[ಬೊಗಳೂರು ಮಹಿಳಾ ಅಜಾಗೃತಿ ಬ್ಯುರೋದಿಂದ]
ಬೊಗಳೂರು, ಮಾ.18- ಮಾನನೀಯ ಹೈಕೋರ್ಟ್ ತೀರ್ಪೊಂದು ಮಹಿಳಾ ಸಮುದಾಯದಲ್ಲಿ ತೀವ್ರತರವಾದ, ಗಂಭೀರವಾದ ಚರ್ಚೆಗೆ grass ಒದಗಿಸಿರುವ ಸಂಗತಿಯೊಂದು ಬೊಗಳೆ ರಗಳೆ ಬ್ಯುರೋದ ಕಣ್ಣಿಗೆ ಬಿದ್ದದ್ದೇ ತಡ, ಕಣ್ಣುಜ್ಜಿಕೊಂಡು ಅದರ ಮೇಲೆ ಬೆಳಕು ಚೆಲ್ಲಲು ನಿರ್ಧರಿಸಲಾಯಿತು.

ಹುಡುಗಿಯರನ್ನು ಸೆಕ್ಸೀ ಎಂದು ಕರೆದರೆ, ಅದರ ಬಗೆಗೆ ಏನೂ ತಲೆ ಕೆಡಿಸಿಕೊಳ್ಳಬೇಕಿಲ್ಲ, ಅದನ್ನು ಕೂಡ ಹೆಮ್ಮೆಯಿಂದಲೇ ಒಪ್ಪಿಕೊಳ್ಳಿ ಮತ್ತು ಅದೇನೂ ಲೈಂಗಿಕ ಕಿರುಕುಳವಲ್ಲ ಎಂದು ರಾಷ್ಟ್ರೀಯ ಮಹಿಳಾ ಹಕ್ಕುಗಳ ಆಯೋಗದ ಅಧ್ಯಕ್ಷರೇ ಹೇಳಿರುವ ಹಿನ್ನೆಲೆಯಲ್ಲಿ ಮಹಿಳಾ ಮಣಿಗಳೀಗ ಎಚ್ಚೆತ್ತುಕೊಂಡು, ಬಹುತೇಕ ಮಂದಿ ಈ ಮಾತಿಗೆ ಸಡಗರಡಿಂದ ಬೆಂಬಲ ಸೂಚಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ, ಸಾಮಾನ್ಯವಾಗಿ ಮಹಿಳೆಯರು ಆಯೋಗದ ಅಧ್ಯಕ್ಷರ ಮಾತನ್ನೇ ಅನುಸರಿಸುತ್ತಾ, ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ನ್ಯಾಯಾಲಯದ ತೀರ್ಪು ಮಾತ್ರ ಅವರನ್ನು ಗೊಂದಲದಲ್ಲಿ ಕೆಡವಿದೆ. ಆ ತೀರ್ಪೇನೆಂದರೆ, ಸ್ತ್ರೀಯರನ್ನು bitch ಅಂತ ಕರೆಯಬಾರದು, ಕರೆದರೆ ಅದು ಲೈಂಗಿಕ ಕಿರುಕುಳವಾಗುತ್ತದೆ ಎಂಬುದು ನ್ಯಾಯಾಲಯದ ತೀರ್ಪಿನ ಸಾರಾಂಶ.

ಮಹಿಳೆಯರು ಈ ಬಗ್ಗೆ ತಲೆ ಕೆಡಿಸಿಕೊಂಡೂ ಕೆಡಿಸಿಕೊಂಡೂ ಒಂದು ತೀರ್ಮಾನಕ್ಕೆ ಬಂದು ಬೊಗಳೆ ರಗಳೆ ಬ್ಯುರೋದೆದುರು, ನೀವೇ ಇದರ ಬಗ್ಗೆ ಸಂಚೋದನೆ ನಡೆಸಿ, ಯಥಾರ್ಥ ತಿಳಿಸಿ ನಮ್ಮನ್ನು ಕೃತಾರ್ಥರನ್ನಾಗಿಸಬೇಕು ಎಂದು ಅಲವತ್ತುಕೊಂಡಿದ್ದಾರೆ.

