯರ ಸಂಚು ಎಂಬುದನ್ನು ಬೊಗಳೆ ರಗಳೆ ಬ್ಯುರೋ ಹಲವಾರು ವರ್ಷಗಳ ಬಳಿಕ ಎಚ್ಚೆತ್ತುಕೊಂಡು ವರದಿ ತಯಾರಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

2 ಕಾಮೆಂಟ್‌ಗಳು

  1. ದೀರ್ಘವಾದ, ಗಾಢವಾದ ನಿದ್ದೆಯಲ್ಲಿದ್ದ ಅನ್ವೇಷಿಯವರನ್ನು ಎಚ್ಚರಿಸಿದ ಅನುಷ್ಕಾಗೆ ಧನ್ಯವಾದಗಳು. ನಿಮ್ಮ James Bond ಗೆಟ್-ಅಪ್ ಚೆನ್ನಾಗಿದೆ. ಇನ್ನು ಗುಂಡು ಹಾಕಲು (ವೈರಿಗಳಿಗೆ), ಹಿಂದೇಟು ಹೊಡೆಯದಿರಿ. ಇಲೆಕ್ಶನ್ ಬೇರೆ ಬರುತ್ತಿದೆ. ಸಿಕ್ಕಲ್ಲಿ ಗುಂಡು ಹಾಕಿರಿ!

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಗುಂಡು ಹಾಕಲು ಹೋದ ಕರುನಾಡನ್ನೇ ಹಾರಿಸ್‌ವ ಗಂಡುಗಳು, ಭವಿಷ್ಯದ ಮುಖ್ಯಮಂತ್ರಿಗಳೆಲ್ಲ ಈಗ ಪರಪ್ಪನ ಅಗ್ರಹಾರದಲ್ಲಿ ನಳನಳಿಸುತ್ತಾ ಪಾಡು ಪಡುತ್ತಿದ್ದಾರೆ. ನೋಡೋಣ, ಎಲೆಕ್ಸನ್ ಬರ್ತೈತಲ್ಲ...

      ಅಳಿಸಿ

ಏನಾದ್ರೂ ಹೇಳ್ರಪಾ :-D