ಬೊಗಳೆ ರಗಳೆ

header ads

ತನು,ಮನದಲ್ಲಿ ಕನ್ನಡಕ್ಕೆ ಒತ್ತು ನೀಡೋಣ!


(ಬೊಗಳೂರು ಕನ್ನಡವೇ ಆತ್ಮ ಬ್ಯುರೋದಿಂದ)
ಭೊಘಳೂರು: ಖಣ್ಣಢ ರಾಝ್ಯೋಥ್ಸವ ಭಂಧಿಧ್ಧರೂ ಭೊಘಳೂರು ಭ್ಯುರೋ ಎಛ್ಛೆಥ್ಥೂ...! ಖೊಂಢಿಳ್ಳವೇಖೆ ಎಂಧು ವಿಷ್ವಾಧ್ಯಂತ ಹರಢಿಖೊಂಢಿರುವ ಭೊಘಳೆ ರಘಳೆ ಅಂಥರ್ಝಾಳ ಫಥ್ರಿಖೆಯ ಏಖೈಖ ಓಧುಘರೆಳ್ಳರೂ ಧಭಾಯಿಸಿಧ ಖಾರಣಧಿಂಧಾಘಿಯೇ ಈ ಒಂಧು ಶ್ಫಷ್ಠಣೆ.

ಮೇಲೆ ಅಕ್ಷರಗಳೆಲ್ಲವೂ ಮಹಾಪ್ರಾಣ ಹೆಚ್ಚಾಗಿದ್ದು, ನಮ್ಮ ಪ್ರಾಣ ಯಾಕೆ ತಿಂತೀರಾ ಎಂದು ಕೇಳುವ ಓದುಗರಿಗೆಲ್ಲಾ ನಮ್ಮ ಉತ್ತರ... "ಮುಖ್ಯಮಂತ್ರಿಗಳು ಹೇಳಿದ್ದಾರೆ!" ಅಂತ ಮಾತ್ರ.

ಹಾಗಾದರೆ ಮುಖ್ಯಮಂತ್ರಿಗೋಳು ಏನಂತ ಹೇಳಿದ್ದಾರೆ? ಕನ್ನಡ ರಾಜ್ಯೋತ್ಸವದ ಭಾಷಣ ಮಾಡುತ್ತಿದ್ದ ಅವರು, ಕನ್ನಡ ನಮ್ಮ ಆಸ್ತಿ, ಅದನ್ನು ನಾವು ಉಳಿಸಬೇಕು (ಕಡಿಮೆ ಬಳಸಿದರೆ ಉಳಿತಾಯ ಆಗುತ್ತದೆ ಅಂತ ಗಣಕಿಂಡಿಯ ಪವನಜ ಆಗಾಗ್ಗೆ ಉಲ್ಲೇಖಿಸುತ್ತಲೇ ಬಂದಿದ್ದಾರೆ.) ಮತ್ತು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಕನ್ನಡಕ್ಕೆ ನಾವು ಯಾವಾಗಲೂ ಒತ್ತು ನೀಡಬೇಕು ಎಂದಿದ್ದರು. ಅದನ್ನೇ ಕಾಯಾ-ವಾಚಾ-ಮನಸಾ-ಪೆನ್ನಾ ಪಾಲಿಸಿದ ನಮ್ಮ ಬ್ಯುರೋ, ಕನ್ನಡವನ್ನು ಒತ್ತಿ ಒತ್ತಿ ಬರೆಯಲು ನಿರ್ಧರಿಸಿದ ಪರಿಣಾಮವಾಗಿ ಮೇಲಿನ ವಾಕ್ಯ ಮೂಡಿಬಂದಿದೆ.

||ನಮ್ಮ ಬರಹವೂ, ಮಾತೂ, ಮನಸ್ಸೂ ಕನ್ನಡವಾಗಿರಲಿ, ಮತ್ತು ನಮ್ಮ ಯೋಚನೆಯೂ ಕನ್ನಡದಲ್ಲೇ ಇರಲಿ||
ಸರ್ವರಿಗೂ ಕನ್ನಡದ ಹಬ್ಬದ ಶುಭಾಶಯಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

 1. ಯಾಕ್ರೀ ಘನಖಿಂಡಿಯನ್ನು ಹಿಲ್ಲಿ ಹುಲ್ಲೇಖ ಮಾಡಿದ್ದೀರಾ? ;-)

  ಪ್ರತ್ಯುತ್ತರಅಳಿಸಿ
 2. ನೀವು ತುಂಬ ಒತ್ತು ಕೊಟ್ಟಿದ್ದೀರಿ ಕನ್ನಡಕ್ಕೆ. ಕ್ರಾಂತಿಯು ನಿಮ್ಮಿಂದಲೇ ಸುರುವಾಗಲಿ !.

  ಪ್ರತ್ಯುತ್ತರಅಳಿಸಿ
 3. ಯಾವ ಮುಕ್ಯ ಮಂಥ್ರಿಘೋಳು ಹಂಗೆ ಯೋಳಿದ್ದು? ಫರಫ್ಫನ ಹಗ್ರಆರದ ಒಳಗೆ ಹಿಧ್ಧೋರಾ, ಒರಗೆ ಹಿಧ್ಧೋರಾ?

  ಪ್ರತ್ಯುತ್ತರಅಳಿಸಿ
 4. ಪವನಜರೇ,
  ಗಣಕಿಂಡಿಯೂ ಕನಕನ ಕಿಂಡಿಗಿಂತಲೂ ಘನವಾಗಿರುವುದರಿಂದಲೇ ಹಿಲ್ಲಿ ಹುಲ್ಲೇಖಿಸಿದ್ದು!

  ಸುಬ್ರಹ್ಮಣ್ಯರೇ,
  ಕ್ರಾಂತಿ ಮಾಡಲೆಂದೇ ನಾವು ಬಂದೀವಿ... ಸ್ವಲ್ಪ ಎಕೆ47 ಕಳಿಸಿಕೊಡಿ...

  ಸುನಾಥರೇ,
  ಮುಖ್ಯ ಕಂತ್ರಿಗಳನ್ನು ಹುಡುಕೋದೇ ನಮಗೆ ದೊಡ್ಡ ತ್ರಾಸವಾಗಿಬಿಟ್ಟಿದೆ ಕಣ್ರೀ...

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D