Subscribe Us

ಜಾಹೀರಾತು
header ads

ಬೊಗಳೆ: ನಟಿಯರು ರಾಜಕೀಯಕ್ಕೆ ಸೇರೋ ಹಿಂದಿನ ರಹಸ್ಯ


[ಬೊಗಳೂರು ಸಂಚೋದನಾ ಬ್ಯುರೋದಿಂದ]
ಬೊಗಳೂರು, ಮಾ.14- ಇತ್ತೀಚೆಗೆ ಸಿನಿಮಾ ಮಂದಿ, ಅದರಲ್ಲಿಯೂ ವಿಶೇಷವಾಗಿ ನಟೀಮಣಿಯರು ಸಮಾಜಸೇವೆಯ ಹೆಸರಿನಲ್ಲಿ ರಾಜಕೀಯ ಪಕ್ಷಗಳನ್ನು ಸೇರುತ್ತಿರುವುದು ಮತ್ತು ಜಾರಕಾರಣ ಮಾಡೋ ಹಿಂದಿರುವ ರಹಸ್ಯವನ್ನು ಬಯಲು ಮಾಡಿ ಎಂದು ಇಡೀ ಲೋಕವೇ ಬೊಗಳೆ ರಗಳೆ ಬ್ಯುರೋಗೆ ಸಂದೇಶ ಕಳುಹಿಸಿರುವುದರಿಂದ ಈ ತನಿಖಾ ವರದ್ದಿಯನ್ನು ಅನಿವಾರ್ಯವಾಗಿ ಪ್ರಕಟಿಸಲಾಗುತ್ತಿದೆ.

ಶ್ರುತಿ, ತಾರಾ, ಮಾಳವಿಕಾ, ಪೂಜಾ ಗಾಂಧಿ, ರಮ್ಯಾ, ರಕ್ಷಿತಾ, ಭಾವನಾ ಮುಂತಾದವರೆಲ್ಲರೂ ಒಂದು ಕಾಲದಲ್ಲಿ ಯುವ ಹೃದಯಗಳನ್ನು ಹೃದಯ ಕದ್ದು ಮೆರೆದ ನಾಯಕೀಮಣಿಯರು. ಯುವ ಜನಾಂಗದ ನಿದ್ದೆಯನ್ನು ಕದ್ದವರಾದರೂ, ಇತ್ತಿತ್ತಲಾಗಿ ಅವರು ನಿದ್ದೆಯಲ್ಲಿಯೂ ಬೆಚ್ಚಿ ಬೀಳಿಸುವಂತಾಗಿಬಿಟ್ಟಿರುವುದಕ್ಕೂ ರಾಜಕೀಯ ಸೇರ್ಪಡೆಗೂ ಏನೋ ಲಿಂಕ್ ಇರಬೇಕೆಂದು ಶಂಕಿಸಿ, ಆ ನಿಟ್ಟಿನಲ್ಲಿ ತನಿಖೆ ನಡೆಸಲಾಯಿತು.

ಈ ತನಿಖಾ ಸಂಚೋದನೆಯ ವೇಳೆ ಕಂಡುಬಂದ ಅತ್ಯಂತ ತೀಕ್ಷ್ಣವಾದ ಅಸತ್ಯವೆಂದರೆ, ರಾಜಕೀಯ ಸೇರಿದರೆ, ಆಗಾಗ್ಗೆ ಉಪವಾಸ ಸತ್ಯಾಗ್ರಹ ನಡೆಸಬಹುದು. ಉದಾಹರಣೆ, ನಿನ್ನೆ ಸಿರಿರಾಮುಲು ಜೊತೆಗೆ ರಕ್ಷಿತಾ ಕೂಡ ಉಪವಾಸ ಕೂತಿದ್ದು. ನಟೀಮಣಿಯರಿಗೆಲ್ಲ ಮಾಮೂಲಿಯಾಗಿ ಉಪವಾಸ ಮಾಡಲು ಪುರುಸೊತ್ತಿಲ್ಲ. ರಾಜಕೀಯ ಸೇರಿದರೆ ಆ ಕಾರಣ, ಈ ಕಾರಣ, ನಿಷ್ಕಾರಣ... ಇತ್ಯಾದಿಗಳಿಗಾಗಿ ಉಪವಾಸ ಸತ್ಯಾಗ್ರಹ ನಡೆಸಲೇಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಇದರಿಂದಲಾದರೂ, ಯುವ ಹೃದಯಗಳನ್ನು ನಿದ್ದೆಯಲ್ಲಿಯೂ ಬೆಚ್ಚಿ ಬೀಳಿಸುವ ಮಟ್ಟಿಗೆ ಏರಿದ ತಮ್ಮ ತೂಕವನ್ನು ಇಳಿಸಿಕೊಳ್ಳಬಹುದು ಎಂಬ ದೂರಾಲೋಚನೆ ಎಂಬುದು ನಮ್ಮ ತನಿಖಾ ವರದ್ದಿಗಾರರು ತಂದು ಹಾಕಿ ಹೋದ ಬಾರ್ಕಿಂಗ್ ನ್ಯೂಸ್.

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

 1. ಸುದ್ದಿ ಕೇಳಿ ಹೊಟ್ಟೆ ತುಂಬಿ ಹೋಯಿತು..

  -ಯಳವತ್ತಿ

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಶಿವಶಂಕರರೇ,
   ನಿಮ್ಮ ಹೊಟ್ಟೆ ತುಂಬಿದ್ದು ಕೇಳಿ ನಮಗೂ ಆತಂಕವಾಗಿದೆ... ನೀವು ಕೂಡ ನಟೀಮಣಿಯರ ಜೊತೆ ಉಪವಾಸ ಕುಳಿತುಕೊಳ್ಳಬಹುದು...

   ಅಳಿಸಿ
 2. ಅನ್ವೇಷಿಗಳೆ,
  ನೀವೇ ಸತ್ಯವಾಗಿ ಉತ್ತರ ಕೊಡ್ತಾ ಹೋದರೆ, ನಿಮ್ಮ ವಿರುದ್ಧವೇ ಉಪವಾಸ ಮಾಡ್ಬೇಕಾಗುತ್ತದೆ!

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಸುನಾಥರೇ,
   ನಮ್ಮ ವಿರುದ್ಧ ಉಪವಾಸ ಮಾಡುವಾಗ ನೀವು ನಮ್ಮ ಬೊಗಳೂರಿಗೆ ಇದೇ ನಟೀಮಣಿಯರನ್ನು ಕರೆದುತರಬೇಕೆಂದು ಕೋರುತ್ತೇವೆ...

   ಅಳಿಸಿ

ಏನಾದ್ರೂ ಹೇಳ್ರಪಾ :-D