[ಬೊಗಳೂರು ರೇಪ್ ಬ್ಯುರೋದಿಂದ]
ಬೊಗಳೂರು, ಏ.5- ಆಂಟಿಯ ರೇಪ್ ಬಿಲ್‌ಗೆ ರಾಷ್ಟ್ರಪತಿಗಳು ಅಂಕಿತ ಮುದ್ರೆ ಹಾಕಿರುವಂತೆಯೇ ಬೊಗಳೂರಿನಲ್ಲಿ ಸಂಚಲನವೆದ್ದಿದೆ.ಫೇಸ್‌ಬುಕ್ಕಿನಲ್ಲಿ ಪೋಕ್ ಮಾಡುವವರಿಗೂ ಆಂಟಿಯ ರೇಪ್ ಬಿಲ್ ಅನ್ವಯವಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಮತ್ತೆ ಮತ್ತೆ ಸಚಿವರಾಗಲು ಹಂಬಲಿಸುತ್ತಿರುವ ಮಾಜಿ ಕೇಂದ್ರ ಸಚಿವರೂ, ಅದಕ್ಕೂ ಹೆಚ್ಚಿನದಾಗಿ ಅತ್ಯಂತ ಖ್ಯಾತ ಮಾಜಿ ರಾಜ್ಯಪಾಲರೂ ಆಗಿರುವ ಏನ್‌ಡೀ ಛೀವಾರಿಯವರು, ಹಾಗೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಮಧ್ಯೆ, ಕರುನಾಟಕದ ರಾಜಕೀಯದಲ್ಲಿ ಬಿಗ್‌ಬಾಸ್‌ನಿಂದ ಹೊರದೂಡಲ್ಪಟ್ಟು ನೇರವಾಗಿ ಫ್ಯಾನಿನಡಿ ಬಂದು ಬಿದ್ದ ನರ್ಸ್‌ಲಕ್ಷ್ಮಿ ಅವರು ರೇಣುಕಾಚಾರ್ಯ ವಿರುದ್ಧ ಸ್ಪರ್ಧಿಸುವುದಕ್ಕೂ ಅಂಗೀಕಾರಗೊಂಡಿರುವ ಆಂಟಿಯ ರೇಪ್ ಬಿಲ್‌ಗೂ ಸಂಬಂಧವಿದೆಯೇ ಎಂಬ ಕುರಿತು ಸಂಚೋದನೆಗಳು ನಡೆಯುತ್ತಿರುವುದಾಗಿ ತಿಳಿದುಬಂದಿದೆ.
ರೇಪ್‍ಭೂಷಣ ಛೀಮಾರಿಯವರು ತುಂಬ ಅನುಭವಸ್ಥರು ಹಾಗು ಕಾಯದೆ ಬಲ್ಲವರು. ಅವರ ಭರವಸೆಗಳನ್ನು ನಂಬಬಹುದು,(@ your own risk!)
ReplyDeleteಸುನಾಥರೇ,
ReplyDeleteಮೊನ್ನೆಯಷ್ಟೇ ಛೀಮಾರಿಯವರು ಬಾಲಕಿ ಜತೆ ಕುಣಿದ್ರಂತಲ್ಲಾ...
Post a Comment
ಏನಾದ್ರೂ ಹೇಳ್ರಪಾ :-D