ಹೀಗಾಗಿ ಬೊಗಳೂರು ಬ್ಯುರೋ ಕೂಡ ತಲೆಕೆಡಿಸಿಕೊಂಡು ಒಂದು ತೀರ್ಪು ಕೊಟ್ಟುಬಿಟ್ಟ ನಂತರ, ಪ್ರತಿಭಟನಾಕಾರ್ತಿ ಮಹಿಳೆಯರು ಬಾವುಟ, ಫ್ಲೇಕ್ಸ್, ಘೋಷಣಾ ಫಲಕ ಇತ್ಯಾದಿಗಳನ್ನೆಲ್ಲಾ ಮಡಚಿ ತಮ್ಮ ವ್ಯಾನಿಟಿ ಬ್ಯಾಗಿನಲ್ಲಿಟ್ಟುಕೊಂಡು ಹೊರಟುಹೋದರು.

ಬೊಗಳೆ ಬ್ಯುರೋ ನೀಡಿದ ತೀರ್ಪಿನ ಸಾರಾಂಶ ಇಂತಿದೆ: "ನ್ಯಾಯಾಲಯವೆಂದಿಗೂ ತಪ್ಪು ಮಾಡುವುದಿಲ್ಲ. ಮಾಡಿದ್ದಿದ್ದರೆ ನೀವೇ ತಪ್ಪು ಮಾಡಿಕೊಂಡಿರಬಹುದು. ಅಥವಾ ನೀವೇ ತಪ್ಪಾಗಿ ಅರ್ಥೈಸಿಕೊಂಡಿದ್ದಿರಬಹುದು. bitch ಅನ್ನೋ ಪದವು ಲೈಂಗಿಕ ಕಿರುಕುಳ ವ್ಯಾಪ್ತಿಗೆ ಅಂತ ಕೋರ್ಟು ಹೇಳಿದೆಯಾದರೂ ನೀವೇನೂ ತಲೆಕೆಡಿಸಿಕೊಳ್ಳಬೇಕಿಲ್ಲ. ನಾವು ಆ ಇಂಗ್ಲಿಷ್ ಪದವನ್ನು ಕನ್ನಡದಲ್ಲಿಯೇ ಅರ್ಥ ಮಾಡಿಕೊಳ್ಳೋಣ. ಹೇಗೆಂದರೆ, 'ಬಿಚ್ಚು' ಅಂತ ಮಹಿಳೆಯರಿಗೆ ಕರೆದರೆ... ಅಲ್ಲಲ್ಲ... ಹೇಳಿದರೆ ಮಾತ್ರವೇ ಅದು ಲೈಂಗಿಕ ಕಿರುಕುಳ ಅಂತ ನೀವು ಭಾವಿಸಿಕೊಳ್ಳಿ!"

ಈ ತೀರ್ಪಿನ ಹಿನ್ನೆಲೆಯಲ್ಲಿ ಮತ್ತೊಂದೆಡೆಯಿಂದ ನಟೀಮಣಿಯರು ಕೂಡ ಬೇರೆಯೇ ರೀತಿಯಾಗಿ ವ್ಯಾಖ್ಯಾನಿಸಿಕೊಂಡು, ಪ್ರತಿಭಟನೆಗೆ ಸಜ್ಜಾಗುತ್ತಿದ್ದಾರೆ ಎಂಬುದು ಕೂಡ ತಿಳಿದುಬಂದಿದೆ. ಅದೆಂದರೆ, ತಮ್ಮನ್ನು ಬಿಚ್ಚಮ್ಮ ಅಂತ ಕರೆದರೆ ಪರವಾಗಿಲ್ಲ, ಆದ್ರೆ bicthಅಮ್ಮ ಅಂತ ಕರೆದ್ರೆ ನಾವು ಪ್ರತಿಭಟಿಸ್ತೀವಿ ಎಂಬುದು ಅವರ ಉಡುಗೆಯಷ್ಟೇ ಚಿಕ್ಕದಾದ, ಒಂದು ಸಾಲಿನ ಪ್ರತಿಭಟನೆಯ ಅಸ್ತ್ರ.

