ಬೊಗಳೆ ರಗಳೆ

header ads

ಬೊಗಳೆ: 'Blue ಚಿತ್ರಕ್ಕೆ ಸಾಂವಿಧಾನಿಕ ಮಾನ್ಯತೆ ಕೊಡಿ'


[ಬೊಗಳೂರು ನೀಲಿ ಚಿತ್ರ ಬ್ಯುರೋದಿಂದ]
ಬೊಗಳೂರು, ಫೆ.8- ಶಾಸಕರು, ಮಂತ್ರಿ ಮಾಗಧರೆಲ್ಲರೂ ನಮಗೆ ಆ ಪ್ಯಾಡು, ಈ ಪ್ಯಾಡು ಬೇಡ, ಐಪ್ಯಾಡೇ ಬೇಕು ಅಂತೆಲ್ಲಾ ಹಠ ಹಿಡಿದು ಕೂತಿದ್ದುದರ ಹಿಂದಿನ ಮರ್ಮವೊಂದು ಈಗಷ್ಟೇ ಬಯಲಾಗಿದೆ.

ಮಹಿಳೆಯರಿಗೆ ಕಲ್ಯಾಣ ಮಾಡಿಸುವ ಕರುನಾಟಕದ ಮಂತ್ರಿವರೇಣ್ಯರಿಗೆ ತಮ್ಮ ಕೈಯಲ್ಲಿದ್ದ ಪಡಪೋಶಿ, ಪುಟ್ಟ ಪರದೆಯ ಮೊಬೈಲ್ ಅನ್ನು ಎಸೆದುಬಿಡುವಷ್ಟು ಕೋಪ ಬಂದಿದೆ ಎಂಬ ಅಂಶವೊಂದು ನಿಧಾನವಾಗಿ ಬಟಾಬಯಲಾಗುತ್ತಿದೆ.

ಮೀನು ಸಚಿವರು ಕಳುಹಿಸಿದ ರೇವ್ ಪಾರ್ಟಿಯ ಕ್ಲಿಪ್ಪೋ, ಅಥವಾ ತರುಣಿಯರ ಕುರಿತ "ಸಾಕ್ಷ್ಯಚಿತ್ರ"ವನ್ನೋ ವೀಕ್ಷಿಸಲು ಈ ಪುಟ್ಟ ಪರದೆ ಸಾಕಾಗುವುದಿಲ್ಲ. ದೊಡ್ಡದಾದ ಐಪ್ಯಾಡೇ ಬೇಕು ಅಂತ ಸಚಿವ ವಿಲಕ್ಷಣ ಸೌದೆಯವರು ಈ ಹಿಂದೆಯೇ ಆಗ್ರಹಿಸಿದ್ದರು ಎಂಬುದನ್ನು ಬೊಗಳೆ ರಗಳೆ ಬ್ಯುರೋ ಪತ್ತೆ ಹಚ್ಚಿದೆ.

ಇದರ ನಡುವೆಯೇ, ಶಾಸಕರು ಸಹಿ ಸಂಗ್ರಹವೊಂದಕ್ಕೆ ಈಗಲೇ ಆರಂಭಿಸಿದ್ದಾರೆ. ಅದು ಬಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಪಟ್ಟವನ್ನು ಮರಳಿ ಕೊಡಿಸುವುದಕ್ಕಾಗಿ ಅಲ್ಲ ಎಂಬುದನ್ನು ಬೊಗಳೆ ಬ್ಯುರೋ ಕಂಡುಕೊಂಡಿದೆ. ಈ ಕುರಿತು ಸೊಂಪಾದಕರ ಆದೇಶ ಪಡೆದ ತಕ್ಷಣ ಏಕಸದಸ್ಯ ಬ್ಯುರೋದ ಸರ್ವ ಸದಸ್ಯರೂ ಕಾರ್ಯಾಚರಣೆಗಿಳಿದು, ಸಹಿ ಸಂಗ್ರಹ ಯಾವುದಕ್ಕೆ ಎಂಬುದನ್ನು ಪತ್ತೆ ಹಚ್ಚಿ ಬಿಟ್ಟಿದ್ದಾರೆ.

