[ಕಾವೇರಿ ಕಣ್ಣೀರ ಕಟ್ಟೆ ಬ್ರೇಕಿಂಗ್ ಬ್ಯುರೋದಿಂದ]
ಬೊಗಳೂರು, ಅ.4- ಕರ್ನಾಟಕವು ಬೊಗಳೂರು ಇರುವ ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಸುಪ್ರೀಂ ಕೋರ್ಟು ಆದೇಶಿಸಿರುವುದು ಕರ್ನಾಟಕದಲ್ಲಿ ಕಾವು ಏರಿಸಿರುವಂತೆಯೇ, ತಮಿಳುನಾಡಿನ ಬೊಗಳೂರು ಕಚೇರಿಗೂ ನೀರು ನುಗ್ಗಿ ಬಂದಿರುವುದರ ಹಿಂದಿನ ರಹಸ್ಯವೇನೆಂದು ತಪಾಸಣೆ ನಡೆಸಲು ಬೊಗಳೂರು ಬ್ಯುರೋ ನಿರ್ಧರಿಸಿ ಈ ವರದ್ದಿ ತಂದು ಸುರುವಿದೆ.

ಬೊಗಳೆ ಬ್ಯುರೋ ಇರುವುದರಿಂದಾಗಿ ತಮಿಳುನಾಡಿಗೆ ನೀರು ಬಿಡಬಾರದು ಎಂದು ಕರ್ನಾಟಕದ ರೈತರು ತೀವ್ರವಾಗಿ ಆಗ್ರಹಿಸುತ್ತಾ, ಬುಧವಾರ ಕನ್ನಂಬಾಡಿ ಕಟ್ಟೆ ಒಡೆಯಲು ಸಿದ್ಧರಾಗುತ್ತಿದ್ದಂತೆಯೇ, ಕರ್ನಾಟಕದಿಂದ ಸುಪ್ರೀಂ ಕೋರ್ಟು ಸೂಚಿಸಿದ 9 ಸಾವಿರ ಕ್ಯೂಸೆಕ್‌ಗಿಂತಲೂ ಹೆಚ್ಚು ಪ್ರಮಾಣದ ನೀರು ಹರಿದು ಬಂದಿರುವುದೇ ಈ ರೀತಿ ಬೊಗಳೂರು ಕಚೇರಿಗೂ ಪ್ರವಾಹ ನುಗ್ಗಲು ಕಾರಣ ಎಂಬುದು ಗೊತ್ತಾಗಿದೆ.

ಆದರೆ ಇದರ ಮೂಲವು ಕೊಡಗಿನ ತಲಕಾವೇರಿಯೇ ಎಂದು ಶೋಧಿಸಹೊರಟಾಗ ಬೊಗಳೂರು ಬ್ಯುರೋಗೆ ಫ್ಲ್ಯಾಶ್ ನ್ಯೂಸ್ ಒಂದು ಸಿಕ್ಕಿದೆ. ಅದೇನೆಂದರೆ ಇಷ್ಟೊಂದು ಪ್ರಮಾಣದಲ್ಲಿ ಹೆಚ್ಚುವರಿ ನೀರು ಹರಿದುಬರಲು ಕಾರಣ ಬೇರೇನೂ ಅಲ್ಲ, ಕರ್ನಾಟಕದ ರೈತರ ಕಣ್ಣೀರಿನ ಕಟ್ಟೆ ಒಡೆದಿರುವುದೇ ಆಗಿದೆ!

ಕರ್ನಾಟಕದ ಕಾವೇರಿ ಕೊಳ್ಳದ ರೈತರು ತಮ್ಮ ಬೆಳೆಗಳಿಗೆ ನೀರಿಲ್ಲದೆ ಮತ್ತು ಈಗ ಬೊಗಳೂರಿಗೆ ಸ್ಪರ್ಧೆ ನೀಡುತ್ತಿರುವ ಬೆಂಗಳೂರಿಗೂ ನೀರು ಹರಿಸುವುದನ್ನು ನಿಲ್ಲಿಸಿದ ಪರಿಣಾಮ ಬೆಂಗಳೂರಿಗರೂ ಕಣ್ಣೀರು ಹರಿಸುತ್ತಿರುವುದರಿಂದ, ಕನ್ನಂಬಾಡಿ ಕಟ್ಟೆಯು ಒಡೆದಿತ್ತು. ಈ ಕಣ್ಣೀರ ಹರಿವೇ ಬೊಗಳೂರಿನಲ್ಲಿ ಪ್ರವಾಹಕ್ಕೆ ಕಾರಣವೆಂದು ಕಂಡುಕೊಳ್ಳಲಾಗಿದೆ.

2 Comments

ಏನಾದ್ರೂ ಹೇಳ್ರಪಾ :-D

  1. ಕಣ್ಣೀರಿನಿಂದಲೇ ನೀರಾವರಿ ಮಾಡಿಕೊಳ್ಳಬೇಕಾಗಿರುವ ಕರ್ನಾಟಕದ ರೈತರ ಈ ಪರಿಸ್ಥಿತಿಯನ್ನು ವಿಶ್ಲೇಷಿಸಿದಾಗ,ಅವರಿಗೆ ಕಣ್ಣು ಇರುವದೇ ಇದಕ್ಕೆ ಕಾರಣ ಎಂದು ತಿಳಿದು ಬಂದಿದೆ. ಆದುದರಿಂದ ಅವರ ಕಣ್ಣುಗಳನ್ನು ಕಿತ್ತಿ ಹಾಕಿದರೆ, ಅವರ ದುಃಖವು ದೂರಾಗುವದು ಎಂದು ಕಣ್ಣಾದೊರೈ ತಿಳಿಸಿದ್ದಾರೆ.

    ReplyDelete
  2. ಸುನಾಥರೇ,
    ಈಗ ಫ್ಲ್ಯಾಶ್ ಆಯಿತು. ನಿಮ್ಮ ಸಂಚೋದನೆಯ ಫಲದಿಂದಾಗಿಯೇ ಕಣ್ಣಾನಿಧಿ ಅವರು ಕಪ್ಪು ಕಣ್ಣಢಖ ಹಾಕಿಕೊಂಡು, ಜಗತ್ತೆಲ್ಲಾ ಕತ್ತಲೆ ಅಂತ ತಿಳಿದುಕೊಂಡಿದ್ದಾರೆ. ಈಗ ಜಲಯಜಿತಾ ಕೂಡ ಕಪ್ಪು ಕನ್ನಡಕ ಹಾಕಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆಂತ ತಿಳಿದುಬಂದಿದೆ.

    ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post