ಈ ನಡುವೆ, ಮದ್ರಾಸು ಹೈಕೋರ್ಟಿನಲ್ಲಿ ಯಾರಾದರೂ ಕನ್ನಡಿಗ ನ್ಯಾಯಾಧೀಶರು ಕೂಡ ಇದ್ದಿರಬಹುದೇ ಎಂಬುದರ ಬಗ್ಗೆ ಬೊಗಳೂರು ಬ್ಯುರೋ ಈಗ ಸಂಚೋದನೆಗೆ ಹೊರಟಿದೆ.

6 Comments

ಏನಾದ್ರೂ ಹೇಳ್ರಪಾ :-D

 1. ಈ ಒಂದು ಸಾಲಿನ ಪ್ರತಿಭಟನೆಯ ವಿಚಾರವು ವಿಚಿತ್ರ ವಾಗಿದೆ !. ಇದರ ಬಗೆಗೆ ತ್ವರಿತವಾಗಿ ಬೊಗಳೆ ಸಂಚೋದನೆಯಾಗಲಿ.

  ReplyDelete
  Replies
  1. ಸುಬ್ರಹ್ಮಣ್ಯರೇ, ಹೆಚ್ಚು ಉದ್ದ ಪ್ರತಿಭಟನೆ ಮಾಡಿದ್ರೆ.... ಜನಾ ಯಾರೂ ಬರಲ್ಲ....

   Delete
 2. ಬಿಚ್ಚು ಎನ್ನುವ ಕನ್ನಡ ಪದದಿಂದಲೇ ‘ಬಿಚ್’ ಎನ್ನುವ ಆಂಗ್ಲ ಪದ ಹುಟ್ಟಿರಬಹುದೇ, ಅನ್ವೇಷಿಗಳೆ?

  ReplyDelete
  Replies
  1. ಸುನಾಥರೇ,
   ಹೌದು, ಕನ್ನಡಿಗರು ಹಿಂದಿ ಚಿತ್ರಗಳನ್ನು ನೋಡಿ, ಬಟ್ಟೆಗೂ ಕತ್ರೀನಾ ಮುಂತಾದವರ ಆಟಗಳನ್ನು ನೋಡಿ, ಬಿಪಾಷಾಳ ಪಾಶಕ್ಕೆ ಬಿದ್ದು... ಈ ರೀತಿಯಾಗಿ ಬಿಚ್ಚು ಬಿಚ್ಚು ಅಂತ ಉದ್ಗರಿಸಿದ್ದೇ ಎಲ್ಲಕ್ಕೂ ಮೂಲ ಕಾರಣ....

   Delete
 3. PETA ದಲ್ಲಿ ಬಿಚ್ಚಿಕೊ೦ಡೇ ಪ್ರತಿಭಟಿಸುತ್ತಾರಲ್ಲ! ಅದು ಕನ್ನಡದ ಬಿಚ್ಹೇ ಇರಬೇಕು.ಏನೋ ಗೊತ್ತಿಲ್ಲಪ್ಪ...!!

  ReplyDelete
  Replies
  1. ಚುಕ್ಕಿ ಚಿತ್ತಾರರೇ,
   ಪೇಟಾ ಎಂಬುದರಲ್ಲಿ ಪೇಟ್ ತೋರಿಸ್ಬೇಕು ಎಂಬುದು ಕಡ್ಡಾಯ.... ಮತ್ತು ಅವರ ಪ್ರತಿಭಟನೆ ನೋಡಿದ್ರೆ ಈ ಬಿಚ್ಚೇ ಎಂಬ ನಿಮ್ಮ ಊಹೆ ಸರಿಯಾದುದೇ...

   Delete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post