ಅದು ಬೇರೆ ಯಾವುದೇ ಕಾರಣಕ್ಕಲ್ಲ. ನೀಲಿ ನೀಲಿಯಾಗಿ ಕಾಣುವ ಚಿತ್ರಗಳನ್ನು (ಕನ್ನಡ ಕಡ್ಡಾಯ ಎಂಬ ಕಾರಣಕ್ಕೆ ಈ ರೀತಿ ಉಲ್ಲೇಖಿಸಿದ್ದು) ಶಾಲಾ ಪಠ್ಯ ಕ್ರಮದಲ್ಲಿ ಅಳವಡಿಸಬೇಕು, ಈ ಚಿತ್ರಗಳಿಗೆ ಸಾಂವಿಧಾನಿಕ ಮಾನ್ಯತೆ ನೀಡಬೇಕು ಎಂದು ಆಗ್ರಹಿಸುವುದಕ್ಕಾಗಿಯಂತೆ! ಸದನದಲ್ಲಿ ಇಲ್ಲಸಲ್ಲದ ವಿಷಯಗಳ ಕುರಿತು ಕಚ್ಚಾಡುತ್ತಾ ಕಾಲ ಕಳೆಯುವ ಬದಲು, ಹಾಳು ಮೂಳು ಬೈಗುಳಗಳ ಮೂಲಕ ಸದನದ ಗೌರವಕ್ಕೆ ಧಕ್ಕೆ ತರುವ ಬದಲು, ಈ ರೀತಿಯ ಚಿತ್ರಗಳನ್ನು ನೋಡುತ್ತಾ, ಮೌನವಾಗಿದ್ದುಕೊಂಡೇ ಸದನದ ಗೌರವ-ಘನತೆಯನ್ನು ಎತ್ತಿ ಹಿಡಿಯಬಹುದೆಂಬುದು ಶಾಸಕರ ವಾದವಾಗಿದೆ.

ಇದೇ ಕಾರಣಕ್ಕೆ, ಈ ನೀಲಿ ನೀಲಿ ಚಿತ್ರಗಳ ನಿರ್ಮಾಣ ಕುರಿತು ಹೆಚ್ಚಿನ ಅಧ್ಯಯನಕ್ಕಾಗಿ ಶಾಸಕರ ತಂಡವೊಂದು ಈಗಾಗಲೇ ವಿದೇಶ ಪ್ರಯಾಣಕ್ಕೆ ಸಜ್ಜಾಗಿ ನಿಂತಿದ್ದು, ಅಧ್ಯಯನ ವರದಿಯನ್ನು ಹತ್ತು ವರ್ಷಗಳಿಗಿಂತ ಮೊದಲು ಕೊಡುವುದಿಲ್ಲ, ಅಷ್ಟೂ ವರ್ಷವೂ ಅಧ್ಯಯನ ನಡೆಸುತ್ತಲೇ ಇರಬೇಕಾಗುತ್ತದೆ ಎಂದು ಪಟ್ಟು ಹಿಡಿದ ಪ್ರಸಂಗವೂ ಜರುಗಿದೆ ಎಂಬುದನ್ನು ಬೊಗಳೂರು ಬ್ಯುರೋ ವರದ್ದಿ ಮಾಡಿ ತಂದು ಸುರುವಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

8 ಕಾಮೆಂಟ್‌ಗಳು

  1. ಹೌದು ಅನ್ವೇಷಿಗಳೆ,ಪಠ್ಯಕ್ರಮದಲ್ಲಿ ನೀಲಿ ಚಿತ್ರಗಳನ್ನು ಅಳವಡಿಸಿದರೆ, ಶಾಲಾ ಹಾಜರಾತಿಯು ನೂರಕ್ಕೆ ನೂರಾಐವತ್ತು ಆಗುವದರಲ್ಲಿ ಸಂದೇಹವೇ ಇಲ್ಲ! ಈ ಪಠ್ಯಕ್ರಮ ಸಮಿತಿಯ ಸದಸ್ಯತ್ವಕ್ಕೆ ಎಂಥಾ ವಶೀಲಿ ನಡೆಯುತ್ತೆ ನೋಡುತ್ತಿರಿ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಇಂಥದ್ದೊಂದು ಮನೆಹಾಳ ಉಪಾಯದಿಂದ ಪ್ರೇರಿತರಾದ ಪಕ್ಕದ ರಾಜ್ಯದ ವಿದ್ಯಾರ್ಥಿಗಳು ಕೂಡ ಕನ್ನಡ ಕಲಿಯಲು ಬರ್ತಾರೆ ಎಂಬುದು ಬ್ಲೂ-ತ್ರಯರ ಚಿಂತನೆಯಂತೆ ಸಾರ್...

      ಅಳಿಸಿ
  2. ಶಾಸಕರ, ಮಂತ್ರಿ ಮಾಗಧರೆಲ್ಲರ ಬಣ್ಣ ಬಯಲಾಯಿತು...!!

    ಪ್ರತ್ಯುತ್ತರಅಳಿಸಿ
  3. ಹೌದು ಚುಕ್ಕಿಗಳೇ....
    ಅವರ ಬಣ್ಣ ನೀಲಿ ನೀಲಿ....

    ಪ್ರತ್ಯುತ್ತರಅಳಿಸಿ
  4. ನೀವೂ ಮನೇಲಿ ನೀಲಿಚಿತ್ರಗಳನ್ನೇ ಅಂತೇ ನೋಡೋದು !!‌ :-) (ನಾನಲ್ಲಪ್ಪಾ ಹೇಳಿದ್ದು, ನಿಮ್ಮ ಬಡಿಯೂರಪ್ಪನೋರೆ )

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಸುಬ್ರಹ್ಮಣ್ಯರೇ,
      ಹೌದು, ಪಾಲೇಮಾರು ಫೋನು ಮಾಡಿ ಹೇಳಿದ್ರು... ನಿಮಗೆ ಕಳುಹಿಸಿದ್ದು ನಾನಲ್ಲ ಅಂತ....!

      ಅಳಿಸಿ
  5. ಇನ್ನು ನಮಗೆ ಬ೦ದ ಸುದ್ಧಿಯ೦ತೆ,ವಿಧಾನ ಸೌಧದ ಮು೦ದೆ ನೀಲಿ ನಟಿಯಾದ ಸನ್ನಿ ಲಿಯೋನ್ ರವರ ಪ್ರತಿಮೆ ಸ್ಥಾಪಿಸಬೇಕೆ೦ಬುದು ಆಡಳಿತ ಪಕ್ಷದ ಹಲವು ಶಾಸಕರ ನಿಲುವು ಎ೦ಬುದಾಗಿ ನಮ್ಮ ನ೦ಬಲಾಹ೯ ಮೂಲಗಳು ತಿಳಿಸಿವೆ

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಕಾರ್ತಿಕರೇ,
      ನಿಮ್ಮ ನೀಲಿ ತನಿಖಾ ವರದ್ದಿಗಾರರನ್ನು ನಮ್ಮಲ್ಲಿ ಕಳುಹಿಸಿಕೊಡಿ. ಇನ್ನೂ ಮತ್ತೆಷ್ಟೋ ನೀಲಿನಟಿಯರ ಪತ್ತೆಯಾಗಬೇಕಿದೆ....

      ಅಳಿಸಿ

ಏನಾದ್ರೂ ಹೇಳ್ರಪಾ :-D